ಅಪರಾಧ

ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಗೆ 14 ವರ್ಷ ಜೈಲು-ಪತ್ನಿಗೂ 7 ವರ್ಷ ಕಾರಾಗೃಹ!

ಲಾಹೋರ್: ಭ್ರಷ್ಟಾಚಾರ ಪ್ರಕರಣದವೊಂದರಲ್ಲಿ ಪಾಕಿಸ್ತಾನದ ಮಾಜಿ ಪ್ರಧಾನಿ ಹಾಗೂ ನಿವೃತ್ತ ಕ್ರಿಕೆಟಿಗ ಇಮ್ರಾನ್ ಖಾನ್ ಗೆ 14 ವರ್ಷ ಜೈಲು ಶಿಕ್ಷೆ ನೀಡಿ ನ್ಯಾಯಾಲಯ ಆದೇಶ ಹೊರಡಿಸಿದೆ, ಅಲ್ ಖಾದಿರ್ ಟ್ರಸ್ಟ್ ಪ್ರಕರಣದಲ್ಲಿ ನಡೆದಿದ ಎನ್ನಲಾದ 1.9 ಕೋಟಿ ಪೌಂಡ್ ಮೊತ್ತದ ಹಗರಣದಲ್ಲಿ ಇಮ್ರಾನ್ ಖಾನ್ ಗೆ ಈ ಶಿಕ್ಷೆ ವಿಧಿಸಲಾಗಿದೆ,
ಇದೇ ಪ್ರಕರಣದಲ್ಲಿ ಇಮ್ರಾನ್ ಖಾನ್ ಪತ್ನಿಯರ ಪೈಕಿ ಒಬ್ಬರಾದ ಬುಶ್ರಾ ಬೀಬಿಗೂ ಸಹ 7 ವರ್ಷ ಶಿಕ್ಷೆ ವಿಧಿಸಲಾಗಿದೆ, ಜೊತೆಗೆ ಇಮ್ರಾನ್ ಖಾನ್ ಗೆ ಹತ್ತು ಲಕ್ಷ ಪಾಕಿಸ್ತಾನಿ ರೂಪಾಯಿ ಹಾಗೂ ಪತ್ನಿ ಬುಶ್ರಾ ಬೀಬಿಗೆ 5 ಲಕ್ಷ ರೂ.ದಂಡ ವಿಧಿಸಲಾಗಿದೆ,
ಅಲ್ ಖಾದಿರ್ ಯೂನಿವರ್ಸಿಟಿಯ ಅಭಿವೃದ್ಧಿ ಟ್ರಸ್ಟ್ ಗೆ ಸೇರಿದ ಹಣವನ್ನು ದಂಪತಿಗಳು ದುರುಪಯೋಗ ಪಡಿಸಿಕೊಂಡ ಬಗ್ಗೆ ಆರೋಪ ಎದುರಿಸುತ್ತಿದ್ದರು..

Leave a Reply

Your email address will not be published. Required fields are marked *

Trending

Exit mobile version