ಅಪರಾಧ

ಖಾಸಗಿ ಶಾಲೆಗಳಿಂದಲೂ ಬಡ್ಡಿ ದಂಧೆ-ಬಾಕಿ ಫೀ ಇದ್ರೆ ಶೇ 3 ರಷ್ಟು ಬಡ್ಡಿ!

ಬೆಂಗಳೂರು: ರಾಜ್ಯದೆಲ್ಲೆಡೆ ಮೈಕ್ರೋ ಫೈನಾನ್ಸ್ ಹಾವಳಿ ಹೆಚ್ಚಾಗಿದೆ, ಇದರ ನಿಯಂತ್ರಣಕ್ಕೆ ಸರ್ಕಾರ ಸುಗ್ರೀವಾಜ್ಞೆ ಸಹ ತಂದಿದೆ, ಈ ಬೆನ್ನಲ್ಲೇ ಖಾಸಗಿ ಶಾಲೆಗಳಲ್ಲೂ ಸಹ ಫೀಸ್ ಬಡ್ಡಿ ದಂಧೆ ಶುರುವಾಗಿದೆ,
ಪ್ರತಿಷ್ಠಿತ ಖಾಸಗಿ ಶಾಲೆಯಲ್ಲಿ ಫೀಸ್ ನೆಪದಲ್ಲಿ ಬಡ್ಡಿ ದಂಧೆ ಹೆಚ್ಚಾಗಿದೆ, ಶಾಲಾ ಫೀಸ್ ಉಳಿಸಿಕೊಂಡಿದ್ದಕ್ಕೆ ಇಂಟ್ರೆಸ್ಟ್ ಹಾಕುವ ಮೂಲಕ ಶಾಲಾ ಆಡಳಿತ ಮಂಡಳಿ ಪೋಷಕರಿಗೆ ಟಾರ್ಚರ್ ನೀಡುವ ಆರೋಪ ಕೇಳಿಬಂದಿದೆ,
ಯಲಹಂಕ ಸಿಂಗನಾಯಕನಹಳ್ಳಿಯಲ್ಲಿರುವ ಪ್ರತಿಷ್ಠಿತ ವಿಬ್ ಗಯಾರ್ ಶಾಲೆ ಆಡಳಿತ ಮಂಡಳಿ ಶುಲ್ಕ ವಿಚಾರದಲ್ಲಿ ಪೋಷಕರಿಗೆ ಮಕ್ಕಳ ಫೀಸ್ ಉಳಿಸಿಕೊಂಡಿದ್ದಕ್ಕೆ ಇಂಟ್ರೆಸ್ಟ್ ಹಾಕುವ ಮೂಲಕ ಪೋಷಕರ ಕೆಂಗಣ್ಣಿಗೆ ಗುರಿಯಾಗಿದೆ,
ಶಾಲಾ ಫೀಸ್ ತಿಂಗಳಿಗೆ 3% ಬಡ್ಡಿ ಸಹಿತ ಫೀಸ್ ಕಟ್ಟುವಂತೆ ಶಾಲಾ ಆಡಳಿತ ಮಂಡಳಿ ಇ ಮೇಲ್ ಮಾಡಿದೆ, 25450 ರೂ ಫೀಸ್ ಗೆ 5344 ರೂ ಬಡ್ಡಿ ಹಾಕಲಾಗಿದೆ, ಇದು ಪೋಷಕರ ಆಕ್ರೋಶಕ್ಕೆ ಕಾರಣವಾಗಿದ್ದು, ನಿಯಮವನ್ನು ಗಾಳಿಗೆ ತೂರಿ ಬಡ್ಡಿ ದಂಧೆಗೆ ಇಳಿದ ಶಾಲಾ ಆಡಳಿತ ಮಂಡಳಿ ವಿರುದ್ಧ ಪೋಷಕರು ಕಿಡಿಕಾರಿದ್ದಾರೆ,

Leave a Reply

Your email address will not be published. Required fields are marked *

Trending

Exit mobile version