ಬೆಂಗಳೂರು
ಮೆಟ್ರೋ ದರ ಏರಿಕೆ ವಿರುದ್ಧ ರೊಚ್ಚಿಗೆದ್ದ ಜನ-ಕಣ್ಣೊರೆಸುವ ತಂತ್ರ ಮಾಡಿದ ಬಿಎಂಆರ್‍ಸಿಎಲ್?

ಬೆಂಗಳೂರು: ಮೆಟ್ರೋ ಟಿಕೆಟ್ ದರದಲ್ಲಿ ಏರಿಕೆ ಹಿನ್ನೆಲೆ ಪ್ರಯಾಣಿಕರು ಸರ್ಕಾರದ ವಿರುದ್ಧ ಹಾಗೂ ಬಿಎಂಆರ್‍ಸಿಎಲ್ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ, ಇದೇ ಕಾರಣಕ್ಕೆ ಈಗ ಪ್ರಯಾಣಿಕರ ಕಣ್ಣು ಒರೆಸುವ ತಂತ್ರವಾಗಿ ಬಿಎಂಆರ್‍ಸಿಎಲ್ ಮೆಟ್ರೋ ಟಿಕೆಟ್ ದರವನ್ನು ಒಂದಷ್ಟು ಕಡಿಮೆ ಮಾಡಿದೆ, ಆದರೂ ಮೆಟ್ರೋ ಬಳಸುವ ಪ್ರಯಾಣಿಕರಿಗೆ ಹೊರೆ ಇನ್ನು ಕಡಿಮೆ ಆಗಿಲ್ಲ,
ನಮ್ಮ ಮೆಟ್ರೋ ಆಡಳಿತ ಮಂಡಳಿ ಪ್ರಯಾಣ ದರವನ್ನು 80% ರಿಂದ 100 % ಏರಿಕೆ ಮಾಡಿದೆ, ಹೀಗೆ ಏರಿಕೆ ಆಗಿದ್ದ ಕಡೆ ಕೇವಲ 10 ರೂಪಾಯಿ ಇಳಿಕೆ ಮಾಡಿದೆ ಎಂದು ಆಕ್ರೋಶ ಮೊಳಗಿದೆ, 50% ಹೆಚ್ಚಳ ಎಂದು ಪ್ರಕಟಣೆ ನೀಡಿ 100 % ರಷ್ಟು ದರ ಏರಿಸಿದ ಆರೋಪ ಕೂಡ ಕೇಳಿಬಂದಿದೆ, ಹೀಗೆ ಏರಿಸಿದ್ದ ದರದಲ್ಲಿ ಕೇವಲ 30% ಇಳಿಕೆ ಮಾಡಲಾಗಿದ್ದು, ಕನಿಷ್ಠ 10 ರೂಪಾಯಿಯಿಂದ ಗರಿಷ್ಠ 90 ರೂಪಾಯಿ ತನಕ ನಿಗದಿ ಮಾಡಿರುವ ದರದಲ್ಲಿ ಬದಲಾವಣೆ ಆಗಿಲ್ಲ,
ಉದಾಹರಣೆಗೆ ಹೇಳುವುದಾದರೆ ರಾಜಾಜಿನಗರ ಟು ಲಾಲ್ ಬಾಗ್ ಮೆಟ್ರೋ ಟಿಕೆಟ್ ದರವು 50 ರೂಪಾಯಿ ಹೆಚ್ಚಾಗಿತ್ತು, ಅದರೆ ಜನರ ಆಕ್ರೋಶದ ಹಿನ್ನೆಲೆ ಕೇವಲ 10 ರೂಪಾಯಿ ಇಳಿಕೆ ಮಾಡಿ, 40 ರೂಪಾಯಿಗೆ ನಿಗದಿ ಮಾಡಲಾಗಿದೆ, ಅದೇ ರೀತಿಯಾಗಿ ಪೀಣ್ಯ ಟು ಸೆಂಟ್ರಲ್ ಕಾಲೇಜ್ ಟಿಕೆಟ್ ದರ 60 ರೂಪಾಯಿ ಏರಿಕೆ ಮಾಡಲಾಗಿತ್ತು, ಅದರೆ ಇದೀಗ 10 ರೂಪಾಯಿ ಇಳಿಕೆ ಮಾಡಿದ್ದು, 50 ರೂಪಾಯಿಗೆ ನಿಗದಿ ಮಾಡಲಾಗಿದೆ,