ಬಿಬಿಎಂಪಿ
ಬೈಕ್..ಕಾರ್ ತೊಳೆಯಲು ಕುಡಿಯುವ ನೀರು ಬಳಕೆ: ಬೆಂಗಳೂರಲ್ಲಿ ಬಿತ್ತು ಲಕ್ಷ ಲಕ್ಷ ದಂಡ

ಬೆಂಗಳೂರು: ನಗರದಲ್ಲಿ ಬಿಸಿಲಿನ ಆರ್ಭಟ ಶುರುವಾಗಿದ್ದು, ಜನರ ಬಸವಳಿದಿದ್ದಾರೆ, ಈ ಸಮಯದಲ್ಲೇ ನೀರಿಗೂ ಹಾಹಾಕಾರ ಎದುರಾಗುವ ಚಿಂತೆ ಶುರುವಾಗಿದೆ, ಬೇಸಿಗೆಯ ಬಿಸಿ ಹೆಚ್ಚಾದಂತೆ ನೀರಿಗಾಗಿ ಹಾಹಾಕಾರ ಶುರುವಾಗುವ ಸಾಧ್ಯತೆ ಇದೆ, ಹೀಗಾಗಿ ನೀರು ಪೋಲು ಮಾಡುವುದನ್ನು ತಡೆಗಟ್ಟಲು ಈಗಾಗಲೇ ಜಲಮಂಡಲಿ ದಂಡಾಸ್ತ್ರ ಪ್ರಯೋಗ ಶುರು ಮಾಡಿದ.
ನೀರು ದುರ್ಬಳಕೆ ಮಾಡಿಕೊಳ್ಳುವವರ ವಿರುದ್ಧ ಬೆಂಗಳೂರು ಜಲ ಮಂಡಳಿ ಕಠಿಣ ಕ್ರಮ ಕೈಗೊಳ್ಳುತ್ತಿದ್ದು, ಈವರೆಗೂ 5.60 ಲಕ್ಷ ರೂಪಾಯಿ ದಂಡ ವಿಧೀಸಿದೆ,
ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಕುಡಿಯುವ ನೀರನ್ನು ಅನ್ಯ ಉದ್ದೇಶಗಳಿಗೆ ಬಳಸದಂತೆ ನಿಷೇಧ ಹೇರಲಾಗಿದ್ದು, ಬೆಂಗಳೂರು ಜಲ ಮಂಡಳಿಯು ಆದೇಶ ಹೊರಡಿಸಿ, ಈಗಾಗಲೇ ಒಂದು ವಾರ ಕಳೆದಿದೆ, ಈ ಒಂದು ವಾರದಲ್ಲಿ ಸುಮಾರು 112 ಪ್ರಕರಣ ದಾಖಲಿಸಿರುವ ಅಧಿಕಾರಿಗಳು, ದಂಡ ಪ್ರಯೋಗ ಮಾಡಿದ್ದಾರೆ,
ಕಾರು,ಬೈಕು ತೊಳೆಯಲು ಮತ್ತು, ಅಂಗಳ ಸ್ವಚ್ಛತೆ,ಗಾರ್ಡನ್ ಗೆ ಕುಡಿಯುವ ನೀರು ಹಾಕಿದವರಿಗೆ ಒಟ್ಟಾರೆ 5.60 ಲಕ್ಷ ದಂಡ ವಿಧಿಸಲಾಗಿದೆ, ಈ ಮೂಲಕ ಬೇಸಿಗೆಯ ಆರಂಭಕ್ಕೂ ಮೊದಲೇ ನೀರು ಪೋಲು ಮಾಡದಿರುವಂತೆ ಸಾರ್ವಜನಕರಿಗೆ ಖಡಕ್ ಎಚ್ಚರಿಕೆ ಸಂದೇಶ ರವಾನೆಯಾಗಿದ್ದು, ಕುಡಿಯುವ ನೀರು ಉಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ,