ಬೆಂಗಳೂರು
ಡಿಕೆಶಿ ಸಿಎಂ ಆಗ್ತಾರೆ-ಅಘೋರಿ ಭೈರವಿ ಅಮ್ಮ ಸ್ಫೋಟದ ಭವಿಷ್ಯ

ಹುಬ್ಬಳ್ಳಿ: ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಸಿಎಂ ಬದಲವಾಣೆ ಮುಂದಿನ ಮುಖ್ಯಮಂತ್ರಿ ಯಾರು? ಪವರ್ ಶೇರಿಂಗ್ ಕಿತ್ತಾಟ, ಡಿಕೆಶಿಯೇ ಮುಂದಿನ ಸಿಎಂ ಎಂದವರ ಬೆಂಬಲಿಗರ ಘೋಷಣೆಗಳು ಈ ಎಲ್ಲ ಬೆಳವಣೀಗೆಗಳ ಚರ್ಚೆ ಕಾವು ಪಡೆದುಕೊಂಡಿವೆ
ಇದರ ನಡುವೆಯೇ ಡಿಸಿಎಂ ಡಿಕೆಶಿ ಅವರು ಇದೇ ಅವಧಿಯಲ್ಲೇ ಸಿಎಂ ಆಗುತ್ತಾರೆ ಎಂದು ಅಘೋರಿ ಭೈರಿವ ಅಮ್ಮ ಅವರು ಸ್ಫೋಟಕ ಭವಿಷ್ಯವನ್ನು ನುಡಿದಿದ್ದಾರೆ ,
ಈ ಕುರಿತು ಮಾತನಾಡಿದ ಅವರು ಡಿಕೆಶಿ ಅವರಿಗೆ ಮುಖ್ಯಮಂತ್ರಿ ಆಗುವ ಯೋಗ ಇದೆ, ಅದು ಈಗಾಗಲೇ ಕೂಡಿ ಬಂದಿದೆ, ಈ ಅವಧಿಯಲ್ಲಿ ಅವರೇ ಸಿಎಂ ಆಗಲಿದ್ದಾರೆ ನೋಡಿ ಎಂದಿದ್ದಾರೆ,
ನನ್ನ ಮಾತು ಯವುತ್ತೂ ಸುಳ್ಳು ಆಗಲ್ಲ, ಈವರೆಗೂ ನಾನು ನುಡಿದ ಯಾವುದೇ ಭವಿಷ್ಯ ಸುಳ್ಳು ಆಗಿಲ್ಲ, ಕಳೆದ ಮೂರು ವರ್ಷಗಳ ಹಿಂದೆಯೇ ಡಿಕೆಶಿ ಅವರು ಮನಗೆ ಹೋಗಿದೆ, ಅಂದು ತಮ್ಮ ಭವಿಷ್ಯದ ಬಗ್ಗೆ ಹೇಳಿ ಎಂದು ಡಿಕೆಶಿ ನನ್ನಲ್ಲಿ ಕೇಳಿದ್ದರು, ನಾನು ಅವರ ಪ್ರಶ್ನೆಗೆ ಉತ್ತರವೂ ನೀಡಿದ್ದೆ, ಹೀಗಾಗಿ ಡಿಕೆಶಿ ಸಿಎಂ ಆಗುವುದು ನಿಶ್ಚಿತ ಎಂದು ಅಮ್ಮ ಪುನರುಚ್ಚರಿಸದ್ದಾರೆ,