ಬೆಂಗಳೂರು
ಬಿಜೆಪಿ ಪ್ರತಿಭಟನೆ ರೈತ ವಿರೋಧಿ ಪ್ರತಿಭಟನೆ-ಡಿಕೆಶಿ ಟೀಕೆ

ಬೆಂಗಳೂರು: ರಾಜ್ಯದಲ್ಲಿ ಬೆಲೆ ಏರಿಕೆ ಖಂಡಿಸಿ ವಿಪಕ್ಷಗಳು ಅಹೋರಾತ್ರಿ ಧರಣಿ ನಡೆಸುವ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದು, ಹಾಲಿನ ದರ ಏರಿಕೆ ಮಾಡಿ ಬಂದ ಹಣದಿಂದ ರೈತರಿಗೆ ವಾಪಸ್ ನೀಡಲೆಂದೆ ಹೆಚ್ಚಳ ಮಾಡಿದ್ದು, ಇದು ಬಿಜೆಪಿಗೆ ಇಷ್ಟವಿಲ್ಲ ಎಂದು ಕಿಡಿಕಾರಿದರು,
ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಬಸ್ ಹಾಗೂ ಮೆಟ್ರೋ ಟಿಕೆಟ್ ದರ ಬೆನ್ನಲ್ಲೇ ವಿದ್ಯುತ್, ಹಾಲಿನ ದರ ಏರಿಕೆ ಮಾಡಿದ್ದು, ಇದನ್ನು ಖಂಡಿಸಿ ಫ್ರೀಡಂ ಪಾರ್ಕ್ನಲ್ಲಿ ಬಿಜೆಪಿಯಿಂದ ಅಹೋರಾತ್ರಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ, ಎ.5 ಕ್ಕೆ ಜಿಲ್ಲೆ ಹಾಗೂ ತಾಲೂಕು ಕೇಂದ್ರಗಳಲ್ಲಿ ಪ್ರತಿಭಟನೆ, ಎ.7 ಕ್ಕೆ ಜನಾಕ್ರೋಶ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ,
ಈ ಬಗ್ಗೆ ಮಾತನಾಡಿದ ಡಿಸಿಎಂ ಡಿಕೆಶಿ, ರೈತರಿಗೆ ಸಿಗುವ ಭೂಸ, ಹಿಂಡಿ ಸೇರಿದಂತೆ ಅಗತ್ಯ ವಸ್ತುಗಳ ಬೆಲೆಯನ್ನು ಏರಿಕೆ ಮಾಡಿದೆ, ಇದರ ಹೊರೆಯನ್ನು ತಪ್ಪಿಸಲು ಸರ್ಕಾರ ಹಾಲಿನ ದರ ಏರಿಕೆ ಮಾಡಿರುವುದು, ಇದರಿಂದ ಬಂದ ಹಣವನ್ನು ವಾಪಸ್ ರೈತರಿಗೆ ನೀಡಲಾಗುವುದು ಎಂದು ಹೇಳಿದರು,
ರೈತರಿಗೆ ಉಪಯೋಗವಾಗುವ ಕೆಲಸ ಮಾಡಿದರೆ ಬಿಜೆಪಿಗೆ ಸಹಿಸಲು ಸಾದ್ಯವಿಲ್ಲ, ಅದಕ್ಕಾಗಿಯೇ ಪ್ರತಿಭಟನೆ ಅಹೋರಾತ್ರಿ ಧರಣಿ ಎಂದು ಮಾಡುತ್ತಿದ್ದಾರೆ, ಇದರಲ್ಲೇ ಗೊತ್ತಾಗುತ್ತದೆ ಬಿಜೆಪಿ ರೈತ ವಿರೋಧಿ ಪಕ್ಷ ಎಂದು ಗೊತ್ತಾಗುತ್ತದೆ ಎಂದು ಕಿಡಿಕಾರಿದರು,