ರಾಜಕೀಯ
ರಾಜೀನಾಮೆ ಕೊಟ್ಟು, ಮತ್ತೆ ಸ್ಪರ್ಧಿಸಿ ಗೆದ್ದು ಬಂದರೆ ಹಿಂದೂ ಹುಲಿಗೆ ಸನ್ಮಾನ ಮಾಡುತ್ತೇವೆ: ಯತ್ನಾಳ್ಗೆ ರೇಣುಕಾಚಾರ್ಯ ಸವಾಲು – M P RENUKACHARYA REACTION
ದಾವಣಗೆರೆ: “ಯತ್ನಾಳ್ ಹಿಂದೂ ಹುಲಿ ಅಲ್ಲ, ನಕಲಿ ಹಿಂದೂ. ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು, ಹೊಸ ಪಕ್ಷ ಕಟ್ಟಿ ಗೆದ್ದು ಬಂದರೆ, ಹಿಂದೂ ಹುಲಿಗೆ ನಾವೇ ಸನ್ಮಾನ ಮಾಡುತ್ತೇವೆ” ಎಂದು ಮಾಜಿ ಸಚಿವ ಎಂಪಿ ರೇಣುಕಾಚಾರ್ಯ ಬಿಜೆಪಿ ಪಕ್ಷದ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ವಾಗ್ದಾಳಿ ನಡೆಸಿದರು.
ದಾವಣಗೆರೆ ನಗರದ ಹಳೇ ಪ್ರವಾಸಿ ಮಂದಿರ ಬಳಿ ಶಾಸಕ ಯತ್ನಾಳ್ ಹೊಸ ಪಕ್ಷ ಕಟ್ಟುವ ವಿಚಾರವಾಗಿ ಪ್ರತಿಕ್ರಿಯಿಸಿದರು.
“ಯತ್ನಾಳ್ ಪಕ್ಷ ಕಟ್ಟಿದ್ರೆ ಸಂತೋಷ, ಸ್ವಾಗತ. ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರನ್ನು ಟೀಕೆ ಮಾಡಿದ್ರೆ ಸಿಎಂ ಆಗುವ ಬಗ್ಗೆ ಹಗಲು ಕನಸು ಕಾಣುತ್ತಿದ್ದಾರೆ. ಸರ್ವಾಧಿಕಾರಿ ಧೋರಣೆ ಬಿಡಬೇಕು. ಸ್ವಯಂಘೋಷಿತ ನಾಯಕರಾಗಬಾರದು, ಜನ ಮೆಚ್ಚಿದ ನಾಯಕರಾಗಬೇಕು. ಭಾರತೀಯ ಜನತಾ ಪಕ್ಷದ ಚಿಹ್ನೆಯಡಿಯಲ್ಲಿ ನಿಂತು ಗೆದ್ದಿದ್ದೀರಿ. ನಿಮಗೆ ನಿಜವಾಗಿಯೂ ವರ್ಚಸ್ಸು ಇದ್ದರೆ, ನೀವು ನಿಜವಾಗಿಯೂ ಹಿಂದುತ್ವವಾದಿಯಾಗಿದ್ದರೆ, ಮೊದಲು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು, ಮರು ಚುನಾವಣೆಯಲ್ಲಿ ಗೆದ್ದು ಬಂದರೆ, ನಾವು ನಿಮ್ಮನ್ನು ಅಭಿನಂದಿಸುತ್ತೇವೆ. ಸನ್ಮಾನ ಮಾಡುತ್ತೇವೆ” ಎಂದು ಸವಾಲು ಹಾಕಿದರು.
ಯತ್ನಾಳ್ ಅವರಿಗೆ ಠೇವಣಿಯೂ ಸಿಗಲ್ಲ. ಹೊಸ ಪಕ್ಷ ಕಟ್ಟಲಿ. 224 ಕ್ಷೇತ್ರಗಳಲ್ಲೂ ಅಡ್ರೆಸ್ ಇಲ್ಲದಂತೆ ಆಗ್ತಾರೆ. ಯತ್ನಾಳ್ಗೆ ಅಭ್ಯರ್ಥಿಗಳೇ ಸಿಗಲ್ಲ. ಹಿಂದೂ ಪಕ್ಷ ಕಟ್ಟುತ್ತೇನೆ ಅಂತಾರೆ. ನಾವ್ಯಾರೂ ಹಿಂದೂಗಳಲ್ವಾ? ತಮ್ಮನ್ನು ತಾವು ರಕ್ಷಣೆ ಮಾಡೋಕೆ ಏಕಪಾತ್ರಾಭಿನಯ ಮಾಡುತ್ತಾರೆ. ಹಿಂದೂ ಹುಲಿ ಎಂದು ತಮ್ಮನ್ನು ತಾವು ಪ್ರಚಾರ ಮಾಡಿಕೊಂಡಿದ್ದಾರೆ. ಸಮಯ ಸಂದರ್ಭ ಬಂದಾಗ ಎಲ್ಲವೂ ತಿಳಿಯುತ್ತದೆ” ಎಂದು ಟೀಕಿಸಿದರು.
ಹಿಂದು ಹುಲಿ ಎನ್ನುವ ನೀವು ಟಿಪ್ಪು ಅವತಾರ ತಾಳಿದ್ದೇಕೆ?: ”ಹಿಂದುತ್ವವಾದಿ ಎಂದು ಹೇಳಿಕೊಳ್ಳುವ ನೀವು ಈ ಹಿಂದೆ ಜೆಡಿಎಸ್ಗೆ ಯಾಕೆ ಹೋಗಿದ್ದು? ಟಿಪ್ಪು ಅವತಾರ ಯಾಕೆ ತಾಳಿದ್ರಿ?. ಇಫ್ತಿಯಾರ್ ಕೂಟದಲ್ಲಿ ಯಾಕೆ ಭಾಗಿಯಾಗಿದ್ರಿ. ಹಿಂದೂ ಹುಲಿ ಅಲ್ಲ ಇಲಿ, ಆಚಾರದಲ್ಲಿ ಹಿಂದುತ್ವ ಇರಬೇಕು, ಪ್ರಚಾರದಲ್ಲಿ ಅಲ್ಲ. ಯತ್ನಾಳ್ ನಕಲಿ ಹಿಂದೂ, ವಿಜಯಪುರದಲ್ಲಿ ಹೊಂದಾಣಿಕೆ ಮಾಡಿಕೊಂಡಿದ್ದು ಗೊತ್ತಿದೆ. ಹರಕು ಬಾಯಿಯಿಂದ ಈ ಪರಿಸ್ಥಿತಿ ಬಂದಿದೆ. ಬಲಿಪಶು ಆಗುತ್ತೀರಿ ಎಂದಿದ್ದೆ, ಅದು ಸತ್ಯವಾಗಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬರೋಕೆ ಕಾರಣ ನೀವೇ. ಬಿಎಸ್ವೈ ಮೀಸಲಾತಿ ಕೊಡುತ್ತೇವೆ ಅಂದಾಗ ಬ್ರೇಕ್ ಹಾಕಿದ್ರು. ಬಿಎಸ್ವೈ ಕೈಕಾಲು ಹಿಡಿದ ಆಡಿಯೋ ವಿಡಿಯೋ ಬಿಡುಗಡೆ ಮಾಡಬೇಕಾ?” ಎಂದು ಪ್ರಶ್ನಿಸಿದರು.
ದೇಶ
‘ಕಾಕ್ರೋಚ್ ಜನತಾ ಪಾರ್ಟಿ’ಗೆ ಅಧಿಕೃತ ರೂಪ? ಚುನಾವಣಾ ಆಯೋಗಕ್ಕೆ ಅರ್ಜಿ
ಹರಿಯಾಣ: ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಇದೀಗ ಅಧಿಕೃತ ರಾಜಕೀಯ ಪಕ್ಷವಾಗಿ ರೂಪುಗೊಳ್ಳಲು ಸಿದ್ಧತೆ ಆರಂಭಿಸಿರುವುದು ದೇಶಾದ್ಯಂತ ಕುತೂಹಲ ಹುಟ್ಟಿಸಿದೆ. ಹರಿಯಾಣದ ಪಾಣಿಪತ್ ಮೂಲದ ವಕೀಲ Sudhir Jamir ಅವರು ಈ ವಿಶಿಷ್ಟ ಹೆಸರಿನ ಪಕ್ಷವನ್ನು ನೋಂದಾಯಿಸಲು ಭಾರತೀಯ ಚುನಾವಣಾ ಆಯೋಗಕ್ಕೆ ಅರ್ಜಿ ಸಲ್ಲಿಸಿರುವುದಾಗಿ ತಿಳಿಸಿದ್ದಾರೆ.
ಪಕ್ಷದ ಸಂವಿಧಾನ ಈಗಾಗಲೇ ಸಿದ್ಧಗೊಂಡಿದ್ದು, ಅಧ್ಯಕ್ಷ, ಕಾರ್ಯದರ್ಶಿ ಹಾಗೂ ಖಜಾಂಚಿ ಹುದ್ದೆಗಳಿಗೆ ಸಂಬಂಧಿಸಿದ ದಾಖಲೆಗಳ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ ಎಂದು ಜಮಿರ್ ಮಾಹಿತಿ ನೀಡಿದ್ದಾರೆ. ಮುಂದಿನ ಕೆಲವು ದಿನಗಳಲ್ಲಿ ಸಂಪೂರ್ಣ ದಾಖಲೆಗಳನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಲಾಗುವುದು ಎಂದು ಅವರು ಹೇಳಿದ್ದಾರೆ.
ಕಳೆದ 10 ರಿಂದ 12 ದಿನಗಳಿಂದ ‘ಕಾಕ್ರೋಚ್ ಜನತಾ ಪಾರ್ಟಿ’ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಲಕ್ಷಾಂತರ ಯುವಕರು ಬೆಂಬಲ ಸೂಚಿಸಿದ್ದಾರೆ. ಯುವಕರ ನಿರುದ್ಯೋಗ, ವ್ಯವಸ್ಥೆಯ ವಿರುದ್ಧದ ಅಸಮಾಧಾನ ಹಾಗೂ ಪರ್ಯಾಯ ರಾಜಕೀಯದ ಚರ್ಚೆಗಳಿಗೆ ಈ ಚಳುವಳಿ ವೇದಿಕೆಯಾಗಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.
ಈ ಚಳುವಳಿಯನ್ನು ಮೊದಲು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡಿದ ಡಿಜಿಟಲ್ ಕಂಟೆಂಟ್ ಕ್ರಿಯೇಟರ್ Abhijeet Dipke ಅಮೆರಿಕದಿಂದ ಆನ್‌ಲೈನ್ ಅಭಿಯಾನ ನಡೆಸುತ್ತಿದ್ದು, ಇದನ್ನು ಕೇವಲ ಸೋಶಿಯಲ್ ಮೀಡಿಯಾದಲ್ಲೇ ಸೀಮಿತಗೊಳಿಸದೆ ನೆಲಮಟ್ಟದಲ್ಲಿ ಸಂಘಟನೆ ರೂಪಿಸಬೇಕು ಎಂದು ಜಮಿರ್ ಹೇಳಿದ್ದಾರೆ.
ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರ ಹೇಳಿಕೆಗೆ ಪ್ರತಿಕ್ರಿಯೆಯಾಗಿ ಈ ಪರಿಕಲ್ಪನೆ ಹುಟ್ಟಿಕೊಂಡಿತ್ತು. ಬಳಿಕ ಹಾಸ್ಯ, ವಿಡಂಬನೆ ಮತ್ತು ರಾಜಕೀಯ ಸಂದೇಶಗಳ ಮೂಲಕ ಇದು ವೈರಲ್ ಆಗಿ ಯುವಜನರಲ್ಲಿ ಹೊಸ ಚರ್ಚೆಗೆ ಕಾರಣವಾಯಿತು. ಇದೀಗ ಇದೇ ಹೆಸರಿನಲ್ಲಿ ರಾಜಕೀಯ ಪಕ್ಷ ಸ್ಥಾಪನೆಗೆ ಮುಂದಾಗಿರುವುದು ದೇಶದ ರಾಜಕೀಯದಲ್ಲಿ ಹೊಸ ಕುತೂಹಲ ಮೂಡಿಸಿದೆ.
ದೇಶ
ಡಿಕೆಶಿಗೆ ಹೊಸ ಸವಾಲಾ? ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಜಾರಕಿಹೊಳಿ ಲಾಬಿ
ಬೆಂಗಳೂರು: ರಾಜ್ಯ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆ ಹಾಗೂ ಪವರ್ ಶೇರಿಂಗ್ ಚರ್ಚೆಗಳು ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ ಲೋಕೋಪಯೋಗಿ ಸಚಿವ Satish Jarkiholi ದಿಢೀರ್ ದೆಹಲಿಗೆ ತೆರಳಿರುವುದು ರಾಜಕೀಯ ವಲಯದಲ್ಲಿ ಭಾರಿ ಕುತೂಹಲ ಮೂಡಿಸಿದೆ.
ಮುಖ್ಯಮಂತ್ರಿ Siddaramaiah ಹಾಗೂ ಉಪ ಮುಖ್ಯಮಂತ್ರಿ D. K. Shivakumar ಅವರ ಇತ್ತೀಚಿನ ದೆಹಲಿ ಪ್ರವಾಸದ ಬೆನ್ನಲ್ಲೇ ಜಾರಕಿಹೊಳಿ ಹೈಕಮಾಂಡ್ ನಾಯಕರನ್ನು ಭೇಟಿಯಾಗಲು ಮುಂದಾಗಿರುವುದು ಕಾಂಗ್ರೆಸ್‌ನಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. ಕೆಪಿಸಿಸಿ ಅಧ್ಯಕ್ಷ ಸ್ಥಾನ ಕುರಿತ ಚರ್ಚೆ ಮತ್ತೆ ವೇಗ ಪಡೆದುಕೊಂಡಿದ್ದು, ಪಕ್ಷದೊಳಗಿನ ಸಮೀಕರಣಗಳು ಬದಲಾಗುವ ಸಾಧ್ಯತೆಗಳ ಬಗ್ಗೆ ಮಾತುಕತೆ ಜೋರಾಗಿದೆ.
ಪ್ರಸ್ತುತ ಡಿ.ಕೆ. ಶಿವಕುಮಾರ್ ಅವರೇ ಕೆಪಿಸಿಸಿ ಅಧ್ಯಕ್ಷರಾಗಿ ಮುಂದುವರಿದಿದ್ದರೂ, ಮುಂಬರುವ ಚುನಾವಣಾ ರಾಜಕಾರಣದ ದೃಷ್ಟಿಯಿಂದ ಪೂರ್ಣಾವಧಿ ಅಧ್ಯಕ್ಷರನ್ನು ನೇಮಕ ಮಾಡುವ ಅಗತ್ಯವಿದೆ ಎಂಬ ಅಭಿಪ್ರಾಯ ಕಾಂಗ್ರೆಸ್ ವಲಯದಲ್ಲಿ ಕೇಳಿಬರುತ್ತಿದೆ. ಇದೇ ಹಿನ್ನೆಲೆ ಅಹಿಂದ ಹಾಗೂ ವಾಲ್ಮೀಕಿ ಸಮುದಾಯದ ಪ್ರಭಾವಿ ನಾಯಕನಾಗಿ ಗುರುತಿಸಿಕೊಂಡಿರುವ ಸತೀಶ್ ಜಾರಕಿಹೊಳಿ ತಮ್ಮ ಪರ ಲಾಬಿ ಆರಂಭಿಸಿದ್ದಾರೆ ಎನ್ನಲಾಗಿದೆ.
ಸಿದ್ದರಾಮಯ್ಯ ಆಪ್ತ ವಲಯದ ಪ್ರಮುಖ ನಾಯಕರಲ್ಲಿ ಒಬ್ಬರಾಗಿರುವ ಜಾರಕಿಹೊಳಿ ಅವರ ದೆಹಲಿ ಭೇಟಿ, ಡಿಕೆಶಿ ಬಣಕ್ಕೆ ಹೊಸ ಸವಾಲು ತಂದೊಡ್ಡಿದೆ ಎಂಬ ರಾಜಕೀಯ ವಿಶ್ಲೇಷಣೆಗಳು ಕೇಳಿಬರುತ್ತಿವೆ. ಎಐಸಿಸಿ ಅಧ್ಯಕ್ಷ Mallikarjun Kharge ಸೇರಿದಂತೆ ಹಿರಿಯ ಕಾಂಗ್ರೆಸ್ ನಾಯಕರನ್ನು ಭೇಟಿಯಾಗಿ ರಾಜ್ಯ ರಾಜಕೀಯ ಬೆಳವಣಿಗೆಗಳ ಕುರಿತು ಚರ್ಚಿಸಲಿದ್ದಾರೆ ಎನ್ನಲಾಗಿದೆ.
ಒಟ್ಟಿನಲ್ಲಿ ಜಾರಕಿಹೊಳಿ ಅವರ ದೆಹಲಿ ಪ್ರವಾಸ ಕಾಂಗ್ರೆಸ್‌ನೊಳಗಿನ ನಾಯಕತ್ವ ಚರ್ಚೆಗೆ ಮತ್ತಷ್ಟು ವೇಗ ನೀಡಿದ್ದು, ಮುಂದಿನ ದಿನಗಳಲ್ಲಿ ರಾಜ್ಯ ರಾಜಕಾರಣದಲ್ಲಿ ಹೊಸ ತಿರುವು ಸಿಗುವ ಸಾಧ್ಯತೆಗಳಿವೆ.
ದೇಶ
“ತಮಿಳುನಾಡಿಗೆ ತಡೆಯುವ ಹಕ್ಕಿಲ್ಲ”: ಮೇಕೆದಾಟು ಬಗ್ಗೆ ಡಿಕೆ ಸ್ಪಷ್ಟನೆ
ಬೆಂಗಳೂರು: ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರ ಮಹತ್ವದ ಸಿದ್ಧತೆಗಳನ್ನು ಪೂರ್ಣಗೊಳಿಸಿದ್ದು, ಕೇಂದ್ರ ಸರ್ಕಾರದ ಅನುಮತಿ ದೊರೆತ ತಕ್ಷಣ ಭೂಮಿಪೂಜೆ ನೆರವೇರಿಸಲಾಗುವುದು ಎಂದು ಉಪಮುಖ್ಯಮಂತ್ರಿ D. K. Shivakumar ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ವಿವರವಾದ ಯೋಜನಾ ವರದಿ (DPR) ಈಗಾಗಲೇ ಸಿದ್ಧವಾಗಿದೆ. ಮೇಕೆದಾಟು ಕಚೇರಿ ಆರಂಭಿಸಲಾಗಿದೆ. ಯೋಜನೆಗೆ ಅಗತ್ಯ ಜಮೀನು ಗುರುತಿಸಲಾಗಿದೆ. ಇದೀಗ ಹೊಸ ಡಿಪಿಆರ್ ಸಲ್ಲಿಸಲಾಗುತ್ತಿದೆ” ಎಂದು ಹೇಳಿದರು.
ತಮಿಳುನಾಡು ಸರ್ಕಾರ ಕಾವೇರಿ ಜಲ ಸಮಿತಿ ಅಥವಾ ಕೇಂದ್ರ ಜಲ ಆಯೋಗದ ಮುಂದೆ ಆಕ್ಷೇಪ ಸಲ್ಲಿಸಿದರೂ, ಕರ್ನಾಟಕದ ಪರವಾಗಿ ಅರ್ಜಿ ವಜಾಗೊಳ್ಳುವ ವಿಶ್ವಾಸವಿದೆ ಎಂದು ಡಿಕೆ ಶಿವಕುಮಾರ್ ತಿಳಿಸಿದರು. “ತಮಿಳುನಾಡಿಗೆ ಈ ಯೋಜನೆಯನ್ನು ತಡೆಯುವ ಯಾವುದೇ ಹಕ್ಕಿಲ್ಲ” ಎಂದು ಅವರು ಸ್ಪಷ್ಟಪಡಿಸಿದರು.
ಇದೇ ವೇಳೆ, ತಮಿಳುನಾಡು ಸರ್ಕಾರ ಮೇಕೆದಾಟು ಯೋಜನೆ ವಿರುದ್ಧ ಕಾನೂನು ಹೋರಾಟ ಮುಂದುವರಿಸುವ ಸೂಚನೆ ನೀಡಿದೆ. ಮುಖ್ಯಮಂತ್ರಿ Joseph Vijay ಅವರ ಅಧ್ಯಕ್ಷತೆಯಲ್ಲಿ ಕಾವೇರಿ ಜಲ ತಜ್ಞರು ಹಾಗೂ ಕಾನೂನು ತಜ್ಞರೊಂದಿಗೆ ಮಹತ್ವದ ಸಭೆ ನಡೆದಿದ್ದು, ಮುಂದಿನ ಕಾನೂನು ಕ್ರಮಗಳ ಬಗ್ಗೆ ಚರ್ಚೆ ನಡೆಸಲಾಗಿದೆ.
ತಮಿಳುನಾಡು ಸರ್ಕಾರದ ವಾದದ ಪ್ರಕಾರ, ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಲು ಉದ್ದೇಶಿಸಿರುವ ಮೇಕೆದಾಟು ಅಣೆಕಟ್ಟು, ಸುಪ್ರೀಂ ಕೋರ್ಟ್‌ನ ಹಿಂದಿನ ತೀರ್ಪಿನ ವ್ಯಾಪ್ತಿಗೆ ವಿರುದ್ಧವಾಗಿದೆ. ಈ ಹಿನ್ನೆಲೆಯಲ್ಲಿ 2018 ಮತ್ತು 2022ರಲ್ಲಿ ಸುಪ್ರೀಂ ಕೋರ್ಟ್‌ಗೆ ಅರ್ಜಿಗಳನ್ನು ಸಲ್ಲಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
2025ರ ನವೆಂಬರ್ 13ರಂದು ನಡೆದ ವಿಚಾರಣೆಯಲ್ಲಿ, ಸುಪ್ರೀಂ ಕೋರ್ಟ್ ಮೇಕೆದಾಟು ಯೋಜನೆಗೆ ಯಾವುದೇ ಅಂತಿಮ ಅನುಮತಿ ನೀಡಿಲ್ಲ ಹಾಗೂ ಅದು ಇನ್ನೂ ಪ್ರಾಥಮಿಕ ಹಂತದಲ್ಲಿದೆ ಎಂದು ಅಭಿಪ್ರಾಯಪಟ್ಟಿತ್ತು. ಯೋಜನೆ ನ್ಯಾಯಾಲಯದ ಹಿಂದಿನ ತೀರ್ಪಿನ ವ್ಯಾಪ್ತಿಗೆ ಬರುತ್ತದೆಯೇ ಎಂಬುದನ್ನು ಕೇಂದ್ರ ಜಲ ಆಯೋಗವೇ ನಿರ್ಧರಿಸಬೇಕು ಎಂದು ಹೇಳಿ ಪ್ರಕರಣಗಳನ್ನು ಮುಚ್ಚಿತ್ತು.
ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕ ಮತ್ತು ತಮಿಳುನಾಡಿನ ನಡುವಿನ ವಿವಾದ ಹಲವು ದಶಕಗಳಿಂದ ಮುಂದುವರಿದಿದ್ದು, ಮೇಕೆದಾಟು ಯೋಜನೆ ಮತ್ತೆ ರಾಜಕೀಯ ಹಾಗೂ ಕಾನೂನು ಹೋರಾಟಕ್ಕೆ ಕಾರಣವಾಗುವ ಸಾಧ್ಯತೆ ಹೆಚ್ಚಿದೆ. ಕರ್ನಾಟಕ ಸರ್ಕಾರ ಕುಡಿಯುವ ನೀರು ಮತ್ತು ವಿದ್ಯುತ್ ಉತ್ಪಾದನೆಗಾಗಿ ಯೋಜನೆ ಅಗತ್ಯ ಎಂದು ವಾದಿಸುತ್ತಿದ್ದರೆ, ತಮಿಳುನಾಡು ನೀರಿನ ಹರಿವು ಮತ್ತು ರೈತರ ಹಿತಾಸಕ್ತಿಗೆ ಧಕ್ಕೆಯಾಗಲಿದೆ ಎಂದು ಆಕ್ಷೇಪ ವ್ಯಕ್ತಪಡಿಸುತ್ತಿದೆ.
-
ದೇಶ4 hours ago‘ಡಾನ್ 3’ ತೊರೆದ ರಣವೀರ್ ಸಿಂಗ್ಗೆ ಸಂಕಷ್ಟ; FWICEನಿಂದ ಪರೋಕ್ಷ ಬ್ಯಾನ್?
-
ಕ್ರೀಡೆ52 minutes agoಕೊಹ್ಲಿಗೆ ಜೊತೆಯಾಗೋದು ಯಾರು? ಆರ್ಸಿಬಿ ಪ್ಲೇಯಿಂಗ್ ಇಲೆವೆನ್ ಗೊಂದಲ
-
ದೇಶ10 minutes agoಡಿಕೆಶಿಗೆ ಹೊಸ ಸವಾಲಾ? ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಜಾರಕಿಹೊಳಿ ಲಾಬಿ
-
ದೇಶ4 hours ago16 ವರ್ಷದ ಸೂಪರ್ಹಿಟ್ ಜೋಡಿಗೆ ಭವ್ಯ ಗೌರವ: ‘ಕ್ರೇಜಿ-ಬ್ರಹ್ಮ’ ಕಾರ್ಯಕ್ರಮ
-
ದೇಶ20 minutes agoಕದನ ವಿರಾಮ ಮಾತುಕತೆ ಮಧ್ಯೆಯೇ US ಏರ್ಸ್ಟ್ರೈಕ್; ಬಂದರ್ ಅಬ್ಬಾಸ್ನಲ್ಲಿ ಸ್ಫೋಟ
-
ದೇಶ4 hours ago“ತಮಿಳುನಾಡಿಗೆ ತಡೆಯುವ ಹಕ್ಕಿಲ್ಲ”: ಮೇಕೆದಾಟು ಬಗ್ಗೆ ಡಿಕೆ ಸ್ಪಷ್ಟನೆ
-
ದೇಶ4 hours agoದಿವಂಗತ ಧರ್ಮೇಂದ್ರರಿಗೆ ಪದ್ಮವಿಭೂಷಣ; ರಾಷ್ಟ್ರಪತಿಯಿಂದ ಹೇಮಾ ಮಾಲಿನಿಗೆ ಪ್ರಶಸ್ತಿ ಪ್ರದಾನ
-
ದೇಶ4 hours agoಕೃಷ್ಣಾ ನದಿಗೆ ಹೊಸ ಬ್ಯಾರೇಜ್? ಕರ್ನಾಟಕ-ತೆಲಂಗಾಣ ಸಚಿವರ ಮಹತ್ವದ ಸಭೆ
