ದೇಶ
ನರೇಂದ್ರ ಮೋದಿ ನಂತರ ಭಾರತದ ಪ್ರಧಾನಿ ಇವರೇ…! ಮೋದಿಯಷ್ಟೇ ಪವರ್ಫುಲ್ ರಾಜಕಾರಣಿಯ ಹೆಸರು ಬಹಿರಂಗಪಡಿಸಿದ… Read More

ಮುಂದಿನ ಲೋಕಸಭಾ ಚುನಾವಣೆ ಅಂದರೆ ೨೦೨೯ರಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಬಿಜೆಪಿಯ ಪ್ರಧಾನಿ ಅಭ್ಯರ್ಥಿಯಾಗಿ ಮಹಾರಾಷ್ಟ್ರದ ನಾಯಕರೊಬ್ಬರನ್ನು ಆರಿಸಲಾಗುತ್ತದೆ. ಮುಂದಿನ ಪಿಎಂ ಯಾರಾಗಲಿದ್ದಾರೆ ಎಂದು ಆರ್‌ಎಸ್‌ಎಸ್ ನಿರ್ಧಾರ ಮಾಡಲಿದೆ ಎಂದು ಇತ್ತೀಚೆಗೆ ಶಿವಸೇನೆಯ (ಉದ್ಧವ್ ಠಾಕ್ರೆ ಬಣ) ಸಂಸದ ಸಂಜಯ್ ರಾವತ್ ಹೇಳಿದ್ದರು.
ಆದರೆ, ಈ ಮಾತನ್ನು ಸಿಎಂ ದೇವೇಂದ್ರ ಫಡ್ನವಿಸ್ ನಿರಾಕರಿಸಿದ್ದು, ಆ ಬಗ್ಗೆ ಬಿಜೆಪಿಯಲ್ಲಿ ಯಾವ ಚರ್ಚೆಯೂ ಆರಂಭವಾಗಿಲ್ಲ. 2029ರ ಚುನಾವಣೆಯಲ್ಲೂ ಮೋದಿಯವರೇ ಪ್ರಧಾನಿ ಅಭ್ಯರ್ಥಿಯಾಗಲಿದ್ದಾರೆ ಎಂದು ಹೇಳಿದ್ದರು. ಈ ಹೇಳಿಕೆಗಳ ಬೆನ್ನಲ್ಲೇ ಮುಂದಿನ ಪ್ರಧಾನಿ ಅಭ್ಯರ್ಥಿ ಯಾರು ಎಂಬ ಬಗ್ಗೆ ಪ್ರಶ್ನೆಗಳು ಎದ್ದಿವೆ. ಈ ನಡುವೆ ವೆಬ್ ಎಐ ಟೂಲ್ ಚಾಟ್ ಜಿಪಿಟಿ ಮೂಲಕ ಈ ಕುತೂಹಲಕಾರಿ ಪ್ರಶ್ನೆಗೆ ಉತ್ತರ ಸಿಕ್ಕಿದೆ.
ಎಐ ಎಂಬುದು ಪ್ರಸ್ತುತ ಜಗತ್ತಿನಲ್ಲಿ ಭಾರೀ ಸುದ್ದಿಯಾಗುತ್ತಿರುವ ಮತ್ತು ಟ್ರೆಂಡಿಂಗ್‌ನಲ್ಲಿರುವ ಒಂದು ಟೆಕ್ನಾಲಜಿ ವಿಷಯ. ಇದರ ಸಹಾಯದಿಂದ ಸಾಮಾನ್ಯ ಮನುಷ್ಯನಿಂದ ಕಂಡುಹಿಡಿಯಲು ಕಷ್ಟವಾದ ಕೆಲಸಗಳು ಕೂಡ ಚಿಟಿಕೆಯಲ್ಲಿ ಪೂರ್ಣಗೊಳಿಸಬಹುದಾಗಿದೆ.
ಇದೀಗ ಮೋದಿ ಬಳಿಕ ಮುಂದಿನ ಪ್ರಧಾನಿ ಯಾರು ಎಂಬ ಪ್ರಶ್ನೆಯನ್ನು ಎಐ ಮುಂದಿಟ್ಟಿದ್ದು, ಇದಕ್ಕೆ ಪ್ರತಿಕ್ರಿಯಿಸಿದ ಎಐ ಹೀಗೆ ಹೇಳಿದೆ.
ಏಪ್ರಿಲ್ 2025 ರ ಹೊತ್ತಿಗೆ, ಪ್ರಧಾನಿ ನರೇಂದ್ರ ಮೋದಿ ಭಾರತವನ್ನು ಮುನ್ನಡೆಸುತ್ತಿದ್ದಾರೆ. 2024 ರ ಸಾರ್ವತ್ರಿಕ ಚುನಾವಣೆಯಲ್ಲಿ ಸತತ ಮೂರನೇ ಅವಧಿಗೆ ಆಯ್ಕೆಯಾಗಿದ್ದಾರೆ. ಭಾರತೀಯ ಜನತಾ ಪಕ್ಷ (ಬಿಜೆಪಿ) ದಲ್ಲಿ ಅವರ ಸಂಭಾವ್ಯ ಉತ್ತರಾಧಿಕಾರಿಯ ಕುರಿತು ಚರ್ಚೆಗಳು ನಡೆಯುತ್ತಿವೆ. ಆಗಸ್ಟ್ 2024 ರಲ್ಲಿ ನಡೆಸಿದ ಇಂಡಿಯಾ ಟುಡೇ ಮೂಡ್ ಆಫ್ ದಿ ನೇಷನ್ ಸಮೀಕ್ಷೆಯು ಗೃಹ ಸಚಿವ ಅಮಿತ್ ಶಾ ಅವರು ಪ್ರಧಾನಿ ಮೋದಿಯವರ ಉತ್ತರಾಧಿಕಾರಿಯಾಗಲು ಪ್ರಮುಖ ಆಯ್ಕೆ ಎಂದು ಸೂಚಿಸಿದೆ. ಪ್ರತಿಕ್ರಿಯಿಸಿದವರಲ್ಲಿ 25% ಜನರು ಅವರನ್ನು ಬೆಂಬಲಿಸಿದ್ದಾರೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ 19% ಮತ್ತು ಕೇಂದ್ರ ಸಚಿವ ನಿತಿನ್ ಗಡ್ಕರಿ 13% ಬೆಂಬಲವನ್ನು ಪಡೆದಿದ್ದಾರೆ” .
ಈ ಅಂಕಿಅಂಶಗಳು ಆ ಸಮಯದಲ್ಲಿ ಸಾರ್ವಜನಿಕ ಅಭಿಪ್ರಾಯವನ್ನು ಪ್ರತಿನಿಧಿಸುತ್ತವೆ ಮತ್ತು ಅಂದಿನಿಂದ ಆ ಅಭಿಪ್ರಾಯಗಳು ಬದಲಾಗಿರಬಹುದು ಎಂಬುದನ್ನು ಗಮನಿಸುವುದು ಮುಖ್ಯ. ಇಲ್ಲಿಯವರೆಗೆ, ಉತ್ತರಾಧಿಕಾರಿಯ ಬಗ್ಗೆ ಯಾವುದೇ ಅಧಿಕೃತ ಘೋಷಣೆ ಇಲ್ಲ, ಮತ್ತು ಪ್ರಧಾನಿ ಮೋದಿ ಪ್ರಧಾನಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ” ಎಂದು ಎಐ ಹೇಳುತ್ತಿದೆ.