Blog
ಸೌಂದರ್ಯ ಪುಣ್ಯಸ್ಮರಣೆ: ಬಹುಭಾಷೆಗಳಲ್ಲಿ ನಟನೆ, 12 ವರ್ಷಗಳಲ್ಲಿ 100ಕ್ಕೂ ಹೆಚ್ಚು ಸಿನಿಮಾ; ಉನ್ನತ ನಟ – ನಿರ್ದೇಶಕರೊಂದಿಗೆ ಕೆಲಸ
ಒಂದು ಸಮಯದಲ್ಲಿ ಕನ್ನಡ ಚಿತ್ರರಂಗದ ಅತ್ಯಂತ ಬಹುಬೇಡಿಕೆ ನಟಿಯಾಗಿ ಗುರುತಿಸಿಕೊಂಡಿದ್ದ ಸೌಂದರ್ಯ ಅವರೀಗ ಅಭಿಮಾನಿಗಳೆದೆಯಲ್ಲಿ ಜೀವಂತವಾಗಿದ್ದಾರೆ. ಕನ್ನಡ ಮಾತ್ರವಲ್ಲದೇ ತೆಲುಗು, ತಮಿಳು ಮತ್ತು ಮಲಯಾಳಂ ಚಿತ್ರಗಳಲ್ಲಿ ಕಾಣಿಸಿಕೊಂಡು ಅತ್ಯಂತ ಜನಪ್ರಿಯತೆ ಹೊಂದಿದ್ದ ನಟಿ 2004ರ ಏಪ್ರಿಲ್ 17ರಂದು ಕೊನೆಯುಸಿರೆಳೆದರು. ವಿಮಾನ ಅಪಘಾತದಲ್ಲಿ ಕೊನೆಯುಸಿರೆಳೆದಿದ್ದು, ಇಂದು 21ನೇ ವರ್ಷದ ಪುಣ್ಯಸ್ಮರಣೆ ನಡೆಯುತ್ತಿದೆ. 12 ವರ್ಷಗಳ ಯಶಸ್ವಿ ವೃತ್ತಿಜೀವನವನ್ನು ಹೊಂದಿದ್ದ ಅವರು 100ಕ್ಕೂ ಹೆಚ್ಚು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಭಾರತೀಯ ಚಿತ್ರರಂಗದ ಉನ್ನತ ನಿರ್ದೇಶಕರು ಮತ್ತು ಸೂಪರ್ ಸ್ಟಾರ್ಗಳೊಂದಿಗೆ ಕೆಲಸ ಮಾಡಿರುವ ಕೀರ್ತಿ ಇವರಿಗೆ ಸಲ್ಲುತ್ತದೆ.
ಶಿಕ್ಷಣ: 1972ರ ಜುಲೈ 18ರಂದು ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ಸೌಂದರ್ಯ, ಬೆಂಗಳೂರಿನಲ್ಲಿ ಎಂಬಿಬಿಎಸ್ ಪದವಿ ಪಡೆಯಲು ವಿದ್ಯಾಭ್ಯಾಸ ಪ್ರಾರಂಭಿಸಿದರು. ಆದರೆ ದಕ್ಷಿಣ ಚಿತ್ರರಂಗದಲ್ಲಿ ವೃತ್ತಿಜೀವನವನ್ನು ರೂಪಿಸಿಕೊಳ್ಳಲು, ಮೊದಲ ವರ್ಷದ ನಂತರ 1992ರಲ್ಲಿ ತಮ್ಮ ವಿದ್ಯಾಭ್ಯಾಸವನ್ನು ನಿಲ್ಲಿಸಿದರು.
ನಟನಾ ವೃತ್ತಿಜೀವನ: ಹಿರಿಯ ಚಲನಚಿತ್ರ ಬರಹಗಾರ, ಕೈಗಾರಿಕೋದ್ಯಮಿ ಕೆ.ಎಸ್.ಸತ್ಯನಾರಾಯಣ್ ಅವರ ಪುತ್ರಿ ಸೌಂದರ್ಯ 1992ರಲ್ಲಿ ಬಾ ನನ್ನ ಪ್ರೀತಿಸು, ಗಂಧರ್ವ ಚಿತ್ರಗಳ ಮೂಲಕ ಗ್ಲ್ಯಾ ರ್ ಜಗತ್ತಿಗೆ ಎಂಟ್ರಿ ಕೊಟ್ಟರು. ಕಮಲ್ ಹಾಸನ್, ರಜನಿಕಾಂತ್, ಮೋಹನ್ ಲಾಲ್, ಚಿರಂಜೀವಿ, ಬಾಲಕೃಷ್ಣ, ನಾಗಾರ್ಜುನ, ವೆಂಕಟೇಶ್, ರವಿಚಂದ್ರನ್, ವಿಷ್ಣುವರ್ಧನ್ ಮತ್ತು ಅಮಿತಾಭ್ ಬಚ್ಚನ್ (ಸೂರ್ಯವಂಶ) ನಂತಹ ದಕ್ಷಿಣ ಭಾರತದ ಎಲ್ಲಾ ಸೂಪರ್ ಸ್ಟಾರ್ಗಳೊಂದಿಗೆ ನಟಿಸಿದ ಏಕೈಕ ನಾಯಕ ನಟಿಯಾಗಿ ಸೌಂದರ್ಯ ಹೆಸರು ಸಂಪಾದಿಸಿದರು.
12 ವರ್ಷಗಳ ಅಲ್ಪಾವಧಿಯಲ್ಲೇ ಅನೇಕ ಸಾಧನೆ: ಬೆಂಗಳೂರಿನವರಾಗಿದ್ದರೂ, ತೆಲುಗು ಚಿತ್ರಗಳ ಮೂಲಕ ಅವರು ಅನೇಕರ ಹೃದಯಗಳನ್ನು ತಲುಪಿದರು. ಬಹುಭಾಷಾ ಸಿನಿಮಾಗಳಲ್ಲಿ ಲೀಡ್ ರೋಲ್ ನಲ್ಲಿ ಕಾಣಿಸಿಕೊಂಡರು. ತಮ್ಮ ಅತ್ಯುತ್ತಮ ಅಭಿನಯಕ್ಕಾಗಿ ಅನೇಕ ಪ್ರಶಸ್ತಿ, ಪುರಸ್ಕಾರಗಳನ್ನು ಮುಡಿಗೇರಿಸಿಕೊಂಡರು. 12 ವರ್ಷಗಳ ಅಲ್ಪಾವಧಿಯ 6 ಫಿಲ್ಮ್ಫೇರ್ ಪ್ರಶಸ್ತಿಗಳನ್ನು ಪಡೆದರು. ಆ ಚಿತ್ರಗಳೆಂದರೆ ಅಮ್ಮೋರು (1994), ಅಂತಃಪುರಂ (1998), ರಾಜ (1999), ದ್ವೀಪ (ಅತ್ಯುತ್ತಮ ನಟಿ ಮತ್ತು ಅತ್ಯುತ್ತಮ ನಿರ್ಮಾಪಕಿ ಪ್ರಶಸ್ತಿಗಳು) ಮತ್ತು ಆಪ್ತಮಿತ್ರ (2004). 1998-99ರಲ್ಲಿ ದೋಣಿ ಸಾಗಲಿ ಮತ್ತು 2002ರ ದ್ವೀಪ ಸಿನಿಮಾಗೆ ಕರ್ನಾಟಕ ರಾಜ್ಯ ಪ್ರಶಸ್ತಿ ಬಂದಿತ್ತು. ಆಂಧ್ರ ಪ್ರದೇಶ ಸರ್ಕಾರ ನೀಡುವ ನಂದಿ ಪ್ರಶಸ್ತಿ (ಅಮ್ಮೋರು, ಪವಿತ್ರ ಬಂಧನಂ ಮತ್ತು ಅಂತಃಪುರಂ)ಯನ್ನೂ ಗೆದ್ದುಕೊಂಡಿದ್ದಾರೆ.
ವಿಮಾನ ಅಪಘಾತದಲ್ಲಿ ಕೊನೆಯುಸಿರೆಳೆದ ಒಡಹುಟ್ಟಿದವರು: ನಟಿಯಾಗಿ ಮಾತ್ರವಲ್ಲದೇ ಗಿರೀಶ್ ಕಾಸರವಳ್ಳಿ ನಿರ್ದೇಶನದ ದ್ವೀಪ ಚಿತ್ರದ ನಿರ್ಮಾಪಕಿಯೂ ಆಗಿದ್ದರು. ತಂದೆಯ ಮರಣದ ನಂತರ, ಅವರ ಸಹೋದರ ಅಮರನಾಥ್ ಅವರು ನಟಿಯ ಎಲ್ಲಾ ಕೆಲಸಗಳನ್ನು ನೋಡಿಕೊಂಡರು. ದುರಾದೃಷ್ಟವಶಾತ್ ಒಡಹುಟ್ಟಿದವರು ಈ ಅಪಘಾತದಲ್ಲಿ ಒಟ್ಟಿಗೆ ಕೊನೆಯುಸಿರೆಳೆದರು.
1990-2000ರ ಅವಧಿಯಲ್ಲಿ ದಕ್ಷಿಣ ಚಿತ್ರರಂಗದಲ್ಲಿ ಅತ್ಯಂತ ಬಹುಬೇಡಿಕೆ ನಟಿಯಾಗಿ ಗುರುತಿಸಿಕೊಂಡಿದ್ದ ರೂಪವತಿ ಸೌಂದರ್ಯ ತಮ್ಮ 31ನೇ ಹರೆಯದಲ್ಲೇ ಕೊನೆಯುಸಿರೆಳೆದಿದ್ದು ಮಾತ್ರ ದುರಂತ. ಬಾಳಿ ಬದುಕಬೇಕಿದ್ದ, ಚಿತ್ರರಂಗದಲ್ಲಿ ಹೆಚ್ಚು ಕಾಲ ಪ್ರಜ್ವಲಿಸಬೇಕಿದ್ದ ಸೌಂದರ್ಯ ಅವರೀಗ ನೆನಪು ಮಾತ್ರ.
Blog
ಮುಂಬೈ ಏರ್ಪೋರ್ಟ್ನಲ್ಲಿ ವೈರಲ್ ಆದ ವಿರಾಟ್ ಕೊಹ್ಲಿ; ಪಾಪರಾಜಿಗಳ ಜೊತೆಗಿನ ಸಂವಾದಕ್ಕೆ ಫ್ಯಾನ್ಸ್ ಫಿದಾ
ಮುಂಬೈ: Virat Kohli ಮತ್ತೊಮ್ಮೆ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದ್ದಾರೆ. ಬುಧವಾರ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡ ಟೀಮ್ ಇಂಡಿಯಾದ ಮಾಜಿ ನಾಯಕ ತಮ್ಮ ಸರಳತೆ, ಸ್ಟೈಲಿಶ್ ಲುಕ್ ಹಾಗೂ ಪಾಪರಾಜಿಗಳೊಂದಿಗೆ ನಡೆಸಿದ ಸ್ನೇಹಪರ ಸಂವಾದದ ಮೂಲಕ ಅಭಿಮಾನಿಗಳ ಗಮನ ಸೆಳೆದಿದ್ದಾರೆ.
ಐಪಿಎಲ್ ಟ್ರೋಫಿ ಗೆಲುವಿನ ಸಂಭ್ರಮದ ಬಳಿಕ ರಿಲ್ಯಾಕ್ಸ್ ಮೂಡ್ನಲ್ಲಿ ಕಾಣಿಸಿಕೊಂಡ ಕೊಹ್ಲಿ, ಬಿಳಿ ಬಣ್ಣದ ಕ್ಯಾಶುಯಲ್ ಟಿ-ಶರ್ಟ್, ಕಂಫರ್ಟಬಲ್ ಪ್ಯಾಂಟ್ ಹಾಗೂ ಸನ್ಗ್ಲಾಸ್ ಧರಿಸಿ ವಿಮಾನ ನಿಲ್ದಾಣದಿಂದ ಹೊರಬಂದರು. ಅವರ ಸರಳ ಆದರೆ ಆಕರ್ಷಕ ಲುಕ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಈ ವೇಳೆ ವಿಮಾನ ನಿಲ್ದಾಣದ ಹೊರಗೆ ಕಾಯುತ್ತಿದ್ದ ಛಾಯಾಗ್ರಾಹಕರನ್ನು ಕೊಹ್ಲಿ ಮುಗುಳ್ನಗೆಯೊಂದಿಗೆ ಸ್ವಾಗತಿಸಿದರು. ಫೋಟೋಗ್ರಾಫರ್ಗಳ ಮನವಿಗೆ ಸ್ಪಂದಿಸಿ ಕೆಲ ಹೊತ್ತು ಫೋಟೋಗಳಿಗೆ ಪೋಸ್ ನೀಡಿದ ಅವರು, ತಮಾಷೆಯಾಗಿ “ಈಗ ಇನ್ನೇನು ಮಾಡಬೇಕು?” ಎಂದು ಪ್ರಶ್ನಿಸಿ ಅಲ್ಲಿದ್ದವರಲ್ಲಿ ನಗುವಿನ ಅಲೆ ಎಬ್ಬಿಸಿದರು. ಅವರ ಈ ಸರಳ ವರ್ತನೆ ಮತ್ತು ಸ್ನೇಹಪರ ನಡವಳಿಕೆ ಅಭಿಮಾನಿಗಳ ಮನಗೆದ್ದಿದೆ.
ಇತ್ತೀಚೆಗೆ ಐಪಿಎಲ್ ಟ್ರೋಫಿ ಗೆಲುವಿನ ಸಂಭ್ರಮಾಚರಣೆಯಲ್ಲೂ ಕೊಹ್ಲಿ ಪ್ರಮುಖ ಆಕರ್ಷಣೆಯಾಗಿದ್ದರು. ಪತ್ನಿ Anushka Sharma ಅವರೊಂದಿಗೆ ಹಂಚಿಕೊಂಡ ಭಾವನಾತ್ಮಕ ಕ್ಷಣಗಳು ಹಾಗೂ ತಂಡದ ಬ್ಯಾಟಿಂಗ್ ಕೋಚ್ Dinesh Karthik ಅವರೊಂದಿಗೆ ನಡೆಸಿದ ಸಂಭ್ರಮಾಚರಣೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿತ್ತು.
ವಿಶ್ವದ ಅತ್ಯಂತ ಜನಪ್ರಿಯ ಕ್ರಿಕೆಟಿಗರಲ್ಲಿ ಒಬ್ಬರಾಗಿರುವ ವಿರಾಟ್ ಕೊಹ್ಲಿ ಅವರ ಪ್ರತಿಯೊಂದು ಸಾರ್ವಜನಿಕ ಕಾಣಿಸಿಕೊಳ್ಳುವಿಕೆಯೂ ಅಭಿಮಾನಿಗಳಲ್ಲಿ ಕುತೂಹಲ ಹುಟ್ಟಿಸುತ್ತಿದ್ದು, ಮುಂಬೈ ವಿಮಾನ ನಿಲ್ದಾಣದ ಈ ವಿಡಿಯೊ ಕೂಡ ಅದಕ್ಕೆ ಮತ್ತೊಂದು ಉದಾಹರಣೆಯಾಗಿದೆ.
Blog
ಶಾಲೆ ಶುರುವಾಗುವ ಮುನ್ನವೇ ಪೋಷಕರಿಗೆ ಮತ್ತೊಂದು ಬೆಲೆ ಏರಿಕೆ ಶಾಕ್
ಬೆಂಗಳೂರು: ರಾಜ್ಯದ ಮಧ್ಯಮ ಹಾಗೂ ಬಡ ವರ್ಗದ ಜನರಿಗೆ ಬೆಲೆ ಏರಿಕೆಯ ಬಿಸಿ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಇದೀಗ ಶಾಲಾ ಮಕ್ಕಳ ಪೋಷಕರಿಗೆ ಮತ್ತೊಂದು ದೊಡ್ಡ ಆರ್ಥಿಕ ಹೊರೆ ಎದುರಾಗಿದೆ.
ಈಗಾಗಲೇ Petrol ಮತ್ತು Diesel ದರ ಏರಿಕೆಯಿಂದ ಸಂಕಷ್ಟದಲ್ಲಿರುವ ಪೋಷಕರಿಗೆ, ಹೊಸ ಶೈಕ್ಷಣಿಕ ವರ್ಷದ ಆರಂಭದಲ್ಲೇ ಶಾಲಾ ವೆಚ್ಚಗಳು ಭಾರೀ ಹೊರೆ ತಂದಿವೆ. ಶಾಲಾ ಅಡ್ಮಿಷನ್ ಫೀಸ್, ವ್ಯಾನ್ ಹಾಗೂ ಆಟೋ ಶುಲ್ಕ ಏರಿಕೆಯ ಬೆನ್ನಲ್ಲೇ ಇದೀಗ ನೋಟ್ಬುಕ್, ವರ್ಕ್ಬುಕ್ ಮತ್ತು ಬಿಳಿ ಪೇಪರ್ಗಳ ದರ ಕೂಡ ಶೇಕಡಾ 20ರಿಂದ 25ರಷ್ಟು ಏರಿಕೆಯಾಗಿದೆ.
ಸ್ಟೇಷನರಿ ಅಂಗಡಿಗಳಲ್ಲೂ ಪೋಷಕರಿಗೆ ಆಘಾತ
ಶಾಲೆಗಳು ಪೂರ್ಣ ಪ್ರಮಾಣದಲ್ಲಿ ಆರಂಭವಾಗುವ ಮುನ್ನವೇ ಪೋಷಕರು ಸ್ಟೇಷನರಿ ಅಂಗಡಿಗಳತ್ತ ಮುಖ ಮಾಡಿದ್ದು, ಅಲ್ಲಿ ಹೆಚ್ಚಿದ ಬೆಲೆಗಳು ಆತಂಕ ಮೂಡಿಸಿವೆ. ದಿನನಿತ್ಯ ಮಕ್ಕಳಿಗೆ ಅಗತ್ಯವಾಗುವ ನೋಟ್ಬುಕ್ಗಳ ಬೆಲೆ ಹೆಚ್ಚಳದಿಂದ ಕುಟುಂಬಗಳ ಮಾಸಿಕ ಬಜೆಟ್ ಸಂಪೂರ್ಣ ಹದಗೆಟ್ಟಿದೆ.
ಕೇವಲ ಶಾಲಾ ಶುಲ್ಕವಷ್ಟೇ ಅಲ್ಲ, ಶಿಕ್ಷಣಕ್ಕೆ ಸಂಬಂಧಿಸಿದ ಪ್ರತಿಯೊಂದು ವಸ್ತುವಿನ ಬೆಲೆ ಏರಿಕೆಯಾಗಿರುವುದರಿಂದ ಪೋಷಕರು ಆರ್ಥಿಕ ಒತ್ತಡಕ್ಕೆ ಸಿಲುಕಿದ್ದಾರೆ.
ಜಾಗತಿಕ ಪರಿಸ್ಥಿತಿ ಮತ್ತು ಇಂಧನ ದರ ಏರಿಕೆ ಪರಿಣಾಮ
ಪುಸ್ತಕ ಹಾಗೂ ಪೇಪರ್ ದರ ಏರಿಕೆಗೆ ಜಾಗತಿಕ ಮತ್ತು ಸ್ಥಳೀಯ ಮಟ್ಟದ ಹಲವು ಕಾರಣಗಳಿವೆ ಎಂದು ಉದ್ಯಮ ವಲಯ ತಿಳಿಸಿದೆ.
ಗಲ್ಫ್ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಯುದ್ಧ ಪರಿಸ್ಥಿತಿಯಿಂದ ಕಾಗದ ಉದ್ಯಮಕ್ಕೆ ಅಗತ್ಯವಿರುವ ಕಚ್ಚಾ ವಸ್ತುಗಳು, ರಾಸಾಯನಿಕಗಳು ಮತ್ತು ಕಲರ್ಸ್ಗಳ ಆಮದು ವ್ಯತ್ಯಯಗೊಂಡಿದೆ. ಇದರ ಪರಿಣಾಮ ಕಚ್ಚಾ ವಸ್ತುಗಳ ಬೆಲೆ ಗಣನೀಯವಾಗಿ ಏರಿಕೆಯಾಗಿದೆ.
ಇದರ ಜೊತೆಗೆ ಇಂಧನ ದರ ಏರಿಕೆಯಿಂದ ಸಾರಿಗೆ ವೆಚ್ಚ ಕೂಡ ಹೆಚ್ಚಾಗಿದೆ. ಕಚ್ಚಾ ವಸ್ತು ಸಾಗಣೆ ಮತ್ತು ಸಿದ್ಧಪಡಿಸಿದ ಪುಸ್ತಕಗಳನ್ನು ಮಾರುಕಟ್ಟೆಗೆ ತಲುಪಿಸಲು ಹೆಚ್ಚಿನ ಹಣ ಖರ್ಚಾಗುತ್ತಿದ್ದು, ಮುದ್ರಣ ವೆಚ್ಚವೂ ದುಪ್ಪಟ್ಟಾಗಿದೆ.
ಪೋಷಕರ ಬಜೆಟ್ ಮೇಲೆ ಭಾರೀ ಹೊರೆ
ಅಂತಿಮವಾಗಿ ಈ ಎಲ್ಲಾ ವೆಚ್ಚದ ಹೊರೆ ಪೋಷಕರ ಮೇಲೆಯೇ ಬೀಳುತ್ತಿದೆ. ಈಗಾಗಲೇ ದಿನಸಿ, ವಿದ್ಯುತ್, ಸಾರಿಗೆ ವೆಚ್ಚಗಳಿಂದ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಶಾಲಾ ಸಾಮಗ್ರಿಗಳ ದರ ಏರಿಕೆ ಮತ್ತಷ್ಟು ತಲೆನೋವಾಗಿ ಪರಿಣಮಿಸಿದೆ.
ಸರ್ಕಾರ ಮತ್ತು ಸಂಬಂಧಿತ ಇಲಾಖೆಗಳು ಈ ಬಗ್ಗೆ ಗಮನ ಹರಿಸಿ ಬೆಲೆ ನಿಯಂತ್ರಣ ಕ್ರಮ ಕೈಗೊಳ್ಳದಿದ್ದರೆ ಸಾಮಾನ್ಯ ಜನರ ಬದುಕು ಇನ್ನಷ್ಟು ದುಸ್ತರವಾಗುವ ಸಾಧ್ಯತೆ ಇದೆ.
Blog
IPL 2026: ಲೈವ್ ಟಿವಿಯಲ್ಲಿ ರಿಷಭ್ ಪಂತ್ F-Word ಬಳಕೆ ವಿವಾದ! ಸೋಲಿನ ಬಳಿಕ ನಿಯಂತ್ರಣ ತಪ್ಪಿದ LSG ನಾಯಕ
ಐಪಿಎಲ್ 2026ರ 64ನೇ ಪಂದ್ಯದಲ್ಲಿ Lucknow Super Giants ತಂಡಕ್ಕೆ ಭಾರೀ ನಿರಾಸೆ ಎದುರಾಗಿದೆ. ಜೈಪುರದ Sawai Mansingh Stadiumನಲ್ಲಿ ನಡೆದ ಪಂದ್ಯದಲ್ಲಿ Rajasthan Royals ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ 7 ವಿಕೆಟ್ಗಳ ಸೋಲು ಅನುಭವಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ತಂಡ 20 ಓವರ್ಗಳಲ್ಲಿ 220 ರನ್ಗಳ ಭರ್ಜರಿ ಮೊತ್ತ ಕಲೆಹಾಕಿತ್ತು. ಆದರೆ ರಾಜಸ್ಥಾನ್ ರಾಯಲ್ಸ್ 19.1 ಓವರ್ಗಳಲ್ಲಿ ಗುರಿ ತಲುಪಿ ಸುಲಭ ಜಯ ಸಾಧಿಸಿತು.
ಲೈವ್ ಟಿವಿಯಲ್ಲಿ ನಿಯಂತ್ರಣ ತಪ್ಪಿದ ರಿಷಭ್ ಪಂತ್
ಪಂದ್ಯದ ಬಳಿಕ ನಡೆದ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಪ್ರಸಿದ್ಧ ನಿರೂಪಕ Ian Bishop ಅವರು ತಂಡದ ಕಳಪೆ ಪ್ರದರ್ಶನ ಹಾಗೂ ಪ್ಲ್ಯಾನಿಂಗ್ ಬಗ್ಗೆ ಪ್ರಶ್ನಿಸಿದಾಗ Rishabh Pant ಭಾವುಕರಾಗಿ ಪ್ರತಿಕ್ರಿಯಿಸಿದರು.
“ನಮ್ಮ ನಿರೀಕ್ಷೆಯಂತೆ ಪಂದ್ಯಗಳು ಸಾಗುತ್ತಿಲ್ಲ. ಆದರೆ ಅದರಿಂದ ನಾವು ಕೆಟ್ಟ ತಂಡವಾಗುವುದಿಲ್ಲ. ನಾವು ನಿಜಕ್ಕೂ ಉತ್ತಮ F…g ತಂಡ” ಎಂದು ಪಂತ್ ಲೈವ್ ಸಂದರ್ಶನದಲ್ಲೇ ಅಸಭ್ಯ ಪದ ಬಳಕೆ ಮಾಡಿದರು.
ಪಂತ್ ಮಾತು ಕೇಳಿ ಇಯಾನ್ ಬಿಷಪ್ ಕೆಲಕಾಲ ಸ್ತಬ್ಧರಾದರು. ಬಳಿಕ ಸಂದರ್ಶನವನ್ನು ತಕ್ಷಣವೇ ಮುಕ್ತಾಯಗೊಳಿಸಿದರು.
ವೈರಲ್ ಆದ ವಿಡಿಯೋ, ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ
ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಲೈವ್ ಟಿವಿಯಲ್ಲಿ ಅಸಭ್ಯ ಪದ ಬಳಸಿದಕ್ಕಾಗಿ ಪಂತ್ ವಿರುದ್ಧ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕೆಲವರು ನಾಯಕನಾಗಿ ಹೆಚ್ಚು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕಿತ್ತು ಎಂದು ಟೀಕಿಸಿದ್ದಾರೆ.
ರಿಷಭ್ ಪಂತ್ ಆಕ್ರೋಶಕ್ಕೆ ಕಾರಣವೇನು?
ಪಂತ್ ನಿಯಂತ್ರಣ ತಪ್ಪಲು ತಂಡದ ಹೀನಾಯ ಪ್ರದರ್ಶನ ಮತ್ತು ವೈಯಕ್ತಿಕ ಒತ್ತಡವೇ ಪ್ರಮುಖ ಕಾರಣ ಎನ್ನಲಾಗಿದೆ.
- Lucknow Super Giants ಈ ಸೋಲಿನೊಂದಿಗೆ ಅಧಿಕೃತವಾಗಿ ಪ್ಲೇ-ಆಫ್ ರೇಸ್ನಿಂದ ಹೊರಬಿದ್ದಿದೆ.
- ತಂಡ ಪಾಯಿಂಟ್ಸ್ ಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕೆ ಕುಸಿದಿದೆ.
- ಮೆಗಾ ಹರಾಜಿನಲ್ಲಿ ₹27 ಕೋಟಿ ನೀಡಿ ಪಂತ್ ಅವರನ್ನು ಖರೀದಿಸಲಾಗಿತ್ತು. ಆದರೆ ಬ್ಯಾಟರ್ ಹಾಗೂ ನಾಯಕನಾಗಿ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲರಾಗಿದ್ದಾರೆ.
- ಸತತ ಸೋಲುಗಳಿಂದ ತಂಡದ ಮೇಲೆ ಅಭಿಮಾನಿಗಳು ಮತ್ತು ಮಾಧ್ಯಮಗಳಿಂದ ತೀವ್ರ ಟೀಕೆ ವ್ಯಕ್ತವಾಗುತ್ತಿತ್ತು.
“ತಂಡದ ಮೇಲಿನ ನಂಬಿಕೆಯಿಂದ ಬಂದ ಭಾವುಕ ಪ್ರತಿಕ್ರಿಯೆ”
ಕ್ರೀಡಾ ವಲಯದಲ್ಲಿ ಪಂತ್ ಬಳಕೆ ಮಾಡಿದ ಭಾಷೆ ವಿವಾದಕ್ಕೆ ಕಾರಣವಾದರೂ, ಹಲವರು ಅದನ್ನು ನಾಯಕನೊಬ್ಬ ತನ್ನ ತಂಡದ ಪರ ನಿಂತ ಭಾವುಕ ಪ್ರತಿಕ್ರಿಯೆ ಎಂದು ವಿಶ್ಲೇಷಿಸುತ್ತಿದ್ದಾರೆ.
ಸತತ ಸೋಲುಗಳಿಂದ ಸಂಕಷ್ಟದಲ್ಲಿರುವ ತಂಡದ ಬಗ್ಗೆ ಹೊರಗಿನಿಂದ ಟೀಕೆಗಳು ಹೆಚ್ಚಾಗುತ್ತಿದ್ದ ಸಂದರ್ಭದಲ್ಲಿ, ಆಟಗಾರರ ಬೆಂಬಲಕ್ಕೆ ನಿಂತ ಪಂತ್ ಅವರ ಮನಸ್ಥಿತಿಯೇ ಆ ಕ್ಷಣದಲ್ಲಿ ಹೊರಹೊಮ್ಮಿದೆ ಎನ್ನಲಾಗುತ್ತಿದೆ.
-
ದೇಶ15 hours agoBig News : ಸಂಪುಟದಲ್ಲಿ ಮೊದಲ ವಿಕೆಟ್ ಪತನ? ಸಚಿವ ಸ್ಥಾನಕ್ಕೆ ರಾಮಲಿಂಗಾ ರೆಡ್ಡಿ ರಾಜೀನಾಮೆ ಘೋಷಣೆ
-
ಬೆಂಗಳೂರು13 hours agoವಾಹನ ಸವಾರರಿಗೆ ಬಂಪರ್ ಆಫರ್! ಟ್ರಾಫಿಕ್ ಫೈನ್ಗೆ 50% ರಿಯಾಯಿತಿ
-
ದೇಶ12 hours agoಡಿಕೆಶಿ ಸರ್ಕಾರಕ್ಕೆ ಮತ್ತೊಂದು ಶಾಕ್! ರಾಮಲಿಂಗಾ ರೆಡ್ಡಿ ಬಳಿಕ ಕೆ.ಹೆಚ್. ಮುನಿಯಪ್ಪ ಅಸಮಾಧಾನ ಸ್ಫೋಟ
-
ಕ್ರೀಡೆ11 hours agoಮುಂಬೈ ಗಲ್ಲಿಯಲ್ಲಿ ಕ್ರಿಕೆಟ್ ಆಡಿದ ಎಬಿ ಡಿ ವಿಲಿಯರ್ಸ್! ಅಭಿಮಾನಿಗಳ ಹೃದಯ ಗೆದ್ದ RCB ದಿಗ್ಗಜ
-
ದೇಶ12 hours agoಹೊಸ ಪಕ್ಷ, ಹೊಸ ಹೋರಾಟ! ತಮಿಳುನಾಡಿನಲ್ಲಿ ಅಣ್ಣಾಮಲೈ ರಾಜಕೀಯ ಕ್ರಾಂತಿ
-
ದೇಶ13 hours agoರಾಮಲಿಂಗಾರೆಡ್ಡಿ ರಾಜೀನಾಮೆ: ಕಾರಿನ ಚಕ್ರದಡಿ ಮಲಗಿ ಅಭಿಮಾನಿಗಳ ಕಣ್ಣೀರು!
-
ದೇಶ14 hours agoತಮಿಳುನಾಡು ಬಿಜೆಪಿಯಲ್ಲಿ ಭೂಕಂಪ: ಕೆ. ಅಣ್ಣಾಮಲೈ ಪಕ್ಷಕ್ಕೆ ಗುಡ್ಬೈ
-
ದೇಶ8 hours agoಶೈಕ್ಷಣಿಕ ಜಾಗ ದುರ್ಬಳಕೆ ಆರೋಪ: ಕೆಂಗೇರಿ ಟ್ರಸ್ಟ್ ವಿರುದ್ಧ PIL ವಿಚಾರಣೆ
