ದೇಶ
ಪಾಕಿಸ್ತಾನದಲ್ಲಿ ಹೆಡ್‌ಲೈನ್ಸ್ ಆದ ಭಾರತದ ‘ಇಂಡಸ್’ ನಿರ್ಧಾರ, ಸೆಕ್ಯುರಿಟಿ ಕಮಿಟಿ ಸಭೆ ಕರೆದ ಪಾಕ್ ಪ್ರಧಾನಿ!
ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪೈಶಾಚಿಕ ದಾಳಿಯ ಬೆನ್ನಲ್ಲಿಯೇ ಭಾರತ ಸರ್ಕಾರ ಪಾಕಿಸ್ತಾನದ ವಿರುದ್ಧ ಮಹತ್ವದ ಕ್ರಮಗಳನ್ನು ಕೈಗೊಂಡಿದೆ. ಅದರಲ್ಲಿ ಪ್ರಮುಖವಾಗಿ ಇಲ್ಲಿಯವರೆಗೂ ಭಾರತಕ್ಕೆ ಆದ ಅನ್ಯಾಯದ ರೀತಿಯಲ್ಲೇ ಇದ್ದ ಇಂಡಸ್ ಜಲ ಒಪ್ಪಂದವನ್ನು ಭಾರತ ರದ್ದು ಮಾಡಿದೆ. 1960ರಿಂದಲೂ ಜಾರಿಯಲ್ಲಿದ್ದ ಈ ಇಂಡಸ್ ಜಲ ಒಪ್ಪಂದದ ಪ್ರಕಾರ ಭಾರತ ಕೇವಲ ಶೇ. 20ರಷ್ಟು ನೀರನ್ನು ಮಾತ್ರವೇ ಉಪಯೋಗಿಸಬಹುದಾಗಿತ್ತು. ಈಗ ಇಂಥ ಘೋರ ಒಪ್ಪಂದವನ್ನೇ ಭಾರತ ಅಮಾನತು ಮಾಡುವ ನಿರ್ಧಾರ ಮಾಡಿದೆ.
ಪಹಲ್ಗಾಮ್‌ನಲ್ಲಿ ದಾಳಿ ಪಾಕಿಸ್ತಾನದಲ್ಲಿ ಸುದ್ದಿಯಾಗದೇ ಇದ್ದರೂ, ಪಾಕಿಸ್ತಾನದ ಬಹುತೇಕ ವೆಬ್‌ಸೈಟ್‌ಗಳಲ್ಲಿ ಭಾರತದ ಇಂಡಸ್ ನಿರ್ಧಾರ ಹೆಡ್‌ಲೈನ್ ಆಗಿದೆ. ಪಾಕ್‌ನ ಪ್ರಮುಖ ಪತ್ರಿಕೆ ಡಾನ್, ‘Pahalgam attack: India suspends Indus Waters Treaty with immediate effect, closes Attari border check post’ ಎನ್ನುವ ಟೈಟಲ್‌ನಲ್ಲಿ ಪ್ರಧಾನ ಸುದ್ದಿಯಾಗಿ ಪೋಸ್ಟ್ ಮಾಡಿದೆ. ಡೇಲಿ ಟೈಮ್ಸ್ ಪತ್ರಿಕೆ, ‘India escalates tensions: ends water treaty, orders Pakistanis to leave’ ಎಂದು ಲೀಡ್ ಸುದ್ದಿಯಾಗಿ ಪ್ರಕಟಿಸಿದೆ.
ಅದರೊಂದಿಗೆ ಪಾಕಿಸ್ತಾನ ಅಬ್ಸರ್ವರ್ ಪತ್ರಿಕೆ, ‘India suspends Indus Water Treaty, expels Pakistani Diplomats after Pahalgam Attack’ ಎನ್ನುವ ಹೆಡ್‌ಲೈನ್‌ನಲ್ಲಿ ವಿಚಾರ ಪೋಸ್ಟ್ ಮಾಡಿದೆ.
ಸೆಕ್ಯುರಿಟಿ ಕಮಿಟಿ ಸಭೆ ಕರೆದ ಪಾಕ್ ಪ್ರಧಾನಿ: ಭಾರತದ ಇಂಡಸ್ ನಿರ್ಧಾರದ ಬೆನ್ನಲ್ಲಿಯೇ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಗುರುವಾರ ಬೆಳಿಗ್ಗೆ ರಾಷ್ಟ್ರೀಯ ಭದ್ರತಾ ಸಮಿತಿಯ (NSC) ತುರ್ತು ಸಭೆ ಕರೆದಿದ್ದಾರೆ. ಈ ಪ್ರಕಟಣೆಯನ್ನು ವಿದೇಶಾಂಗ ಸಚಿವ ಇಶಾಕ್ ದಾರ್ ಅವರು X ನಲ್ಲಿ ತಡರಾತ್ರಿ ಪೋಸ್ಟ್ ಮಾಡುವ ಮೂಲಕ ದೃಢಪಡಿಸಿದ್ದಾರೆ.
ಪಾಕಿಸ್ತಾನದ ಭದ್ರತೆ ಮತ್ತು ವಿದೇಶಾಂಗ ನೀತಿ ವಿಷಯಗಳಿಗೆ ಸಂಬಂಧಿಸಿದ ಅತ್ಯುನ್ನತ ವೇದಿಕೆಯಾದ NSC, ಅಧಿಕೃತ ಪ್ರತಿಕ್ರಿಯೆಯನ್ನು ರೂಪಿಸಲು ಸಭೆ ಸೇರಲಿದೆ. NSC ಸೇನಾ ಮುಖ್ಯಸ್ಥರು, ಗುಪ್ತಚರ ಮುಖ್ಯಸ್ಥರು ಮತ್ತು ಪ್ರಮುಖ ಕ್ಯಾಬಿನೆಟ್ ಮಂತ್ರಿಗಳನ್ನು ಒಳಗೊಂಡಿದೆ.
ದೇಶ
‘ಕಾಕ್ರೋಚ್ ಜನತಾ ಪಾರ್ಟಿ’ಗೆ ಅಧಿಕೃತ ರೂಪ? ಚುನಾವಣಾ ಆಯೋಗಕ್ಕೆ ಅರ್ಜಿ
ಹರಿಯಾಣ: ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಇದೀಗ ಅಧಿಕೃತ ರಾಜಕೀಯ ಪಕ್ಷವಾಗಿ ರೂಪುಗೊಳ್ಳಲು ಸಿದ್ಧತೆ ಆರಂಭಿಸಿರುವುದು ದೇಶಾದ್ಯಂತ ಕುತೂಹಲ ಹುಟ್ಟಿಸಿದೆ. ಹರಿಯಾಣದ ಪಾಣಿಪತ್ ಮೂಲದ ವಕೀಲ Sudhir Jamir ಅವರು ಈ ವಿಶಿಷ್ಟ ಹೆಸರಿನ ಪಕ್ಷವನ್ನು ನೋಂದಾಯಿಸಲು ಭಾರತೀಯ ಚುನಾವಣಾ ಆಯೋಗಕ್ಕೆ ಅರ್ಜಿ ಸಲ್ಲಿಸಿರುವುದಾಗಿ ತಿಳಿಸಿದ್ದಾರೆ.
ಪಕ್ಷದ ಸಂವಿಧಾನ ಈಗಾಗಲೇ ಸಿದ್ಧಗೊಂಡಿದ್ದು, ಅಧ್ಯಕ್ಷ, ಕಾರ್ಯದರ್ಶಿ ಹಾಗೂ ಖಜಾಂಚಿ ಹುದ್ದೆಗಳಿಗೆ ಸಂಬಂಧಿಸಿದ ದಾಖಲೆಗಳ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ ಎಂದು ಜಮಿರ್ ಮಾಹಿತಿ ನೀಡಿದ್ದಾರೆ. ಮುಂದಿನ ಕೆಲವು ದಿನಗಳಲ್ಲಿ ಸಂಪೂರ್ಣ ದಾಖಲೆಗಳನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಲಾಗುವುದು ಎಂದು ಅವರು ಹೇಳಿದ್ದಾರೆ.
ಕಳೆದ 10 ರಿಂದ 12 ದಿನಗಳಿಂದ ‘ಕಾಕ್ರೋಚ್ ಜನತಾ ಪಾರ್ಟಿ’ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಲಕ್ಷಾಂತರ ಯುವಕರು ಬೆಂಬಲ ಸೂಚಿಸಿದ್ದಾರೆ. ಯುವಕರ ನಿರುದ್ಯೋಗ, ವ್ಯವಸ್ಥೆಯ ವಿರುದ್ಧದ ಅಸಮಾಧಾನ ಹಾಗೂ ಪರ್ಯಾಯ ರಾಜಕೀಯದ ಚರ್ಚೆಗಳಿಗೆ ಈ ಚಳುವಳಿ ವೇದಿಕೆಯಾಗಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.
ಈ ಚಳುವಳಿಯನ್ನು ಮೊದಲು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡಿದ ಡಿಜಿಟಲ್ ಕಂಟೆಂಟ್ ಕ್ರಿಯೇಟರ್ Abhijeet Dipke ಅಮೆರಿಕದಿಂದ ಆನ್‌ಲೈನ್ ಅಭಿಯಾನ ನಡೆಸುತ್ತಿದ್ದು, ಇದನ್ನು ಕೇವಲ ಸೋಶಿಯಲ್ ಮೀಡಿಯಾದಲ್ಲೇ ಸೀಮಿತಗೊಳಿಸದೆ ನೆಲಮಟ್ಟದಲ್ಲಿ ಸಂಘಟನೆ ರೂಪಿಸಬೇಕು ಎಂದು ಜಮಿರ್ ಹೇಳಿದ್ದಾರೆ.
ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರ ಹೇಳಿಕೆಗೆ ಪ್ರತಿಕ್ರಿಯೆಯಾಗಿ ಈ ಪರಿಕಲ್ಪನೆ ಹುಟ್ಟಿಕೊಂಡಿತ್ತು. ಬಳಿಕ ಹಾಸ್ಯ, ವಿಡಂಬನೆ ಮತ್ತು ರಾಜಕೀಯ ಸಂದೇಶಗಳ ಮೂಲಕ ಇದು ವೈರಲ್ ಆಗಿ ಯುವಜನರಲ್ಲಿ ಹೊಸ ಚರ್ಚೆಗೆ ಕಾರಣವಾಯಿತು. ಇದೀಗ ಇದೇ ಹೆಸರಿನಲ್ಲಿ ರಾಜಕೀಯ ಪಕ್ಷ ಸ್ಥಾಪನೆಗೆ ಮುಂದಾಗಿರುವುದು ದೇಶದ ರಾಜಕೀಯದಲ್ಲಿ ಹೊಸ ಕುತೂಹಲ ಮೂಡಿಸಿದೆ.
ದೇಶ
ಡಿಕೆಶಿಗೆ ಹೊಸ ಸವಾಲಾ? ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಜಾರಕಿಹೊಳಿ ಲಾಬಿ
ಬೆಂಗಳೂರು: ರಾಜ್ಯ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆ ಹಾಗೂ ಪವರ್ ಶೇರಿಂಗ್ ಚರ್ಚೆಗಳು ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ ಲೋಕೋಪಯೋಗಿ ಸಚಿವ Satish Jarkiholi ದಿಢೀರ್ ದೆಹಲಿಗೆ ತೆರಳಿರುವುದು ರಾಜಕೀಯ ವಲಯದಲ್ಲಿ ಭಾರಿ ಕುತೂಹಲ ಮೂಡಿಸಿದೆ.
ಮುಖ್ಯಮಂತ್ರಿ Siddaramaiah ಹಾಗೂ ಉಪ ಮುಖ್ಯಮಂತ್ರಿ D. K. Shivakumar ಅವರ ಇತ್ತೀಚಿನ ದೆಹಲಿ ಪ್ರವಾಸದ ಬೆನ್ನಲ್ಲೇ ಜಾರಕಿಹೊಳಿ ಹೈಕಮಾಂಡ್ ನಾಯಕರನ್ನು ಭೇಟಿಯಾಗಲು ಮುಂದಾಗಿರುವುದು ಕಾಂಗ್ರೆಸ್‌ನಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. ಕೆಪಿಸಿಸಿ ಅಧ್ಯಕ್ಷ ಸ್ಥಾನ ಕುರಿತ ಚರ್ಚೆ ಮತ್ತೆ ವೇಗ ಪಡೆದುಕೊಂಡಿದ್ದು, ಪಕ್ಷದೊಳಗಿನ ಸಮೀಕರಣಗಳು ಬದಲಾಗುವ ಸಾಧ್ಯತೆಗಳ ಬಗ್ಗೆ ಮಾತುಕತೆ ಜೋರಾಗಿದೆ.
ಪ್ರಸ್ತುತ ಡಿ.ಕೆ. ಶಿವಕುಮಾರ್ ಅವರೇ ಕೆಪಿಸಿಸಿ ಅಧ್ಯಕ್ಷರಾಗಿ ಮುಂದುವರಿದಿದ್ದರೂ, ಮುಂಬರುವ ಚುನಾವಣಾ ರಾಜಕಾರಣದ ದೃಷ್ಟಿಯಿಂದ ಪೂರ್ಣಾವಧಿ ಅಧ್ಯಕ್ಷರನ್ನು ನೇಮಕ ಮಾಡುವ ಅಗತ್ಯವಿದೆ ಎಂಬ ಅಭಿಪ್ರಾಯ ಕಾಂಗ್ರೆಸ್ ವಲಯದಲ್ಲಿ ಕೇಳಿಬರುತ್ತಿದೆ. ಇದೇ ಹಿನ್ನೆಲೆ ಅಹಿಂದ ಹಾಗೂ ವಾಲ್ಮೀಕಿ ಸಮುದಾಯದ ಪ್ರಭಾವಿ ನಾಯಕನಾಗಿ ಗುರುತಿಸಿಕೊಂಡಿರುವ ಸತೀಶ್ ಜಾರಕಿಹೊಳಿ ತಮ್ಮ ಪರ ಲಾಬಿ ಆರಂಭಿಸಿದ್ದಾರೆ ಎನ್ನಲಾಗಿದೆ.
ಸಿದ್ದರಾಮಯ್ಯ ಆಪ್ತ ವಲಯದ ಪ್ರಮುಖ ನಾಯಕರಲ್ಲಿ ಒಬ್ಬರಾಗಿರುವ ಜಾರಕಿಹೊಳಿ ಅವರ ದೆಹಲಿ ಭೇಟಿ, ಡಿಕೆಶಿ ಬಣಕ್ಕೆ ಹೊಸ ಸವಾಲು ತಂದೊಡ್ಡಿದೆ ಎಂಬ ರಾಜಕೀಯ ವಿಶ್ಲೇಷಣೆಗಳು ಕೇಳಿಬರುತ್ತಿವೆ. ಎಐಸಿಸಿ ಅಧ್ಯಕ್ಷ Mallikarjun Kharge ಸೇರಿದಂತೆ ಹಿರಿಯ ಕಾಂಗ್ರೆಸ್ ನಾಯಕರನ್ನು ಭೇಟಿಯಾಗಿ ರಾಜ್ಯ ರಾಜಕೀಯ ಬೆಳವಣಿಗೆಗಳ ಕುರಿತು ಚರ್ಚಿಸಲಿದ್ದಾರೆ ಎನ್ನಲಾಗಿದೆ.
ಒಟ್ಟಿನಲ್ಲಿ ಜಾರಕಿಹೊಳಿ ಅವರ ದೆಹಲಿ ಪ್ರವಾಸ ಕಾಂಗ್ರೆಸ್‌ನೊಳಗಿನ ನಾಯಕತ್ವ ಚರ್ಚೆಗೆ ಮತ್ತಷ್ಟು ವೇಗ ನೀಡಿದ್ದು, ಮುಂದಿನ ದಿನಗಳಲ್ಲಿ ರಾಜ್ಯ ರಾಜಕಾರಣದಲ್ಲಿ ಹೊಸ ತಿರುವು ಸಿಗುವ ಸಾಧ್ಯತೆಗಳಿವೆ.
ದೇಶ
ಕದನ ವಿರಾಮ ಮಾತುಕತೆ ಮಧ್ಯೆಯೇ US ಏರ್‌ಸ್ಟ್ರೈಕ್; ಬಂದರ್ ಅಬ್ಬಾಸ್‌ನಲ್ಲಿ ಸ್ಫೋಟ
ಟೆಹ್ರಾನ್: ಇರಾನ್ ಜೊತೆಗಿನ ಕದನ ವಿರಾಮ ಹಾಗೂ ಉದ್ವಿಗ್ನತೆ ಶಮನಕ್ಕೆ ಸಂಬಂಧಿಸಿದ ಮಾತುಕತೆಗಳು ಅಂತಿಮ ಹಂತ ತಲುಪಿದ್ದಾಗಲೇ ಅಮೆರಿಕ ಮತ್ತೆ ಭಾರೀ ವೈಮಾನಿಕ ದಾಳಿ ನಡೆಸಿದ್ದು, ಮಧ್ಯಪ್ರಾಚ್ಯದಲ್ಲಿ ಆತಂಕ ಹೆಚ್ಚಿಸಿದೆ. ದಕ್ಷಿಣ ಇರಾನ್‌ನ ಮಿಲಿಟರಿ ನೆಲೆಗಳು, ಕ್ಷಿಪಣಿ ಉಡಾವಣಾ ತಾಣಗಳು ಹಾಗೂ ಹಾರ್ಮುಜ್ ಜಲಸಂಧಿಯಲ್ಲಿ ಜಲಬಾಂಬ್‌ಗಳನ್ನು ನಿಯೋಜಿಸುತ್ತಿದ್ದ ಬೋಟ್‌ಗಳನ್ನು ಗುರಿಯಾಗಿಸಿ ಅಮೆರಿಕ ಸೇನೆ ಕಾರ್ಯಾಚರಣೆ ನಡೆಸಿದೆ.
ಭಾರತೀಯ ಕಾಲಮಾನ ಮಂಗಳವಾರ ಮುಂಜಾನೆ ನಡೆದ ಈ ದಾಳಿಯಲ್ಲಿ ಇರಾನ್‌ನ ಕ್ರಾಂತಿಕಾರಿ ಗಾರ್ಡ್ ಕಾರ್ಪ್ಸ್ (IRGC) ಬಳಕೆ ಮಾಡುತ್ತಿದ್ದ ಎರಡು ಬೋಟ್‌ಗಳನ್ನು ಅಮೆರಿಕ ನಾಶಪಡಿಸಿದೆ ಎಂದು ವರದಿಯಾಗಿದೆ. ಹಾರ್ಮುಜ್ ಜಲಸಂಧಿಯಲ್ಲಿ ಗಣಿಗಳನ್ನು ಅಳವಡಿಸುತ್ತಿದ್ದ ಮಾಹಿತಿ ಲಭಿಸಿದ ತಕ್ಷಣ ಅಮೆರಿಕ ಪಡೆಗಳು ಕಾರ್ಯಾಚರಣೆ ಆರಂಭಿಸಿವೆ ಎಂದು ಯುಎಸ್ ಸೆಂಟ್ರಲ್ ಕಮಾಂಡ್ (CENTCOM) ತಿಳಿಸಿದೆ.
ಇದೇ ವೇಳೆ ಬಂದರ್ ಅಬ್ಬಾಸ್‌ನಲ್ಲಿರುವ ಕ್ಷಿಪಣಿ ಉಡಾವಣಾ ತಾಣಗಳ ಮೇಲೂ ಅಮೆರಿಕದ ಫೈಟರ್ ಜೆಟ್‌ಗಳು ದಾಳಿ ನಡೆಸಿವೆ. ಈ ಕಾರ್ಯಾಚರಣೆಯಲ್ಲಿ ಕ್ಷಿಪಣಿ ಲಾಂಚರ್‌ಗಳು ಹಾಗೂ ಮಿಲಿಟರಿ ಮೂಲಸೌಕರ್ಯಗಳಿಗೆ ಭಾರೀ ಹಾನಿಯಾಗಿದೆ. ಸ್ಫೋಟಗಳ ಪರಿಣಾಮ ದಟ್ಟ ಹೊಗೆ ಆಕಾಶಕ್ಕೆ ಚಿಮ್ಮಿದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಈ ದಾಳಿ ಆತ್ಮರಕ್ಷಣೆಯ ಭಾಗವಾಗಿದ್ದು, ಯುದ್ಧವನ್ನು ವಿಸ್ತರಿಸುವ ಉದ್ದೇಶ ನಮ್ಮದಲ್ಲ ಎಂದು CENTCOM ಸ್ಪಷ್ಟಪಡಿಸಿದೆ. ಆದರೆ ಅಮೆರಿಕದ ಕ್ರಮ ಇರಾನ್‌ನನ್ನು ಮತ್ತಷ್ಟು ಕೆರಳಿಸಿದ್ದು, ಮತ್ತೆ ಯುದ್ಧ ಪ್ರಾರಂಭವಾಗಬಹುದೇ ಎಂಬ ಆತಂಕ ಜಾಗತಿಕ ಮಟ್ಟದಲ್ಲಿ ಹೆಚ್ಚಾಗಿದೆ.
ಈ ನಡುವೆ ಅಮೆರಿಕ ಅಧ್ಯಕ್ಷ Donald Trump ತಮ್ಮ ‘ಟ್ರುಥ್’ ಸಾಮಾಜಿಕ ಜಾಲತಾಣದಲ್ಲಿ ದಾಳಿಯ ಚಿತ್ರ ಹಂಚಿಕೊಂಡು “ಇದು ಟ್ರಂಪ್ ನೀತಿ” ಎಂದು ಪೋಸ್ಟ್ ಮಾಡಿರುವುದು ಮತ್ತಷ್ಟು ಚರ್ಚೆಗೆ ಕಾರಣವಾಗಿದೆ.
-
ದೇಶ30 minutes ago‘ಕಾಕ್ರೋಚ್ ಜನತಾ ಪಾರ್ಟಿ’ಗೆ ಅಧಿಕೃತ ರೂಪ? ಚುನಾವಣಾ ಆಯೋಗಕ್ಕೆ ಅರ್ಜಿ
-
ದೇಶ38 minutes agoಡಿಕೆಶಿಗೆ ಹೊಸ ಸವಾಲಾ? ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಜಾರಕಿಹೊಳಿ ಲಾಬಿ
-
ದೇಶ4 hours ago‘ಡಾನ್ 3’ ತೊರೆದ ರಣವೀರ್ ಸಿಂಗ್ಗೆ ಸಂಕಷ್ಟ; FWICEನಿಂದ ಪರೋಕ್ಷ ಬ್ಯಾನ್?
-
ಕ್ರೀಡೆ1 hour agoಕೊಹ್ಲಿಗೆ ಜೊತೆಯಾಗೋದು ಯಾರು? ಆರ್ಸಿಬಿ ಪ್ಲೇಯಿಂಗ್ ಇಲೆವೆನ್ ಗೊಂದಲ
-
ದೇಶ4 hours ago16 ವರ್ಷದ ಸೂಪರ್ಹಿಟ್ ಜೋಡಿಗೆ ಭವ್ಯ ಗೌರವ: ‘ಕ್ರೇಜಿ-ಬ್ರಹ್ಮ’ ಕಾರ್ಯಕ್ರಮ
-
ದೇಶ49 minutes agoಕದನ ವಿರಾಮ ಮಾತುಕತೆ ಮಧ್ಯೆಯೇ US ಏರ್‌ಸ್ಟ್ರೈಕ್; ಬಂದರ್ ಅಬ್ಬಾಸ್‌ನಲ್ಲಿ ಸ್ಫೋಟ
-
ದೇಶ4 hours ago“ತಮಿಳುನಾಡಿಗೆ ತಡೆಯುವ ಹಕ್ಕಿಲ್ಲ”: ಮೇಕೆದಾಟು ಬಗ್ಗೆ ಡಿಕೆ ಸ್ಪಷ್ಟನೆ
-
ದೇಶ4 hours agoದಿವಂಗತ ಧರ್ಮೇಂದ್ರರಿಗೆ ಪದ್ಮವಿಭೂಷಣ; ರಾಷ್ಟ್ರಪತಿಯಿಂದ ಹೇಮಾ ಮಾಲಿನಿಗೆ ಪ್ರಶಸ್ತಿ ಪ್ರದಾನ
