ಸಿನಿಮಾ
ನಮ್ಮ ಕುಟುಂಬದ ಮೂಲ ಪಾಕಿಸ್ತಾನ: ಶಾರುಖ್ ಖಾನ್
ಶಾರುಖ್ ಖಾನ್ ಹಿಂದಿ ಚಿತ್ರರಂಗದ ಅತ್ಯಂತ ಜನಪ್ರಿಯ ತಾರೆಗಳಲ್ಲಿ ಒಬ್ಬರು. ಶಾರುಖ್ ಖಾನ್ ಚಿಕ್ಕ ವಯಸ್ಸಿನಲ್ಲಿಯೇ ತಮ್ಮ ಹೆತ್ತವರನ್ನು ಕಳೆದುಕೊಂಡರು. ಶಾರುಖ್ ಬಾಲಿವುಡ್‌ಗೆ ಪದಾರ್ಪಣೆ ಮಾಡುವ ಮೊದಲೇ ಅವರ ತಂದೆ ತಾಯಿ ನಿಧನರಾದರು. ಅವರ ತಾಯಿ ಲತೀಫ್ ಫಾತಿಮಾ ಖಾನ್ ಮತ್ತು ತಂದೆ ತಾಜ್ ಮೊಹಮ್ಮದ್ ಖಾನ್.
ಶಾರುಖ್ ಖಾನ್ ಕೇವಲ 15 ವರ್ಷದವರಿದ್ದಾಗ ತಮ್ಮ ತಂದೆ ತಾಜ್ ಮೊಹಮ್ಮದ್ ಖಾನ್ ಅವರನ್ನು ಕಳೆದುಕೊಂಡರು. ಶಾರುಖ್ ಖಾನ್ ಹಲವಾರು ಸಂದರ್ಶನಗಳಲ್ಲಿ ತಮ್ಮ ತಂದೆ ತಾಯಿಯ ಬಗ್ಗೆ ಮಾತನಾಡಿದ್ದಾರೆ.
ಶಾರುಖ್ ಖಾನ್ ಸೋಷಯಲ್ ಮೀಡಿಯಾದಲ್ಲಿ ಸಾಕಷ್ಟು ಆಕ್ಟಿವ್ ಆಗಿರುತ್ತಾರೆ. ಹಲವು ಘಟನೆ ನಡೆದಾಗ ಟ್ವೀಟ್ ಮಾಡಿದ್ದೂ ಇದೆ. ಆದರೆ ಆಪರೇಷನ್ ಸಿಂದೂರ್ ಬಗ್ಗೆ ಶಾರುಖ್ ಖಾನ್ ಯಾವುದೇ ಟ್ವೀಟ್ ಮಾಡಿಲ್ಲ. ಇನ್‌ಸ್ಟಾಗ್ರಾಮ್ ಪೋಸ್ಟ್,ಸ್ಟೋರಿ ಹಾಕಿಲ್ಲ
ಈ ಹಿಂದೆ ಶಾರುಖ್ ಖಾನ್ ಪಹಲ್ಗಾಮ್ ದಾಳಿಯನ್ನು ಖಂಡಿಸಿದ್ದರು. ಭಾರತದ ಪ್ರತಿ ದಾಳಿಯನ್ನು ಬೆಂಬಲಿಸಿಯೇ ಇಲ್ಲ. ಶಾರುಖ್ ಖಾನ್ ಅವರು ಆಪರೇಷನ್ ಸಿಂದೂರ್ ಬಗ್ಗೆ ಮಾತನಾಡದಿರುವುದನ್ನು ಅವರ ಅಭಿಮಾನಿಗಳೇ ಪ್ರಶ್ನೆ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಶಾರುಖ್ ಖಾನ್ ಅವರ ಹಳೆಯ ವಿಡಿಯೋ ವೈರಲ್ ಆಗಿದೆ.
“ಎರಡೂ ಕಡೆ ಪಾಯಿಂಟ್ ಇದೆ. ನನ್ನ ಕುಟುಂಬಕ್ಕೆ ಪಾಕಿಸ್ತಾನದ ಹಿನ್ನೆಲೆ ಇದೆ. ನನ್ನ ತಂದೆ ಪಾಕಿಸ್ತಾನದಲ್ಲಿ ಹುಟ್ಟಿದವರು. ನನ್ನ ತಂದೆಯ ಕುಟುಂಬ ಪಾಕಿಸ್ತಾನದಲ್ಲಿದೆ. ಅವರು ಒಳ್ಳೆಯ ನೆರೆಹೊರೆಯುವರು, ನಾವು ಒಳ್ಳೆಯ ನೆರೆಹೊರೆಯವರು ಈ ರೀತಿ ಭಾವಿಸೋಣ” ಎಂದು ಶಾರುಖ್ ಖಾನ್ ಅವರು ಹೇಳಿದ್ದರು. ಶಾರುಖ್ ಅವರ ಈ ಹಳೆಯ ವಿಡಿಯೋ ಇದೀಗ ವೈರಲ್ ಆಗುತ್ತಿದೆ.
ಶಾರುಖ್ ಖಾನ್ ಒಮ್ಮೆ ಅನುಪಮ್ ಖೇರ್ ಅವರ ಕಾರ್ಯಕ್ರಮಕ್ಕೆ ಹೋಗಿದ್ದರು. ಅನುಪಮ್ ಖೇರ್ ಅವರ ತಂದೆಯ ಬಗ್ಗೆ ಕೇಳಿದರು. ಶಾರುಖ್ ಖಾನ್ ಆಗ, ನಮ್ಮ ತಂದೆ ಮೊದಲು ವಕೀಲರಾಗಿದ್ದರು, ನಂತರ ಅವರು ಪ್ರಾಕ್ಟೀಸ್ ಮಾಡಲಿಲ್ಲ. ಅದಕ್ಕೆ ನಾನು ಸರಿಯಾದವನಲ್ಲ ಎಂದು ಭಾವಿಸಿದ್ದರು ಎಂದು ನಮ್ಮ ಬಳಿ ಹೇಳಿದ್ದರು. ಬಹುಶಃ ದೇಶದ ಅತ್ಯಂತ ಕಿರಿಯ ಸ್ವಾತಂತ್ರ್ಯ ಹೋರಾಟಗಾರ ನಮ್ಮ ತಂದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಅವರ ಬಳಿ ತಾಮ್ರ ಫಲಕವಿದೆ. ಅವರು 14-15 ವರ್ಷ ವಯಸ್ಸಿನಲ್ಲಿ ಜೈಲಿಗೆ ಹೋದರು. ಅವರು ಮೌಲಾನಾ ಅಬ್ದುಲ್ ಕಲಾಂ ಆಜಾದ್ ವಿರುದ್ಧ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದರು ಎಂದು ಶಾರುಖ್ ಖಾನ್ ಹೇಳುತ್ತಾರೆ.
ದೇಶ
ನಟ ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾಗೆ ಮತ್ತೊಂದು ಸಂಕಷ್ಟ: ಕ್ರೈಸ್ತ ಧರ್ಮಕ್ಕೆ ಅಪಮಾನ ಆರೋಪ, ರಾಷ್ಟ್ರೀಯ ಕ್ರೈಸ್ತರ ಒಕ್ಕೂಟ ದೂರು
ಬೆಂಗಳೂರು: ನಟ ಯಶ್ (Yash) ಅಭಿನಯದ ಬಹು ನಿರೀಕ್ಷಿತ ‘ಟಾಕ್ಸಿಕ್’ (Toxic Cinema) ಚಿತ್ರಕ್ಕೆ ಒಂದರ ಮೇಲೊಂದು ವಿವಾದಗಳು ಎದುರಾಗುತ್ತಿವೆ. ಕೆಲ ದಿನಗಳ ಹಿಂದೆ ಟೀಸರ್‌ನಲ್ಲಿನ ಅಶ್ಲೀಲ ದೃಶ್ಯಗಳನ್ನು ಖಂಡಿಸಿ ಮಹಿಳಾ ಒಕ್ಕೂಟಗಳು ಆಕ್ರೋಶ ವ್ಯಕ್ತಪಡಿಸಿದ್ದರೆ, ಇದೀಗ ರಾಷ್ಟ್ರೀಯ ಕ್ರೈಸ್ತರ ಒಕ್ಕೂಟ ಚಿತ್ರತಂಡದ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ಟಾಕ್ಸಿಕ್ ಸಿನಿಮಾದ ಕೆಲವು ದೃಶ್ಯಗಳಲ್ಲಿ ಕ್ರೈಸ್ತ ಧರ್ಮಕ್ಕೆ ಅಪಮಾನ ಮಾಡಲಾಗಿದೆ ಹಾಗೂ ಕ್ರೈಸ್ತ ಸಮುದಾಯಕ್ಕೆ ಮುಜುಗರ ಉಂಟುಮಾಡಲಾಗಿದೆ ಎಂದು ಆರೋಪಿಸಿ ನ್ಯಾಷನಲ್ ಕ್ರಿಶ್ಚಿಯನ್ ಫೆಡರೇಷನ್ (National Christian Federation) ಚಲನಚಿತ್ರ ವಾಣಿಜ್ಯ ಮಂಡಳಿ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು, ಗೃಹಸಚಿವರು ಹಾಗೂ ಸೆನ್ಸಾರ್ ಬೋರ್ಡ್‌ಗೆ ದೂರು ಸಲ್ಲಿಸಿದೆ. ಕ್ರೈಸ್ತರ ದೇವದೂತ ಸಂತ ಮಿಕಯೇಲ್ ಅವರಿಗೆ ಸಂಬಂಧಿಸಿದ ದೃಶ್ಯಗಳಲ್ಲಿ ಅವಮಾನಕಾರಿ ಹಾಗೂ ಅಶ್ಲೀಲ ಚಿತ್ರೀಕರಣ ಮಾಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ರಾಷ್ಟ್ರೀಯ ಕ್ರೈಸ್ತರ ಒಕ್ಕೂಟದ ಅಧ್ಯಕ್ಷ ಪ್ರದೀಪ್ ಕುಮಾರ್, ಯೂಟ್ಯೂಬ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿರುವ ಆ ದೃಶ್ಯಗಳನ್ನು ತಕ್ಷಣವೇ ತೆಗೆದುಹಾಕಬೇಕು ಎಂದು ಒತ್ತಾಯಿಸಿದ್ದಾರೆ. ಜೊತೆಗೆ ಸಿನಿಮಾದಲ್ಲಿಯೂ ಸಂತ ಮಿಕಯೇಲ್ ಮುಂದೆ ಚಿತ್ರೀಕರಿಸಿರುವ ದೃಶ್ಯಗಳನ್ನು ತೆಗೆದುಹಾಕಿ, ಕ್ರೈಸ್ತ ಸಮುದಾಯದ ಬಳಿ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ. ಈ ಬೇಡಿಕೆಗಳನ್ನು ಈಡೇರಿಸದಿದ್ದರೆ ಕಾನೂನು ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಇದಕ್ಕೂ ಮುನ್ನ ಟಾಕ್ಸಿಕ್ ಟೀಸರ್‌ನಲ್ಲಿನ ಕೆಲವು ದೃಶ್ಯಗಳು ಮಹಿಳೆಯರು ಮತ್ತು ಮಕ್ಕಳ ಸಾಮಾಜಿಕ ಸ್ವಾಸ್ಥ್ಯಕ್ಕೆ ಧಕ್ಕೆ ಉಂಟುಮಾಡುತ್ತಿವೆ ಎಂದು ಆರೋಪಿಸಿ ಮಹಿಳಾ ಒಕ್ಕೂಟಗಳು ರಾಜ್ಯ ಮಹಿಳಾ ಆಯೋಗಕ್ಕೆ ದೂರು ನೀಡಿದ್ದವು. ಟೀಸರ್‌ನ ವಿವಾದಾತ್ಮಕ ದೃಶ್ಯಗಳನ್ನು ತೆಗೆದುಹಾಕುವಂತೆ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಅವರಿಗೆ ಮನವಿ ಮಾಡಲಾಗಿತ್ತು.
ಒಟ್ಟಾರೆ, ಬಿಡುಗಡೆಗೂ ಮುನ್ನವೇ ‘ಟಾಕ್ಸಿಕ್’ ಸಿನಿಮಾ ಭಾರೀ ವಿವಾದದ ಕೇಂದ್ರಬಿಂದುವಾಗಿದ್ದು, ಮುಂದಿನ ದಿನಗಳಲ್ಲಿ ಈ ವಿವಾದ ಯಾವ ತಿರುವು ಪಡೆಯಲಿದೆ ಎಂಬುದರ ಮೇಲೆ ಚಿತ್ರತಂಡದ ನಡೆ ಮಹತ್ವ ಪಡೆದುಕೊಂಡಿದೆ.
ದೇಶ
ಭಾರತೀಯ OTT ಇತಿಹಾಸದಲ್ಲೇ ಅಪರೂಪದ ಘಟನೆ
ಬೆಂಗಳೂರು: ಪ್ರಭಾಸ್ (Prabhas) ಎಂದರೆ ಕೇವಲ ಸ್ಟಾರ್ ಅಲ್ಲ, ಅದು ಒಂದು ಬ್ರ್ಯಾಂಡ್. ಭಾರತದ ನಂಬರ್ 1 ಪ್ಯಾನ್ ಇಂಡಿಯಾ ಸ್ಟಾರ್ ಆಗಿರುವ ಪ್ರಭಾಸ್ ಅವರಿಗೆ ದೇಶದಾದ್ಯಂತ ಕೋಟ್ಯಂತರ ಅಭಿಮಾನಿಗಳಿದ್ದಾರೆ. ಅವರ ಸಿನಿಮಾಗಳು ಹೇಗೇ ಇರಲಿ, ಬಾಕ್ಸ್ ಆಫೀಸ್‌ನಲ್ಲಿ ಭಾರೀ ಕಲೆಕ್ಷನ್ ಮಾಡುವುದು ಈಗ ಸಾಮಾನ್ಯವಾಗಿದೆ. ಇತ್ತೀಚೆಗೆ ಬಿಡುಗಡೆಯಾದ ಪ್ರಭಾಸ್ ನಟನೆಯ ಹಾರರ್ ಕಾಮಿಡಿ ಸಿನಿಮಾ ‘ದಿ ರಾಜಾ ಸಾಬ್’ ಕೂಡ ಅದಕ್ಕೆ ಹೊರತಲ್ಲ.
ಸಂಕ್ರಾಂತಿ ಹಬ್ಬದ ಪ್ರಯುಕ್ತ ಜನವರಿ 9ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಈ ಸಿನಿಮಾ ನಿರೀಕ್ಷಿಸಿದ ಮಟ್ಟದ ಮೆಚ್ಚುಗೆ ಪಡೆಯಲಿಲ್ಲ. ಕಥೆ, ಚಿತ್ರಕಥೆ ಹಾಗೂ ವಿಎಫ್‌ಎಕ್ಸ್ ಬಗ್ಗೆ ಟೀಕೆಗಳು ಕೇಳಿಬಂದರೂ, ಸಿನಿಮಾ ಮೊದಲ ವಾರದಲ್ಲೇ ಸುಮಾರು 300 ಕೋಟಿ ರೂಪಾಯಿಗೂ ಅಧಿಕ ಮೊತ್ತ ಗಳಿಸಿತ್ತು. ಇದರಿಂದಲೇ ಪ್ರಭಾಸ್ ಕ್ರೇಜ್ ಯಾವ ಮಟ್ಟದಲ್ಲಿದೆ ಎಂಬುದು ಸ್ಪಷ್ಟವಾಗುತ್ತದೆ.
ಇದೀಗ ‘ದಿ ರಾಜಾ ಸಾಬ್’ ಒಟಿಟಿಯಲ್ಲಿ ಬಿಡುಗಡೆಯಾಗಲು ಸಿದ್ಧವಾಗಿದ್ದು, ಇಲ್ಲಿ ಕೂಡ ಬಿಡುಗಡೆಯಿಗೂ ಮುಂಚೆಯೇ ದಾಖಲೆ ಮಟ್ಟದ ಕ್ರೇಜ್ ಸೃಷ್ಟಿಸಿದೆ. ಈ ಸಿನಿಮಾ ಜಿಯೋ ಹಾಟ್‌ಸ್ಟಾರ್ನಲ್ಲಿ ಫೆಬ್ರವರಿ 6ರಿಂದ ಪ್ರಸಾರವಾಗಲಿದೆ. ಒಟಿಟಿ ಪ್ಲಾಟ್‌ಫಾರ್ಮ್ ತನ್ನ ಅಧಿಕೃತ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡ ಮಾಹಿತಿಯಂತೆ, ಲಕ್ಷಾಂತರ ಮಂದಿ ‘Remind Me’ ಬಟನ್ ಕ್ಲಿಕ್ ಮಾಡಿದ್ದಾರೆ. ಈ ಭಾರೀ ಟ್ರಾಫಿಕ್ ನಿಭಾಯಿಸಲು ಜಿಯೋ ಹಾಟ್‌ಸ್ಟಾರ್ ತನ್ನ ಸರ್ವರ್‌ಗಳನ್ನು ಅಪ್‌ಗ್ರೇಡ್ ಮಾಡಿರುವುದು ಭಾರತೀಯ ಒಟಿಟಿ ಇತಿಹಾಸದಲ್ಲೇ ಅಪರೂಪದ ಘಟನೆ ಎನ್ನಲಾಗಿದೆ.
ಒಟಿಟಿ ಆವೃತ್ತಿಯಲ್ಲಿ ಪ್ರೇಕ್ಷಕರಿಗೆ ವಿಶೇಷ ಉಡುಗೊರೆಯೂ ಇದೆ. ಚಿತ್ರಮಂದಿರಗಳಲ್ಲಿ ತಾಂತ್ರಿಕ ಕಾರಣಗಳಿಂದ ಕೈಬಿಡಲಾಗಿದ್ದ 4 ರಿಂದ 8 ನಿಮಿಷಗಳ ಹೆಚ್ಚುವರಿ ದೃಶ್ಯಗಳನ್ನು ಸೇರಿಸಲಾಗಿದೆ. ಇದರಲ್ಲಿ ಪ್ರಭಾಸ್ ಅವರ ‘ಓಲ್ಡ್ ಗೆಟಪ್’ ಹಾಗೂ ಒಂದು ಸಾಹಸ ದೃಶ್ಯ ಪ್ರಮುಖ ಆಕರ್ಷಣೆಯಾಗಲಿದೆ.
ಮಾರುತಿ ನಿರ್ದೇಶನದ ಈ ಚಿತ್ರದಲ್ಲಿ ನಿಧಿ ಅಗರ್ವಾಲ್, ಮಾಳವಿಕಾ ಮೋಹನನ್ ಮತ್ತು ಸಂಜಯ್ ದತ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ‘ದಿ ರಾಜಾ ಸಾಬ್’ ತೆಲುಗು, ಕನ್ನಡ, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ವೀಕ್ಷಣೆಗೆ ಲಭ್ಯವಿರಲಿದೆ.
ಬೆಂಗಳೂರು
‘ಮಂಡ್ಯದ ಗಂಡು’ ಅಂಬರೀಷ್ ಊಟದ ಶೈಲಿ ಹೇಗಿತ್ತು? ಮೈಕೋ ನಾಗರಾಜ್ ಹೇಳಿದ ಅಚ್ಚರಿಯ ನೆನಪು
ಬೆಂಗಳೂರು: ಕನ್ನಡ ಚಿತ್ರರಂಗದ ದಿಗ್ಗಜ ನಟ, ‘ಮಂಡ್ಯದ ಗಂಡು’ ಎಂದೇ ಖ್ಯಾತರಾಗಿದ್ದ ರೇಬಲ್ ಸ್ಟಾರ್ ಅಂಬರೀಷ್ (Ambareesh) ಬಗ್ಗೆ ಹೊಸದಾಗಿ ಹೇಳಬೇಕಿಲ್ಲ. ಅವರ ಅಭಿನಯದ ಜೊತೆಗೆ ವ್ಯಕ್ತಿತ್ವ, ಸ್ನೇಹ, ಆಹಾರದ ಮೇಲಿನ ಪ್ರೀತಿ ಕೂಡ ಸದಾ ಚರ್ಚೆಯ ವಿಷಯವಾಗುತ್ತಿತ್ತು. ಇದೀಗ ನಟ ಮೈಕೋ ನಾಗರಾಜ್ ಅವರು ಅಂಬರೀಷ್ ಅವರ ಜೀವನದ ಒಂದು ಅಪರೂಪದ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.
‘ಕಲಾ ಮಾಧ್ಯಮ’ಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಮೈಕೋ ನಾಗರಾಜ್, ಅಂಬರೀಷ್ ಅವರ ಆಹಾರ ಶೈಲಿ ಎಷ್ಟು ವಿಭಿನ್ನವಾಗಿತ್ತು ಎಂಬುದನ್ನು ಹಂಚಿಕೊಂಡಿದ್ದಾರೆ. ಅಂಬರೀಷ್ ಅವರಿಗೆ ಊಟದ ಮೇಲೆ ವಿಶೇಷ ಆಸಕ್ತಿ ಇತ್ತು. ಅದರಲ್ಲೂ ಬಾಡೂಟ ಎಂದರೆ ಅವರಿಗೆ ಬಹಳ ಇಷ್ಟವಾಗುತ್ತಿತ್ತು. ಸಹ ಕಲಾವಿದರನ್ನು ಜೊತೆಗೆ ಕೂರಿಸಿಕೊಂಡು ಊಟ ಮಾಡಿಸುವುದು ಅವರ ಅಭ್ಯಾಸವಾಗಿತ್ತು.
ಒಂದು ಸಿನಿಮಾ ಸೆಟ್‌ನಲ್ಲಿ ಮೊದಲ ಬಾರಿಗೆ ಭೇಟಿಯಾದ ಸಂದರ್ಭವನ್ನು ನೆನಪಿಸಿಕೊಂಡ ನಾಗರಾಜ್, “ಎಲ್ಲಿ ಊಟ ಮಾಡಿದೆ ಎಂದು ಕೇಳಿದರು. ಸೆಟ್‌ನಲ್ಲೇ ಊಟ ಮಾಡಿದ್ದೇನೆ ಎಂದೆ. ನಾಳೆ ನನ್ನ ಜೊತೆ ಊಟಕ್ಕೆ ಬರಬೇಕು ಎಂದು ಅಂಬರೀಷ್ ಹೇಳಿದರು” ಎಂದು ತಿಳಿಸಿದ್ದಾರೆ.
ಮರುದಿನ ಅಂಬರೀಷ್ ಜೊತೆ ಊಟಕ್ಕೆ ಹೋದಾಗ, ಅಲ್ಲಿ ಇದ್ದ ಭೋಜನ ನೋಡಿ ತಾವು ಅಚ್ಚರಿಗೊಂಡಿದ್ದಾಗಿ ಹೇಳಿದ್ದಾರೆ. “ಸುಮಾರು 25 ಬಗೆಯ ಪದಾರ್ಥಗಳು ಇದ್ದವು. ಎಲ್ಲವೂ ನನ್ನ ಬಟ್ಟಲಿಗೆ ಹಾಕಿಸಿದ್ದರು. ಇದನ್ನೆಲ್ಲಾ ತಿನ್ನಬೇಕು ಎಂದು ಹೇಳಿದರು” ಎಂದು ನಾಗರಾಜ್ ಹೇಳಿದ್ದಾರೆ.
ಊಟದ ವೇಳೆ ಅಂಬರೀಷ್ ಅವರ ಸರಳತೆ ಮತ್ತು ನೇರ ಮಾತುಗಳು ಗಮನ ಸೆಳೆದಿದ್ದವು. “ಏನೇ ಮಾಡಿದರೂ ಓಪನ್ ಆಗಿ ಮಾಡಬೇಕು, ಎಲ್ಲರೂ ಒಂದೇ” ಎನ್ನುವ ಅವರ ಜೀವನ ತತ್ವ ಸ್ಪಷ್ಟವಾಗಿ ಕಾಣಿಸುತ್ತಿತ್ತಂತೆ.
ಇದೇ ಸಂದರ್ಶನದಲ್ಲಿ, ಅಂಬರೀಷ್ ಅವರ ತತ್ವದ ನಿಲುವಿನ ಬಗ್ಗೆ ಮಾತನಾಡಿರುವ ನಾಗರಾಜ್, ರಾಜಕೀಯ ಜೀವನದಲ್ಲಿ ನಂಬಿಕೆ ಭಂಗವಾದ ಕೆಲವರ ಬಗ್ಗೆ ಅಂಬರೀಷ್ ಯಾವುದೇ ಸಂಧಾನ ಮಾಡಿಕೊಳ್ಳಲಿಲ್ಲ ಎಂಬ ಸಂಗತಿಯನ್ನೂ ಹಂಚಿಕೊಂಡಿದ್ದಾರೆ. ಇದು ಅಂಬರೀಷ್ ಅವರ ನೇರ ಮತ್ತು ತತ್ವಬದ್ಧ ವ್ಯಕ್ತಿತ್ವಕ್ಕೆ ಮತ್ತೊಂದು ಸಾಕ್ಷಿಯಾಗಿದೆ.
-
ದೇಶ10 hours agoರಾಷ್ಟ್ರಗೀತೆಗೆ ಮುನ್ನ ವಂದೇ ಮಾತರಂ ಹಾಡುವುದು ಕಡ್ಡಾಯ
-
ದೇಶ17 hours agoಬಿ.ಕೆ. ಹರಿಪ್ರಸಾದ್ ಅವರನ್ನು ತಕ್ಷಣವೇ ರಾಜ್ಯ ಸಂಪುಟಕ್ಕೆ ಸೇರಿಸಿ ಉಪ ಮುಖ್ಯಮಂತ್ರಿ ಮಾಡಬೇಕು: ರಾಷ್ಟ್ರೀಯ ಅಹಿಂದ ಸಂಘಟನೆ ಆಗ್ರಹ
-
ಚುನಾವಣೆ17 hours agoBENGALURU : ವಾರ್ಡ್ ಮರುವಿಂಗಡಣೆ ವಿರೋಧಿಸಿ ಶಾಸಕ ಎಂ. ಕೃಷ್ಣಪ್ಪ ಹೈಕೋರ್ಟ್ ಅರ್ಜಿ
-
ದೇಶ17 hours agoಚರ್ಚೆ ಮುಗಿಯುವವರೆಗೆ ಸದನಕ್ಕೆ ಹಾಜರಾಗಲ್ಲ ಎಂದ ಲೋಕಸಭಾ ಸ್ಪೀಕರ್
-
ದೇಶ9 hours agoBIG NEWS : ಫೆ.12 ರಾಷ್ಟ್ರವ್ಯಾಪಿ ಮುಷ್ಕರ: 30 ಕೋಟಿ ಕಾರ್ಮಿಕರು ಬೀದಿಗೆ? ಬ್ಯಾಂಕ್, ಸಾರಿಗೆ ಸೇವೆಗೆ ಹೊಡೆತ ಸಾಧ್ಯತೆ
-
ದೇಶ17 hours agoDigital Services Tax: ಡಿಜಿಟಲ್ ತೆರಿಗೆಗೆ ಅಮೆರಿಕದ ವಿರೋಧ ಏಕೆ?
-
ಕ್ರೀಡೆ10 hours agoT20 WORLD CUP : ಡಬಲ್ ಸೂಪರ್ ಓವರ್ನಲ್ಲಿ ದಕ್ಷಿಣ ಆಫ್ರಿಕಾದ ರೋಚಕ ಗೆಲುವು
-
ಅಪರಾಧ9 hours agoBENGALURU : ಬೆಂಗಳೂರು ರಸ್ತೆ ಅಪಘಾತಕ್ಕೆ ಇಬ್ಬರು ಪುಟ್ಟ ಮಕ್ಕಳ ಬಲಿ
