Connect with us

ಬಿಬಿಎಂಪಿ

ವರ್ಗಾವಣೆಯಲ್ಲಿಯೂ ಬಿಬಿಎಂಪಿ ಭ್ರಷ್ಟಾಚಾರ – ಒಲ್ಲದವರಿಗೆ ಗೇಟ್‌ ಪಾಸ್‌, ಬೇಕಾದವರಿಗೆ ಸ್ಟೇಟಸ್‌!

Published

on

ಬೆಂಗಳೂರು : ಬಿಬಿಎಂಪಿಯ ಹಲವು ಭ್ರಷ್ಟಾಚಾರಗಳ ಪೈಕಿ ಈಗ ಸಾರ್ವತ್ರಿಕ ವರ್ಗಾವಣೆಯಲ್ಲಿ ದಂಧೆ ನಡೆದಿರುವ ಆರೋಪ ಕೇಳಿಬಂದಿದೆ. ಯಾವುದೇ ಸೇವಾಜೇಷ್ಟತೆ, ಅರ್ಹತೆ, ಅನುಭವಗಳನ್ನು ಪರಿಗಣನೆಗೆ ತೆಗೆದುಕೊಳ್ಳದೆ ಬೇಕಾಬಿಟ್ಟಿ ವರ್ಗಾವಣೆ ಮಾಡಿದ್ದಾರೆಂದು ಸ್ವತಃ ಸಿಬ್ಬಂದಿಗಳೇ ಆಕ್ರೋಶ ಹೊರಹಾಕಿದ್ದಾರೆ.

ಒಂದೇ ಕಚೇರಿಯಲ್ಲಿ ಮೂರು ವರ್ಷಗಳಿಂದ ಕೆಲಸ ಮಾಡುತ್ತಿರುವವರನ್ನು ವರ್ಗಾಯಿಸಬೇಕೆಂಬ ನಿಯಮವಿದ್ದರೂ ಇತ್ತೀಚೆಗೆ ನೇಮಕವಾದವರನ್ನು ವರ್ಗಾಯಿಸಿ ಹಳೆಯ ತಲೆಗಳನ್ನು ಉಳಿಸಿಕೊಳ್ಳುವ ಪ್ರಯತ್ನಗಳು ವ್ಯಾಪಕವಾಗಿ ನಡೆದಿದೆ. ಇದಕ್ಕೆ ಬಲಿಪಶುಗಳಾಗಿರುವ ಸಿಬ್ಬಂದಿಗಳು ವರ್ಗಾವಣೆಗೆ ಆಕ್ಷೇಪ ಸಲ್ಲಿಸಿದ್ದಾರೆ.

ನೇಮಕವಾಗಿರುವ ದಿನಾಂಕಕ್ಕೂ ಹಾಗೂ ಎಚ್‌ಆರ್‌ಎಂಎಸ್‌ ನಲ್ಲಿ ದಾಖಲಾಗಿರುವ ದಿನಾಂಕಕ್ಕೂ ವ್ಯತ್ಯಾಸವಿರುದು ದೋಷಪೂರಿತವೆಂದೆ ಸ್ವತಃ ಬಿಬಿಎಂಪಿ ಒಳಾಡಳಿತವೇ ಒಪ್ಪಿಕೊಂಡಿದೆ .ಆದರೂ ಸಹ ಎಚ್‌ಆರ್‌ಎಂಎಸ್‌ ದಾಖಲೆಗೆ ಅನುಸಾರವಾಗಿ ಬಿಬಿಎಂಪಿ ವರ್ಗಾವಣೆ ಮಾಡಿದೆ.

ಅಲ್ಲದೇ ಎಂಟೂ ವಲಯಗಳಲ್ಲಿಯೂ ವರ್ಗಾವಣೆಯಲ್ಲಿ ಪಕ್ಷಪಾತ ತೋರಲಾಗಿದ್ದು, ಕೇವಲ ಎರಡು ವಲಯಗಳ ಸಿಬ್ಬಂದಿಗೆ ಮಾತ್ರ ಈ ವರ್ಗಾವಣೆ ಜಾರಿಯಾಗಿದೆ. ಮಿಕ್ಕವರು ಹಣಬಲ, ಅಧಿಕಾರಿಗಳ ಬೆಂಬಲ, ಜಾತಿಬಲ ಗಳಿಂದ ಪಾರಾಗಿದ್ದಾರೆಂದು ಸಿಬ್ಬಂದಿ ವರ್ಗ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವರ್ಗಾವಣೆ ನಿಯಮ ಪಾರದರ್ಶಕವಾಗಿರಲಿ, ಎಲ್ಲರಿಗೂ ಸಮಾನವಾಗಿ ಜಾರಿಯಾಗಲಿ ಎಂದು ಸಿಬ್ಬಂದಿಗಳು ಆಗ್ರಹಿಸಿದ್ದಾರೆ.

ಚುನಾವಣೆ

ಪೆರಂಬೂರ್ ಕಣಕ್ಕೆ ನಟ ವಿಜಯ್ ಎಂಟ್ರಿ: ತಮಿಳುನಾಡು ರಾಜಕೀಯದಲ್ಲಿ ಸಂಚಲನ

Published

on

ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಗೆ ಮುನ್ನ ನಟ Vijay ನೇತೃತ್ವದ Tamilaga Vettri Kazhagam (TVK) ಪಕ್ಷದ ರಾಜಕೀಯ ಪ್ರವೇಶ ರಾಜ್ಯ ರಾಜಕೀಯ ಸಮೀಕರಣಗಳಲ್ಲಿ ಭಾರೀ ಬದಲಾವಣೆ ತಂದಿದೆ. ವಿಶೇಷವಾಗಿ, ವಿಜಯ್ ಅವರು ಪೆರಂಬೂರ್ ವಿಧಾನಸಭಾ ಕ್ಷೇತ್ರವನ್ನು ತಮ್ಮ ಚೊಚ್ಚಲ ಚುನಾವಣಾ ಕಣವಾಗಿ ಆರಿಸಿಕೊಂಡಿರುವುದು ದೊಡ್ಡ ಚರ್ಚೆಗೆ ಕಾರಣವಾಗಿದೆ.

Perambur ಕ್ಷೇತ್ರವು ಸಾಂಪ್ರದಾಯಿಕವಾಗಿ ದ್ರಾವಿಡ ಪಕ್ಷಗಳ ಭದ್ರಕೋಟೆಯಾಗಿದ್ದರೂ, ಈ ಬಾರಿ ವಿಜಯ್ ಪ್ರವೇಶದಿಂದಾಗಿ ಹೈ-ಪ್ರೊಫೈಲ್ ಕಣವಾಗಿ ಪರಿಣಮಿಸಿದೆ. Dravida Munnetra Kazhagam (DMK) ಮತ್ತು All India Anna Dravida Munnetra Kazhagam (AIADMK) ಪಕ್ಷಗಳಿಗೆ ಇದು ಹೊಸ ಸವಾಲಾಗಿ ಪರಿಣಮಿಸಿದೆ.

ಈ ಕ್ಷೇತ್ರದಲ್ಲಿ ಡಿಎಂಕೆ ಒಂಬತ್ತು ಬಾರಿ ಗೆಲುವು ಸಾಧಿಸಿದ್ದು, ಸತ್ಯವಾಣಿ ಮುತ್ತು ಮತ್ತು ಪರಿಥಿ ಇಲಂವಝುತಿ ಅವರಂತಹ ನಾಯಕರಿಂದ ರಾಜಕೀಯ ಇತಿಹಾಸ ರೂಪುಗೊಂಡಿದೆ. 2016ರಲ್ಲಿ ಎಐಎಡಿಎಂಕೆ ಅಲ್ಪ ಅಂತರದಲ್ಲಿ ಗೆಲುವು ಸಾಧಿಸಿದರೂ, 2019ರ ಉಪಚುನಾವಣೆ ಮತ್ತು 2021ರ ಚುನಾವಣೆಯಲ್ಲಿ ಡಿಎಂಕೆ ಮತ್ತೆ ತನ್ನ ಪ್ರಾಬಲ್ಯವನ್ನು ಸ್ಥಾಪಿಸಿತ್ತು.

ಸುಮಾರು 2.22 ಲಕ್ಷಕ್ಕೂ ಹೆಚ್ಚು ಮತದಾರರನ್ನು ಹೊಂದಿರುವ ಪೆರಂಬೂರ್ ಕ್ಷೇತ್ರದಲ್ಲಿ ಮಹಿಳಾ ಮತದಾರರ ಸಂಖ್ಯೆ ಹೆಚ್ಚಿರುವುದು ಗಮನಾರ್ಹ. ಯುವಕರು ಮತ್ತು ಕಾರ್ಮಿಕ ವರ್ಗದ ಪ್ರಭಾವ ಹೆಚ್ಚಿರುವ ಈ ಪ್ರದೇಶದಲ್ಲಿ ಉದ್ಯೋಗ, ಹಣದುಬ್ಬರ ನಿಯಂತ್ರಣ, ವಸತಿ ಮತ್ತು ಮೂಲಸೌಕರ್ಯ ಪ್ರಮುಖ ಚುನಾವಣಾ ವಿಷಯಗಳಾಗಿವೆ.

ವಿಜಯ್ ಅವರ ಯುವಜನಪ್ರಿಯತೆ ಈ ಬಾರಿ ದ್ರಾವಿಡ ಪಕ್ಷಗಳ ದೀರ್ಘಕಾಲದ ಹಿಡಿತವನ್ನು ಸವಾಲು ಮಾಡಬಹುದು ಎಂದು ರಾಜಕೀಯ ವೀಕ್ಷಕರು ಅಭಿಪ್ರಾಯಪಟ್ಟಿದ್ದಾರೆ. ಪೆರಂಬೂರ್ ಕಣ ಇದೀಗ ಸಾಮಾನ್ಯ ಚುನಾವಣೆ ಮಾತ್ರವಲ್ಲ, ಹೊಸ ರಾಜಕೀಯ ಶಕ್ತಿಯ ಪರೀಕ್ಷೆಯಾಗಿ ಪರಿಣಮಿಸಿದೆ.

Continue Reading

ದೇಶ

ಬೆಂಗಳೂರು ದಕ್ಷಿಣ ಪಾಲಿಕೆಯಲ್ಲಿ ಪೌರಕಾರ್ಮಿಕರ ಆರೋಗ್ಯ ತಪಾಸಣೆ: ಮಧುಮೇಹ, ರಕ್ತದೊತ್ತಡ ಪ್ರಕರಣ ಹೆಚ್ಚಳ

Published

on

ಬೆಂಗಳೂರು: ಬೆಂಗಳೂರು ದಕ್ಷಿಣ ನಗರ ಪಾಲಿಕೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರಲ್ಲಿ ಮಧುಮೇಹ ಹಾಗೂ ಅಧಿಕ ರಕ್ತದೊತ್ತಡ ಸಮಸ್ಯೆಗಳು ಹೆಚ್ಚಾಗಿ ಕಂಡುಬಂದಿರುವುದು ಆರೋಗ್ಯ ತಪಾಸಣೆಯಲ್ಲಿ ಬೆಳಕಿಗೆ ಬಂದಿದೆ. ಸ್ವಚ್ಛತಾ ಯೋಧರೆಂದು ಗುರುತಿಸಲಾದ ಪೌರಕಾರ್ಮಿಕರ ಆರೋಗ್ಯದ ಜವಾಬ್ದಾರಿಯನ್ನು ಪಾಲಿಕೆ ವಹಿಸಿಕೊಂಡಿದ್ದು, ನಿಯಮಿತ ಆರೋಗ್ಯ ತಪಾಸಣೆಗಳನ್ನು ನಡೆಸುತ್ತಿದೆ.

ದಕ್ಷಿಣ ಕಾರ್ಪೋರೇಷನ್ ವ್ಯಾಪ್ತಿಯ 25 ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ 49 ನಮ್ಮ ಕ್ಲಿನಿಕ್‌ಗಳಲ್ಲಿ ಬುಧವಾರ ಸಮೂಹ ಆರೋಗ್ಯ ತಪಾಸಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.


1,934 ಮಂದಿಗೆ ಆರೋಗ್ಯ ತಪಾಸಣೆ

ಒಟ್ಟು 1,934 ಪೌರಕಾರ್ಮಿಕರು ತಪಾಸಣೆಗೆ ಒಳಪಟ್ಟಿದ್ದು, ಈ ಪೈಕಿ 605 ಪುರುಷರು ಮತ್ತು 1,348 ಮಹಿಳೆಯರು ಸೇರಿದ್ದಾರೆ. ತಪಾಸಣಾ ಕಾರ್ಯಕ್ಕಾಗಿ 56 ವೈದ್ಯಾಧಿಕಾರಿಗಳು ಮತ್ತು 168 ಅರೆ ವೈದ್ಯಕೀಯ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು ಎಂದು ದಕ್ಷಿಣ ಪಾಲಿಕೆ ಆಯುಕ್ತ ಕೆ.ಎನ್. ರಮೇಶ್ ತಿಳಿಸಿದ್ದಾರೆ.


ತಪಾಸಣೆಯಲ್ಲಿ ಪತ್ತೆಯಾದ ಕಾಯಿಲೆಗಳು

ಆರೋಗ್ಯ ತಪಾಸಣೆಯಲ್ಲಿ ಕಂಡುಬಂದ ಪ್ರಮುಖ ಸಮಸ್ಯೆಗಳ ವಿವರ ಹೀಗಿದೆ:

  • ಮಧುಮೇಹ: 256 ಪ್ರಕರಣ
  • ಅಧಿಕ ರಕ್ತದೊತ್ತಡ: 254 ಪ್ರಕರಣ
  • ರಕ್ತಹೀನತೆ: 67 ಪ್ರಕರಣ
  • ದಂತ ಸಮಸ್ಯೆ: 57 ಪ್ರಕರಣ
  • ಜ್ವರ: 43 ಪ್ರಕರಣ
  • ಕಣ್ಣಿನ ಸಮಸ್ಯೆ: 39 ಪ್ರಕರಣ
  • ಶ್ರವಣ ಸಮಸ್ಯೆ: 16 ಪ್ರಕರಣ
  • ಹೃದಯ ಸಮಸ್ಯೆ: 4 ಪ್ರಕರಣ
  • ಜನರಲ್ ಓಪಿಡಿ: 1,198
  • ಪೌರಕಾರ್ಮಿಕರ ಆರೋಗ್ಯದ ಮೇಲೆ ವಿಶೇಷ ಗಮನ
  • ಪೌರಕಾರ್ಮಿಕರು ನಗರ ಸ್ವಚ್ಛತೆಗೆ ಮಹತ್ವದ ಕೊಡುಗೆ ನೀಡುತ್ತಿರುವ ಹಿನ್ನೆಲೆ, ಅವರ ಆರೋಗ್ಯ ರಕ್ಷಣೆಗಾಗಿ ಪಾಲಿಕೆ ನಿರಂತರ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸೆ ಸೌಲಭ್ಯ ಒದಗಿಸುತ್ತಿದೆ. ಮಧುಮೇಹ ಮತ್ತು ರಕ್ತದೊತ್ತಡ ಪ್ರಕರಣಗಳು ಹೆಚ್ಚುತ್ತಿರುವುದು ಗಮನಾರ್ಹವಾಗಿದ್ದು, ಮುಂದಿನ ದಿನಗಳಲ್ಲಿ ವಿಶೇಷ ಆರೋಗ್ಯ ಶಿಬಿರಗಳನ್ನು ಆಯೋಜಿಸುವ ಯೋಜನೆ ರೂಪಿಸಲಾಗುತ್ತಿದೆ.

Continue Reading

ಬಿಬಿಎಂಪಿ

ಬಿಬಿಎಂಪಿ ಘನತ್ಯಾಜ್ಯ ಆಟೋ ಟಿಪ್ಪರ್‌ಗಳಿಗೆ ನೂತನ ಸಮಯ: ಈಗಿನಿಂದ ಬೆಳಿಗ್ಗೆ 5:30ಕ್ಕೆ ಸ್ಕ್ಯಾನಿಂಗ್ ಆರಂಭ

Published

on

ಬೆಂಗಳೂರು: ನಗರದಲ್ಲಿ ಸ್ವಚ್ಛತಾ ಕಾರ್ಯಗಳ ಗುಣಮಟ್ಟವನ್ನು ಮತ್ತಷ್ಟು ಸುಧಾರಿಸುವ ಉದ್ದೇಶದಿಂದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ನಿರ್ಧಾರ ಕೈಗೊಂಡಿದೆ. ನಗರದ ವಿವಿಧ ವಾರ್ಡ್‌ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಘನತ್ಯಾಜ್ಯ ಸಂಗ್ರಹಣೆಯ ಆಟೋ ಟಿಪ್ಪರ್‌ ವಾಹನಗಳ ಮಸ್ಟರಿಂಗ್ (ಹಾಜರಾತಿ ಸ್ಕ್ಯಾನಿಂಗ್) ಸಮಯವನ್ನು ಪರಿಷ್ಕರಿಸಲಾಗಿದ್ದು, ಇಂದಿನಿಂದ ಈ ಹೊಸ ವೇಳಾಪಟ್ಟಿ ಜಾರಿಗೆ ಬಂದಿದೆ.

ಈ ಮೊದಲು ಬೆಳಿಗ್ಗೆ 6:00 ರಿಂದ 7:30 ರವರೆಗೆ ನಡೆಯುತ್ತಿದ್ದ ಮಸ್ಟರಿಂಗ್ ಸಮಯವನ್ನು ಈಗ ಬೆಳಿಗ್ಗೆ 5:30 ರಿಂದ 6:30 ರವರೆಗೆ ಮುಂಚಿತಗೊಳಿಸಲಾಗಿದೆ.


🧹 ಬದಲಾವಣೆ ಉದ್ದೇಶ ಏನು?

  • ನಿವಾಸಿಗಳು ತಮ್ಮ ತ್ಯಾಜ್ಯವನ್ನು ಕೆಲಸಕ್ಕೆ ಹೊರಡುವ ಮೊದಲು ನೀಡಲು ಅನುಕೂಲ.
  • ಜನರ ದೈನಂದಿನ ಕಾರ್ಯವೈಖರಿಯೊಂದಿಗೆ ತ್ಯಾಜ್ಯ ಸಂಗ್ರಹಣೆ ಜೋಡಣೆ.
  • ರಸ್ತೆ ಬದಿಯಲ್ಲಿ ತ್ಯಾಜ್ಯ ಎಸೆದು ಕಪ್ಪು ಚುಕ್ಕಿ (Black Spot) ರೂಪುಗೊಳ್ಳುವಿಕೆ ತಡೆಯುವುದು.

🤝 ಸಾರ್ವಜನಿಕರ ಸಹಕಾರಕ್ಕೆ ಕರೆ:

ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕರೀಗೌಡ ಅವರು ಈ ಹೊಸ ಕ್ರಮವನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ನಗರದ ನಾಗರಿಕರಿಂದ ಸಹಕಾರ ಕೋರಿದ್ದಾರೆ.

Continue Reading

Trending