ಬೆಂಗಳೂರು
ಆಕ್ಷೇಪಾರ್ಹ ಹೇಳಿಕೆ-ಶೀಘ್ರ MLC ರವಿಕುಮಾರ್ ಅರೆಸ್ಟ್..?

ಬೆಂಗಳೂರು: ಕಲಬುರಗಿ ಡಿಸಿ ಫೌಜಿಯಾ ತಾರಾನಮ್ ವಿರುದ್ಧ ನಾಲಿಗೆ ಹರಿಬಿಟ್ಟು ವಿವಾದ ಮಾಡಿದ್ದ MLLC ರವಿಕುಮಾರ್ ಗೆ ಸಂಕಷ್ಟ ಎದುರಾಗಿದ್ದು, ಶೀಘ್ರ ಬಂಧನವಾಗುವ ಸಾಧ್ಯತೆ ದಟ್ಟವಾಗಿದೆ,
ಬಿಜೆಪಿಯ ಕಲಬುರಿಗಿ ಚಲೋ ಪ್ರತಿಭಟನಾ ರ್ಯಾಲಿಯನ್ನುದ್ದೇಶಿಸಿ ಮಾತನಾಡುವ ವೇಳೆ ಡಿಸಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಕ್ಕಾಗಿ ಕಲಬುರಿಗಿಯ ಸ್ಟೇಷನ್ ಬಜಾರ್ ಠಾಣೆಗೆ ದೂರು ನೀಡಲಾಗಿತ್ತು, ಈ ಸಂಬಂಧ ಎಫ್‍ಐಆರ್ ಸಹ ದಾಖಲಾಗಿದ್ದು, ಇದೀಗ MLC ರವಿಕುಮಾರ್ ಗೆ ಅರೆಸ್ಟ್ ಆಗುವು ಆತಂಕ ಎದುರಾಗಿದೆ,
ಈಗಾಗಲೇ ಎಫ್‍ಐಆರ್ ರದ್ದು ಹಾಗೂ ನಿರೀಕ್ಷಣಾ ಜಾಮೀನು ಕೋರಿ ರವಿಕುಮಾರ್ ಕೋರ್ಟ್ ಮೊರೆ ಹೋಗಿದ್ದಾರೆ, ಇವತ್ತು ಮಧ್ಯಾಹ್ನ ಹೈಕೋರ್ಟ್‍ನಲ್ಲಿ ಅರ್ಜಿಯ ವಿಚಾರಣೆ ನಡೆಯಲಿದೆ,
ಕಲಬುರಗಿ ಡಿಸಿ ಕಚೇರಿಯೂ ತನ್ನ ಸ್ವಾತಂತ್ರ್ಯ ಕಳೆದುಕೊಂಡಿದೆ, ಡಿಸಿ ಮೇಡಂ ಕಾಂಗ್ರೆಸ್ ಹೇಳುವುದನ್ನು ಮಾತ್ರ ಕೇಳುತ್ತಿದ್ದಾರೆ, ಡಿಸಿ ಪಾಕಿಸ್ತಾನದಿಂದ ಬಂದಿದ್ದಾರೋ ಅಥವಾ ಇಲ್ಲಿ ಐಎಎಸ್ ಅಧಿಕಾರಿಯೋ ನನಗೆ ತಿಳಿದಿಲ್ಲ ಎಂದು ಹೇಳಿಕೆ ನೀಡಿದ್ದ ರವಿಕುಮಾರ್ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದರು,