ರಾಜ್ಯ
ಆರ್‍ಸಿಬಿ ಫ್ಯಾನ್ಸ್ ಬನ್ನಿ ಬಾಯಿ ಸಿಹಿ ಮಾಡೋಣ: ಕಪ್ ಗೆದ್ರೆ ಇಂದಿರಾ ಕ್ಯಾಂಟೀನ್ ನಲ್ಲಿ ಫ್ರೀ ಹೋಳಿಗೆ ಊಟ ಫಿಕ್ಸ್

ಮೈಸೂರು: ನಾಳೆ ಐಪಿಎಲ್ ಫೈನಲ್ ಪಂದ್ಯದಲ್ಲಿ ನಮ್ಮ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ಮುಖಾಮುಖಿಯಾಗಲಿವೆ, ಆರ್ ಸಿ ಬಿ 9 ವರ್ಷಗಳ ಬಳಿಕ ಫೈನಲ್ ಪಂದ್ಯಕ್ಕೆ ಹೆಜ್ಜೆಯಿಟ್ಟಿದ್ದು, ಪಂಜಾಬ್ 11 ವರ್ಷಗಳ ಬಳಿಕ ಫೈನಲ್ ಪಂದ್ಯವಾಡಲು ಸಜ್ಜಾಗುತ್ತಿದೆ, ಈ ಬಾರಿ ಕಪ್ ನಮ್ಮದೇ ಎನ್ನುವ ಭರವಸೆಯಲ್ಲಿರುವ ಮೈಸೂರಿನ ಆರ್ ಸಿ ಬಿ ಅಭಿಮಾನಿಗಳು ತಮ್ಮ ವತಿಯಿಂದ ಬಂಪರ್ ಗಿಫ್ಟ್ ವೊಂದರನ್ನು ನೀಡುತ್ತಿದ್ದಾರೆ,
ಆರ್‍ಸಿಬಿ ಕಪ್ ಗೆದ್ದರೆ ಮೈಸೂರಿನ ಎಲ್ಲಾ ಇಂದಿರಾ ಕ್ಯಾಂಟೀನ್ ಗಳಲ್ಲಿ ಉಚಿತ ಹೋಳಿಗೆ ಊಟ ಹಾಕಲಾಗುತ್ತದೆ, ಮೈಸೂರಿನ 16 ಕ್ಯಾಂಟೀನ್ ಗಳಲ್ಲೂ ಉಚಿತ ಹೋಳಿಗೆ ಊಟ ನೀಡಲಾಗುತ್ತದೆ ಎಂದು ಮೈಸೂರಿನ ಆರ್‍ಸಿಬಿ ಅಭಿಮಾನಿ ಬಸವರಾಜ ಬಸಪ್ಪ ಘೋಷಣೆ ಮಾಡಿದ್ದಾರೆ,
ಈ ಬಾರಿ ಆರ್‍ಸಿಬಿ ಕಪ್ ಗೆದ್ದೇ ಗೆಲ್ಲುತ್ತದೆ ಎನ್ನುವ ವಿಶ್ವಾಸದಲ್ಲಿ ಇಂದು ಮೈಸೂರಿನ ಗನ್ ಹೌಸ್ ವೃತ್ತದಲ್ಲಿ ಉಚಿತವಾಗಿ ಹೋಳಿಗೆ ಊಟ ಹಂಚಿಕೆ ಮಾಡಲಾಗಿದ್ದು, ಆರ್‍ಸಿಬಿ ಕಪ್ ಗೆದ್ದ ಬಳಿಕ ಮೈಸೂರಿನ 16 ಕ್ಯಾಂಟೀನ್ ಗಳಲ್ಲೂ ಉಚಿತ ಹೋಳಿಗೆ ಊಟ ನೀಡಲಾಗುತ್ತಿದೆ ಎಂದು ಮೈಸೂರಿನ ಆರ್‍ಸಿಬಿ ಅಭಿಮಾನಿಗಳು ತಿಳಿಸಿದ್ದಾರೆ,