ಕ್ರೀಡೆ

ಐಪಿಎಲ್ ಫೈನಲ್ ಹಣಾಹಣಿ – ಬೆಂಗ್ಳೂರಲ್ಲಿ ಅವಧಿಗೂ ಮೀರಿ ಪಬ್ ಓಪನ್ ಮಾಡಿದ್ರೆ FIR

ಬೆಂಗಳೂರು: ಆರ್‌ಸಿಬಿ (RCB) ಹಾಗೂ ಪಂಜಾಬ್ (Punjab Kings) ನಡುವೆ ಇಂದು ಐಪಿಎಲ್ ಫೈನಲ್ ಹಣಾಹಣಿ ನಡೆಯಲಿದೆ. ಈ ಹಿನ್ನೆಲೆ ಅವಧಿಗೂ ಮೀರಿ ಬೆಂಗಳೂರು ನಗರದ ಪಬ್‌ಗಳನ್ನು ಓಪನ್ ಮಾಡದಂತೆ ನಗರ ಪೊಲೀಸ್ ಆಯುಕ್ತ ಬಿ ದಯಾನಂದ್ ಎಚ್ಚರಿಕೆ ನೀಡಿದ್ದಾರೆ.

ಬೆಂಗಳೂರು ನಗರದ ಪಬ್‌ಗಳ ಸ್ವರ್ಗವಾಗಿರುವ ಕೋರಮಂಗಲ, ಎಂಜಿ ರಸ್ತೆ, ಬ್ರಿಗೇಡ್ ರೋಡ್, ಚರ್ಚ್ ಸ್ಟ್ರೀಟ್ ಸೇರಿದಂತೆ ಹಲವಡೆ ಆರ್‌ಸಿಬಿ ಅಭಿಮಾನಿಗಳು ಸಂಭ್ರಮಾಚರಣೆ ಮಾಡಲು ಪ್ಲಾನ್ ಮಾಡಿಕೊಂಡಿದ್ದಾರೆ. ಗುಜರಾತ್ ರಾಜಧಾನಿ ಅಹಮದಾಬಾದ್‌ನಲ್ಲಿ ಮಳೆ ಇರುವ ಕಾರಣ ಪಂದ್ಯ ತಡವಾಗಿ ಆರಂಭವಾಗಿ ತಡ ರಾತ್ರಿ ಮುಕ್ತಾಯವಾಗಿತ್ತು. ಅದೇ ರೀತಿ ಇಂದು ಕೂಡ ನಡೆಯುವ ಆರ್‌ಸಿಬಿ – ಪಂಜಾಬ್ ಫೈನಲ್ ಪಂದ್ಯ ಮಳೆ ಬಂದು ತಡವಾದರೆ ಪಬ್‌ಗಳನ್ನ ಕಡ್ಡಾಯವಾಗಿ ನಿಗದಿತ ಸಮಯದಲ್ಲಿ ಕ್ಲೋಸ್ ಮಾಡಬೇಕು. ಮ್ಯಾಚ್ ಮುಗಿದಿಲ್ಲ ಎಂದು ತಡರಾತ್ರಿಯ ತನಕ ಪಬ್ ಓಪನ್ ಮಾಡಿಕೊಂಡಿದ್ದರೆ ಕಾನೂನು ರೀತಿಯಲ್ಲಿ ಕ್ರಮ ಜರಗಿಸಲಾಗುವುದು ಎಂದು ಪೊಲೀಸ್ ಆಯುಕ್ತರು ಸೂಚನೆ ನೀಡಿದ್ದಾರೆ.

ಒಂದು ವೇಳೆ ಪೊಲೀಸರ ಖಡಕ್ ಸೂಚನೆ ಮೀರಿ ಅವಧಿ ಮುಗಿದರೂ ಪಬ್ ಓಪನ್ ಮಾಡಿಕೊಂಡರೆ ಎಫ್‌ಐಆರ್ ದಾಖಲಿಸಲಾಗುತ್ತದೆ ಎಂದು ಪಬ್ ಮಾಲೀಕರಿಗೆ ಎಚ್ಚರಿಸಲಾಗಿದೆ

Leave a Reply

Your email address will not be published. Required fields are marked *

Trending

Exit mobile version