ಕ್ರೀಡೆ
ಮಳೆಯಿಂದ ಫೈನಲ್ ಪಂದ್ಯ ರದ್ದಾದರೆ ಆರ್ ಸಿಬಿ ಕಥೆ ಏನು?

ಬೆಂಗಳೂರು: ಐಪಿಎಲ್ ಸೀಸನ್ 18 ರ ಕೊನೆಯ ಪಂದ್ಯ ಇಂದು ಅಹಮಾದಾಬಾದ್ ನರೇಂದ್ರ ಮೋದಿ ಕ್ರಿಕೆಟ್ ಮೈದಾನದಲ್ಲಿ ಆರ್ ಸಿಬಿ ಹಾಗೂ ಪಂಜಾಬ್ ನಡುವೆ ನಡೆಯಲಿದ್ದು, ಗೆದ್ದ ತಂಡ ಹೊಸ ಇತಿಹಾಸವನ್ನೇ ಬರೆಯಲಿದೆ,
ಐಪಿಎಲ್ ಆರಂಭವಾಗಿ 17 ವರ್ಷ ಸಂಪೂರ್ಣವಾಗಿದ್ದರೂ ಕೂಡ ಆರ್ ಸಿಬಿ ಹಾಗೂ ಪಂಜಾಬ್ ಒಮ್ಮೆ ಕೂಡ ಕಪ್ ಗೆದ್ದಿಲ್ಲ, ಅದರೆ ಸೀಸನ್ 18 ರಲ್ಲಿ ಹೊಸ ತಂಡಗಳು ಐಪಿಎಲ್ ಫೈನಲ್ ತಲುಪಿದ್ದು, ಯಾವ ತಂಡ ಗೆಲ್ಲುತ್ತೋ ಆ ತಂಡಕ್ಕೆ ಮೊದಲ ಟ್ರೋಫಿಯಾಗಲಿದೆ,
ಇನ್ನು ಐಪಿಎಲ್ ನಲ್ಲಿ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಆರ್ ಸಿಬಿಯು ಈ ವರ್ಷ ಫೈನಲ್ ನಲ್ಲಿ ಗೆಲ್ಲುವ ಮೂಲಕ ಕಪ್ ಬರ ನೀಗಿಸಿಕೊಳ್ಳಲು ಭರ್ಜರಿ ತಯಾರಿ ನಡೆಸುತ್ತಿವೆ, ಅತ್ತ ಪಂಜಾಬ್ ಕೂಡ ಗೆಲುವಿಗೆ ಮಾಸ್ಟರ್ ಪ್ಲಾನ್ ಮಾಡುತ್ತಿದೆ, ಅದರೆ ಈ ಪಂದ್ಯಕ್ಕೆ ಮಳೆ ಆಡ್ಡಿಯಾಗುವ ಎಲ್ಲಾ ಸಾದ್ಯತೆ ಇದೆ ಎನ್ನಲಾಗಿದೆ,
ಹವಾಮಾನ ಇಲಾಖೆಯ ವರದಿಯ ಪ್ರಕಾರ ಮಂಗಳವಾರ ಅಹಮದಾಬಾದ್ ನಲ್ಲಿ ಹಗಲಿನಲ್ಲಿ ತಾಪಮಾನವು ಗರಿಷ್ಠ 39C ಆಗಿರುತ್ತದೆ, ಅದರೆ ಸಂಜೆ ಸಮಯದಲ್ಲಿ ಕನಿಷ್ಠ 27 C ನಷ್ಟಕ್ಕೆ ತಲುಪುವ ಸಾಧ್ಯತೆ ಇದೆ, ಅಲ್ಲದೇ ದಿನವಿಡೀ ಸುಮಾರು ಶೇ.61 ರಷ್ಟು ಮಳೆಯಾಗುವ ಸಾಧ್ಯತೆಯಿದ್ದು, ಮೋಡ ಕವಿದ ವಾತಾವರಣವು ಶೇ.52 ರಿಂದ 55 ರಷ್ಟು ಇರುತ್ತದೆ ಎಂದು ತಿಳಿಸಿದೆ,
ಭಾರೀ ಮಳೆಯಿಂದ ಇಂದಿನ ಪಂದ್ಯಕ್ಕೆ ಅಡ್ಡಿಯಾದರೆ, ಮೀಸಲು ದಿನ ಅಂದರೆ ನಾಳೆಗೆ ಪಂದ್ಯವನ್ನು ಮುಂದೂಡಲಾಗುತ್ತದೆ, ಆ ದಿನ ಕೂಡ ಬಿಡದೆ ಮಳೆ ಬಂದರೆ ಪಂದ್ಯವನ್ನು ಅಂಕಪಟ್ಟಿಯ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ,
ಒಂದು ವೇಳೆ ಮೀಸಲು ದಿನ ಕೂಡ ಮಳೆಯಿಂದ ಪಂದ್ಯ ರದ್ದಾದರೆ ಪಂಜಾಬ್ ತಂಡವನ್ನು ಚಾಂಪಿಯನ್ ಎಂದು ಘೋಷಿಸಲಾಗುತ್ತದೆ, ಏಕೆಂದರೆ ಅಂಕಪಟ್ಟಿಯಲ್ಲಿ ಪಂಜಾಬ್ ಹಾಗೂ ಆರ್‍ಸಿಬಿ ಎರಡೂ 19 ಅಂಕಗಳನ್ನು ಗಳಿಸಿವೆ, ಅದರೆ ರನ್ ರೇಟ್ ಆಧಾರದ ಮೇಲೆ 0.732 ರನ್ ರೇಟ್ ಹೊಂದಿದೆ ಪಂಜಾಬ್ ಮೊದಲನೇ ಸ್ಧಾನದಲ್ಲಿದ್ದರೆ ಆರ್‍ಸಿಬಿ ತಂಡವನ್ನು 0.3031 ರನ್ ಮೂಲಕ ಎರಡನೇ ಸ್ಧಾನದಲ್ಲಿದೆ,
ಹೀಗಾಗಿ ಮೀಸಲು ದಿನ ಕೂಡ ಭಾರೀ ಮಳೆಯಿಂದ ಪಂದ್ಯ ರದ್ದಾದರೆ ಪಂಜಾಬ್ ಕಿಂಗ್ಸ್ ತಂಡವನ್ನೇ ಚಾಂಪಿಯನ್ಸ್ ಎಂದು ಘೋಷಿಸಲಾಗುತ್ತದೆ, ಹಾಗೆ ಆರ್‍ಸಿಬಿ ತಂಡವನ್ನು ರನ್ನರ್ ಅಪ್ ತಂಡ ಎಂದು ಘೋಷಿಸಲಗುವುದು.