ಕ್ರೀಡೆ
ವಿಶೇಷ ವಿಡಿಯೋ ಹಂಚಿಕೊಂಡ ಆರ್ ಸಿಬಿ.!

ಬೆಂಗಳೂರು: ಐಪಿಎಲ್ ಸೀಸನ್ 18 ರ ಅಂತಿಮ ಘಟ್ಟಕ್ಕೆ ತಲುಪಿದ್ದು ಆರ್ ಸಿಬಿ ಈ ಪಂದ್ಯವನ್ನು ಗೆಲ್ಲಲ್ಲಿ ಎಂದು ಅಭಿಮಾನಿಗಳು ದೇವರ ಮೊರೆ ಹೋಗಿದ್ದಾರೆ, ಅಲ್ಲದೇ ರಾಜ್ಯದ ಅನೇಕ ದೇವಸ್ಧಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ, ಅದರ ನಡುವೆಯೇ ಆರ್ ಸಿಬಿ ಹೊಸ ವಿಡಿಯೋವನ್ನು ಬಿಡುಗಡೆ ಮಾಡಿದೆ,
2016 ರ ಬಳಿಕ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿದ್ದು, ಈ ಬಾರಿ ಕಪ್ ನಮ್ಮದಾಗಲಿ ಎಂಬ ಆಸೆಯೊಂದಿಗೆ ಫ್ಯಾನ್ಸ್ ದೇವರಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ, ದೇಗುಲದ ಬಳಿ ಉರುಳಿ ಸೇವೆ ಮಾಡಿದ ಅಭಿಮಾನಿಗಳು …… ಗೆಲುವಿಗೆ ಹರಿಕೆ ಹೊತ್ತೊದ್ದಾರೆ,
ಇದೀಗ ಇದರ ನಡುವೆಯೇ ಆರ್ ಸಿಬಿಯು ತನ್ನ ಸೋಶಿಯಲ್ ಮೀಡಿಯಾದಲ್ಲಿ ವಿಶೇಷ ವಿಡಿಯೋ ಹಂಚಿಕೊಂಡಿದ್ದು, ಫೈನಲ್ ಆಡುವದರ ಅರ್ಥವೇನು ಮತ್ತು ಹುಡುಗರು ಈ ಆಟವನ್ನು ಹೇಗೆ ತಯಾರಿ ನಡೆಸುತ್ತಿದ್ದಾರೆ ಎಂಬುದರ ಬಗ್ಗೆ ಆಟಗಾರರೇ ಮಾತನಾಡಿದ್ದಾರೆ,
ಅಹಮಾದಾಬಾದ್ ನಲ್ಲಿ ಫೈನಲ್ ಪಂದ್ಯವನ್ನು ಆಡಲು ಬಹಳ ಕಾತುರದಿಂದ ಕಾಯುತ್ತಿದ್ದೇವೆ, ನಾವು ಎದುರು ನೋಡುತ್ತಿದ್ದ ಅತ್ಯಂತ ಪ್ರಮುಖ ಪಂದ್ಯದ ಸಮಯ ಬಂದಿದೆ ಮತ್ತು ನಾವು ಕೊನೆಯ ಬಾರಿಗೆ ಧೈರ್ಯದಿಂದ ಆಡಲು ಸಿದ್ಧರಿದ್ದೇವೆ ಎಮದು ಆರ್ ಸಿಬಿ ಬರೆದುಕೊಂಡಿದೆ,