ದೇಶ
ಭಾರತೀಯ ಸೇನೆ ಧ್ವಂಸಗೊಳಿಸಿದ ಸ್ಧಳಗಲ ಪಟ್ಟಿ ಬಿಡುಗಡೆ ಮಾಡಿದ ಪಾಕ್- ಮಿಕ್ಕಿದ್ದು ಎಲ್ಲ ಎಂದು ಕಾಲೆಳೆದ ಇಂಡಿಯನ್ಸ್!

ಇಸ್ಲಾಮಾಬಾದ್: ಭಾರತೀಯ ವಾಯುಪಡೆಯು ದಾಳಿ ಮಾಡಿರುವ 8 ಗುರಿಗಳನ್ನು ಪಾಕಿಸ್ತಾನ ಇದೀಗ ಅಧಿಕೃತವಾಗಿ ಪಟ್ಟಿ ಮಾಡಿದೆ,
ಪಹಲ್ಗಾಮ್ ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಜನರ ಸಾವಾಗಿತ್ತು, ಇದಕ್ಕೆ ಪ್ರತೀಕಾರವಾಗಿ ಭಾರತ ಪಾಕಿಸ್ತಾನ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದ 9 ಭಯೋತ್ಪಾದಕ ಶಿಬಿರಗಳ ಮೇಲೆ ಕ್ಷಿಪಣಿ ದಾಳಿಯನ್ನು ನಡೆಸಿತ್ತು, ಅದರೆ ಇಲ್ಲಿಯವರೆಗೆ ಪಾಕಿಸ್ತಾನ ತನ್ನ ಪ್ರದೇಶಗಳ ಮೇಲೆ ದಾಳಿಯಾಗಿರುವ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ನೀಡಿರಲಿಲ್ಲ.
ಇದೀಗ ಪಾಕಿಸ್ತಾನ ಅಧಿಕೃತವಾಗಿ ಭಾರತೀಯ ಸೇನೆ ದಾಳಿ ಮಾಡಿರುವ 8 ಸ್ಧಳಗಳ ಪಟ್ಟಿಗಳನ್ನು ಬಿಡುಗಡೆ ಮಾಡಿದೆ, ಗಮನಾರ್ಹ ವಿಚಾರವೆಂದರೆ ಈ ಪಟ್ಟಿಯಲ್ಲಿರುವ ಹೆಸರುಗಳನ್ನು ಇಲ್ಲಿಯವರೆಗೆ ಭಾರತ ಕೂಡಾ ಒಪ್ಪಿಕೊಂಡಿಲ್ಲ,
ಇದೀಗ ಪಾಕಿಸ್ತಾನ ಬಿಡುಗಡೆ ಮಾಡಿರುವ ಪಟ್ಟಿಯಿಂದಾಗಿ ಇದುವರೆಗೆ ಆಪರೇಷನ್ ಸಿಂಧೂರ್ ನಲ್ಲಿ ಆಗಿರುವ ಪಾಕಿಸ್ತಾನದ ಮೇಲಿನ ದಾಳಿಯ ಪ್ರಮಾಣ ಭಾರತ ಅಧಿಕೃತವಾಗಿ ಹೇಳಿಕೊಂಡಿರುವುದಕ್ಕಿಂತಲೂ ಹೆಚ್ಚಿನದ್ದಾಗಿದೆ ಎಂಬುದು ಬಹಿರಂಗವಾಗಿದೆ,