ಬೆಂಗಳೂರು

ಬೆಂಗಳೂರಿನ ಈ ಏರಿಯಾಗಳಲ್ಲಿ ವಿದ್ಯುತ್ ಕಡಿತ-ಕೆಪಿಟಿಸಿಎಲ್ ನಿಂದ ಮಾಹಿತಿ

ಬೆಂಗಳೂರು; ಇಂದು ಮತ್ತು ನಾಳೆ ಜೂ.25 & ಜೂ.26 ಬೆಂಗಳೂರಿನ ಕೆಲ ಏರಿಯಾಗಳಲ್ಲಿ ಕೆಪಿಟಿಸಿಎಲ್ ತುರ್ತು ನಿರ್ವಹಣಾ ಕಾಮಗಾರಿ ನಡೆಸಬೇಕಿರುವ ಕಾರಣ ನಗರದ ಕೆಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಕೆಪಿಟಿಸಿಎಲ್ ತಿಳಿಸಿದೆ,

ಜೂನ್ 25 ರ ಬುಧವಾರ
ಕೋರಮಂಗಲ ವಿಭಾಗದ 66/11 ಕೆವಿ ಆಸ್ಪಿನ್ ಟೌನ್ ಉಪಕೇಂದ್ರ ವ್ಯಾಪ್ತಿಯಲ್ಲಿ ಬೆಳಗ್ಗೆ 10:00 ರಿಂದ ಮಧ್ಯಾಹ್ನ 1:00 ಗಂಟೆಯವರೆಗೆ ವಿದ್ಯುತ್ ಕಡಿತವಾಗಲಿದೆ ಹೀಗಾಗಿ ಪಾಮ್ ಗ್ರೂವ್ ರೋಡ್, ಬಾಲಜಿ ಥಿಯೇಟರ್, ವಿಕ್ಟೋರಿಯಾ ಲೇಔಟ್, ವಿವೇಕನಗರ, ರಿಚ್ಮಂಡ್ ರೋಡ್, ಆಸ್ಟಿನ್ ಟೌನ್, ಆಂಜನೇಯ ಟೆಂಪಲ್ ಸ್ಟ್ರೀಟ್, ನೀಲಸಂದ್ರ, ರೋಸ್ ಗಾರ್ಡನ್ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಆಗಲಿದೆ,
ಇನ್ನು ಮತ್ತೊಂದೆಡೆ ಆಡುಗೋಡಿ & ಆಸ್ಟಿನ್ ಟೌನ್ ಉಪಕೇಂದ್ರದ ನಿರ್ವಹಣೆ ಕೂಡ ನಡೆಯಲಿದ್ದು ಆಡುಗೋಟಿ, ಸಲಾಪುರಿಯಾ ಟವರ್, ಬಿಗ್ ಬಜಾರ್, ಲಕ್ಕಸಂದ್ರ, ವಿಲ್ಸನ್ ಗಾರ್ಡನ್, ರಿಚ್ಮಂಡ್ ಸರ್ಕಲ್, ಜಾನ್ಸನ್ ಮಾರ್ಕೆಟ್, ನಾರೀಸ್ ರಸ್ತೆ ಸೇರಿದಂತೆ ಹಲವು ಪ್ರದೇಶಗಳಲ್ಲಿ ಬೆಳಗ್ಗೆ 10:00 ರಿಂದ ಮಧ್ಯಾಹ್ನ 3:00 ಗಂಟೆಯವರೆಗೆ ವಿದ್ಯುತ್ ಕಡಿತವಾಗಲಿದೆ,
ಇನ್ನು ನಾಳೆ ಜೂನ್ 26 ರಂದು
ಬೆಂಗಳೂರು ಉತ್ತರ ವೃತ್ತದ 66/11ಕೆವಿ ಎಲ್‍ಆರ್ ಬಂಡೆ ಮತ್ತು ರಾಜನಕುಂಟೆ ಕೇಂದ್ರಗಳ ವ್ಯಾಪ್ತಿಯಲ್ಲಿ ಬೆಳಗ್ಗೆ 11:00 ರಿಂದ ಸಂಜೆ 4:00 ಗಂಟೆಯವರೆಗೆ ವಿದ್ಯುತ್ತ ಕಡಿತವಾಗಲಿದೆ, ಇದರಿಂದ ರಾಜನಕುಂಟೆ, ಹೊನ್ನೇನಹಳ್ಳಿ ಸಿಂಗನಾಯಕನಹಳ್ಳಿ ಕಾವೇರಿ ನಗರ, ಸುಲ್ತಾನ್ ಪಾಳ್ಯ, ಕೆ.ಜಿ. ಹಳ್ಳಿ, ಶಾಂಪುರ, ಕುಶಾಲನಗರ, ಮೋಡಿ ರಸ್ತೆ, ಸಕ್ಕರೆ ಮಂಡಿ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಕಡಿತವಾಗಲಿದೆ,

Leave a Reply

Your email address will not be published. Required fields are marked *

Trending

Exit mobile version