ಬೆಂಗಳೂರು
ಜು.7 ಮಹಾನಗರ ಪಾಲಿಕೆ ನೌಕರರ ಪ್ರತಿಭಟನೆ

ಬೆಂಗಳೂರು: ನಗರಾಭಿವೃದ್ಧಿ ಇಲಾಖೆಯ ವಿರುದ್ಧ ಅಸಮಾಧಾನಗೊಂಡಿರುವ ಮಹಾನಗರ ಪಾಲಿಕೆ ನೌಕರರು ಸಾಮೂಹಿಕವಾಗಿ ರಜೆ ಹಾಕಿ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.
ಜುಲೈ 7 ರಂದು ರಾಜ್ಯದ ಒಟ್ಟು 10 ಮಹಾನಗರ ಪಾಲಿಕೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 70 ಸಾವಿರಕ್ಕೂ ಅಧಿಕ ಪಾಲಿಕೆ ನೌಕರರು ಸಾಮೂಹಿಕವಾಗಿ ರಜೆ ಹಾಕುವ ಮೂಲಕ ಇಲಾಖೆ ವಿರುದ್ಧ ಪ್ರತಿಭಟಿಸಲಿದ್ದಾರೆ, ರಾಜ್ಯ ಮಹಾನಗರ ಪಾಲಿಕೆ ನೌಕರರ ಸಂಘಗಳ ಪರಿಷತ್ ಈ ಪ್ರತಿಭಟನೆಗೆ ಕರೆ ನೀಡಿದ್ದು, ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದೆ,
ಮಹಾನಗರ ಪಾಲಿಕೆ ನೌಕರರ ಬೇಡಿಕೆಗಳೇನು?
ನಗರಾಭಿವೃದ್ಧಿ ಇಲಾಖೆಯ ಮುಂದೆ ಮಹಾನಗರ ಪಾಲಿಕೆ ನೌಕರರು ಕೆಲವು ಬೇಡಿಕೆಗಳನಿಟ್ಟಿದ್ದು, ಇಲಾಖೆ ಈವರೆಗೂ ಸ್ಪಂದಿಸಿಲ್ಲ, ಹೀಗಾಗಿ ಪ್ರತಿಭಟನೆಗೆ ಸಜ್ಜಾಗಿರುವ ಸಿಬ್ಬಂದಿಯ ಸದ್ಯದ ಬೇಡಿಕೆಗಳು ಈ ಕೆಳಗಿನಂತಿದೆ,
ಸರ್ಕಾರಿ ನೌಕರರಿಗೆ ನೀಡಲಾಗಿರುವ 7 ನೇ ವೇತನ ಆಯೋಗದ ಸೌಲಭ್ಯ ನೀಡಲು ಪಾಲಿಕೆಗಳ ಸಿಬ್ಬಂದಿಗೂ ಆರ್ಥಿಕ ಇಲಾಕೆಯಿಂದಲೇ ಅನುದಾನ ಬಿಡುಗಡೆ ಮಾಡಬೇಕು.
ವೇತನ ತಾರತಮ್ಯ ನಿವಾರಣೆ, ಸೇವಾ ಭದ್ರತೆ, ಖಾಲಿ ಹುದ್ದೆಗಳ ಭರ್ತಿ, ಆರೋಗ್ಯ ಸೌಲಭ್ಯಗಳು ಮತ್ತು ನಿವೃತ್ತಿ ನಂತರದ ಸೌಲಭ್ಯಗಳನ್ನು ಒದಗಿಸಬೇಕು,
ನೇಮಕಾತಿ ನಿಯಮಾವಳಿಗಲ ತಿದ್ದುಪಡಿ ಮಾಡಿ ಕರಡು ಅಧಿಸೂಚನೆ ಪ್ರಕಟಿಸಬೇಕು ಎಂದು ಆಗ್ರಹಿಸಿದ್ದಾರೆ,