Blog
ಝೊಮ್ಯಾಟೊ-ಸ್ವಿಗ್ಗಿಗೆ ಬಿಗ್ ಶಾಕ್: ಬೈಕ್ ನಲ್ಲಿ ಆಹಾರ,ವಸ್ತು ಡೆಲಿವರಿ ಬ್ಯಾನ್?

ಬೆಂಗಳೂರು: ರಾಜ್ಯದಲ್ಲಿ ಸದ್ಯ ರಾಪಿಡೋ ಬೈಕ್ ಟ್ಯಾಕ್ಸಿಗೆ ಬ್ರೇಕ್ ಹಾಕಲಾಗಿದೆ, ಆದರೆ ಇನ್ಮುಂದೆ ಸ್ವಿಗ್ಗಿ, ಝೊಮ್ಯಾಟೊ, ಅಮೆಜಾನ್, ಫ್ಲಿಪ್ ಕಾರ್ಟ್‍ಗೂ ಶಾಕ್ ಕೊಡಲು ಕೇಂದ್ರ ಸರ್ಕಾರ ಮುಂದಾಗಿದೆ,
ಸಾಮಾನ್ಯವಾಗಿ ಸರಕು ಸಾಗಣೆ, ಪ್ರಯಾಣಕ್ಕೆ ಯೆಲ್ಲೊ ಬೋರ್ಡ್ ವಾಹನಗಳನ್ನು ಬಳಸಬೇಕು, ಅದರೆ ಇಷ್ಟು ದಿನ ಇದ್ದ ರಾಪಿಡೋ ಬೈಕ್ ಟ್ಯಾಕ್ಸಿ ಈಗ ಇರುವ ಸ್ವಿಗ್ಗಿ, ಝೊಮ್ಯಾಟೊ, ಅಮೆಜಾನ್, ಫ್ಲಿಪ್ ಕಾರ್ಟ್ ನಂತಹ ಇ-ಕಾಮರ್ಸ್, ಕ್ವಿಕ್ ಕಾಮರ್ಸ್‍ನ ಡೆಲಿವರಿ ಬಾಯ್ ಗಳು ಬಳಸುವ ಬೈಕ್‍ಗಳು ಸಾಮಾನ್ಯವಾಗಿ ವೈಟ್ ಬೋರ್ಡ್‍ಗಳಿರುತ್ತವೆ, ಅದೇ ಈಗ ಸಂಕಷ್ಟ ತಂದೊಡ್ಡುತ್ತಿದೆ,
ಕೇಂದ್ರ ಸಾರಿಗೆ ಇಲಾಖೆ ಈ ಒಂದು ಆದೇಶ ಹೊರಡಿಸಿದ್ದು, ಆ ನಿರ್ಧಾರದಿಂದ ಇ-ಕಾಮರ್ಸ್ ಹಾಗೂ ಕ್ವಿಕ್ ಕಾಮರ್ಸ್, ಗಿಗಿ ಉದ್ಯೋಗಿಗಳಿಗೆ ಸಂದಷ್ಟ ಎದುರಾಗಿದೆ,
ಎಲ್ಲಾ ವಾಹನಗಳನ್ನು ಯೆಲ್ಲೋ ಬೋರ್ಡ್ ಮಾಡಬೇಕಾ?
ಖಾಸಗಿ ನೋಂದಾಯಿತ ಬೈಕ್‍ಗಳು ಅಂದರೆ ವೈಟ್ ಬೋರ್ಡ್ ಇರುವ ಬೈಕ್‍ಗಳನ್ನು ಕೇವಲ ಪ್ರಯಾಣಕ್ಕಾಗಿ ಮಾತ್ರ ಬಳಸಬೇಕು, ಆದರೆ ಗಿಗ್ ಉದ್ಯೋಗಿಗಳು ವಾಣಿಜ್ಯ ವಿತರಣಾ ಉದ್ದೇಶಗಳಿಗೆ ಬಳಸುತ್ತಿದ್ದಾರೆ, ಇದು ಸಾರಿಗೆ ಇಲಾಖೆಯ ನಿಯಮಗಳಿಗೆ ವಿರುದ್ಧವಾದುದು, ಇದೇ ಕಾರಣಕ್ಕೆ ಈಗಾಗಲೇ ರಾಪಿಡೋ ಸೇವೆಗೆ ಬ್ರೇಕ್ ಹಾಕಲಾಗಿದೆ, ಮುಂದಿನ ದಿನಗಳಲ್ಲಿ ಆಹಾರ ಹಾಗೂ ಇ-ಕಾಮರ್ಸ್ ಡೆಲಿವರಿಗಳಿಗೂ ಈ ನಿಯಮ ಅನ್ವಯವಾಗಲಿದೆ,
ಸಾರಿಗೆ ಇಲಾಖೆ ಅಧಿಸೂಚನೆಯಲ್ಲಿ ಏನೇನಿದೆ?
ಸಾಮಾನ್ಯವಾಗಿ ಡೆಲಿವರಿ ಬಾಯ್ ಗಳಿಗೆ ಇಂತಿಷ್ಟೇ ಸಮಯದಲ್ಲಿ ವಸ್ತುಗಳನ್ನು ತಲುಪಿಸಲಬೇಕು ಎಂಬ ನಿಯಮ ಇರುತ್ತದೆ, ಅದಕ್ಕಾಗಿ ಅತಿಯಾದ ವೇಗದಲ್ಲಿ ವಾಹನ ಚಲಾಯಿಸುತ್ತಾರೆ, ಸಿಗ್ನಲ್ ಬ್ರೇಕ್ ಮಾಡುತ್ತಾಎರ, ಡೆಲಿವರಿ ಬಾಯ್ ಗಳು ಪಾದಚಾರಿಗಳ ಹಕ್ಕು ಉಲ್ಲಂಘನೆ ಮಾಡುತ್ತಾರೆ ಎಂದು ಕೇಂದ್ರದ ಸಾರಿಗೆ ಇಲಾಖೆ ಹೇಳಿದೆ, ಕೆಲವೊಮ್ಮೆ ಪಾದಚಾರಿ ಮಾರ್ಗಗಳ ಮೇಲೆಯೇ ಬೈಕ್ ಓಡಿಸುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ,
ಪೀಕ್ ಅವರ್ ನಲ್ಲಿ ಡೆಲಿವರಿ ವಾಹನಗಳ ಸಂಖ್ಯೆ ಹೆಚ್ಚಾಗಿರುತ್ತದೆ, ಇದರಿಂದ ಟ್ರಾಫಿಕ್ ಜಾಮ್ ಆಗುತ್ತದೆ, ಸ್ವಿಗ್ಗಿ, ಝೊಮ್ಯಾಟೊ, ಅಮೆಜಾನ್, ಫ್ಲಿಪ್ ಕಾರ್ಟ್ ನಂತಾ ಕಂಪನಿಗಳನ್ನು ನಂಬಿ ಖಾಸಗಿ ಬೈಕ್ ಗಳ ಮೂಲಕ ವಿತರಣಾ ಕೆಲಸ ನಿರ್ವಹಿಸುತ್ತಿದ್ದ ಲಕ್ಷಾಂತರ ಗಿಗ್ ಉದ್ಯೋಗಿಗಳಿಗೆ ಸಂಕಷ್ಟ ಎದುರಾಗಿದೆ, ಈಗಾಗಲೇ ಕೇಂದ್ರ ಸಾರಿಗೆ ಇಲಾಖೆ ರಾಜ್ಯ ಸಾರಿಗೆ ಇಲಾಖೆಗೆ ಸೂಕ್ತ ಕ್ರಮಕೈಗೊಳ್ಳುವಂತೆ ಸೂಚನೆ ನೀಡಿದ್ದು, ರಾಜ್ಯ ಸರ್ಕಾರಗಳು ಕ್ರಮ ಕೈಗೊಂಡರೆ ಗಿಗ್ ಕ್ರಮ ಕೈಗೊಂಡರೆ ಗಿಗ್ ನೌಕರರು ಬೀದಿಗೆ ಬೀಳುತ್ತಾರೆ.