ರಾಜಕೀಯ

ಸಿಎಂ ಆಗೋದು ಕಷ್ಟ ಇದೆ! ಆಪ್ತನಿಂದಲೇ ಶಾಕಿಂಗ್ ಹೇಳಿಕೆ

ರಾಮನಗರ: ರಾಜ್ಯದಲ್ಲಿ ಸಿಎಂ ಬದಲಾವಣೆ ಬಗ್ಗೆ ವ್ಯಾಪಕ ಚರ್ಚೆ ಆಗುತ್ತಿದೆ, ಈ ನಡುವೆ ಡಿಸಿಎಂ ಡಿಕೆಶಿ ಖಂಡಿತವಾಗಿಯೂ ಸಿಎಂ ಆಗೋದು ವಾಸ್ತವವಾಗಿ ಕಷ್ಟವಿದೆ ಅಂತ ಮಾಜಿ ಶಾಸಕ ಸಿ.ಎಂ.ಲಿಂಗಪ್ಪ ಹೇಳಿದ್ದಾರೆ,
ಮಾಧ್ಯಮಗಳ ಜತೆ ಮಾತನಾಡಿದ ಅವರು ಡಿಕೆಶಿ ನಂಗೆ ಅತ್ಯಾಪ್ತರು, ನನ್ನ ಹೇಳಿಕೆ ಅವರಿಗೆ ಬೇಸರ ತರಿಸಬಹುದು, ಆದ್ರೆ ಡಿಕೆಶಿ ಮುಖ್ಯಮಂತ್ರಿ ಆಗೋದು ಈ ಕಾಲಘಟ್ಟದಲ್ಲಿ ಕಷ್ಟ ಎಂದು ಹೇಳಿದರು,
ಹೈ ಕಮಾಂಡ್ ಅವರ ಮನವೊಲಿಸಬಹುದು, ಪಕ್ಷವನ್ನು ಸಂಘಟಿಸಿ ಮತ್ತೊಮ್ಮೆ ಅಧಿಕಾರಕ್ಕೆ ತೆಗೆದುಕೊಂಡು ಬನ್ನಿ ಎಂದು ಹೇಳಬಹುದು, ಒಂದು ವೇಳೆ ಅಧಿಕಾರಕ್ಕೆ ಬಂದ್ರೆ ಡಿಕೆಶಿಗೆ ಸಿಎಂ ಚಾನ್ಸ್ ಸಿಗಬಹುದು ಎಂದು ಲಿಂಗಪ್ಪ ಹೇಳಿದರು,
ಡಿಕೆಶಿ ಮುಂಚಿನಿಂದಲೂ ಜನರ ಮಧ್ಯೆ ಇಲ್ಲ, ನಾನು ಅವರಿಗೆ ಬಹಳಷ್ಟು ಸಲಹೆ ನೀಡಿದ್ದೇನೆ, ಕನಿಷ್ಠ ದಿನಕ್ಕೆ ಒಂದು ಗಂಟೆಯದರೂ ಜನರ ಜತೆ ಕಾಲ ಕಳೆಯಿರಿ ಎಂದು ಹೇಳಿದ್ದೇನೆ, ಒಬ್ಬರು ನಮಸ್ಕಾರ ಅಂದ್ರೆ ಅವರು ನಮಸ್ಕಾರ ಅನ್ನೋದಿಲ್ಲ, ಈ ವರ್ತನೆಯೇ ಅವರಿಗೆ ಮುಳ್ಳು, ಸಿಎಂ ಆಗದಿರಲು ಶಾಸಕರ ವಿಶ್ವಾಸಗಳಿಸದೇ ಇರೋದು ಕೂಡ ಪ್ರಮುಖ ಕಾರಣ ಎಂದು ಸಿಎಂ ಲಿಂಗಪ್ಪ ಹೇಳಿದರು,

Leave a Reply

Your email address will not be published. Required fields are marked *

Trending

Exit mobile version