ಕ್ರೀಡೆ
ಬೆಂಗಳೂರಿಗೆ ಬಂದ ಜಾವಲಿನ್ ತಾರೆ ನೀರಜ್ ಚೋಪ್ರ-ಸಿಎಂ ಸನ್ಮಾನ

ಬೆಂಗಳೂರು: ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿರುವ ಜಾಗತಿಕ ಮಟ್ಟದ ನೀರಜ್ ಚೋಪ್ರಾ ಕ್ಲಾಸಿಕ್ ಸ್ಪರ್ಧೆಗೆ ಭರದಿಂದ ಸಿದ್ಧತೆಗಳು ಆಗುತ್ತಿದ್ದು, ಈ ಹಿನ್ನಲೆ ಕಿಯೊ ಒಲಿಂಪಿಕ್ಸ್ ಚಾಂಪಿಯನ್ ನೀರಜ್ ಚೋಪ್ರಾ ಬೆಂಗಳೂರಿನಗೆ ಬಂದಿದ್ದಾರೆ,
ಡಬಲ್ ಒಲಿಂಪಿಕ್ಸ್ ಪದಕ ವಿಜೇತ ನೀರಜ್ ಚೋಪ್ರಾ ಹಾಗೂ ಜೆಎಸ್‍ಡಬ್ಲ್ಯು ಸ್ಪೋರ್ಟ್ ಆಶ್ರಯದಲ್ಲಿ ನಡೆಯುತ್ತಿರುವ ಈ ಕ್ರೀಡಾಕೂಟಕ್ಕೆ ವಿಶ್ವದ ಒಟ್ಟು 12 ಸ್ಪರ್ಧಿಗಳು ಭಾಗವಹಿಸಲಿದ್ದಾರೆ, ಅದರಲ್ಲಿ ಐವರು ಭಾರತೀಯರೇ ಸ್ಪರ್ಧಿಸಲಿದ್ದಾರೆ,
ಈಗಾಗಲೇ ಬೆಂಗಳೂರಿಗೆ ಆಗಮಿಸಿರುವ ಜಾವಲಿನ್ ತಾರೆ ನೀರಜ್ ಚೋಪ್ರಾ ಅವರನ್ನು ಸಿಎಂ ಸಿದ್ದರಾಮಯ್ಯ ಅವರು ಕಾವೇರಿ ನಿವಾಸದಲ್ಲಿ ಭೇಟಿಯಾಗಿದ್ದು, ಈ ವೇಳೆ ನೀರಜ್ ಅವರಿಗೆ ಹಾರು, ಶಾಲು, ಹಾಗೂ ಮೈಸೂರು ಪೇಟೆ ಹಾಕಿ ಸನ್ಮಾನಿಸಿ ಶುಭ ಹಾರೈಸಿದರು,