Connect with us

ರಾಜ್ಯ

ಲಕ್ಷ್ಮೀ ಅಲಂಕಾರದಲ್ಲಿ ಕಂಗೊಳಿಸಿದ ನಾಡದೇವತೆ ಚಾಮುಂಡಿ

Published

on

ಮೂಸೂರು: ಎರಡನೇ ಆಷಾಡ ಶುಕ್ರವಾರದ ಹಿನ್ನೆಲೆಯಲ್ಲಿ ಇಂದು ಚಾಮುಂಡೇಶ್ವರಿ ಬೆಟ್ಟದಲ್ಲಿ ಭಕ್ತಸಾಗರ ಹರಿದು ಬಂದಿದ್ದು ಬೆಳ್ಳಂಬೆಳಗ್ಗೆಯೇ ಲಕ್ಷಾಂತರ ಮಂದಿ ಸರದಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆದರು, ಆಷಾಡ ಶುಕ್ರವಾರದ ಹಿನ್ನೆಲೆಯಲ್ಲಿ ಚಾಮುಂಡೇಶ್ವರಿಗೆ ಲಕ್ಷ್ಮೀ ಅಲಂಕಾರ ಮಾಡಲಾಗಿದ್ದು, ಭಕ್ತಾದಿಗಳು ಲಕ್ಷ್ಮಿ ಅಲಂಕಾರದಲ್ಲಿ ಚಾಮುಂಡಿಯನ್ನು ಕಣ್ತುಂಬಿಕೊಂಡಿದ್ದಾರೆ,
ಚಾಮುಂಡಿ ಬೆಟ್ಟಕ್ಕೆ ಗುರುವಾರ ಮಧ್ಯಾಹ್ನದಿಂದಲೇ ಮೂರು ದಿನಗಳ ಕಾಲ ಖಾಸಗಿ ವಾಹನಗಳ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದ್ದು, ಆಷಾಢ ಶುಕ್ರಮವಾರದಂದು ಎಲ್ಲಾ ಭಕ್ತಾಧಿಗಳಿಗೆ ಉಚಿತ ಸಾರಿಗೆ ಬಸ್ ವ್ಯವಸ್ಧೆ ಕಲ್ಪಿಸಲಾಗಿತ್ತು, ಕಳೆದ ವಾರ ಮೆಟ್ಟಿಲುಗಳು ಮೂಲಕವೇ 60 ರಿಂದ 70 ಸಾವಿರ ಜನರು ಒಮ್ಮೆಲೆ ಬಂದ ಕಾರಣ ಸಾಕಷ್ಟು ಗೊಂದಲಗಳಾಗಿತ್ತು, ಈ ಹಿನ್ನೆಲೆಯಲ್ಲಿ ಮೆಟ್ಟಿಲು ಮೂಲಕ ಬೆಟ್ಟ ಹತ್ತಿ ಬಂದರೆ ನೇರ ದರ್ಶನ ವ್ಯವಸ್ಧೆ ರದ್ದುಗೊಳಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ,

ದೇಶ

ವಿಜಯಪುರದ ಮಗುವಿನ ಅಪರೂಪದ ಸಾಧನೆ; ‘ನೊಬೆಲ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್’ನಲ್ಲಿ ಸ್ಥಾನ

Published

on

ವಿಜಯಪುರ: ಸಾಧನೆ ಮಾಡಲು ವಯಸ್ಸು ಅಡ್ಡಿಯಾಗುವುದಿಲ್ಲ ಎಂಬುದನ್ನು ವಿಜಯಪುರ ಜಿಲ್ಲೆಯ ಕೇವಲ 10 ತಿಂಗಳ ಪುಟ್ಟ ಬಾಲಕ ರಿಯಾನ್ಸ್ ಪಟ್ಟಣಶೆಟ್ಟಿ ಸಾಬೀತುಪಡಿಸಿದ್ದಾನೆ. ತನ್ನ ಅಸಾಧಾರಣ ಪ್ರತಿಭೆಯ ಮೂಲಕ **’ನೊಬೆಲ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್’**ನಲ್ಲಿ ಸ್ಥಾನ ಪಡೆದಿರುವ ಈ ಪುಟ್ಟ ಬಾಲಕ ಇದೀಗ ರಾಜ್ಯದ ಗಮನ ಸೆಳೆದಿದ್ದಾನೆ.

ವಿಜಯಪುರ ನಗರದ ನಿವಾಸಿಗಳಾದ ಸಚಿನ್ ಪಟ್ಟಣಶೆಟ್ಟಿ ಹಾಗೂ ಸಿಂಚನಾ ದಂಪತಿಯ ಪುತ್ರನಾದ ರಿಯಾನ್ಸ್, 21 ಮೆಟ್ಟಿಲುಗಳನ್ನು ಕೇವಲ 36 ಸೆಕೆಂಡುಗಳಲ್ಲಿ ಹತ್ತುವ ಮೂಲಕ ಈ ಅಪರೂಪದ ಸಾಧನೆ ಮಾಡಿದ್ದಾರೆ. ಇಷ್ಟು ಚಿಕ್ಕ ವಯಸ್ಸಿನ ಮಗು ಇಷ್ಟು ವೇಗವಾಗಿ ಮೆಟ್ಟಿಲು ಹತ್ತಿರುವುದು ಅಪರೂಪದ ಸಾಧನೆಯಾಗಿ ದಾಖಲಾಗಿದೆ.

ರಿಯಾನ್ಸ್ ಮನೆಯೊಳಗಿನ ಮೆಟ್ಟಿಲುಗಳನ್ನು ಸುಲಭವಾಗಿ ಹಾಗೂ ವೇಗವಾಗಿ ಹತ್ತುತ್ತಿರುವುದನ್ನು ಗಮನಿಸಿದ ತಾಯಿ ಸಿಂಚನಾ, ಆತನ ಸಾಮರ್ಥ್ಯವನ್ನು ಮತ್ತಷ್ಟು ಪರೀಕ್ಷಿಸಲು ಒಂದು ಅಡಿ ಎತ್ತರದ ಮೆಟ್ಟಿಲುಗಳನ್ನು ಹತ್ತುವಂತೆ ಪ್ರೋತ್ಸಾಹಿಸಿದರು. ಯಾವುದೇ ಭಯವಿಲ್ಲದೆ ಅವನ್ನೂ ಯಶಸ್ವಿಯಾಗಿ ಹತ್ತಿದ ಮಗುವಿನ ಪ್ರತಿಭೆಯನ್ನು ಕಂಡ ಪೋಷಕರು ಅದನ್ನು ವಿಶ್ವಕ್ಕೆ ಪರಿಚಯಿಸುವ ನಿರ್ಧಾರ ಕೈಗೊಂಡರು.

ರಿಯಾನ್ಸ್ ಮೆಟ್ಟಿಲು ಹತ್ತುವ ಸಂಪೂರ್ಣ ವಿಡಿಯೋ ಹಾಗೂ ಅಗತ್ಯ ದಾಖಲೆಗಳನ್ನು ನೊಬೆಲ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಸಂಸ್ಥೆಗೆ ಕಳುಹಿಸಲಾಯಿತು. ಸಂಸ್ಥೆಯ ಅಧಿಕಾರಿಗಳು ವಿಡಿಯೋ ಮತ್ತು ದಾಖಲೆಗಳನ್ನು ಪರಿಶೀಲಿಸಿದ ಬಳಿಕ ಈ ಸಾಧನೆಯನ್ನು ಅಧಿಕೃತವಾಗಿ ವಿಶ್ವದಾಖಲೆಯಾಗಿ ಮಾನ್ಯ ಮಾಡಿ ಪ್ರಮಾಣಪತ್ರ ನೀಡಿದರು.

ರಿಯಾನ್ಸ್‌ನ ಈ ಸಾಧನೆ ಪಟ್ಟಣಶೆಟ್ಟಿ ಕುಟುಂಬದಲ್ಲಿ ಸಂತಸ ಮೂಡಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲೂ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಹಲವು ಗಣ್ಯರು ಹಾಗೂ ಸಾರ್ವಜನಿಕರು ಪುಟ್ಟ ಬಾಲಕನಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಇಷ್ಟು ಚಿಕ್ಕ ವಯಸ್ಸಿನಲ್ಲೇ ವಿಶ್ವದಾಖಲೆ ನಿರ್ಮಿಸಿರುವ ರಿಯಾನ್ಸ್ ಭವಿಷ್ಯದಲ್ಲೂ ಇನ್ನಷ್ಟು ಸಾಧನೆ ಮಾಡಲಿ ಎಂದು ಎಲ್ಲರೂ ಹಾರೈಸುತ್ತಿದ್ದಾರೆ.

Continue Reading

ದೇಶ

11 ವರ್ಷದ ಕಾಯುವಿಕೆಗೆ ಫಲ! ‘ಲೆನಿನ್’ ಹಿಟ್ ಬಳಿಕ ಭಾವುಕರಾದ ಅಖಿಲ್ ಅಕ್ಕಿನೇನಿ

Published

on

ಬೆಂಗಳೂರು: ಟಾಲಿವುಡ್ ಯುವ ನಟ ಅಖಿಲ್ ಅಕ್ಕಿನೇನಿ ಅಭಿನಯದ ಬಹುನಿರೀಕ್ಷಿತ ‘ಲೆನಿನ್’ ಸಿನಿಮಾ ಬಿಡುಗಡೆಯಾದ ಬಳಿಕ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಚಿತ್ರದ ಯಶಸ್ಸಿನ ಸುದ್ದಿ ಎಲ್ಲೆಡೆ ಹರಡುತ್ತಿದ್ದಂತೆ ಅಖಿಲ್ ಭಾವುಕರಾಗಿ ತಮ್ಮ ತಂದೆ, ಸೂಪರ್ ಸ್ಟಾರ್ ಅಕ್ಕಿನೇನಿ ನಾಗಾರ್ಜುನ ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ಕ್ಷಣ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಚಿತ್ರದ ಯಶಸ್ಸಿನಿಂದ ಭಾವುಕರಾದ ಅಖಿಲ್, ತಂದೆಯನ್ನು ಬಿಗಿಯಾಗಿ ಅಪ್ಪಿಕೊಂಡು ಕಣ್ಣೀರಿಟ್ಟರು. ಮಗನ ಸಿನಿ ಪಯಣದ ಏಳುಬೀಳುಗಳನ್ನು ಹತ್ತಿರದಿಂದ ಕಂಡಿದ್ದ ನಾಗಾರ್ಜುನ ಕೂಡ ಅಷ್ಟೇ ಭಾವುಕರಾಗಿ ಅಖಿಲ್ ಅವರನ್ನು ಅಪ್ಪಿಕೊಂಡ ಕ್ಷಣ ಅಭಿಮಾನಿಗಳ ಮನಸೂರೆಗೊಂಡಿದೆ. ಈ ತಂದೆ-ಮಗನ ಅಪರೂಪದ ಭಾವನಾತ್ಮಕ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

2015ರಲ್ಲಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಅಖಿಲ್ ಅಕ್ಕಿನೇನಿ ಹಲವು ನಿರೀಕ್ಷೆಗಳೊಂದಿಗೆ ಸಿನಿ ಜೀವನ ಆರಂಭಿಸಿದ್ದರೂ, ದೊಡ್ಡ ಮಟ್ಟದ ಯಶಸ್ಸಿಗಾಗಿ ಸುಮಾರು 11 ವರ್ಷಗಳ ಕಾಲ ಕಾಯಬೇಕಾಯಿತು. ಅದರಲ್ಲೂ 2023ರಲ್ಲಿ ಬಿಡುಗಡೆಯಾದ ‘ಏಜೆಂಟ್’ ಚಿತ್ರದ ಸೋಲು, ಶೂಟಿಂಗ್ ವೇಳೆ ಸಂಭವಿಸಿದ ಅಪಘಾತ, ಎರಡು ಪ್ರಮುಖ ಶಸ್ತ್ರಚಿಕಿತ್ಸೆಗಳು ಹಾಗೂ ಮೂರು ವರ್ಷಗಳ ಕಾಲ ಸಿನಿಮಾಗಳಿಂದ ದೂರ ಉಳಿದಿದ್ದು ಅವರ ವೃತ್ತಿಜೀವನಕ್ಕೆ ದೊಡ್ಡ ಸವಾಲಾಗಿತ್ತು.

ನಿರ್ದೇಶಕ ಮುರಳಿ ಕಿಶೋರ್ ಅಬ್ಬುರು ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ‘ಲೆನಿನ್’ ಚಿತ್ರದಲ್ಲಿ ನಾಗಾರ್ಜುನ ಸಹ-ನಿರ್ಮಾಪಕರಾಗಿದ್ದಾರೆ. ಕೌಟುಂಬಿಕ ಬಾಂಧವ್ಯ, ಸಾಹಸ, ಪ್ರೇಮಕಥೆ ಹಾಗೂ ಮಹಾಭಾರತದ ಸ್ಫೂರ್ತಿಯ ಕಥಾಹಂದರ ಹೊಂದಿರುವ ಈ ಸಿನಿಮಾದಲ್ಲಿ ಅಖಿಲ್ ಅಭಿನಯಕ್ಕೆ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

‘ಲೆನಿನ್’ ಚಿತ್ರದ ಯಶಸ್ಸು ಅಖಿಲ್ ಅಕ್ಕಿನೇನಿ ಅವರ ಸಿನಿ ಬದುಕಿಗೆ ಹೊಸ ಚೈತನ್ಯ ತುಂಬಿದ್ದು, ಟಾಲಿವುಡ್‌ನಲ್ಲಿ ಅವರ ಭವಿಷ್ಯದ ಬಗ್ಗೆ ಅಭಿಮಾನಿಗಳ ನಿರೀಕ್ಷೆ ಮತ್ತಷ್ಟು ಹೆಚ್ಚಿಸಿದೆ.

Continue Reading

ದೇಶ

ಸಾರ್ವಜನಿಕರಿಗೆ ಗುಡ್ ನ್ಯೂಸ್! ಭಾನುವಾರವೂ ಸಿಗಲಿವೆ ನೋಂದಣಿ ಸೇವೆಗಳು

Published

on

ಬೆಂಗಳೂರು: ರಾಜ್ಯದಾದ್ಯಂತ ಇರುವ ಎಲ್ಲಾ ಉಪ ನೋಂದಣಿ ಕಚೇರಿಗಳು ಜುಲೈ 12ರ ಭಾನುವಾರ ರಜಾ ದಿನವಾಗಿದ್ದರೂ ಸಾರ್ವಜನಿಕರ ಅನುಕೂಲಕ್ಕಾಗಿ ಎಂದಿನಂತೆ ಕಾರ್ಯನಿರ್ವಹಿಸಲಿವೆ ಎಂದು ನೋಂದಣಿ ಮತ್ತು ಮುದ್ರಾಂಕಗಳ ಇಲಾಖೆ ಮಹತ್ವದ ಪ್ರಕಟಣೆ ಹೊರಡಿಸಿದೆ.

ಸಾಮಾನ್ಯವಾಗಿ ಭಾನುವಾರ ಸರ್ಕಾರಿ ಕಚೇರಿಗಳಿಗೆ ರಜೆ ಇರುತ್ತದೆ. ಆದರೆ ಇಲಾಖೆಯಲ್ಲಿ ಹೆಚ್ಚುತ್ತಿರುವ ಕಾರ್ಯದೊತ್ತಡವನ್ನು ಕಡಿಮೆ ಮಾಡುವ ಜೊತೆಗೆ ಸಾರ್ವಜನಿಕರಿಗೆ ತ್ವರಿತ ಸೇವೆ ಒದಗಿಸುವ ಉದ್ದೇಶದಿಂದ ಈ ವಿಶೇಷ ನಿರ್ಧಾರ ಕೈಗೊಳ್ಳಲಾಗಿದೆ. ಇದರಿಂದ ಆಸ್ತಿ ನೋಂದಣಿ ಸೇರಿದಂತೆ ವಿವಿಧ ಸೇವೆಗಳನ್ನು ಪಡೆಯಲು ಕಾಯುತ್ತಿದ್ದವರಿಗೆ ಅನುಕೂಲವಾಗಲಿದೆ.

ಇಲಾಖೆಯ ಪ್ರಕಟಣೆಯ ಪ್ರಕಾರ, ಜುಲೈ 12ರಂದು ಎಲ್ಲಾ ಉಪ ನೋಂದಣಿ ಕಚೇರಿಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸಲಿವೆ. ಸಾರ್ವಜನಿಕರು ಎಂದಿನಂತೆ ಆಸ್ತಿ ನೋಂದಣಿ, ಮುದ್ರಾಂಕ (Stamp) ಖರೀದಿ ಹಾಗೂ ಇಲಾಖೆಗೆ ಸಂಬಂಧಿಸಿದ ಇತರ ಸೇವೆಗಳನ್ನು ಯಾವುದೇ ಅಡಚಣೆಯಿಲ್ಲದೆ ಪಡೆಯಬಹುದಾಗಿದೆ.

ಈ ವಿಶೇಷ ವ್ಯವಸ್ಥೆಯಿಂದ ವಾರದ ಕೆಲಸದ ದಿನಗಳಲ್ಲಿ ಕಚೇರಿಗೆ ತೆರಳಲು ಸಾಧ್ಯವಾಗದ ಉದ್ಯೋಗಿಗಳು, ವ್ಯಾಪಾರಸ್ಥರು ಹಾಗೂ ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ. ಈಗಾಗಲೇ ನೋಂದಣಿ ಪ್ರಕ್ರಿಯೆಗೆ ಸಮಯ ನಿಗದಿಪಡಿಸಿಕೊಂಡಿರುವವರು ಕೂಡ ಈ ಅವಕಾಶವನ್ನು ಬಳಸಿಕೊಳ್ಳಬಹುದು.

ನೋಂದಣಿ ಮತ್ತು ಮುದ್ರಾಂಕಗಳ ಇಲಾಖೆ ಸಾರ್ವಜನಿಕರು ಈ ವಿಶೇಷ ಸೇವೆಯ ಸದುಪಯೋಗ ಪಡೆದು ತಮ್ಮ ನೋಂದಣಿ ಸಂಬಂಧಿತ ಕೆಲಸಗಳನ್ನು ಪೂರ್ಣಗೊಳಿಸಿಕೊಳ್ಳುವಂತೆ ಮನವಿ ಮಾಡಿದೆ. ಭಾನುವಾರವೂ ಸೇವೆ ಲಭ್ಯವಿರುವುದರಿಂದ ನೋಂದಣಿ ಪ್ರಕ್ರಿಯೆಯಲ್ಲಿ ಉಂಟಾಗುವ ವಿಳಂಬವೂ ಕಡಿಮೆಯಾಗುವ ನಿರೀಕ್ಷೆಯಿದೆ.

Continue Reading

Trending