ಬೆಂಗಳೂರು
ದೇವೇಗೌಡರ ಕುಟುಂಬವನ್ನು ಹೊಗಳಿದ ರಾಜಣ್ಣ- ಕೈ ನಾಯಕರ ಕಕ್ಕಾಬಿಕ್ಕಿ!

ದೇವೇಗೌಡರ ಕುಟುಂಬವನ್ನು ಹೊಗಳಿದ ರಾಜಣ್ಣ- ಕೈ ನಾಯಕರ ಕಕ್ಕಾಬಿಕ್ಕಿ!
ಹಾಸನ: ರಾಜಕೀಯ ಕಾರಣಕ್ಕೆ ಸದಾ ಸುದ್ದಿಯಲ್ಲಿರೋ ಸಚಿವ ರಾಜಣ್ಣ ದೊಡ್ಡಗೌಡ್ರ ಕುಟುಂಬವನ್ನು ವೇದಿಕೆ ಕಾರ್ಯಕ್ರಮದಲ್ಲಿ ಹಾಡಿಹೊಗಳಿ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ,
ಭಾನುವಾರ ಗೂಳಿಹೊನ್ನೇನಹಳ್ಳಿ ಗೇಟ್‍ನಲ್ಲಿ ನಿರ್ಮಾಣವಾಗಿರುವ ನುಗ್ಗೇಹಳ್ಳಿ ಮೊರಾರ್ಜಿ ವಸತಿ ಶಾಲೆಯ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೋಂಡು ಮಾತನಾಡಿದ ಕೆ ಎನ್ ರಾಜಣ್ಣ ದೇವೇಗೌಡರ ಶ್ರಮದಿಂದ ಹಾಸನ ಬೆಂಗಳೂರು ರೈಲ್ವೆ ಮಾರ್ಗ ಸೇರಿ ಹಲವು ಅಭಿವೃದ್ಧಿ ಕಾರ್ಯಕ್ರಮಗಳಾಗಿವೆ, ಪುತ್ರ ರೇವಣ್ಣ ಕೂಡ ಅವರ ಅವಧಿಯಲ್ಲಿ ಉತ್ತಮ ಕೆಲಸ ಮಾಡಿದ್ದಾರೆ ಎಂದು ಪ್ರಶಂಸೆ ನೀಡಿದ್ದಾರೆ,
ಎಚ್ ಡಿ ರೇವಣ್ಣ ಅವರು ಮಂತ್ರಿಯಾಗಿದ್ದಾಗ ಅಭಿವೃದ್ಧಿ ಎಂದರೆ ಹಾಸನ ಎನ್ನುವಂತೆ ಕೆಲಸ ಮಾಡುತ್ತಿದ್ದರು, ಇದ್ರಿಂದ ಅನೇಕ ಅಭಿವೃದ್ಧಿ ಕಾರ್ಯಗಳು ನಡೆದಿದೆ ಎಂದು ಹೇಳಿದರು,
ಸಚಿವ ರಾಜಣ್ಣ ಅವರ ಬದಲಾದ ಶೈಲಿ ಕಂಡು ವೇದಿಕೆಯಲ್ಲಿದ್ದ ಸಂಸದ ಶ್ರೇಯಸ್ ಪಟೇಲ್ ಸೇರಿ ಸ್ಧಳೀಯ ಕಾಂಗ್ರೆಸ್ ಮುಖಂಡರು ಮುಜುಗರಕ್ಕೀಡಾದ ಪ್ರಸಂಗ ಕೂಡ ನಡೆಯಿತು,