ಬೆಂಗಳೂರು
9 ಆಪ್ ಗಳಲ್ಲಿ ಕ್ಯೂ ಆರ್ ಟಿಕೆಟ್ ಸೌಲಭ್ಯ- ನಮ್ಮ ಮೆಟ್ರೋ

ಬೆಂಗಳೂರು: ನಮ್ಮ ಮೆಟ್ರೋ ಆರಂಭವಾದಾಗಿನಿಂದ ಅನೇಕ ಜನರಿಗೆ ಸಹಾಯವಾಗಿದೆ, ಟ್ರಾಫಿಕ್ ಸಮಸ್ಯೆಗಳಿಂದ ಇದು ಮುಕ್ತಿ ನೀಡಿದೆ, ತಂತ್ರಜ್ಞಾನದ ವಿಚಾರಕ್ಕೆ ಬಂದಾಗ ಅವುಗಳನ್ನು ಚೆನ್ನಾಗಿ ಬಳಸಿಕೊಂಡು ಅಭಿವೃದ್ಧಿ ಮಾಡುವುದರಲ್ಲಿ ನಮ್ಮ ಮೆಟ್ರೋ ಮುಂದಿದೆ ಎನ್ನಬಹುದು,
ಈಗ ಪ್ರಯಾನಿಕರಿಗೆ ಸುಲಭವಾಗುವ ನಿಟ್ಟಿನಲ್ಲಿ ಅನೇಕ ಹೊಸ ಯೋಜನೆಗಳನ್ನು ಮಾಡುತ್ತಿದೆ, ಇದೀಗ ಡಿಜಿಟಲ್ ಕಾಮರ್ಸ್ ಮೂಲಕ ಕ್ಯೂ ಆರ್ ಟಿಕೆಟ್ ಸೇವೆಯನ್ನು ಆರಂಭ ಮಾಡಿದ್ದು, ಇದರ ಮೂಲಕ ಪ್ರಯಾಣಿಕರು ಅನೇಕ ಅಪ್ಲಿಕೇಶನ್ ಗಳಲ್ಲಿ ಸಹ ಕ್ಯೂ ಆರ್ ಟಿಕೆಟ್ ಖರೀದಿ ಮಾಡಬಹುದಾಗಿದೆ,
ನಮ್ಮ ಮೆಟ್ರೋ ಈಗಾಗಲೇ ವಾಟ್ಸಾಪ್ ಚಾಟ್ ಬಾಟ್ ಮತ್ತು ಪೇಟಿಎಂ ಮೂಲಕ ಟಿಕೆಟ್ ಸೇವೆ ನೀಡುತ್ತಿದೆ, ಇದಕ್ಕೆ ಇನ್ನೂ 9 ಅಪ್ಲಿಕೇಶನ್ ಗಳನ್ನು ಸೇರಿಸಿದ್ದು, ರೆಡ್ಬಸ್, ಮೈಲ್ ಅಂಡ್ ಕಿಲೋಮೀಟರ್ಸ್, ಯಾತ್ರಿ-ಸಿಟಿ ಟ್ರಾವೆಲ್ ಗೈಡ್, ಈಜ್ ಮೈ ಟ್ರಿಪ್, ಟಮ್ಮಾಕ್, ಹೈವೇ ಡಿಲೈಟ್, ನಮ್ಮ ಯಾತ್ರಿ, ವನ್ ಟಿಕೆಟ್ ಹಾಗೂ ರಾಪಿಡೋ ಮೂಲಕ ಇದೀಗೆ ಕ್ಯೂ ಆರ್ ಕೋಡ್ ಟಿಕೆಟ್ ಗಳನ್ನು ಖರೀದಿ ಮಾಡಬಹುದು ಎಂದು ಬಿಎಂಆರ್‍ಸಿಎಲ್ ಹೇಳಿದೆ.