ಕ್ರೀಡೆ
ಮಹಾರಾಜ ಟ್ರೋಫಿ ಸೀಸನ್ 4 ಹರಾಜು ಪ್ರಕ್ರಿಯೆ! ಕಣದಲ್ಲಿ ಆರ್ಸಿಬಿಯ 109 ಸಿಕ್ಸರ್ಗಳ ಸ್ಫೋಟಕ ಹಿಟ್ಟರ್!

ಬೆಂಗಳೂರು: ಮಹಾರಾಜ ಟ್ರೋಫಿ ಕೆಎಸ್ಸಿಎ T-20ಯ 4ನೇ ಸೀಸನ್‌ನ ಆಟಗಾರರ ಹರಾಜು ಇಂದು ಬೆಂಗಳೂರಿನಲ್ಲಿ ನಡೆಯಲಿದೆ. ಕಳೆದ ಋತುವಿನ ರನ್ನರ್-ಅಪ್ ಹುಬ್ಳಿ ಟೈಗರ್ಸ್ ಫ್ರಾಂಚೈಸಿ 41.50 ಲಕ್ಷಗಳ ಗರಿಷ್ಠ ಹಣದೊಂದಿಗೆ ಹರಾಜಿಗೆ ಆಗಮಿಸುತ್ತಿದ್ದರೆ, ಗುಲ್ಬರ್ಗಾ ಮಿಸ್ಟಿಕ್ಸ್ 24.05 ಲಕ್ಷಗಳ ಕಡಿಮೆ ಹಣದೊಂದಿಗೆ ಹರಾಜಿಗೆ ಬರುತ್ತಿದೆ.
ಹರಾಜಿನಲ್ಲಿ ಎ ವರ್ಗದಲ್ಲಿ ಭಾರತ ಅಥವಾ ಐಪಿಎಲ್ ತಂಡವನ್ನ ಪ್ರತಿನಿಧಿಸಿರುವ ಕ್ರಿಕೆಟಿಗರು ಇರಲಿದ್ದಾರೆ. ಕಳೆದ ಋತುವಿನಲ್ಲಿ 2ನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಅಭಿನವ್ ಮನೋಹರ್, ಟೂರ್ನಿಯ 2ನೇ ಸೀಸನ್‌ನಲ್ಲಿ ಹುಬ್ಳಿ ಟೈಗರ್ಸ್ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದ ನಾಯಕ ಮನೀಶ್ ಪಾಂಡೆ ಎ ವರ್ಗದ ಹರಾಜಿನಲ್ಲಿದ್ದಾರೆ. ಅವರೊಂದಿಗೆ ಕಳೆದ ವರ್ಷ ಗುಲ್ಬರ್ಗ ಮಿಸ್ಟಿಕ್ಸ್ ತಂಡದಲ್ಲಿದ್ದ ದೇವದತ್ ಪಡಿಕ್ಕಲ್, ಮೈಸೂರು ವಾರಿಯರ್ಸ್‌ನ ವಿಜಯದ ಭಾಗವಾಗಿದ್ದ ಶ್ರೇಯಸ್ ಗೋಪಾಲ್ ಮತ್ತು ಕೆ. ಗೌತಮ್ ಕೂಡ ಎ ವರ್ಗದಲ್ಲಿದ್ದಾರೆ.
ಕಳೆದ ವರ್ಷದ ಹರಾಜಿನಲ್ಲಿ ಅತ್ಯಂತ ದುಬಾರಿ (8.60 ಲಕ್ಷ) ಬೆಲೆಗೆ ಹರಾಜಾಗಿದ್ದ ಚೇತನ್.ಎಲ್.ಆರ್ ಹರಾಜಿನ ಬಿ ವರ್ಗದಲ್ಲಿದ್ದು, ಮತ್ತೊಮ್ಮೆ ಗಮನ ಸೆಳೆಯುವ ನಿರೀಕ್ಷೆಯಿದೆ. ಕಳೆದ ವರ್ಷ ಮೈಸೂರು ವಾರಿಯರ್ಸ್ ಪರ 16 ವಿಕೆಟ್‌ಗಳೊಂದಿಗೆ ಎರಡನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿ ವಿದ್ಯಾಧರ್ ಪಾಟೀಲ್, ಮಂಗಳೂರು ಡ್ರಾಗನ್ಸ್ ಪರ ಅತ್ಯುತ್ತಮ ಬ್ಯಾಟ್ಸ್‌ಮನ್‌ಗಳಾಗಿದ್ದ ಕೆ.ವಿ. ಸಿದ್ಧಾರ್ಥ್ ಮತ್ತು ನಿಕಿನ್ ಜೋಸ್, ರೋಹನ್ ಪಾಟೀಲ್, ಅನೀಶ್ ಕೆ.ವಿ. ಮತ್ತು ಮೊಹಮ್ಮದ್ ತಹಾ ಹಾಗೂ ವೇಗಿ ದರ್ಶನ್ ಎಂ.ಬಿ ಬಿ ವರ್ಗದಲ್ಲಿ ಸೇರಿದ್ದಾರೆ.
ಕಳೆದ ಋತುವಿನಲ್ಲಿ 17 ವಿಕೆಟ್‌ಗಳೊಂದಿಗೆ ವಿಕೆಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದ ಕುಮಾರ್ ಎಲ್.ಆರ್, ಭಾರತದ ಅಂಡರ್ 19 ವೇಗಿ ಸಮರ್ಥ್ ನಾಗರಾಜ್, ಸಮಿತ್ ದ್ರಾವಿಡ್, ವಿಕೆಟ್ ಕೀಪರ್-ಬ್ಯಾಟರ್ ಹರ್ಷಿಲ್ ಧರ್ಮಾನಿ ಮತ್ತು ಕಳೆದ ಋತುವಿನಲ್ಲಿ ಬೆಂಗಳೂರು ಬ್ಲಾಸ್ಟರ್ಸ್ ಪರ 14 ವಿಕೆಟ್‌ಗಳನ್ನು ಕಬಳಿಸಿದ್ದ ಎಂ.ಕ್ರಾಂತಿ ಕುಮಾರ್ ಸಿ ವರ್ಗದಲ್ಲಿದ್ದಾರೆ.
ಏತನ್ಮಧ್ಯೆ, ಕೆಎಸ್‌ಸಿಎಯ ಎಲ್ಲಾ ನೋಂದಾಯಿತ ಆಟಗಾರರಿಗೆ ಡಿ ವರ್ಗವನ್ನ ಕಾಯ್ದಿರಿಸಲಾಗಿದೆ. ಈ ಗುಂಪಿನಲ್ಲಿ ಕಳೆದ ವರ್ಷ ಬೆಂಗಳೂರು ಬ್ಲಾಸ್ಟರ್ಸ್ ಪರ 16 ವಿಕೆಟ್‌ಗಳೊಂದಿಗೆ ಎರಡನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿ ಹೊರಹೊಮ್ಮಿದ ಲವೀಶ್ ಕೌಶಲ್ ಪ್ರಮುಖ ಆಕರ್ಷಣೆಯಾಗಿದ್ದಾರೆ.
ಹರಾಜಿನಲ್ಲಿ ಪ್ರತಿ ತಂಡಕ್ಕೆ 50.00 ಲಕ್ಷ ರೂ.ಗಳ ಮೊತ್ತವನ್ನು ಪಡೆಯಲು ಅವಕಾಶವಿದೆ. ತಲಾ 4 ಆಟಗಾರರನ್ನು ಉಳಿಸಿಕೊಂಡ ಬಳಿಕ ಹುಬ್ಳಿ ಟೈಗರ್ಸ್ 41.50 ಲಕ್ಷ ರೂ ಮೊತ್ತದೊಂದಿಗೆ ಹರಾಜಿಗೆ ಪ್ರವೇಶಿಸುತ್ತದೆ, ಅವರ ನಂತರದಲ್ಲಿ 37.70 ಲಕ್ಷ ರೂ.ಗಳೊಂದಿಗೆ ಮಂಗಳೂರು ಡ್ರಾಗನ್ಸ್, 36.50 ಲಕ್ಷ ರೂ.ಗಳೊಂದಿಗೆ ಮೈಸೂರು ವಾರಿಯರ್ಸ್, 30.80 ಲಕ್ಷ ರೂ.ಗಳೊಂದಿಗೆ ಶಿವಮೊಗ್ಗ ಲಯನ್ಸ್, 28.40 ಲಕ್ಷ ರೂ.ಗಳೊಂದಿಗೆ ಬೆಂಗಳೂರು ಬ್ಲಾಸ್ಟರ್ಸ್ ಮತ್ತು 24.05 ಲಕ್ಷ ರೂ.ಗಳೊಂದಿಗೆ ಗುಲ್ಬರ್ಗಾ ಮಿಸ್ಟಿಕ್ಸ್ ಹರಾಜಿಗೆ ಪ್ರವೇಶಿಸುತ್ತಿವೆ.
ಮೈಸೂರು ವಾರಿಯರ್ಸ್: ಕರುಣ್ ನಾಯರ್ (INR 6.8L), ಪ್ರಸಿದ್ಧ್ ಕೃಷ್ಣ (INR 2L), ಕಾರ್ತಿಕ್ ಎಸ್.ಯು (INR 0.5L), ಕಾರ್ತಿಕ್ ಸಿ.ಎ (INR 4.2L)
ಬೆಂಗಳೂರು ಬ್ಲಾಸ್ಟರ್ಸ್: ಮಯಾಂಕ್ ಅಗರವಾಲ್ (INR 14L), ಶುಭಾಂಗ್ ಹೆಗ್ಡೆ (INR 4.3L), ಸೂರಜ್ ಅಹುಜಾ (INR 1L), ನವೀನ್ ಎಂ.ಜಿ (INR 2.3L)
ಹುಬ್ಬಳ್ಳಿ ಟೈಗರ್ಸ್: ಮನ್ವಂತ್ ಕುಮಾರ್.ಎಲ್ (INR 1L), ಶ್ರೀಜಿತ್ ಕೆ.ಎಲ್ (INR 2.1L), ಕಾರಿಯಪ್ಪ ಕೆ.ಸಿ (INR 4.2L), ಕಾರ್ತಿಕೇಯ ಕೆ.ಪಿ (INR 1.2L)
ಗುಲ್ಬರ್ಗಾ ಮಿಸ್ಟಿಕ್ಸ್: ಲವ್ನಿತ್ ಸಿಸೋಡಿಯಾ (INR 7.2L), ಪ್ರವೀಣ್ ದುಬೆ (INR 6.8L), ವೈಶಾಕ್.ವಿ (INR 8.8L), ಸ್ಮರನ್.ಆರ್ (INR 3.15L)
ಶಿವಮೊಗ್ಗ ಲಯನ್ಸ್: ಕೌಶಿಕ್.ವಿ (INR 5.9L), ನಿಹಾಲ್ ಉಳ್ಳಾಲ್ (INR 2.1L), ಹಾರ್ದಿಕ್ ರಾಜ್ (INR 5.8L), ಅವಿನಾಶ್.ಡಿ (INR 5.4L)
ಮಂಗಳೂರು ಡ್ರಾಗನ್ಸ್ : ಅಭಿಲಾಷ್ ಶೆಟ್ಟಿ (INR 6.3L), ಮ್ಯಾಕ್ನೀಲ್ ಹ್ಯಾಡ್ಲಿ ನೊರೊನ್ಹಾ (INR 5L), ಪರಸ್ ಗುರ್ಬೌಕ್ಸ್ ಆರ್ಯ (INR 0.5L), ಲೋಚನ್ ಎಸ್ ಗೌಡ (INR 0.5L)
ಹರಾಜು ಪ್ರಕ್ರಿಯೆ ಸಮಯ ಬೆಳಿಗ್ಗೆ : 9ಕ್ಕೆ
ನೇರ ಪ್ರಸಾರ :- ಫ್ಯಾನ್ ಕೋಡ್