ದೇಶ

ಭಾರತಕ್ಕೆ ಟೆಸ್ಲಾ ಎಂಟ್ರಿ | ಮೈಲೇಜ್‌ ಎಷ್ಟು? ಬೇರೆ ದೇಶದಲ್ಲಿ ದರ ಎಷ್ಟಿದೆ? ಭಾರತದಲ್ಲಿ ದುಬಾರಿ ಯಾಕೆ?

ಮುಂಬೈ: ವಿಶ್ವದ ಎಲೆಕ್ಟ್ರಿಕ್‌ ಕಾರು (Electric Car) ದಿಗ್ಗಜ ಕಂಪನಿ ಟೆಸ್ಲಾ (Tesla) ಭಾರತಕ್ಕೆ ಅಧಿಕೃತವಾಗಿ ಎಂಟ್ರಿಯಾಗಿದೆ. ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ ಜಿಲ್ಲೆಯಲ್ಲಿ ದೇಶದ ಮೊದಲ ಶೋ ರೂಮ್‌ ಇಂದು ಉದ್ಘಾಟನೆಯಾಗಿದೆ. ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್‌ (Devendra Fadnavis) ಟೆಸ್ಲಾ ಕಾರು ಶೋ ರೂಮ್‌ ಅನ್ನು ಉದ್ಘಾಟಿಸಿದರು.

ಕಾರು ಬುಕ್ಕಿಂಗ್‌ ಮಾಡುವ ಗ್ರಾಹಕರು ಮುಂಗಡವಾಗಿ 22,220 ರೂ. ಹಣವನ್ನು ಪಾವತಿಸಬೇಕಾಗುತ್ತದೆ. ಕಾರುಗಳನ್ನು ಈ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ ವಿತರಣೆ ಮಾಡಲಾಗುತ್ತದೆ.

ಆಸ್ತಿ ನೋಂದಣಿ ದಾಖಲೆಗಳ ಪ್ರಕಾರ, ಟೆಸ್ಲಾ ಫೆಬ್ರವರಿ 2025 ರಲ್ಲಿ ಭಾರತದ ಅತ್ಯಂತ ದುಬಾರಿ ವಾಣಿಜ್ಯ ಜಿಲ್ಲೆಯಾದ ಮುಂಬೈನ BKC ಯಲ್ಲಿ 4,000 ಚದರ ಅಡಿ ಶೋರೂಮ್ ಜಾಗಕ್ಕೆ ಐದು ವರ್ಷಗಳ ಅವಧಿಗೆ 23.38 ಕೋಟಿ ರೂ. ಪಾವತಿಸಿದೆ.

ಕಾರಿನ ಬೆಲೆ ಎಷ್ಟು?
ಟೆಸ್ಲಾ ಮಾಡೆಲ್‌ ವೈ (Model Y) ಎರಡು ಮಾದರಿಯ ಕಾರನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. Model Y Rear-Wheel Drive (RWD) 60 ಲಕ್ಷ ರೂ., Model Y Long Range RWD 68 ಲಕ್ಷ ರೂ. ದರವನ್ನು ನಿಗದಿ ಮಾಡಿದೆ.

ಯಾವ ಬಣ್ಣಕ್ಕೆ ಎಷ್ಟು ದರ?

ಪಿಯರ್ ವೈಟ್ ಮತ್ತು ಡೈಮಂಡ್ ಬ್ಲಾಕ್ : 95,000 ರೂ.
ನೀಲಿ: 1.25 ಲಕ್ಷ ರೂ.
ಕ್ವಿಕ್ ಸಿಲ್ವರ್ ಮತ್ತು ಅಲ್ಟ್ರಾ ರೆಡ್: 1.85 ಲಕ್ಷ ರೂ

ಮೈಲೇಜ್‌ ಎಷ್ಟು?
ಮಾಡೆಲ್‌ ವೈ ರಿಯರ್‌ ವೀಲ್‌ ಡ್ರೈವ್‌ ಕಾರನ್ನು ಒಂದು ಬಾರಿ ಫುಲ್‌ ಚಾರ್ಜ್‌ ಮಾಡಿದರೆ 500 ಕಿ.ಮೀ ಪ್ರಯಾಣಿಸಬಹುದು. 201 ಕಿಮೀ/ಗಂ ಟಾಪ್‌ ಸ್ಫೀಡ್‌ ಆಗಿದ್ದು 5.9 ಸೆಕೆಂಡಿನಲ್ಲಿ 0 ಯಿಂದ 100 ಕಿ.ಮೀ ವೇಗವನ್ನು ತಲುಪುವ ಸಾಮರ್ಥ್ಯ ಹೊಂದಿದೆ.

ಲಾಂಗ್‌ ರೇಂಜ್‌ ರಿಯರ್‌ ವೀಲ್‌ ಡ್ರೈವ್‌ ಕಾರನ್ನು ಒಂದು ಬಾರಿ ಫುಲ್‌ ಚಾರ್ಜ್‌ ಮಾಡಿದರೆ 622 ಕಿ.ಮೀ ಪ್ರಯಾಣಿಸಬಹುದು. 201 ಕಿಮೀ/ಗಂ ಟಾಪ್‌ ಸ್ಫೀಡ್‌ ಆಗಿದ್ದು 5.6 ಸೆಕೆಂಡಿನಲ್ಲಿ 0 ಯಿಂದ 100 ಕಿ.ಮೀ ವೇಗವನ್ನು ತಲುಪುವ ಸಾಮರ್ಥ್ಯ ಹೊಂದಿದೆ.

ಭಾರತದಲ್ಲಿ ಮಾರಾಟವಾಗುವ ಟೆಸ್ಲಾ ಕಾರುಗಳು ಚೀನಾದ ಶಾಂಘೈನಿಂದ ಆಗಮಿಸಿವೆ. ಎಲೆಕ್ಟ್ರಿಕ್‌ ಕಾರುಗಳಿಗೆ ಆಮದು ಸುಂಕ ವಿಧಿಸುವ ಕಾರಣದಿಂದಾಗಿ ಬೆಲೆ ದುಬಾರಿಯಾಗಿವೆ. ಅಮೆರಿಕ, ಚೀನಾ, ಜರ್ಮನಿಯಲ್ಲಿ ಟೆಸ್ಲಾ ತನ್ನ ಉತ್ಪದನಾ ಘಟಕವನ್ನು ತೆರೆದಿರುವ ಕಾರಣ ಅಲ್ಲಿ ಬೆಲೆ ಕಡಿಮೆಯಿದೆ.

ಕೇಂದ್ರ ಸರ್ಕಾರ ಟೆಸ್ಲಾಗೆ ಭಾರತದಲ್ಲಿ ಉತ್ಪದನಾ ಘಟಕ ತೆರೆಯುವಂತೆ ಸೂಚಿಸಿತ್ತು. ಆದರೆ ಟೆಸ್ಲಾ ಕಂಪನಿ ಭಾರತದಲ್ಲಿ ಉತ್ಪದನಾ ಘಟಕ ತೆರೆಯಲು ಆಸಕ್ತಿ ತೋರಿಲ್ಲ. ಚೀನಾದಿಂದ ಆಮದು ಮಾಡಿರುವ ಕಾರಣ ಭಾರತದಲ್ಲಿ ಟೆಸ್ಲಾ ಕಾರುಗಳ ಬೆಲೆ ಜಾಸ್ತಿಯಿದೆ. ಹತ್ತಿರ ಹತ್ತಿರ ಟೆಸ್ಲಾ ಕಾರುಗಳಿಗೆ 21 ಲಕ್ಷ ರೂ. ಆಮದು ಸುಂಕ ವಿಧಿಸಲಾಗುತ್ತಿದೆ.

Leave a Reply

Your email address will not be published. Required fields are marked *

Trending

Exit mobile version