ಆರೋಗ್ಯ
ಅಲರ್ಜಿ ನಿಯಂತ್ರಣ ಹೇಗೆ?
ನವದೆಹಲಿ: ಮಳೆಗೆ ಬಿಡುವಿಲ್ಲದ ಕಾಲವಿದು. ರಾತ್ರಿಯೆಲ್ಲ ಮಳೆ ಸುರಿದಾಗ, ಬೆಳಗಿನ ಸ್ವಚ್ಛ ಹವೆಯನ್ನು ನೋಡಿದರೆ ಎದೆ ಹಗುರಾಗುವಷ್ಟು ತಾಜಾ ಗಾಳಿಯನ್ನು ಉಸಿರಾಡಬಹುದು ಎನ್ನುವ ಭಾವ ಬರುತ್ತದೆ. ಆದರೆ ಅಸ್ತಮಾ, ಅಲರ್ಜಿ (Allergies) ಇರು ವವರಿಗೆ ಮಳೆಗಾಲವೂ ಕಷ್ಟವೇ. ಎಲ್ಲೆಡೆ ಒದ್ದೆ, ತೇವ ಆವರಿಸಿಕೊಂಡಿರುವಾಗ ಬ್ಯಾಕ್ಟೀರಿಯಗಳು, ಫಂಗಸ್‌ಗಳ ಕಾಟ ಹೆಚ್ಚು. ಇದ ರಿಂದಲೇ ಇನ್ನಷ್ಟು ಅಲರ್ಜಿ ಸಮಸ್ಯೆ ಬಿಗಡಾಯಿಸುತ್ತದೆ. ಅದರಲ್ಲೂ ಮೋಡ ಬಿಗಿದಿದ್ದ ರಂತೂ ಶ್ವಾಸನಾಳಗಳೂ ಬಿಗಿದು, ಆಷಾಢದ ಗಾಳಿಯಂತೆಯೇ ಶ್ವಾಸಕೋಶವೂ ಶಬ್ದ ಮಾಡಲಾರಂಭಿ ಸುತ್ತದೆ. ಇವಿಷ್ಟು ಸಾಲದೆಂಬಂತೆ ನಾನಾ ರೀತಿಯ ವೈರಸ್ ಸೋಂಕುಗಳು ಅಮರಿಕೊಂಡು, ಸೋಂಕು ಗುಣವಾದ ಮೇಲೂ ಅಲರ್ಜಿ ಸಮಸ್ಯೆ ಉಲ್ಭಣಿಸುವಂತೆ ಮಾಡುತ್ತವೆ. ಮಳೆಗಾಲದಲ್ಲಿ ಅಸ್ತಮಾ, ಅಲರ್ಜಿಗಳ ನಿಯಂತ್ರಣ ಹೇಗೆ?
ಏಕೆ ಹೆಚ್ಚುತ್ತದೆ?: ಈ ಮಳೆಗೆ, ಒಂದು ಹಿಡಿ ಮಣ್ಣು ಇದ್ದಲ್ಲೂ ಹುಲ್ಲು ಹಸಿರಾಗುತ್ತದೆ. ಈ ಹುಲ್ಲಿ ನಿಂದ ವಾತಾವರಣ ಸೇರುವ ಅಲರ್ಜಿಕಾರಕಗಳು ಹಲವು ರೀತಿಯವು. ಜೋರು ಗಾಳಿಯಲ್ಲಿ ಇದರ ಹೂವಿನ ಪರಾಗಗಳೆಲ್ಲ ಎಲ್ಲೆಡೆ ಪಸರಿಸುತ್ತವೆ. ಅಲರ್ಜಿಗೆ ಕಾರಣ ವಾಗುತ್ತವೆ. ತೇವ ಹೆಚ್ಚಿದ್ದಲ್ಲಿ ಫಂಗಸ್ ಪ್ರಮಾಣವೂ ಹೆಚ್ಚು. ಜೋರು ಮಳೆಯ ಪರಿಸರದಲ್ಲಿ ಗೋಡೆ, ಬಾಗಿಲುಗಳ ಮೇಲೂ ಫಂಗಸ್ ಬೆಳೆದಿರುತ್ತದೆ. ಇವುಗಳನ್ನು ಕಾಲಕಾಲಕ್ಕೆ ಸ್ವಚ್ಛ ಗೊಳಿಸದಿದ್ದರೆ ಅಸ್ತಮಾ ಸಮಸ್ಯೆ ಬಿಗ ಡಾಯಿಸಬಹುದು. ಯಾವುದೇ ರೀತಿಯ ಪರಾಗಗಳ ಅಲರ್ಜಿಯೂ ಈಗ ತೊಂದರೆ ಕೊಟ್ಟೀತು. ಜೋರು ಗಾಳಿ ಮತ್ತು ಮೋಡ ಮುಸುಕಿದ ವಾತಾ ವರಣಗಳೇ ಇದಕ್ಕೆ ಕಾರಣ.
ಲಕ್ಷಣಗಳು: ಅಲರ್ಜಿ ಹೆಚ್ಚುತ್ತಿದೆ ಎನ್ನುವುದಕ್ಕೆ ಈ ಲಕ್ಷಣಗಳು ಕಾಣಿಸಿಕೊಳ್ಳಬಹುದು- ಸೀನು ಗಳ ಸರಮಾಲೆ, ಮೂಗು ಸೋರುವುದು, ಒಣ ಕೆಮ್ಮು, ಉಸಿರಾಡಲು ಕಷ್ಟವಾಗುವುದು, ಉಸಿರಾಡುವಾಗ ಸಿಳ್ಳೆ ಹಾಕಿದಂತೆ ಪುಪ್ಪುಸಗಳಿಂದ ಶಬ್ದ ಬರುವುದು, ಸುಸ್ತು-ಆಯಾಸ, ಕಣ್ಣು ಕೆಂಪಾಗುವುದು, ಕಣ್ಣಿನಲ್ಲಿ ತುರಿಕೆ, ಕಣ್ಣು ಊದಿಕೊಂಡು ನೀರು ಬರುವುದು, ತಲೆನೋವು, ಮೈ ಮೇಲೆ ಗುಳ್ಳೆಗಳು ಬಂದು ಕೆಂಪಾಗುವುದು… ಇತ್ಯಾದಿ.
ಏನು ಮಾಡಬೇಕು?: ಅಸ್ತಮಾ, ಅಲರ್ಜಿ ತೊಂದರೆಯಿದೆ ಎಂದಾದರೆ ವೈದ್ಯರು ಹೇಳಿದ ಔಷಧಿ ಗಳನ್ನು ನಿಯಮಿತವಾಗಿ ತೆಗೆದುಕೊಳ್ಳಿ. ಅಲರ್ಜಿ ನಿಯಂತ್ರಣಕ್ಕೆ ಸರಿಯಾದ ಚಿಕಿತ್ಸಾ ವಿಧಾನ ವನ್ನು ಪಾಲಿಸುವುದು ಅತ್ಯಗತ್ಯ. ಪಫ್‌ಗಳನ್ನು ತೆಗೆದುಕೊಳ್ಳಬೇಕು ಎಂದಾದರೆ, ದಿನದ ಲೆಕ್ಕವನ್ನು ಪಕ್ಕಾ ಇರಿಸಿಕೊಳ್ಳಿ. ಸೋಂಕುಗಳಿಂದ ತಪ್ಪಿಸಿಕೊಳ್ಳುವುದು ಮುಖ್ಯ ಎಂದಾದಲ್ಲಿ ಫ್ಲೂ ಲಸಿಕೆ ಪಡೆಯಿರಿ. ಯಾವೆಲ್ಲ ಆಹಾರಗಳು ಅಲರ್ಜಿ ತರುತ್ತವೆ ನಿಮಗೆ ಎಂಬುದನ್ನು ತಿಳಿದು ಕೊಳ್ಳುವುದು ಹೆಚ್ಚಿನ ನೆರವನ್ನು ನೀಡಬಹುದು.
ಮನೆಯೊಳಗೆ ಹೆಚ್ಚಿನ ತೇವ ನಿಲ್ಲದಂತೆ ಜಾಗ್ರತೆ ಮಾಡಿ. ಸಾಕಷ್ಟು ಗಾಳಿ-ಬೆಳಕು ಆಡುವಂತಿರಲಿ. ಮಳೆ ಇಲ್ಲದ ಸಮಯದಲ್ಲಿ, ಬಿಸಿಲಿದ್ದಾಗ ಕಿಟಕಿಗಳನ್ನು ತೆರೆದಿಡುವುದು ಸಹಕಾರಿ. ಹಾಗಿಲ್ಲದಿದ್ದರೆ ಎಕ್ಸಾಸ್ಟ್ ಫ್ಯಾನ್‌ಗಳನ್ನು ಅಳವಡಿಸಿಕೊಳ್ಳಿ. ಮನೆಯೊಳಗೆ ದೂಳು, ಕಸ ಉಳಿಯದಿರಲಿ. ಮನೆ ಯಲ್ಲಿ ಸಾಕು ಪ್ರಾಣಿಗಳಿದ್ದರೆ, ಅವುಗಳ ಕೂದಲಿನಿಂದ ಅಲರ್ಜಿ ಉಂಟಾಗುವ ಸಾಧ್ಯತೆ ಹೆಚ್ಚು. ಹಾಸಿಗೆ-ಹೊದಿಕೆಯ ವಸ್ತ್ರಗಳನ್ನು ಕಪಾಟಿನಿಂದ ನೇರವಾಗಿ ತೆಗೆದು ಉಪಯೋಗಿಸಬೇಡಿ. ಅವು ಗಳನ್ನು ಬಿಸಿಲಿಗೆ ಆರಲು ಬಿಡಿ ಅಥವಾ ಡ್ರೈಯರ್‌ಗೆ ಹಾಕಿ. ಅದಿಲ್ಲದಿದ್ದರೆ ಇಸ್ತ್ರಿ ಮಾಡಿ ಉಪ ಯೋಗಿಸಿ. ಇದರಿಂದ ಮೈಟ್‌ಗಳ ಉಪಟಳವನ್ನು ತಪ್ಪಿಸಬಹುದು.
ಮನೆಯಿಂದ ಹೊರಗೆ ಹೋಗುವಾಗ ಬೆಚ್ಚಗಿನ ವಸ್ತ್ರಗಳು ಅಗತ್ಯ. ಗಾಳಿ ಹೆಚ್ಚಿದ್ದರೆ ಮುಖಕ್ಕೆ ಮಾಸ್ಕ್ ಹಾಕಿ. ಕಟುವಾದ ಪರಿಮಳಗಳು ನಿಮಗೆ ಹೇಳಿಸಿದ್ದಲ್ಲ. ನಿಮ್ಮ ವೈಯಕ್ತಿಕ ಶುಚಿತ್ವದ ವಸ್ತುಗಳಾದ ಸೋಪು, ಶಾಂಪು, ಕ್ರೀಮ್‌ಗಳಿಗೆ ಕಟುವಾದ ಘಮವಿದ್ದರೆ, ಅದನ್ನು ಬದಲಾಯಿಸಿ. ಪರ್ಫ್ಯೂಮ್‌ಗಳು ಸಹ ತೊಂದರೆ ತಂದಾವು, ಜೋಕೆ. ಮಳೆ-ಚಳಿ ಏನೇ ಆದರೂ ದಿನವೂ ಸ್ನಾನ ಮಾಡಿ. ಹೊರಗಿ ನಿಂದ ಬಂದಾಕ್ಷಣ ಆ ಬಟ್ಟೆಗಳನ್ನು ಬದಲಿಸಿ, ಕೈ-ಕಾಲು ತೊಳೆದು ಕೊಳ್ಳಿ. ಇದರಿಂದ ಸೋಂಕು ಮತ್ತು ಅಲರ್ಜಿಕಾರಕಗಳನ್ನು ನಿಯಂತ್ರಿಸಬಹುದು. ಉಗುರು ಗಳನ್ನು ಕತ್ತರಿಸಿ, ಸ್ವಚ್ಛ ಮಾಡಿ ಕೊಳ್ಳಿ.
ಆಹಾರ: ಸಮತೋಲಿತ ಮತ್ತು ಸತ್ವಭರಿತ ಆಹಾರವನ್ನು ಸೇವಿಸುವುದು ಹೆಚ್ಚಿನ ತೊಂದರೆ ಯನ್ನು ಬುಡದಲ್ಲೇ ತಪ್ಪಿಸುತ್ತದೆ. ಒಮೇಗಾ ೩ ಕೊಬ್ಬಿನಾಮ್ಲ ಹೆಚ್ಚಿರುವ ಆಹಾರವನ್ನು ಸೇವಿಸಿ. ಇದೀಗ ಬೆಣ್ಣೆ ಹಣ್ಣು ಅಥವಾ ಅವಕಾಡೊಗಳ ಕಾಲ. ಒಮೇಗಾ ೩ ಕೊಬ್ಬಿನಾಮ್ಲ ಹೇರಳ ವಾಗಿರುವ ಅವುಗಳನ್ನು ಮನಸೋಇಚ್ಛೆ ತಿನ್ನಿ. ಜೊತೆಗೆ ವಿಟಮಿನ್ ಸಿ ಹೆಚ್ಚಿರುವ ಕಿತ್ತಳೆ, ಬೆರ್ರಿಗಳು, ಪಾಲಕ್ ಸೊಪ್ಪು, ಕ್ಯಾಪ್ಸಿಕಂನಂಥವು ನಿಮಗೆ ಬೇಕು. ಚೆನ್ನಾಗಿ ನೀರು ಕುಡಿಯಿರಿ, ಮಳೆಗಾಲದಲ್ಲಿ ಬಾಯಾರಿಕೆಯೇ ಆಗುವುದಿಲ್ಲ ಎಂಬ ನೆವ ಹೇಳಬೇಡಿ. ಹರ್ಬಲ್ ಚಹಾಗಳು, ಸೂಪ್‌ಗಳನ್ನು ಯಥೇಚ್ಛ ಕುಡಿಯಿರಿ.
ಆರೋಗ್ಯ
ಬೇಸಿಗೆಯ ಬಿಸಿಗೆ ರಾಮಬಾಣ: ಮೋದಿ ಮೆಚ್ಚಿದ ಸಾಂಪ್ರದಾಯಿಕ ಭಾರತೀಯ ಪಾನೀಯಗಳು
ಬೇಸಿಗೆಯ ಉರಿ ಬಿಸಿಯನ್ನು ಎದುರಿಸಲು ಭಾರತೀಯರು ತಲೆಮಾರುಗಳಿಂದ ಸಾಂಪ್ರದಾಯಿಕ ಪಾನೀಯಗಳ ಮೊರೆ ಹೋಗುತ್ತಿದ್ದಾರೆ. ಇತ್ತೀಚೆಗೆ ನಡೆದ ‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ಪ್ರಧಾನಿ Narendra Modi ಅವರು ದೇಶದ ವಿವಿಧ ಭಾಗಗಳಲ್ಲಿ ಜನಪ್ರಿಯವಾಗಿರುವ ಸಾಂಪ್ರದಾಯಿಕ ಬೇಸಿಗೆ ಪಾನೀಯಗಳ ಮಹತ್ವವನ್ನು ವಿಶೇಷವಾಗಿ ಪ್ರಸ್ತಾಪಿಸಿದರು. ಇವು ಕೇವಲ ಪಾನೀಯಗಳಲ್ಲ, ಭಾರತದ ವೈವಿಧ್ಯಮಯ ಸಂಸ್ಕೃತಿ ಮತ್ತು ಪರಂಪರೆಯ ಪ್ರತೀಕಗಳಾಗಿವೆ ಎಂದು ಅವರು ಹೇಳಿದರು.
ಬೇಸಿಗೆಯಲ್ಲಿ ಹೆಚ್ಚು ಜನಪ್ರಿಯವಾಗಿರುವ ಪಾನೀಯಗಳಲ್ಲಿ ಆಮ್ ಪನ್ನಾ ಪ್ರಮುಖವಾಗಿದೆ. ಕಚ್ಚಾ ಮಾವು, ಬೆಲ್ಲ ಅಥವಾ ಸಕ್ಕರೆ, ಪುದೀನ, ಜೀರಿಗೆ ಹಾಗೂ ಕಪ್ಪು ಉಪ್ಪಿನಿಂದ ತಯಾರಾಗುವ ಈ ಪಾನೀಯ ದೇಹಕ್ಕೆ ಶಕ್ತಿ ನೀಡುವುದರ ಜೊತೆಗೆ ಹೈಡ್ರೇಶನ್ ಕಾಪಾಡಲು ಸಹಕಾರಿ.
ಲಸ್ಸಿ ಮತ್ತು ಮಜ್ಜಿಗೆ (ಚಾಸ್) ಕೂಡ ಭಾರತೀಯ ಮನೆಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಆರೋಗ್ಯಕರ ಪಾನೀಯಗಳಾಗಿವೆ. ಮೊಸರು ಆಧಾರಿತ ಈ ಪಾನೀಯಗಳು ಜೀರ್ಣಕ್ರಿಯೆ ಸುಧಾರಿಸುವುದರ ಜೊತೆಗೆ ದೇಹವನ್ನು ತಂಪಾಗಿರಿಸುತ್ತವೆ.
ಪಶ್ಚಿಮ ಭಾರತದ ಕರಾವಳಿ ಪ್ರದೇಶಗಳಲ್ಲಿ ಜನಪ್ರಿಯವಾಗಿರುವ ಕೋಕಂ ಶರಬತ್ ದೇಹಕ್ಕೆ ತಂಪು ನೀಡುವ ಗುಣ ಹೊಂದಿದ್ದು, ಅದರ ವಿಶಿಷ್ಟ ಸಿಹಿ-ಹುಳಿ ರುಚಿಗೆ ಹೆಸರುವಾಸಿಯಾಗಿದೆ.
ಬಿಹಾರ ಮತ್ತು ಜಾರ್ಖಂಡ್ ಭಾಗಗಳಲ್ಲಿ ಹೆಚ್ಚು ಪ್ರಸಿದ್ಧವಾಗಿರುವ ಸಟ್ಟು ಶರಬತ್ ಪ್ರೋಟೀನ್, ಫೈಬರ್ ಹಾಗೂ ಖನಿಜಾಂಶಗಳಿಂದ ಸಮೃದ್ಧವಾಗಿದೆ. ಇದು ಬೇಸಿಗೆಯಲ್ಲಿ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುತ್ತದೆ.
ದಕ್ಷಿಣ ಭಾರತದ ಪಾನಕಂ ಮತ್ತು ನೀರ್ ಮೋರ್ ಕೂಡ ಬೇಸಿಗೆಯ ಜನಪ್ರಿಯ ಪಾನೀಯಗಳಾಗಿವೆ. ಬೆಲ್ಲ, ಶುಂಠಿ ಹಾಗೂ ನಿಂಬೆರಸದಿಂದ ತಯಾರಾಗುವ ಪಾನಕಂ ಶಕ್ತಿದಾಯಕವಾಗಿದ್ದರೆ, ಮಜ್ಜಿಗೆ ಆಧಾರಿತ ನೀರ್ ಮೋರ್ ಜೀರ್ಣಕ್ರಿಯೆಗೆ ನೆರವಾಗುತ್ತದೆ.
ಆರೋಗ್ಯ ತಜ್ಞರ ಪ್ರಕಾರ, ಈ ಸಾಂಪ್ರದಾಯಿಕ ಪಾನೀಯಗಳು ದೇಹದಲ್ಲಿ ನೀರಿನ ಪ್ರಮಾಣ ಕಾಪಾಡಲು, ಜೀರ್ಣಕ್ರಿಯೆ ಸುಧಾರಿಸಲು ಮತ್ತು ಬೇಸಿಗೆಯ ಉಷ್ಣತೆಯಿಂದ ರಕ್ಷಿಸಲು ಸಹಕಾರಿ. ಆದ್ದರಿಂದ ಮಾರುಕಟ್ಟೆಯ ಕೃತಕ ಪಾನೀಯಗಳಿಗಿಂತ ದೇಶಿ ಪಾನೀಯಗಳೇ ಆರೋಗ್ಯಕ್ಕೆ ಹೆಚ್ಚು ಲಾಭದಾಯಕವೆಂದು ಅಭಿಪ್ರಾಯ ವ್ಯಕ್ತವಾಗಿದೆ.
ಆರೋಗ್ಯ
Meditation Benefits : ಮಾನಸಿಕ ಆರೋಗ್ಯ ಕಾಪಾಡಲು ಧ್ಯಾನ ಯಾಕೆ ಅಗತ್ಯ ಗೊತ್ತಾ?
ಧ್ಯಾನ (Meditation) ಇತ್ತೀಚಿನ ದಿನಗಳಲ್ಲಿ ಕೇವಲ ಆಧ್ಯಾತ್ಮಿಕ ಅಭ್ಯಾಸವಾಗಿಯೇ ಉಳಿದಿಲ್ಲ, ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಅತ್ಯುತ್ತಮ ವಿಧಾನವಾಗಿಯೂ ಪರಿಗಣಿಸಲಾಗುತ್ತಿದೆ. ಇಂದಿನ ಬ್ಯುಸಿ ಜೀವನಶೈಲಿ, ಕೆಲಸದ ಒತ್ತಡ, ಕುಟುಂಬದ ಜವಾಬ್ದಾರಿ ಮತ್ತು ಹಣಕಾಸಿನ ಚಿಂತೆಗಳಿಂದ ಅನೇಕರು ಮಾನಸಿಕವಾಗಿ ಕುಗ್ಗುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಪ್ರತಿದಿನ ಕೇವಲ 10 ನಿಮಿಷ ಧ್ಯಾನ ಮಾಡುವ ಅಭ್ಯಾಸ ಜೀವನದಲ್ಲಿ ದೊಡ್ಡ ಬದಲಾವಣೆಯನ್ನು ತರಬಹುದು ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ.
ಧ್ಯಾನ ಮಾಡುವುದರಿಂದ ದೇಹದಲ್ಲಿ ಉತ್ಪತ್ತಿಯಾಗುವ ಕಾರ್ಟಿಸೋಲ್ ಹಾರ್ಮೋನ್ ಮಟ್ಟ ಕಡಿಮೆಯಾಗುತ್ತದೆ. ಇದರಿಂದ ಒತ್ತಡ, ಆತಂಕ ಮತ್ತು ಮಾನಸಿಕ ಅಶಾಂತಿ ಕಡಿಮೆಯಾಗಲು ಸಹಾಯವಾಗುತ್ತದೆ. ಜೊತೆಗೆ ಕೆಲಸದ ಮೇಲೆ ಏಕಾಗ್ರತೆ ಹೆಚ್ಚಾಗಿ, ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವೂ ಉತ್ತಮಗೊಳ್ಳುತ್ತದೆ.
ನಿತ್ಯ ಧ್ಯಾನ ಮಾಡುವವರು ಭಾವನಾತ್ಮಕವಾಗಿ ಹೆಚ್ಚು ಸಮತೋಲನದಲ್ಲಿರುತ್ತಾರೆ. ಮನೆಯ ಸಮಸ್ಯೆಗಳು, ಕೆಲಸದ ಒತ್ತಡ ಅಥವಾ ಹಣಕಾಸಿನ ಗೊಂದಲಗಳ ನಡುವೆಯೂ ಮನಸ್ಸನ್ನು ಶಾಂತವಾಗಿಟ್ಟುಕೊಳ್ಳಲು ಧ್ಯಾನ ಸಹಕಾರಿಯಾಗುತ್ತದೆ. ಕೋಪ ಕಡಿಮೆಯಾಗುವುದರ ಜೊತೆಗೆ ಸಕಾರಾತ್ಮಕ ಚಿಂತನೆಗಳು ಹೆಚ್ಚಾಗುತ್ತವೆ.
ಆರೋಗ್ಯದ ದೃಷ್ಟಿಯಿಂದಲೂ ಧ್ಯಾನ ಬಹಳ ಪ್ರಯೋಜನಕಾರಿ. ನಿಯಮಿತ ಧ್ಯಾನದಿಂದ ರಕ್ತದೊತ್ತಡ ನಿಯಂತ್ರಣದಲ್ಲಿರಲು ಸಹಾಯವಾಗುತ್ತದೆ. ಹೃದಯದ ರಕ್ತಪರಿಚಲನೆ ಸುಧಾರಿಸಿ ದೇಹದ ಶಕ್ತಿ ಕುಂದುವುದನ್ನು ತಡೆಯುತ್ತದೆ. ಹೀಗಾಗಿ ಪ್ರತಿದಿನ ಕೆಲ ನಿಮಿಷ ಧ್ಯಾನ ಮಾಡುವ ಅಭ್ಯಾಸ ಬೆಳೆಸಿಕೊಳ್ಳುವುದು ದೈಹಿಕ ಮತ್ತು ಮಾನಸಿಕ ಆರೋಗ್ಯ ಎರಡಕ್ಕೂ ಉತ್ತಮ ಎಂದು ವೈದ್ಯರು ಸಲಹೆ ನೀಡಿದ್ದಾರೆ.
ಆರೋಗ್ಯ
WHO ಎಚ್ಚರಿಕೆ ಬಳಿಕ ಭಾರತದಲ್ಲೂ ಮುನ್ನೆಚ್ಚರಿಕೆ ಕ್ರಮ; ವಿಜಯವಾಡದಲ್ಲಿ ಕ್ಯಾಂಪ್
ವಿಜಯವಾಡ: ಜಾಗತಿಕ ಮಟ್ಟದಲ್ಲಿ ಎಬೋಲಾ ವೈರಸ್ ಕುರಿತ ಆತಂಕ ಹೆಚ್ಚುತ್ತಿರುವ ಬೆನ್ನಲ್ಲೇ, ಆಂಧ್ರ ಪ್ರದೇಶ ಆರೋಗ್ಯ ಇಲಾಖೆ ವಿಜಯವಾಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಶೇಷ ಎಬೋಲಾ ತಪಾಸಣಾ ಶಿಬಿರ ಆರಂಭಿಸಿದೆ. ಸಿಂಗಾಪುರದಿಂದ ಆಗಮಿಸುವ ಪ್ರಯಾಣಿಕರ ಮೇಲೆ ಕಟ್ಟುನಿಟ್ಟಿನ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ.
ಆಂಧ್ರ ಸರ್ಕಾರ ನಿಯೋಜಿಸಿರುವ ವೈದ್ಯಕೀಯ ತಂಡಗಳು ಪ್ರಯಾಣಿಕರ ದೇಹದ ಉಷ್ಣಾಂಶ ಪರೀಕ್ಷೆ, ಆರೋಗ್ಯ ಲಕ್ಷಣಗಳ ಪರಿಶೀಲನೆ ಹಾಗೂ ಶಂಕಿತ ಸೋಂಕಿನ ಗುರುತು ಪತ್ತೆ ಕಾರ್ಯ ನಡೆಸುತ್ತಿವೆ. ಜ್ವರ, ವಾಂತಿ, ದೌರ್ಬಲ್ಯ ಅಥವಾ ರಕ್ತಸ್ರಾವದಂತಹ ಲಕ್ಷಣಗಳು ಕಂಡುಬಂದರೆ ತಕ್ಷಣ ಮಾಹಿತಿ ನೀಡುವಂತೆ ಪ್ರಯಾಣಿಕರಿಗೆ ಸೂಚಿಸಲಾಗಿದೆ.
ಆರೋಗ್ಯ ಇಲಾಖೆ ಅಧಿಕಾರಿಗಳ ಪ್ರಕಾರ, ಇದು ಕೇವಲ ಮುನ್ನೆಚ್ಚರಿಕಾ ಕ್ರಮವಾಗಿದ್ದು ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ. ವಿಶ್ವ ಆರೋಗ್ಯ ಸಂಸ್ಥೆ (WHO) ಹೊರಡಿಸಿರುವ ಆರೋಗ್ಯ ಎಚ್ಚರಿಕೆ ಹಿನ್ನೆಲೆಯಲ್ಲಿ ನಿಗಾ ಕ್ರಮ ಬಲಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ನಡುವೆ ಮಾಜಿ WHO ಮುಖ್ಯ ವಿಜ್ಞಾನಿ Soumya Swaminathan ಭಾರತವು ಎಬೋಲಾ ವಿರುದ್ಧದ ಸಂಶೋಧನೆ, ಲಸಿಕೆ ಅಭಿವೃದ್ಧಿ ಹಾಗೂ ರೋಗ ಪತ್ತೆ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಮಹತ್ವದ ಪಾತ್ರ ವಹಿಸಬಹುದು ಎಂದು ಹೇಳಿದ್ದಾರೆ. WHO ಹಾಗೂ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ಸಹಯೋಗದೊಂದಿಗೆ ಭಾರತ ಹೆಚ್ಚಿನ ಸಂಶೋಧನೆ ಕೈಗೊಳ್ಳಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಪ್ರಸ್ತುತ ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ ಹಾಗೂ ಉಗಾಂಡಾದ ಕೆಲವು ಭಾಗಗಳಲ್ಲಿ ಎಬೋಲಾ ಸೋಂಕು ಹೆಚ್ಚಳ ಕಂಡುಬಂದಿದೆ. WHO ಮಹಾನಿರ್ದೇಶಕ Tedros Adhanom Ghebreyesus ನೀಡಿರುವ ಮಾಹಿತಿಯಂತೆ, ಕಾಂಗೋದಲ್ಲಿ ಈಗಾಗಲೇ 101 ಪ್ರಕರಣಗಳು ದೃಢಪಟ್ಟಿದ್ದು, 10 ಮಂದಿ ಮೃತಪಟ್ಟಿದ್ದಾರೆ. ಇನ್ನೂ ನೂರಾರು ಶಂಕಿತ ಪ್ರಕರಣಗಳ ತನಿಖೆ ನಡೆಯುತ್ತಿದೆ.
ಎಬೋಲಾ ವೈರಸ್‌ನ ‘ಬುಂಡಿಬುಗ್ಯೋ’ ರೂಪಾಂತರಿ ತಳಿಯು ಪತ್ತೆ ಹಾಗೂ ಚಿಕಿತ್ಸೆ ಕಾರ್ಯಕ್ಕೆ ಸವಾಲು ಎಸೆದಿರುವುದರಿಂದ ಜಾಗತಿಕ ಆರೋಗ್ಯ ಸಂಸ್ಥೆಗಳು ಎಚ್ಚರಿಕೆಯಿಂದ ಪರಿಸ್ಥಿತಿಯನ್ನು ಗಮನಿಸುತ್ತಿವೆ.
-
ಕ್ರೀಡೆ19 hours agoಟಿ20 ತಂಡದಲ್ಲಿ ದೊಡ್ಡ ಬದಲಾವಣೆ ಸಾಧ್ಯತೆ; ಸೂರ್ಯಕುಮಾರ್ ಸ್ಥಾನ ಅಪಾಯದಲ್ಲಿ!
-
ದೇಶ22 hours agoಕುವೈತ್ ಏರ್ಪೋರ್ಟ್ ಮೇಲೆ ಭೀಕರ ದಾಳಿ: ಭಾರತೀಯ ಸೇರಿ ಹಲವರಿಗೆ ಗಾಯ!
-
ದೇಶ17 hours agoಇಂಧನ ಭದ್ರತೆಗೆ ಬಲ: ಮೋದಿ ಜೊತೆ ವೆನೆಜುವೆಲಾ ಅಧ್ಯಕ್ಷೆಯ ಮಹತ್ವದ ಮಾತುಕತೆ
-
ಬೆಂಗಳೂರು21 hours agoBangalore : ‘ಪೋಸ್ಟರ್ಗಳ ಮಧ್ಯೆ ನನ್ನ ಮನೆ’ – ಕಾಮಿಡಿಯನ್ ವ್ಯಂಗ್ಯಕ್ಕೆ ನೆಟ್ಟಿಗರ ಮೆಚ್ಚುಗೆ
-
ದೇಶ19 hours ago25 ವರ್ಷದ ಸ್ನೇಹಕ್ಕೆ ಮದುವೆಯ ಮುದ್ರೆ? ಗೌರಿ ಜೊತೆ ಅಮೀರ್ ಹೊಸ ಜೀವನ ಆರಂಭ!
-
ಅಪರಾಧ22 hours agoLatest : ವನ್ಯಜೀವಿಗಳಿಗೆ ಕಿರುಕುಳ; ಅರಣ್ಯ ಇಲಾಖೆ ಖಡಕ್ ಆ್ಯಕ್ಷನ್, ಒಬ್ಬ ಆರೋಪಿ ವಶಕ್ಕೆ
-
ದೇಶ21 hours agoಕರ್ನಾಟಕಕ್ಕೆ ಮುಂಗಾರು ಪ್ರವೇಶ ಯಾವಾಗ? ಹವಾಮಾನ ಇಲಾಖೆ ಮಹತ್ವದ ಮಾಹಿತಿ
-
ದೇಶ21 hours agoಇಸ್ರೇಲ್-ಲೆಬನಾನ್ ನಡುವೆ ಮತ್ತೆ ಕದನ ವಿರಾಮ; ಅಮೆರಿಕಾದ ಮಹತ್ವದ ಮಧ್ಯಸ್ಥಿಕೆ
