ದೇಶ

ಬಾಕ್ಸ್ ಆಫೀಸ್ ದೆಸೆಗೆ ಮಹಾವತಾರ ನರಸಿಂಹ: ಕೇವಲ 6 ದಿನದಲ್ಲಿ ₹37 ಕೋಟಿ ಕಲೆಕ್ಷನ್!

ಬೆಂಗಳೂರು: ಕನ್ನಡದ ಮೆಗಾ ಆ್ಯನಿಮೇಷನ್ ಸಿನಿಮಾ ‘ಮಹಾವತಾರ ನರಸಿಂಹ’ ಬಾಕ್ಸ್ ಆಫೀಸ್‌ನಲ್ಲಿ ಅಬ್ಬರ ಸೃಷ್ಟಿಸಿದ್ದು, ಬಿಡುಗಡೆಗೊಂಡು ಕೇವಲ 6 ದಿನಗಳೊಳಗೆ ₹37 ಕೋಟಿ ರೂ ಗಳಿಕೆ ದಾಖಲಿಸಿಕೊಂಡಿದೆ.

ಜುಲೈ 25 ರಂದು ಬಿಡುಗಡೆಯಾದ ಈ ಚಿತ್ರ ಕುರಿತು ಖ್ಯಾತ ಬಾಕ್ಸ್ ಆಫೀಸ್ ವಿಶ್ಲೇಷಕ ತರಣ್ ಆದರ್ಶ್ ಟ್ವೀಟ್ ಮಾಡಿ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಪ್ರತಿ ದಿನವೂ ಕಲೆಕ್ಷನ್‌ಗಳಲ್ಲಿ ಏರಿಕೆಯನ್ನು ಕಂಡಿರುವ ಈ ಚಿತ್ರ, ಇದೀಗ ಭಾರತದ ಮೊದಲ ವಾರದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಆ್ಯನಿಮೇಷನ್ ಸಿನಿಮಾವೆಂಬ ಕೀರ್ತಿಗೆ ಪಾತ್ರವಾಗಿದೆ.

KGF, ಕಾಂತಾರಾ ದಾಖಲೆ ಮುರಿದ ನರಸಿಂಹ

KGF ಮತ್ತು ಕಾಂತಾರಾ ಮೊದಲ ವಾರದ ಗಳಿಕೆಯನ್ನು ಹಿಂದಿಕ್ಕಿದ ಮಹಾವತಾರ ನರಸಿಂಹ:

  • 1ನೇ ದಿನ: ₹1.38 ಕೋಟಿ (ಹಿಂದಿ ಬೆಲ್ಟ್)
  • 2ನೇ ದಿನ: ₹3.40 ಕೋಟಿ
  • 3ನೇ ದಿನ: ₹6.77 ಕೋಟಿ
  • 4ನೇ ದಿನ: ₹3.70 ಕೋಟಿ
  • 5ನೇ ದಿನ: ₹5.01 ಕೋಟಿ
  • 6ನೇ ದಿನ: ₹5.05 ಕೋಟಿ
    ಒಟ್ಟಾರೆ ಹಿಂದಿ ಕಲೆಕ್ಷನ್: ₹25.31 ಕೋಟಿ
  • ತೆಲುಗು ಮತ್ತು ಉತ್ತರ ಭಾರತದ ಬೆಲ್ಟ್‌ಗಳಲ್ಲಿ ಭರ್ಜರಿ ಕಲೆಕ್ಷನ್
    ತೆಲುಗು ರಾಜ್ಯಗಳಲ್ಲಿ ಮಾತ್ರ 5 ದಿನದಲ್ಲಿ ₹9 ಕೋಟಿ ಗಳಿಕೆ ಕಂಡಿದೆ. ಉತ್ತರ ಭಾರತದಲ್ಲಿ ಇದೇ ಅವಧಿಯಲ್ಲಿ ₹22 ಕೋಟಿ ರೂ ಗಳಿಸಲಾಗಿದೆ. ಪ್ರೇಕ್ಷಕರು ಚಿತ್ರದ ವಿಷುಯಲ್ ಪ್ರಜೆಂಟೇಷನ್, ಮಿಥಾಲಜಿಕಲ್ ಥೀಮ್ ಹಾಗೂ ಸ್ಟೋರಿ ಟೆಲಿಂಗ್‌ಗೆ ಫಿದಾ ಆಗಿದ್ದಾರೆ.

    🎞️ ಕನ್ನಡದಲ್ಲಿ ಮಂಕಾದ ಪ್ರದರ್ಶನ
    ಚಿತ್ರ ಮೂಲತಃ ಕನ್ನಡದಲ್ಲಿ ಬಿಡುಗಡೆಯಾದರೂ, ಇಲ್ಲಿಯ ಪ್ರದರ್ಶನ ನಿರೀಕ್ಷಿತ ಮಟ್ಟಕ್ಕಿಲ್ಲ. ಸ್ಪರ್ಧಾತ್ಮಕವಾಗಿ ‘ಸು ಫ್ರಂ ಸೋ’ ಸಿನಿಮಾ ಭರ್ಜರಿ ಯಶಸ್ಸನ್ನು ಕಾಣುತ್ತಿದೆ. ಈ ಕಾರಣದಿಂದ ನರಸಿಂಹ ಕಲೆಕ್ಷನ್ ಸುಮಾರು ₹2 ಕೋಟಿ ರೂ ಮಟ್ಟದಲ್ಲೇ ನಿಂತಿದೆ.

Leave a Reply

Your email address will not be published. Required fields are marked *

Trending

Exit mobile version