ಬೆಂಗಳೂರು

ಆಗಸ್ಟ್ 5: ಸಾರಿಗೆ ನೌಕರರ ಮುಷ್ಕರ ಖಚಿತ – ಕರ್ನಾಟಕದಲ್ಲಿ ಬಸ್ ಸಂಚಾರ ಸಂಪೂರ್ಣ ಬಂದ್

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆದ ಸಾರಿಗೆ ನೌಕರರೊಂದಿಗಿನ ಸಂಧಾನ ಸಭೆ ವಿಫಲವಾದ ಹಿನ್ನೆಲೆಯಲ್ಲಿ, ಆಗಸ್ಟ್ 5 ರಂದು ಕರ್ನಾಟಕದಲ್ಲಿ ಬಸ್ ಸಂಚಾರ ಸಂಪೂರ್ಣವಾಗಿ ಬಂದ್ ಆಗಲಿದೆ. ನೌಕರರ ಸಂಘಟನೆಗಳು ಅನಿರ್ದಿಷ್ಟಾವಧಿ ಮುಷ್ಕರ ಮಾಡಲು ತೀರ್ಮಾನಿಸಿವೆ.

ಸಿಎಂ ಮನವಿ ಮಾಡಿದರೂ, ನೌಕರರು ಬೇಡಿಕೆ ಈಡೇರಿಕೆಯಾಗದವರೆಗೆ ಹಿಂಪಡೆಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ರಾಜ್ಯ ಸರ್ಕಾರ ಮತ್ತು ಸಾರಿಗೆ ನೌಕರರ ಸಂಘಟನೆಗಳ ನಡುವಿನ ಸಂಘರ್ಷ ಮತ್ತಷ್ಟು ತೀವ್ರವಾಗಿದೆ.


ಮುಷ್ಕರದ ಹಿನ್ನೆಲೆ ಏನು?

  • 38 ತಿಂಗಳ ಭತ್ಯೆ ಹಾಗೂ ವೇತನ ಹೆಚ್ಚಳ, ನಿಯಮಿತ ಗುತ್ತಿಗೆ, ಸಿಬ್ಬಂದಿ ಭದ್ರತೆ ಸೇರಿ ಹಲವಾರು ಬೇಡಿಕೆಗಳನ್ನು ಇಟ್ಟುಕೊಂಡಿದ್ದಾರೆ.
  • ಜನವರಿಯಲ್ಲಿ ವೇತನ ಪರಿಷ್ಕಾರ ನಿರ್ಧಾರವಾಗಬೇಕಿತ್ತು – ಆದರೆ ಈವರೆಗೆ ಆಗಿಲ್ಲ.
  • ಇದನ್ನು ಖಂಡಿಸಿ ಕೆಎಸ್‌ಆರ್‌ಟಿಸಿ (KSRTC), ಬಿಎಂಟಿಸಿ (BMTC), ನORTH WEST KSRTC, NEKRTC ಸೇರಿ ನಾಲ್ಕು ನಿಗಮಗಳ ನೌಕರರು ಮುಷ್ಕರಕ್ಕೆ ಕಾಲಿಟ್ಟಿದ್ದಾರೆ.

Leave a Reply

Your email address will not be published. Required fields are marked *

Trending

Exit mobile version