ದೇಶ

ಬೆಂಗಳೂರು ಮೆಟ್ರೋ ಹಳದಿ ಮಾರ್ಗ ಉದ್ಘಾಟನೆ: ಮೋದಿ ಆಗಸ್ಟ್ 10ರಂದು ಚಾಲನೆ ನೀಡಲು ಆಗಮಿಸುತ್ತಿದ್ದಾರೆ!

ಬೆಂಗಳೂರು: ಬಹು ನಿರೀಕ್ಷಿತ ನಮ್ಮ ಮೆಟ್ರೋ ಹಳದಿ ಮಾರ್ಗ (Yellow Line) ಉದ್ಘಾಟನೆಗೆ ದಿನಾಂಕ ಫೈನಲ್ ಆಗಿದೆ. ಆಗಸ್ಟ್ 10 ರಂದು ಪ್ರಧಾನಿ ನರೇಂದ್ರ ಮೋದಿ ಮೆಟ್ರೋಗೆ ಅಧಿಕೃತವಾಗಿ ಚಾಲನೆ ನೀಡಲಿದ್ದು, ರಾಜ್ಯ ರಾಜಕಾರಣದಲ್ಲಿ ಭರ್ಜರಿ ಕಸರತ್ತು ಆರಂಭವಾಗಿದೆ.

ಮೆಟ್ರೋ ಉದ್ಘಾಟನೆ + ಮೋದಿ ರೋಡ್ ಶೋ = ಮೆಗಾ ಈವೆಂಟ್:
ಮೆಟ್ರೋ ಚಾಲನೆ ನಂತರ, ಮೋದಿ ರಾಗಿಗುಡ್ಡ ಪ್ರಸನ್ನ ಆಂಜನೇಯ ದೇವಸ್ಥಾನದಿಂದ ಶಾಲಿನಿ ಮೈದಾನದವರೆಗೆ ರೋಡ್ ಶೋ ನಡೆಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ಸುಮಾರು 40 ಸಾವಿರ ಜನ ಜಮಾಯಿಸುವ ನಿರೀಕ್ಷೆ ಇದೆ.

ಅಥೆಂಡ್ ಮಾಡ್ತೀರಾ?
ಇದು ಕೇವಲ ಮೆಟ್ರೋ ಉದ್ಘಾಟನೆ ಮಾತ್ರವಲ್ಲ; ಪ್ರಧಾನಿ ಮೋದಿ ಸಾರ್ವಜನಿಕ ಸಭೆಗೂ ಪಾಲ್ಗೊಳ್ಳಲಿದ್ದಾರೆ. ಹಳದಿ ಮಾರ್ಗ ಉದ್ಘಾಟನೆಯಿಂದ 8-10 ಲಕ್ಷ ಪ್ರಯಾಣಿಕರಿಗೆ ಸೌಲಭ್ಯ ಸಿಗಲಿದೆ. ಇದರಿಂದ ಬೆಂಗಳೂರು ಟ್ರಾಫಿಕ್ ಸಮಸ್ಯೆಗೂ ಪರಿಹಾರ ಸಾಧ್ಯವಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ರಾಜಕೀಯ ಬೆನ್ನುತುಂಬಿದ ಲೆಕ್ಕಾಚಾರ:
ಹಳದಿ ಮಾರ್ಗಕ್ಕೆ ಶಂಕುಸ್ಥಾಪನೆ ಮಾಡಿದ್ದು ಮೋದಿ ಅವರೇ. ಈಗ ಉದ್ಘಾಟನೆಗೂ ಅವರೇ ಆಗಮಿಸುತ್ತಿರುವುದು ಬಿಜೆಪಿಗೆ ರಾಜಕೀಯ ಗುರಿ ಸಾಧಿಸಲು ಸಹಕಾರಿಯಾಗಲಿದೆ.

Leave a Reply

Your email address will not be published. Required fields are marked *

Trending

Exit mobile version