Connect with us

ದೇಶ

ಮುಂಬೈ ಲಾಲ್ ಬಾಗ್ಚಿ ರಾಜ ನೋಡಿ

ಮುಂಬೈ ಲಾಲ್ ಬಾಗ್ಚಿ ರಾಜ ನೋಡಿ
ಮುಂಬೈ ಲಾಲ್ ಬಾಗ್ಚಿ ರಾಜ ನೋಡಿ

ಮಹಾರಾಷ್ಟ್ರ: ಗಣೇಶ ಚತುರ್ಥಿ ಸಮೀಪಿಸುತ್ತಿದ್ದಂತೆ ಹಬ್ಬದ ಸಿದ್ಧತೆಗಳು ಭರದಿಂದ ಸಾಗಿವೆ, ಭಾರತದಾದ್ಯಂತ ಗಣೇಶನನ್ನು ಆರಾಧಿಸಲಾಗುತ್ತದೆಯಾದರೂ ಮುಂಬೈ ಮಹಾನಗರದ ಗಣೇಶೋತ್ಸವ ಯಾವಾಗಲೂ ಒಂದು ಕೈ ಮೇಲು ಎಂದೇ ಹೇಳಬಹುದು,
ಜಗದ್ವಿಖ್ಯಾತ ಲಾಲ್ ಬಾಗ್ಚಾ ರಾಜಾ ಗಣೇಶನ ವಿಗ್ರಹದ ಫಸ್ಟ್ ಲುಕ್ ಅನಾವರಣಗೊಂಡಿದೆ, ಅದರಲ್ಲೂ ಪ್ರಮುಖವಾಗಿ ಇದು ಕಲಾ ನಿರ್ದೇಶಕ ದಿವಂಗತ ನಿತಿನ್ ದೇಸಾಯಿ ಅವರ ಅಂತಿಮ ರಚನೆಯಾಗಿದೆ, ಸುಮಾರು 12 ಅಡಿ ಎತ್ತರ ಗಣಪ ಈ ಮೂರ್ತಿ ಎಲ್ಲರ ಗಮನ ಸೆಳೆದಿದೆ,
ಲಾಲ್ ಬಾಗ್ಚಾ ರಾಜ ಮುಂಬೈನ ಅತ್ಯಂತ ಹಳೆಯ ಮತ್ತು ಜಗದ್ವಿಖ್ಯಾತಿ ಪಡೆದ ಗಣೇಶೋತ್ಸವವಾಗಿದೆ,
1934ರಲ್ಲಿ ಮುಂಬೈನ ಲಾಲ್ ಬಾಗ್ ಮಾರುಕಟ್ಟೆಯಲ್ಲಿ ಮೊದಲ ಬಾರಿಗೆ ಗಣೇಶನ ಮೂರ್ತಿಯನ್ನು ಸ್ಧಾಪಿಸಲಾಯಿತು, ಲಾಲ್ ಬಾಗ್ಚಾ ರಾಜನನ್ನು ಸ್ಧಳೀಯರ ಗುಂಪು ಮತ್ತು ಮೀನುಗಾರರು ಸ್ಧಾಪಿಸಿ ಆರಾಧಿಸಿದರು ಎನ್ನಲಾಗುತ್ತದೆ,
ಇನ್ನು ಈ ಗಣೇಶನ ಸೊಗಸಾದ ವಿಗ್ರಹವನ್ನು ಸುಮಾರು 89 ವರ್ಷಗಳಿಂದ ಕಾಂಬ್ಳಿ ಕುಟುಂಬದವರು ವಿಗ್ರಹವನ್ನು ತಯಾರಿಸಿ ರಕ್ಷಿಸುತ್ತಾ ಬಂದಿದ್ದಾರೆ. ಕಾಂಬ್ಳಿ ಮನೆತನದ ಮುಖ್ಯಸ್ಧರಾಗಿದ್ದ ರತ್ನಾಕರ ಕಾಂಬ್ಳಿ ಅವರು 1935 ರಲ್ಲಿಯೇ ಗಣಪತಿಯ ವಿಗ್ರಹ ತಯಾರಿಕೆಯ ಮತ್ತು ನಿರ್ವಹಣೆಯ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರು ಎನ್ನಲಾಗಿದೆ, ಈ ಪದ್ದತಿಯನ್ನು ಅಂದಿನಿಂದ ಇಂದಿನವರೆಗೆ ಅದೇ ಕುಟುಂಬದವರು ವಹಿಸಿಕೊಂಡು ಬರುತ್ತಿದ್ದಾರೆ ಎನ್ನಲಾಗಿದೆ,

ದೇಶ

ಪಿಎಂ ಮೋದಿ ಆಗಸ್ಟ್ 10ರಂದು ಬೆಂಗಳೂರಿಗೆ: ನಮ್ಮ ಮೆಟ್ರೋ ಹಳದಿ ಮಾರ್ಗ ಉದ್ಘಾಟನೆ

ಬೆಂಗಳೂರು: ನಮ್ಮ ಮೆಟ್ರೋ (Namma Metro) ಹಳದಿ ಮಾರ್ಗದ (Yellow Line) ಉದ್ಘಾಟನೆಗಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು (PM Modi) ಆಗಸ್ಟ್ 10ರಂದು ಬೆಂಗಳೂರಿಗೆ ಬರುವುದಾಗಿ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ತಿಳಿಸಿದ್ದಾರೆ.

ಇಂದು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಪ್ರಧಾನಿಯವರು ಆಗಸ್ಟ್ 10ರಂದು ನಮ್ಮ ಮೆಟ್ರೋ ಹಳದಿ ಮಾರ್ಗವನ್ನು ಉದ್ಘಾಟನೆ ಮಾಡುವ ಉದ್ದೇಶದಿಂದ ಬರುತ್ತಿದ್ದಾರೆ. ಅವರ ಭೇಟಿಗೆ ಸಿದ್ಧತೆಗಳು ನಡೆಯುತ್ತಿವೆ. ಟೈಮ್ ಟು ಟೈಮ್ ಕಾರ್ಯಕ್ರಮಗಳ ಬಗ್ಗೆ ಇನ್ನೂ ವಿವರ ಬಾಕಿಯಿದೆ,” ಎಂದು ಹೇಳಿದರು.

ವೈಭವದಿಂದ ಕಾರ್ಯಕ್ರಮ?
ಆದರೆ, ಮೂಲ ಯೋಜನೆಗೆ ಬದಲಾವಣೆ ಆಗಿದೆ. ಈಗ ಪ್ರಧಾನಿಯವರು ಕೇವಲ ಹಳದಿ ಮಾರ್ಗದ ಮೆಟ್ರೋ ಮತ್ತು ವಂದೇ ಭಾರತ್ ರೈಲು ಉದ್ಘಾಟನೆಗೆ ಮಾತ್ರ ಭಾಗಿಯಾಗಲಿದ್ದಾರೆ. ಬಿಜೆಪಿ ಕಾರ್ಯಕರ್ತರ ಸಮಾವೇಶ ಮತ್ತು ರೋಡ್ ಶೋ ಕಾರ್ಯಾಚರಣೆಗಳು ರದ್ದುಪಡಿಸಲಾಗಿದೆ.

ಇದರ ಪರಿಣಾಮವಾಗಿ, ಒಂದು ವರ್ಷದಿಂದ ಮೋದಿಯವರ ಆಗಮನದ ನಿರೀಕ್ಷೆಯಲ್ಲಿದ್ದ ಬಿಜೆಪಿ ಕಾರ್ಯಕರ್ತರು ನಿರಾಸೆಗೊಳಗಾಗಿದ್ದಾರೆ ಎಂದು ವರದಿಯಾಗಿದೆ.

Continue Reading

ದೇಶ

ಭಾರತ vs ಅಮೆರಿಕ: ರಷ್ಯಾದ ತೈಲದ ಬಗ್ಗೆ ಉದ್ವಿಗ್ನತೆ, ಸೇನೆಯಿಂದ ತಿರುಗೇಟು

ಬೆಂಗಳೂರು: ರಷ್ಯಾದಿಂದ ಕಚ್ಚಾ ತೈಲ ಖರೀದಿಯ ಕುರಿತು ಭಾರತ-ಅಮೆರಿಕ ನಡುವೆ ಉದ್ವಿಗ್ನತೆ ಹೆಚ್ಚುತ್ತಿರುವಂತಾಗಿದೆ. ಭಾರತ ರಷ್ಯಾದಿಂದ ತೈಲ ಆಮದು ಮಾಡುತ್ತಿರುವುದಕ್ಕೆ ಅಮೆರಿಕ ವಿರೋಧ ವ್ಯಕ್ತಪಡಿಸಿದ ಬೆನ್ನಲ್ಲೇ, ಭಾರತೀಯ ಸೇನೆ ಅಮೆರಿಕದ ದ್ವೇಧಾಚರಣೆ ವಿರುದ್ಧ ತಿರುಗೇಟು ನೀಡಿದೆ.

ಸೋಷಿಯಲ್ ಮೀಡಿಯಾದಲ್ಲಿ “ಈ ದಿನ ಆ ವರ್ಷ – ಯುದ್ಧದ ನಿರ್ಮಾಣ – 05 ಆಗಸ್ಟ್ 1971” ಎಂಬ ಶೀರ್ಷಿಕೆಯಡಿ ಸೇನೆಯು 1971ರ ಯುದ್ಧದ ಕಾಲದ ಪತ್ರಿಕಾ ಕಟಿಂಗ್‌ ಹಂಚಿಕೊಂಡಿದೆ. 1954ರಿಂದ 1971ರವರೆಗೆ ಅಮೆರಿಕ ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರ ಪೂರೈಸಿದ ಬಗ್ಗೆ ಪೇಪರ್ ಕಟಿಂಗ್‌ ಉಲ್ಲೇಖಿಸುತ್ತಾ, “ಅಮೆರಿಕ ಪಾಕ್ ಪರ ಕೆಲಸ ಮಾಡಿತ್ತಲ್ಲವೆ?” ಎಂದು ಪ್ರಶ್ನಿಸಿದೆ.

ಇದು ಉಕ್ರೇನ್ ವಿರುದ್ಧದ ಯುದ್ಧಕ್ಕೆ ಭಾರತ ಹಣ ಒದಗಿಸುತ್ತಿದೆ ಎಂಬ ಅಮೆರಿಕದ ಆರೋಪಕ್ಕೆ ಪ್ರತಿಕ್ರಿಯೆಯಾಗಿದೆ. ಭಾರತವು ಅಮೆರಿಕ ಮತ್ತು ಯುರೋಪಿಯನ್ ಒಕ್ಕೂಟದ ಟೀಕೆಗಳನ್ನು ‘ಅಸಮರ್ಥನೀಯ ಹಾಗೂ ಅಸಮಂಜಸ’ವೆಂದು ತಿರಸ್ಕರಿಸಿದೆ. ಭಾರತ ತನ್ನ ತೈಲ ನೀತಿಯನ್ನು ಆರ್ಥಿಕ ಶಕ್ತಿಯ ದೃಷ್ಟಿಯಿಂದ ಮುಂದುವರಿಸುತ್ತಿದೆ.

Continue Reading

ದೇಶ

ಸೇನೆ ಕುರಿತ ಹೇಳಿಕೆ: ಸುಪ್ರೀಂ ಕೋರ್ಟ್ ಟೀಕೆಗೆ ಪ್ರಿಯಾಂಕಾ ಗಾಂಧಿಯಿಂದ ಕಠಿಣ ಪ್ರತಿಕ್ರಿಯೆ

ನವದೆಹಲಿ: ಭಾರತೀಯ ಸೇನೆ ಬಗ್ಗೆ ನೀಡಿದ ವಿವಾದಾತ್ಮಕ ಹೇಳಿಕೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದು, ಇದೀಗ ಅವರ ಸಹೋದರಿ ಹಾಗೂ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ತೀವ್ರ ಪ್ರತಿಕ್ರಿಯೆ ನೀಡಿದ್ದಾರೆ.

ರಾಹುಲ್ ಗಾಂಧಿಯ ವಿರುದ್ಧ ಸುಪ್ರೀಂ ಕೋರ್ಟ್ ನೀಡಿದ ಟೀಕೆಗೆ ಪ್ರತಿಕ್ರಿಯಿಸಿ ಪ್ರಿಯಾಂಕಾ ಗಾಂಧಿ,

“ಯಾರು ನಿಜವಾದ ಭಾರತೀಯರು ಎಂಬುದನ್ನು ನಿರ್ಧರಿಸಲು ನ್ಯಾಯಾಧೀಶರು ಯೋಗ್ಯರಲ್ಲ. ರಾಹುಲ್ ಗಾಂಧಿಗೆ ಭಾರತೀಯ ಸೇನೆಯ ಬಗ್ಗೆ ಅಪಾರ ಗೌರವವಿದೆ. ಅವರು ಎಂದಿಗೂ ಸೇನೆಯ ವಿರುದ್ಧ ಕೆಟ್ಟ ಮಾತುಗಳನ್ನು ಮಾತನಾಡಲ್ಲ,” ಎಂದು ತಿಳಿಸಿದ್ದಾರೆ.

ಗಲ್ವಾನ್ ಕಣಿವೆ ಸಂಘರ್ಷ ಕುರಿತು ಮಾತನಾಡಿದ ವೇಳೆ ರಾಹುಲ್ ಗಾಂಧಿ ನೀಡಿದ ಹೇಳಿಕೆಯನ್ನು ಸುಪ್ರೀಂ ಕೋರ್ಟ್ ‘ಅನುಚಿತ’ ಎಂದು ಖಂಡಿಸಿದ್ದು, “ನಿಜವಾದ ಭಾರತೀಯರು ಈ ರೀತಿ ಮಾತನಾಡುವುದಿಲ್ಲ” ಎಂದು ಹೇಳಿದ್ದಾರೆ. ಇದನ್ನು ಪ್ರಿಯಾಂಕಾ ಗಾಂಧಿ ಪ್ರಶ್ನಿಸಿದ್ದು, “ವಿರೋಧ ಪಕ್ಷದ ನಾಯಕರಾಗಿ ಸರ್ಕಾರವನ್ನು ಪ್ರಶ್ನಿಸುವುದು ರಾಹುಲ್ ಅವರ ಕರ್ತವ್ಯ. ನ್ಯಾಯಮೂರ್ತಿಗಳು ಇಂತಹ ಹೇಳಿಕೆ ನೀಡುವುದು ಸರಿಯಲ್ಲ,” ಎಂದಿದ್ದಾರೆ.

ಅದೇ ರೀತಿ, ಪ್ರಿಯಾಂಕಾ ಗಾಂಧಿ ಸರ್ಕಾರದ ನಡೆಗೆ ಶಂಕೆ ವ್ಯಕ್ತಪಡಿಸಿ,

“ರಾಹುಲ್ ಗಾಂಧಿಯ ಪ್ರಶ್ನೆಗಳಿಗೆ ಸರ್ಕಾರದ ಬಳಿ ಉತ್ತರಗಳಿಲ್ಲ. ಅವರು ಚರ್ಚೆಗೆ ತಯಾರಿಲ್ಲ. ಸಂಸತ್ತನ್ನು ಸರಿಯಾಗಿ ನಡೆಸಲಾಗುತ್ತಿಲ್ಲ. ಇದನ್ನೆಲ್ಲಾ ಮರೆಮಾಚಲು ಈ ರೀತಿಯ ತಂತ್ರಗಳನ್ನು ಬಳಸುತ್ತಿದ್ದಾರೆ,” ಎಂದು ವಾಗ್ದಾಳಿ ನಡೆಸಿದ್ದಾರೆ.

Continue Reading

Trending