Connect with us

ಬೆಂಗಳೂರು

ಡಿಕೆಶಿ ವಿರುದ್ಧ ಅವಹೇಳನಕಾರಿ ಪೋಸ್ಟ್: ಜೆಡಿಎಸ್ ಸೋಶಿಯಲ್ ಮೀಡಿಯಾ ತಂಡದ ವಿರುದ್ಧ ಎಫ್‌ಐಆರ್

Published

on

ಬೆಂಗಳೂರು: ಚಾಮುಂಡಿಬೆಟ್ಟ ಹಾಗೂ ಡಿಕೆ ಶಿವಕುಮಾರ್ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ತಪ್ಪು ಮಾಹಿತಿ ಹಾಗೂ ಅವಹೇಳನಕಾರಿ ಪೋಸ್ಟ್ ಹಂಚಿದ್ದಕ್ಕಾಗಿ ಜೆಡಿಎಸ್ ಪಕ್ಷದ ಸೋಶಿಯಲ್ ಮೀಡಿಯಾ ನಿರ್ವಹಣಾ ಸಿಬ್ಬಂದಿಗಳ ವಿರುದ್ಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ವಿವಾದದ ಕೇಂದ್ರ ಬಿಂದುವಾದ ಡಿಕೆಶಿ ಹೇಳಿಕೆ:
ಮುಂಗಾರು ಅಧಿವೇಶನದ ವೇಳೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು “ಚಾಮುಂಡಿಬೆಟ್ಟ ಎಲ್ಲ ಧರ್ಮದವರಿಗೂ ಸೇರಿರುವ ಸಾರ್ವಜನಿಕ ಸ್ಥಳ, ಇದು ಕೇವಲ ಹಿಂದೂಗಳ ಆಸ್ತಿ ಅಲ್ಲ” ಎಂಬ ಹೇಳಿಕೆಯಿಂದ ವಿವಾದ ಉಂಟಾಗಿದೆ.

ಈ ಹೇಳಿಕೆಗೆ ಪ್ರತಿಯಾಗಿ ಜೆಡಿಎಸ್ ತನ್ನ ಅಧಿಕೃತ ಸೋಶಿಯಲ್ ಮೀಡಿಯಾ ಖಾತೆಯಲ್ಲಿ, “ಡಿಕೆಶಿ ಗಂಗಾ ನಾಗವಲ್ಲಿಗಿಂತ ಬೇಗ ಬದಲಾಗುತ್ತಾರೆ” ಎಂಬಂತೆ ವ್ಯಂಗ್ಯಪೂರ್ಣ ಪೋಸ್ಟ್ ಮಾಡಿ, “ಆರ್‌ಎಸ್‌ಎಸ್ ಗೀತೆ ಹಾಡಿದ ಡಿಕೆಶಿ ಇದೀಗ ಪಕ್ಷದ ಹೈಕಮಾಂಡ್ ಮುಂದೆ ಕ್ಷಮೆ ಕೇಳುವ ಇಲಿ ಆಗಿದ್ದಾರೆ” ಎಂಬ ಟಾಂಗ್ ನೀಡಿದ್ದವು.

ಕಾನೂನು ಕ್ರಮ ಆರಂಭ:
ವಕೀಲ ಧನಂಜಯ್ ಅವರು ಹೈಗ್ರೌಂಡ್ಸ್ ಠಾಣೆಗೆ ದೂರು ಸಲ್ಲಿಸಿದ್ದು, ಎಐಸಿಸಿ ಲೆಟರ್‌ಹೆಡ್ ನಕಲು, ಅಸತ್ಯ ಪೋಸ್ಟ್ ಮತ್ತು ಅವಹೇಳನಕಾರಿ ವಿಷಯಗಳ ಆಧಾರದಲ್ಲಿ ತನಿಖೆ ನಡೆಯುತ್ತಿದೆ. ಈ ಹಿನ್ನೆಲೆ, ಜೆಡಿಎಸ್ ಪಕ್ಷದ ಸೋಶಿಯಲ್ ಮೀಡಿಯಾ ತಂಡದ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಜೆಡಿಎಸ್ ವಿರುದ್ಧ ಕಾಂಗ್ರೆಸ್ ಕಿಡಿ:
ಕಾಂಗ್ರೆಸ್ ಮುಖಂಡರು ಜೆಡಿಎಸ್ ಕ್ರಮವನ್ನು ತೀವ್ರವಾಗಿ ಖಂಡಿಸಿದ್ದು, “ವೈಯಕ್ತಿಕ ಹಲ್ಲೆ ಹಾಗೂ ಧಾರ್ಮಿಕ ನಂಬಿಕೆಗೆ ಧಕ್ಕೆಯಾಗುವ ಪ್ರಯತ್ನವಿದು” ಎಂದು ಪ್ರತಿಕ್ರಿಯಿಸಿದ್ದಾರೆ. ಇದೇ ವೇಳೆ “ಜಾತಿ ಸಮತೋಲನ ಭಂಗಗೊಳಿಸುವಂತಹ ವಿವಾದಾತ್ಮಕ ಪೋಸ್ಟ್‌ಗಳು ಸಾರ್ವಜನಿಕ ಶಾಂತಿಗೆ ಅಪಾಯವೆಂದು” ಅವರು ಎಚ್ಚರಿಸಿದ್ದಾರೆ.

ರಾಜಕೀಯವಾಗಿ ಬಿಸಿಮಾಡಿದ ಟ್ವೀಟ್ಸ್:

  • ಸದರದ ನಾಯಕ ಸದನದಲ್ಲಿ ಹುಲಿ, ಹೈಕಮಾಂಡ್ ಮುಂದೆ ಇಲಿ
  • ಡಿಕೆಶಿ ಗಂಗಾ ನಾಗವಲ್ಲಿಗಿಂತ ಬೇಗ ಬದಲಾಗುತ್ತಾರೆ
  • ದೊಡ್ಡವರಿಗೊಂದು ನ್ಯಾಯ, ದಲಿತರಿಗೊಂದು ನ್ಯಾಯ

ದೇಶ

Karnataka SIR : ಮತದಾರರ ಪಟ್ಟಿ ಪರಿಷ್ಕರಣೆ ಬಗ್ಗೆ ಸುಳ್ಳು ಮಾಹಿತಿ? ಕಾಂಗ್ರೆಸ್ ವಿರುದ್ಧ ಬಿಜೆಪಿ ದೂರು ಸಲ್ಲಿಕೆ

Published

on

ಬೆಂಗಳೂರು, ಜು.8: ರಾಜ್ಯದಲ್ಲಿ ನಡೆಯುತ್ತಿರುವ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆ ಕುರಿತು ಕಾಂಗ್ರೆಸ್ ಸುಳ್ಳು ಹಾಗೂ ದಾರಿ ತಪ್ಪಿಸುವ ಮಾಹಿತಿಯನ್ನು ಹರಡುತ್ತಿದೆ ಎಂದು ಆರೋಪಿಸಿರುವ ಕರ್ನಾಟಕ ಬಿಜೆಪಿ, ಈ ಸಂಬಂಧ ರಾಜ್ಯದ ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್ ಅವರಿಗೆ ಅಧಿಕೃತ ದೂರು ಸಲ್ಲಿಸಿದೆ.

ಬಿಜೆಪಿ ನೀಡಿರುವ ದೂರಿನಲ್ಲಿ, ಭಾರತೀಯ ಚುನಾವಣಾ ಆಯೋಗವು ಸಂವಿಧಾನದ ವಿಧಿ 324ರ ಅಡಿಯಲ್ಲಿ ಸ್ಥಾಪಿತವಾದ ಸ್ವತಂತ್ರ ಸಾಂವಿಧಾನಿಕ ಸಂಸ್ಥೆಯಾಗಿದ್ದು, ಮತದಾರರ ಪಟ್ಟಿಯ ಸಿದ್ಧತೆ ಮತ್ತು ಪರಿಷ್ಕರಣೆ ಅದರ ಕಾನೂನುಬದ್ಧ ಕರ್ತವ್ಯವಾಗಿದೆ ಎಂದು ಉಲ್ಲೇಖಿಸಲಾಗಿದೆ. ಜೊತೆಗೆ, ಜನತಾ ಪ್ರಾತಿನಿಧ್ಯ ಕಾಯ್ದೆ, 1950ರ ಸೆಕ್ಷನ್ 15ರ ಅನ್ವಯ ಪ್ರತಿಯೊಂದು ಚುನಾವಣಾ ಕ್ಷೇತ್ರಕ್ಕೂ ಮತದಾರರ ಪಟ್ಟಿಯನ್ನು ಸಿದ್ಧಪಡಿಸುವ ಅಧಿಕಾರ ಆಯೋಗಕ್ಕಿದೆ ಎಂದು ತಿಳಿಸಲಾಗಿದೆ.

ಬಿಜೆಪಿ ಪ್ರಕಾರ, ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆಯ ಉದ್ದೇಶ ಮತದಾರರ ಪಟ್ಟಿಯನ್ನು ನಿಖರವಾಗಿಡುವುದು, ಒಂದಕ್ಕಿಂತ ಹೆಚ್ಚು ಕಡೆ ನೋಂದಣಿಯನ್ನು ತಡೆಯುವುದು, ಮೃತಪಟ್ಟವರ ಹೆಸರನ್ನು ತೆಗೆದುಹಾಕುವುದು ಹಾಗೂ ಅನರ್ಹ ವ್ಯಕ್ತಿಗಳ ಹೆಸರು ಸೇರ್ಪಡೆಯಾಗದಂತೆ ನೋಡಿಕೊಳ್ಳುವುದಾಗಿದೆ.

ಆದರೆ ಕಾಂಗ್ರೆಸ್, ಬಿಜೆಪಿ ಪ್ರೇರಣೆಯಿಂದಲೇ SIR ಪ್ರಕ್ರಿಯೆ ನಡೆಯುತ್ತಿದೆ ಎಂದು ಕರಪತ್ರಗಳು ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ಸುಳ್ಳು ಆರೋಪ ಮಾಡುತ್ತಿದೆ ಎಂದು ಬಿಜೆಪಿ ದೂರಿನಲ್ಲಿ ಹೇಳಿದೆ. ಚುನಾವಣಾ ಆಯೋಗವು ಬಿಜೆಪಿ ಜೊತೆಗೂಡಿ ಮತದಾರರ ಹೆಸರುಗಳನ್ನು ತೆಗೆದುಹಾಕುತ್ತಿದೆ ಎಂಬ ಆರೋಪವು ಆಯೋಗದ ವಿಶ್ವಾಸಾರ್ಹತೆಗೆ ಧಕ್ಕೆ ತರುವ ಪ್ರಯತ್ನವಾಗಿದೆ ಎಂದು ಬಿಜೆಪಿ ವಾದಿಸಿದೆ.

ಇಂತಹ ಸುಳ್ಳು ಮಾಹಿತಿಯಿಂದ ಸಾರ್ವಜನಿಕರಲ್ಲಿ ಆತಂಕ ಉಂಟಾಗುವ ಸಾಧ್ಯತೆ ಇದ್ದು, ಮನೆ-ಮನೆಗೆ ತೆರಳಿ ಮಾಹಿತಿ ಸಂಗ್ರಹಿಸುವ ಚುನಾವಣಾ ಸಿಬ್ಬಂದಿಯ ಸುರಕ್ಷತೆಗೂ ಅಪಾಯ ಎದುರಾಗಬಹುದು ಎಂದು ಬಿಜೆಪಿ ಕಳವಳ ವ್ಯಕ್ತಪಡಿಸಿದೆ. ಹೀಗಾಗಿ ಕಾಂಗ್ರೆಸ್ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು, SIR ಪ್ರಕ್ರಿಯೆಗೆ ಅಡ್ಡಿಪಡಿಸದಂತೆ ಚುನಾವಣಾ ಆಯೋಗ ಕ್ರಮ ವಹಿಸಬೇಕೆಂದು ಬಿಜೆಪಿ ತನ್ನ ದೂರಿನಲ್ಲಿ ಆಗ್ರಹಿಸಿದೆ.

ಸೂಚನೆ: ಈ ಆರೋಪಗಳು ಬಿಜೆಪಿಯ ದೂರಿನಲ್ಲಿರುವ ಅಂಶಗಳಾಗಿದ್ದು, ಕಾಂಗ್ರೆಸ್ ಪಕ್ಷದಿಂದ ಈ ಕುರಿತು ಅಧಿಕೃತ ಪ್ರತಿಕ್ರಿಯೆ ಇನ್ನೂ ಪ್ರಕಟವಾಗಿಲ್ಲ.

Continue Reading

ದೇಶ

‘ನಮಸ್ಕಾರ ಬೆಂಗಳೂರು’ ಎಂದೇ ಕನ್ನಡದಲ್ಲಿ ಮಾತು ಆರಂಭಿಸಿದ ಹುಮಾ ಖುರೇಷಿ; ‘ಟಾಕ್ಸಿಕ್’ ಬಗ್ಗೆ ಕೊಟ್ಟ ಹೊಸ ಅಪ್ಡೇಟ್

Published

on

ಬೆಂಗಳೂರು, ಜು.8: ಬಾಲಿವುಡ್‌ನ ಖ್ಯಾತ ನಟಿ ಹುಮಾ ಖುರೇಷಿ ಬೆಂಗಳೂರಿಗೆ ಭೇಟಿ ನೀಡಿ ತಮ್ಮ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ‘ಟಾಕ್ಸಿಕ್’ ಹಾಗೂ ತಮ್ಮದೇ ನಿರ್ಮಾಣದ ‘ಬೇಬಿ ಡು ಡೈ ಡು’ ಚಿತ್ರದ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದರು. “ನಮಸ್ಕಾರ ಬೆಂಗಳೂರು… ಅಲ್ಪ ಸ್ವಲ್ಪ ಕನ್ನಡ ಗೊತ್ತು” ಎಂದು ಕನ್ನಡದಲ್ಲೇ ಮಾತು ಆರಂಭಿಸಿದ ಅವರು, ನೆರೆದಿದ್ದವರಿಂದ ಭರ್ಜರಿ ಚಪ್ಪಾಳೆ ಗಳಿಸಿದರು.

ತಮ್ಮ ಸಹೋದರ ಸಾಕಿಬ್ ಸಲೀಮ್ ಅವರೊಂದಿಗೆ ನಿರ್ಮಿಸಿರುವ ‘ಬೇಬಿ ಡು ಡೈ ಡು’ ಚಿತ್ರದ ಪ್ರಚಾರಕ್ಕಾಗಿ ಬೆಂಗಳೂರಿಗೆ ಬಂದಿದ್ದ ಹುಮಾ, ಸ್ಯಾಂಡಲ್‌ವುಡ್ ಸೂಪರ್‌ಸ್ಟಾರ್ ಯಶ್ ಹಾಗೂ ನಿರ್ದೇಶಕಿ ಗೀತೂ ಮೋಹನ್ ದಾಸ್ ಅವರಿಗೆ ವಿಶೇಷ ಧನ್ಯವಾದ ಸಲ್ಲಿಸಿದರು. “ನಮ್ಮ ಸಣ್ಣ ಬಜೆಟ್ ಚಿತ್ರದ ಬಗ್ಗೆ ಯಶ್ ಮತ್ತು ಗೀತೂ ಮೋಹನ್ ದಾಸ್ ಸಾಮಾಜಿಕ ಜಾಲತಾಣಗಳಲ್ಲಿ ಸ್ಟೋರಿ ಹಂಚಿಕೊಂಡಿದ್ದರು. ಅವರ ಬೆಂಬಲದಿಂದ ಬೆಂಗಳೂರಿನಲ್ಲಿ ಚಿತ್ರದ ಬಗ್ಗೆ ದೊಡ್ಡ ಮಟ್ಟದ ಪ್ರಚಾರ ದೊರೆತು, ಪ್ರದರ್ಶನಗಳ ಸಂಖ್ಯೆಯೂ ಹೆಚ್ಚಾಯಿತು” ಎಂದು ಹೇಳಿದರು.

‘ಗ್ಯಾಂಗ್ಸ್ ಆಫ್ ವಾಸಿಪುರ್’ ಖ್ಯಾತಿಯ ಹುಮಾ, ‘ಬೇಬಿ ಡು ಡೈ ಡು’ ಚಿತ್ರದಲ್ಲಿ ಕಿವುಡ ಮತ್ತು ಮೂಗಿಯಾದ ಹಿಟ್‌ವುಮನ್ ‘ಬೇಬಿ ಕರ್ಮಾಕರ್’ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಈ ಪಾತ್ರಕ್ಕಾಗಿ ಸನ್ನೆ ಭಾಷೆಯ ತಜ್ಞರಿಂದ ವಿಶೇಷ ತರಬೇತಿ ಪಡೆದಿದ್ದು, ವಿಶೇಷ ಮಕ್ಕಳ ಶಾಲೆಗಳಿಗೆ ಭೇಟಿ ನೀಡಿ ಅವರೊಂದಿಗೆ ಸಮಯ ಕಳೆದಿರುವುದಾಗಿ ತಿಳಿಸಿದರು. ಪ್ರೇಕ್ಷಕರಿಗೆ ಸುಲಭವಾಗಿ ಅರ್ಥವಾಗುವಂತೆ ಸಾರ್ವತ್ರಿಕ ಸನ್ನೆ ಭಾಷೆಯನ್ನು ಚಿತ್ರದಲ್ಲಿ ಬಳಸಲಾಗಿದೆ ಎಂದರು.

ಇದೇ ವೇಳೆ ಯಶ್ ಅಭಿನಯದ ‘ಟಾಕ್ಸಿಕ್’ ಚಿತ್ರದ ಕುರಿತು ಮಾತನಾಡಿದ ಹುಮಾ, “ಇಡೀ ಜಗತ್ತೇ ಈ ಚಿತ್ರದ ಬಿಡುಗಡೆಗಾಗಿ ಕಾತುರದಿಂದ ಕಾಯುತ್ತಿದೆ. ಯಶ್ ದೇಶದ ಅತ್ಯಂತ ದೊಡ್ಡ ಸೂಪರ್‌ಸ್ಟಾರ್‌ಗಳಲ್ಲಿ ಒಬ್ಬರು. ಅವರೊಂದಿಗೆ ಕೆಲಸ ಮಾಡುವುದರಿಂದ ಪ್ರತಿದಿನ ಹೊಸದನ್ನು ಕಲಿಯುತ್ತಿದ್ದೇನೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಸಿನಿಮಾ ಶೀಘ್ರದಲ್ಲೇ ಬಿಡುಗಡೆಯಾಗಲಿದ್ದು, ಅಭಿಮಾನಿಗಳು ಸ್ವಲ್ಪ ತಾಳ್ಮೆಯಿಂದ ಕಾಯಬೇಕು ಎಂದು ಅವರು ಮನವಿ ಮಾಡಿದರು.

Continue Reading

ದೇಶ

ಮದ್ಯಪ್ರಿಯರಿಂದ ಸರ್ಕಾರಕ್ಕೆ ಬಂಪರ್ ಆದಾಯ: ಬಿಯರ್ ಬೆಲೆ ಇಳಿಕೆ, ಮಾರಾಟ ಏರಿಕೆ

Published

on

ಬೆಂಗಳೂರು: ರಾಜ್ಯ ಸರ್ಕಾರ ಜಾರಿಗೆ ತಂದಿರುವ ‘ಆಲ್ಕೋಹಾಲ್ ಇನ್ ಬಿವರೇಜ್ (AIB)’ ಆಧಾರಿತ ಹೊಸ ತೆರಿಗೆ ವ್ಯವಸ್ಥೆಯು ಅಬಕಾರಿ ಇಲಾಖೆಯ ಆದಾಯದಲ್ಲಿ ಗಮನಾರ್ಹ ಏರಿಕೆಗೆ ಕಾರಣವಾಗಿದೆ. ಮದ್ಯದಲ್ಲಿರುವ ಆಲ್ಕೋಹಾಲ್ ಪ್ರಮಾಣವನ್ನು ಆಧರಿಸಿ ತೆರಿಗೆ ವಿಧಿಸುವ ಈ ಹೊಸ ನೀತಿಯ ಪರಿಣಾಮವಾಗಿ ಲಘು ಆಲ್ಕೋಹಾಲ್ ಹೊಂದಿರುವ ಬಿಯರ್‌ಗಳ ಮಾರಾಟ ಹೆಚ್ಚಾಗಿದ್ದು, ಸರ್ಕಾರದ ಆದಾಯವೂ ಹೊಸ ದಾಖಲೆ ಬರೆದಿದೆ.

ಅಬಕಾರಿ ಇಲಾಖೆಯ ಅಂಕಿಅಂಶಗಳ ಪ್ರಕಾರ, ಏಪ್ರಿಲ್‌ನಿಂದ ಜೂನ್‌ವರೆಗಿನ ಮೊದಲ ತ್ರೈಮಾಸಿಕದಲ್ಲೇ ಸರ್ಕಾರಕ್ಕೆ ಒಟ್ಟು ₹10,599.29 ಕೋಟಿ ಅಬಕಾರಿ ಆದಾಯ ಸಂಗ್ರಹವಾಗಿದೆ. ಇದು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ 14.39ರಷ್ಟು ಹೆಚ್ಚಳವಾಗಿದೆ.

ಬಿಯರ್ ಮಾರಾಟದಿಂದ ಮಾತ್ರ ₹1,914.81 ಕೋಟಿ ಆದಾಯ ಬಂದಿದ್ದು, ಕಳೆದ ವರ್ಷದ ಇದೇ ಅವಧಿಗಿಂತ ₹312.67 ಕೋಟಿ ಹೆಚ್ಚುವರಿ ಆದಾಯ ದಾಖಲಾಗಿದೆ. ಭಾರತೀಯ ಮದ್ಯ (IML) ಮಾರಾಟದಿಂದ ₹8,394.32 ಕೋಟಿ ಆದಾಯ ಹರಿದುಬಂದಿದೆ.

ಹೊಸ ತೆರಿಗೆ ವ್ಯವಸ್ಥೆಯಿಂದ ಕಡಿಮೆ ಆಲ್ಕೋಹಾಲ್ ಹೊಂದಿರುವ ಪ್ರೀಮಿಯಂ ಲಾಗರ್ ಬಿಯರ್‌ಗಳ ಬೆಲೆ ಇಳಿಕೆಯಾಗಿರುವುದು ಗ್ರಾಹಕರ ಖರೀದಿ ಹೆಚ್ಚಲು ಕಾರಣವಾಗಿದೆ. ವ್ಯಾಪಾರಿಗಳ ಪ್ರಕಾರ, ಕಳೆದ ಕೆಲವು ವಾರಗಳಲ್ಲಿ ಬಿಯರ್ ಮಾರಾಟದಲ್ಲಿ ಗಣನೀಯ ಏರಿಕೆ ಕಂಡುಬಂದಿದ್ದು, ದಾಸ್ತಾನು ವೇಗವಾಗಿ ಖಾಲಿಯಾಗಿದೆ.

ರಾಜ್ಯ ಸರ್ಕಾರ ಪ್ರಸಕ್ತ ಆರ್ಥಿಕ ವರ್ಷದಲ್ಲಿ ₹45,000 ಕೋಟಿ ಅಬಕಾರಿ ಆದಾಯ ಸಂಗ್ರಹಿಸುವ ಗುರಿ ಹೊಂದಿದೆ. ಇದರ ಭಾಗವಾಗಿ ಬಳಕೆಯಾಗದೆ ಉಳಿದಿರುವ 483 ಚಿಲ್ಲರೆ ಮದ್ಯದ ಅಂಗಡಿ (CL-2A) ಹಾಗೂ 96 ಬಾರ್ (CL-9A) ಪರವಾನಗಿಗಳನ್ನು ಇದೇ ತಿಂಗಳ ಕೊನೆಯಲ್ಲಿ ಆನ್‌ಲೈನ್ ಹರಾಜು ಮೂಲಕ ವಿತರಿಸಲು ಇಲಾಖೆ ಯೋಜನೆ ರೂಪಿಸಿದೆ. ಈ ಪರವಾನಗಿಗಳನ್ನು ಐದು ವರ್ಷಗಳ ಅವಧಿಗೆ ನೀಡಲಾಗಲಿದ್ದು, ಇದರಿಂದ ಸರ್ಕಾರದ ಆದಾಯ ಮತ್ತಷ್ಟು ಹೆಚ್ಚುವ ನಿರೀಕ್ಷೆಯಿದೆ.

ಹಣಕಾಸು ಇಲಾಖೆ ಅಧಿಕಾರಿಗಳ ಪ್ರಕಾರ, ಹೊಸ AIB ತೆರಿಗೆ ನೀತಿಯ ಉದ್ದೇಶ ಹೆಚ್ಚಿನ ಆಲ್ಕೋಹಾಲ್ ಹೊಂದಿರುವ ಪಾನೀಯಗಳ ಬಳಕೆಯನ್ನು ಕಡಿಮೆ ಮಾಡಿ, ಕಡಿಮೆ ಆಲ್ಕೋಹಾಲ್ ಹೊಂದಿರುವ ಪಾನೀಯಗಳ ಬಳಕೆಗೆ ಉತ್ತೇಜನ ನೀಡುವುದಾಗಿದೆ.

Continue Reading

Trending