ಬೆಂಗಳೂರು
ಡಿಕೆಶಿ–ಖರ್ಗೆ ಮಧ್ಯೆ ರಹಸ್ಯ ಮಾತುಕತೆ: ನವೆಂಬರ್ ಕ್ರಾಂತಿ ಚರ್ಚೆಗೆ ಹೊಸ ತಿರುವು!
ಬೆಂಗಳೂರು: ರಾಜ್ಯ ರಾಜಕೀಯದಲ್ಲಿ “ನವಂಬರ್ ಕ್ರಾಂತಿ” ಕುರಿತ ಚರ್ಚೆಗಳು ತೀವ್ರಗೊಂಡಿವೆ. ಪವರ್ ಶೇರಿಂಗ್, ಸಂಪುಟ ಪುನರ್‌ರಚನೆ ಸೇರಿದಂತೆ ಹಲವು ಅಂದಾಜುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ. ಈ ನಡುವೆ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ತಡರಾತ್ರಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರನ್ನು ಭೇಟಿಯಾಗಿ ಮಹತ್ವದ ಚರ್ಚೆ ನಡೆಸಿದ್ದಾರೆ.
ಸದಾಶಿವನಗರದಲ್ಲಿರುವ ಖರ್ಗೆ ಅವರ ನಿವಾಸದಲ್ಲಿ ನಡೆದ ಈ ಭೇಟಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ನಡೆದಿದ್ದು, ಸಂಪುಟ ಬದಲಾವಣೆ ಕುರಿತ ಹೈಕಮಾಂಡ್ ತಂತ್ರ, ಪಕ್ಷದ ಒಳಗಿನ ಅಸಮಾಧಾನ ಹಾಗೂ ಮುಂದಿನ ರಾಜಕೀಯ ಸಮೀಕರಣಗಳ ಬಗ್ಗೆ ಚರ್ಚೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.
ಚರ್ಚೆಯಲ್ಲಿ ಖರ್ಗೆ ಅವರು ಡಿಕೆಶಿಗೆ “ಪಕ್ಷ ನಿಷ್ಠೆ ಮತ್ತು ಹೈಕಮಾಂಡ್ ನಿಷ್ಠೆ ವ್ಯರ್ಥವಾಗುವುದಿಲ್ಲ, ಸೂಕ್ತ ಸಮಯದಲ್ಲಿ ಪ್ರತಿಫಲ ಸಿಗುತ್ತದೆ” ಎಂಬ ಭರವಸೆ ನೀಡಿದ್ದಾರೆ ಎನ್ನಲಾಗಿದೆ. ಹೈಕಮಾಂಡ್ ಈಗಾಗಲೇ ರಾಜ್ಯದ ಬೆಳವಣಿಗೆಗಳನ್ನ ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಬಿಹಾರ ಚುನಾವಣೆಯ ನಂತರ ಪ್ರಮುಖ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.
ಸಂಪುಟ ಪುನರ್‌ರಚನೆಗೆ 17-18 ಸಚಿವರನ್ನು ಕೈಬಿಟ್ಟು ಪ್ರಾದೇಶಿಕ ಸಮಾನತೆ, ಶಾಸಕರ ಹಿರಿತನ, ಜಾತಿ ಲೆಕ್ಕಾಚಾರ ಮತ್ತು ಸ್ಥಳೀಯ ನಾಯಕತ್ವ ಆಧಾರದಲ್ಲಿ ಹೊಸ ಮುಖಗಳಿಗೆ ಅವಕಾಶ ನೀಡುವ ಯೋಜನೆಯೂ ಇದೆ ಎಂದು ತಿಳಿದುಬಂದಿದೆ.
ಹೀಗಾಗಿ ನವೆಂಬರ್ ಕ್ರಾಂತಿ ಚರ್ಚೆಗಿಂತ, ಈ ಖರ್ಗೆ–ಡಿಕೆಶಿ ಮಾತುಕತೆ ರಾಜ್ಯ ರಾಜಕೀಯದ ಭವಿಷ್ಯ ತೀರ್ಮಾನಿಸುವ ಪ್ರಮುಖ ಹಂತವಾಗಿ ಪರಿಗಣಿಸಲಾಗಿದೆ.
ದೇಶ
ಬೆಂಗಳೂರು ರಸ್ತೆಗಳಿಗೆ 2000 ಕೋಟಿ ರೂ.: ಹೊಸ ಸಿಎಂನ ಮೊದಲ ದೊಡ್ಡ ನಿರ್ಧಾರ
ಬೆಂಗಳೂರು: ರಾಜ್ಯದ ನೂತನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ನಡೆದ ಮೊದಲ ಸಚಿವ ಸಂಪುಟ ಸಭೆಯಲ್ಲೇ ಜನಸಾಮಾನ್ಯರು, ವಿದ್ಯಾರ್ಥಿಗಳು, ಉದ್ಯೋಗಾಕಾಂಕ್ಷಿಗಳು ಹಾಗೂ ನಿವೇಶನದಾರರಿಗೆ ಭರ್ಜರಿ ಸಿಹಿಸುದ್ದಿ ನೀಡಲಾಗಿದೆ. ಹೊಸ ಸರ್ಕಾರ ತನ್ನ ಮೊದಲ ಸಭೆಯಲ್ಲೇ ಆರು ಮಹತ್ವದ ಜನಪರ ತೀರ್ಮಾನಗಳನ್ನು ಕೈಗೊಂಡಿದ್ದು, ರಾಜ್ಯದ ಅಭಿವೃದ್ಧಿಗೆ ಹೊಸ ದಿಕ್ಕು ತೋರಿಸುವ ಪ್ರಯತ್ನ ಮಾಡಿದೆ.
ವಿಧಾನಸೌಧದಲ್ಲಿ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಡಿ.ಕೆ. ಶಿವಕುಮಾರ್, ರಾಜ್ಯದ ಜನರ ಆಶೋತ್ತರಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಹಲವು ಕ್ರಾಂತಿಕಾರಿ ಯೋಜನೆಗಳನ್ನು ಘೋಷಿಸಿದರು. ವಿದ್ಯಾರ್ಥಿಗಳ ಬೇಡಿಕೆಗೆ ಸ್ಪಂದಿಸಿ ರಾಜ್ಯದ ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಶಾಲೆ, ಪಿಯುಸಿ, ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡಲು ತೀರ್ಮಾನಿಸಲಾಗಿದೆ. ಈ ಯೋಜನೆಯಿಂದ ಲಕ್ಷಾಂತರ ವಿದ್ಯಾರ್ಥಿಗಳಿಗೆ ನೆರವಾಗಲಿದ್ದು, ಸರ್ಕಾರಕ್ಕೆ ವಾರ್ಷಿಕ 250 ಕೋಟಿ ರೂ. ಹೆಚ್ಚುವರಿ ವೆಚ್ಚವಾಗಲಿದೆ.
ಯುವಜನರ ಉದ್ಯೋಗ ಸಮಸ್ಯೆ ಪರಿಹರಿಸಲು ಖಾಸಗಿ ಉದ್ಯೋಗ ವಿನಿಮಯ ಕೇಂದ್ರ (Private Employment Exchange) ಸ್ಥಾಪನೆಗೂ ಸರ್ಕಾರ ಮುಂದಾಗಿದೆ. ಖಾಸಗಿ ಕಂಪನಿಗಳ ಅಗತ್ಯಗಳಿಗೆ ಅನುಗುಣವಾಗಿ ಯುವಕರಿಗೆ ತರಬೇತಿ ನೀಡಿ ಉದ್ಯೋಗಾವಕಾಶ ಕಲ್ಪಿಸುವ ಯೋಜನೆ ರೂಪಿಸಲಾಗುತ್ತಿದೆ.
ಇದೇ ವೇಳೆ ರಾಜ್ಯದಾದ್ಯಂತ 10,000 ‘ಭಾರತ ಜೋಡೋ ಯುವಕರ ಸಂಘ’ಗಳನ್ನು ರಚಿಸುವುದಾಗಿ ಘೋಷಿಸಲಾಗಿದೆ. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಯುವಕರ ನಾಯಕತ್ವ, ಕ್ರೀಡೆ ಹಾಗೂ ಸಾಮಾಜಿಕ ಸಾಮರಸ್ಯ ಬೆಳೆಸುವ ಉದ್ದೇಶದಿಂದ ಪ್ರತಿ ಸಂಘಕ್ಕೆ 10 ಲಕ್ಷ ರೂ. ಅನುದಾನ ನೀಡಲಾಗುತ್ತದೆ.
ಬೆಂಗಳೂರು ಸೇರಿದಂತೆ ರಾಜ್ಯದ ನಿವೇಶನದಾರರಿಗೆ ಮತ್ತೊಂದು ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. 2,500 ಚದರ ಅಡಿವರೆಗಿನ ನಿವೇಶನಗಳಲ್ಲಿ ನಿರ್ಮಿಸಿರುವ ಕಟ್ಟಡಗಳಿಗೆ ಒಸಿ ಮತ್ತು ಸಿಸಿ ಪಡೆಯುವುದರಿಂದ ವಿನಾಯಿತಿ ನೀಡಲಾಗುತ್ತದೆ. ಜೊತೆಗೆ ಬಿ ಖಾತಾವನ್ನು ಎ ಖಾತಾಗೆ ಪರಿವರ್ತಿಸುವ ಅಭಿಯಾನವನ್ನು ರಾಜ್ಯಾದ್ಯಂತ ವಿಸ್ತರಿಸಲು ತೀರ್ಮಾನಿಸಲಾಗಿದೆ.
ಬೆಂಗಳೂರು ನಗರದ ರಸ್ತೆ ಸಮಸ್ಯೆ ನಿವಾರಣೆಗೆ 2,000 ಕೋಟಿ ರೂ. ಬಿಡುಗಡೆ ಮಾಡಲು ಸಚಿವ ಸಂಪುಟ ಅನುಮೋದನೆ ನೀಡಿದ್ದು, ರಸ್ತೆ ಡಾಂಬರೀಕರಣ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದು ಸಿಎಂ ತಿಳಿಸಿದ್ದಾರೆ.
ದೇಶ
ಸಿಎಂ ಪ್ರಮಾಣವಚನಕ್ಕೂ ಮುನ್ನ ರಾಹುಲ್ ಗಾಂಧಿಗೆ ಕೈಮುಗಿದ ಡಿಕೆ ಶಿವಕುಮಾರ್; ವೇದಿಕೆಯಲ್ಲಿ ಗಮನ ಸೆಳೆದ ಅಪರೂಪದ ಕ್ಷಣ
ಬೆಂಗಳೂರು: ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ D. K. Shivakumar ಅವರ ಸರಳತೆ ಮತ್ತು ನಮ್ರತೆ ಮತ್ತೊಮ್ಮೆ ಸಾರ್ವಜನಿಕರ ಗಮನ ಸೆಳೆದಿದೆ. ಪ್ರಮಾಣವಚನ ಸಮಾರಂಭ ಆರಂಭವಾಗುವ ಮುನ್ನವೇ ವೇದಿಕೆಯಲ್ಲಿದ್ದ ಕಾಂಗ್ರೆಸ್ ನಾಯಕ Rahul Gandhi ಅವರಿಗೆ ಡಿಕೆ ಶಿವಕುಮಾರ್ ಕೈಮುಗಿದು ಗೌರವ ಸಲ್ಲಿಸಿದ ದೃಶ್ಯ ವಿಶೇಷ ಚರ್ಚೆಗೆ ಕಾರಣವಾಗಿದೆ.
ಸಿಎಂ ಹುದ್ದೆಯ ಸಂತಸದಲ್ಲಿದ್ದರೂ ಅತ್ಯಂತ ವಿನಯದಿಂದ ರಾಹುಲ್ ಗಾಂಧಿ ಅವರತ್ತ ಮುಖ ಮಾಡಿ ಕೈಮುಗಿದ ಡಿಕೆ ಶಿವಕುಮಾರ್, ಕೆಲ ಕ್ಷಣ ಅವರೊಂದಿಗೆ ಮಾತುಕತೆ ನಡೆಸಿದರು. ಇದಕ್ಕೆ ರಾಹುಲ್ ಗಾಂಧಿ ಕೂಡ ಮುಗುಳ್ನಗೆಯೊಂದಿಗೆ ಪ್ರತಿಕ್ರಿಯಿಸಿದ ದೃಶ್ಯ ಕಾರ್ಯಕ್ರಮದಲ್ಲಿ ನೆರೆದಿದ್ದವರ ಗಮನ ಸೆಳೆಯಿತು.
ಈ ವೇಳೆ ಡಿಕೆ ಶಿವಕುಮಾರ್ ಅವರ ಪಕ್ಕದಲ್ಲೇ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ Mallikarjun Kharge ಉಪಸ್ಥಿತರಿದ್ದರು. ವೇದಿಕೆಯ ಮೇಲೆ ಮೂವರು ನಾಯಕರು ಪರಸ್ಪರ ಆತ್ಮೀಯವಾಗಿ ಸಂವಾದ ನಡೆಸಿದ ಕ್ಷಣ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಉತ್ಸಾಹ ಮೂಡಿಸಿತು.
ಲೋಕಭವನದ ಗಾಜಿನ ಮನೆಯಲ್ಲಿ ನಡೆದ ಪ್ರಮಾಣವಚನ ಸಮಾರಂಭದಲ್ಲಿ ಸಾವಿರಾರು ಕಾರ್ಯಕರ್ತರು, ಪಕ್ಷದ ಹಿರಿಯ ನಾಯಕರು ಹಾಗೂ ವಿವಿಧ ರಾಜ್ಯಗಳ ಗಣ್ಯರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಕಂಡುಬಂದ ಡಿಕೆ ಶಿವಕುಮಾರ್ ಅವರ ವಿನಯಪೂರ್ವಕ ನಡೆ ಸಾಮಾಜಿಕ ಜಾಲತಾಣಗಳಲ್ಲಿಯೂ ವೈರಲ್ ಆಗುತ್ತಿದೆ.
ರಾಜಕೀಯ ವಲಯದಲ್ಲಿ ಈ ದೃಶ್ಯವನ್ನು ಕಾಂಗ್ರೆಸ್ ಪಕ್ಷದ ನಾಯಕತ್ವದ ಮೇಲಿನ ಗೌರವ ಮತ್ತು ಸಂಘಟನೆಯೊಳಗಿನ ಒಗ್ಗಟ್ಟಿನ ಸಂಕೇತವೆಂದು ವಿಶ್ಲೇಷಿಸಲಾಗುತ್ತಿದೆ. ರಾಜ್ಯದಲ್ಲಿ ಹೊಸ ಸರ್ಕಾರದ ಆಡಳಿತ ಆರಂಭವಾಗುತ್ತಿರುವ ಹೊತ್ತಿನಲ್ಲಿ ಹಿರಿಯ ನಾಯಕರ ನಡುವಿನ ಈ ಪರಸ್ಪರ ಗೌರವದ ಪ್ರದರ್ಶನ ಕಾಂಗ್ರೆಸ್ ಕಾರ್ಯಕರ್ತರಿಗೆ ಹೊಸ ಉತ್ಸಾಹ ತುಂಬಿದೆ.
ದೇಶ
ಕರ್ನಾಟಕದ ನೂತನ ಸಿಎಂ ಆಗಿ ಡಿಕೆ ಶಿವಕುಮಾರ್ ಪ್ರಮಾಣವಚನ; ಸಂವಿಧಾನ ಪುಸ್ತಕ ಹಿಡಿದು ಅಧಿಕಾರ ಸ್ವೀಕಾರ
ಬೆಂಗಳೂರು: ತಳಮಟ್ಟದ ಹೋರಾಟದಿಂದ ಕಾಂಗ್ರೆಸ್ ಪಕ್ಷವನ್ನು ಸಂಘಟಿಸಿ ಬೆಳೆಸಿದ ಕನಕಪುರ ಬಂಡೆ D. K. Shivakumar ಅವರು ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ. ಬೆಂಗಳೂರಿನ ಲೋಕಭವನದ ಗಾಜಿನ ಮನೆಯಲ್ಲಿ ಇಂದು ಸಂಜೆ ನಡೆದ ಅದ್ದೂರಿ ಸಮಾರಂಭದಲ್ಲಿ ರಾಜ್ಯಪಾಲ Thawar Chand Gehlot ಅವರು ಡಿಕೆ ಶಿವಕುಮಾರ್ ಅವರಿಗೆ ಪದ ಮತ್ತು ಗೌಪ್ಯತೆಯ ಪ್ರಮಾಣವಚನ ಬೋಧಿಸಿದರು.
ಪ್ರಮಾಣವಚನ ಸ್ವೀಕರಿಸುವ ವೇಳೆ ಡಿಕೆ ಶಿವಕುಮಾರ್ ಅವರು ಸಂವಿಧಾನ ಪುಸ್ತಕವನ್ನು ಕೈಯಲ್ಲಿ ಹಿಡಿದು, ತಮ್ಮ ಆರಾಧ್ಯ ದೈವ ವೀರ ಗಂಗಾಧರ ಅಜ್ಜನ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಈ ವಿಶೇಷ ಕ್ಷಣ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿತ್ತು.
ವೇದಿಕೆಗೆ ಆಗಮಿಸಿದ ಡಿಕೆ ಶಿವಕುಮಾರ್ ಅವರು ಪ್ರಮಾಣವಚನಕ್ಕೂ ಮುನ್ನ ನೆಲಕ್ಕೆ ಅಡ್ಡ ಬಿದ್ದು ನಮಸ್ಕರಿಸಿದರು. ಬಳಿಕ ವೀರ ಗಂಗಾಧರ ಅಜ್ಜನವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಆಶೀರ್ವಾದ ಕೋರಿದರು. ಅವರ ಈ ನಡೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಗಣ್ಯರು ಹಾಗೂ ಕಾರ್ಯಕರ್ತರ ಗಮನ ಸೆಳೆಯಿತು.
ರಾಜಕೀಯವಾಗಿ ಮಹತ್ವದ ಈ ಕ್ಷಣಕ್ಕೆ ಜ್ಯೋತಿಷ್ಯ ಮತ್ತು ಸಂಖ್ಯಾಶಾಸ್ತ್ರದ ಹಿನ್ನೆಲೆಯಲ್ಲಿ ವಿಶೇಷ ಮುಹೂರ್ತ ನಿಗದಿಪಡಿಸಲಾಗಿತ್ತು ಎಂಬ ಚರ್ಚೆಯೂ ಕೇಳಿಬಂದಿದೆ. ತುಲಾ ಲಗ್ನದಲ್ಲಿ ನಡೆದ ಪ್ರಮಾಣವಚನ ಕಾರ್ಯಕ್ರಮವು ಶುಭಯೋಗದಲ್ಲಿ ನೆರವೇರಿದೆ ಎಂದು ಜ್ಯೋತಿಷ್ಯ ವಲಯಗಳು ಅಭಿಪ್ರಾಯ ವ್ಯಕ್ತಪಡಿಸಿವೆ.
ಡಿಕೆ ಶಿವಕುಮಾರ್ ನೇತೃತ್ವದ ಹೊಸ ಸರ್ಕಾರ ರಾಜ್ಯದ ಅಭಿವೃದ್ಧಿ, ಮೂಲಸೌಕರ್ಯ, ಹೂಡಿಕೆ ಹಾಗೂ ಜನಪರ ಆಡಳಿತಕ್ಕೆ ಹೆಚ್ಚಿನ ಒತ್ತು ನೀಡಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ. ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಬೆಂಬಲಿಗರು ರಾಜ್ಯದಾದ್ಯಂತ ಸಂಭ್ರಮಾಚರಣೆ ನಡೆಸಿ ಹೊಸ ನಾಯಕತ್ವವನ್ನು ಸ್ವಾಗತಿಸಿದ್ದಾರೆ.
-
ದೇಶ23 hours agoಆತ್ಮೀಯ ಆಲಿಂಗನದಿಂದ ಗಮನ ಸೆಳೆದ ಡಿಕೆಶಿ ಮತ್ತು ಯಡಿಯೂರಪ್ಪ
-
ದೇಶ23 hours agoಡಿಕೆಶಿ ಕ್ಯಾಬಿನೆಟ್ ಘೋಷಣೆ: ಪರಮೇಶ್ವರ್ ಡಿಸಿಎಂ, ಪ್ರಿಯಾಂಕ್ಗೆ ಗೃಹ ಖಾತೆ
-
ದೇಶ19 hours agoಸಿಎಂ ಪ್ರಮಾಣವಚನಕ್ಕೂ ಮುನ್ನ ರಾಹುಲ್ ಗಾಂಧಿಗೆ ಕೈಮುಗಿದ ಡಿಕೆ ಶಿವಕುಮಾರ್; ವೇದಿಕೆಯಲ್ಲಿ ಗಮನ ಸೆಳೆದ ಅಪರೂಪದ ಕ್ಷಣ
-
ದೇಶ23 hours agoGBA : ‘1 ಕಿಲೋಮೀಟರ್ ಚಾಲೆಂಜ್’ಗೆ ನೆಟ್ಟಿಗರ ಆಕ್ರೋಶ; “ಮೊದಲು ಫುಟ್ಪಾತ್ ಸರಿಪಡಿಸಿ”
-
ದೇಶ19 hours agoಕರ್ನಾಟಕದ ನೂತನ ಸಿಎಂ ಆಗಿ ಡಿಕೆ ಶಿವಕುಮಾರ್ ಪ್ರಮಾಣವಚನ; ಸಂವಿಧಾನ ಪುಸ್ತಕ ಹಿಡಿದು ಅಧಿಕಾರ ಸ್ವೀಕಾರ
-
ಅಪರಾಧ23 hours agoದೆಹಲಿ ರೆಸ್ಟೋರೆಂಟ್ನಲ್ಲಿ ಭೀಕರ ಅಗ್ನಿ ಅವಘಡ; 10 ಮಂದಿ ಸಾವು, ಹಲವರ ರಕ್ಷಣೆ
-
ದೇಶ20 hours agoಭಾರತ ಸೇರಿ 60 ದೇಶಗಳ ಮೇಲೆ ಹೊಸ ಸುಂಕದ ಅಸ್ತ್ರ? ಟ್ರಂಪ್ ಆಡಳಿತದ ಹೊಸ ಪ್ರಸ್ತಾಪದಿಂದ ಜಾಗತಿಕ ವ್ಯಾಪಾರ ವಲಯದಲ್ಲಿ ಸಂಚಲನ
-
ದೇಶ1 hour agoಬೆಂಗಳೂರು ರಸ್ತೆಗಳಿಗೆ 2000 ಕೋಟಿ ರೂ.: ಹೊಸ ಸಿಎಂನ ಮೊದಲ ದೊಡ್ಡ ನಿರ್ಧಾರ
