ಸೋಶಿಯಲ್ ಮೀಡಿಯಾ
ಗೋ ಹತ್ಯೆ ಹೇಳಿಕೆ:ಇಸ್ಕಾನ್ ಸಮಿತಿಯಿಂದ ಮನೇಕಾ ಗಾಂಧಿಗೆ 100 ಕೋಟಿ ರೂ.ಮಾನನಷ್ಟ ಮೊಕದ್ದಮೆ ನೋಟಿಸ್!
ಒಂದು ತಿಂಗಳ ಹಿಂದೆ ನಡೆದ ಸಂದರ್ಶನದ ಒಂದು ತುಣುಕು ಮೇನಕಾ ಗಾಂಧಿ ಒಂದು ತಿಂಗಳ ಹಿಂದೆ ಸಂದರ್ಶನವೊಂದರಲ್ಲಿ ನೀಡಿದ್ದ ಹೇಳಿಕೆ ಈಗ ವೈರಲ್ ಆಗುತ್ತಿದೆ.ಆ ವೀಡಿಯೊದಲ್ಲಿ ಮೇನಕಾ ಗಾಂಧಿ ಅವರು ಇಸ್ಕಾನ್ ಹಸುಗಳನ್ನು ಕಟುಕರಿಗೆ ಮಾರುತ್ತಿದ್ದಾರೆ ಎಂಬ ಗಂಭೀರ ಆರೋಪ ಮಾಡಿದ್ದರು. ಅಷ್ಟೇ ಅಲ್ಲ, ಇಸ್ಕಾನ್ ದೇಶದ ಅತಿ ದೊಡ್ಡ ಮೋಸದ ಸಂಸ್ಥೆ ಎಂದು ಬಣ್ಣಿಸಿದ್ದರು. “ಇಸ್ಕಾನ್ ಗೋಶಾಲೆಗಳನ್ನು ಸ್ಥಾಪಿಸಿ,ಸರ್ಕಾರದಿಂದ ಅಪಾರ ಪ್ರಮಾಣದ ಭೂಮಿಯನ್ನು ತೆಗೆದುಕೊಳ್ಳುತ್ತದೆ ಮತ್ತು ದೊಡ್ಡ ಲಾಭವನ್ನು ಗಳಿಸುತ್ತದೆ” ಎಂದು ಹೇಳಿದ್ದಾರು.
ಬಿಜೆಪಿ ಸಂಸದೆ ಹಾಗೂ ಕೇಂದ್ರ ಸಚಿವೆ ಮನೇಕಾ ಗಾಂಧಿರವರ ಈ ವಿಡಿಯೋ ವೈರಲ್ ಆದ ಬೆನ್ನಲ್ಲಿಯೇ ಇಸ್ಕಾನ್ ದೇವಸ್ಥಾನಗಳ ಸಮಿತಿ ಮನೇಕಾ ಗಾಂಧಿಗೆ 100 ಕೋಟಿ ರೂಪಾಯಿಯ ಮಾನನಷ್ಟ ನೋಟಿಸ್ ಕಳುಹಿಸಿದ್ದು,ನೀವು ಮಾಡಿರುವ ಎಲ್ಲಾ ಆರೋಪಗಳು ನಿರಾಧಾರ ಹೇಳಿಕೆ ಎಂದು ಹೇಳಿದೆ.ಈ ದುರುದ್ದೇಶಪೂರಿತ ಆರೋಪಗಳಿಂದ ಇಸ್ಕಾನ್ ಭಕ್ತರು ಮತ್ತು ಬೆಂಬಲಿಗರು ತೀವ್ರ ದುಃಖಿತರಾಗಿದ್ದಾರೆ ಎಂದು ಇಸ್ಕಾನ್ ಕೋಲ್ಕತ್ತಾದ ಉಪಾಧ್ಯಕ್ಷ ರಾಧಾರಮಣ್ ದಾಸ್ ಹೇಳಿದ್ದಾರೆ. ಇಸ್ಕಾನ್ ವಿರುದ್ಧ ಮಾಡಿರುವ ಈ ಪಿತೂರಿಯ ವಿರುದ್ಧ ನಮಗೆ ನ್ಯಾಯ ಸಿಗಬೇಕು. ಅದಕ್ಕಾಗಿ ಎಲ್ಲಿ ಬೇಕಾದರೂ ಹೋರಾಟ ಮಾಡುತ್ತೇವೆ ಎಂದಿದ್ದಾರೆ.
ಇಸ್ಕಾನ್ನ ರಾಷ್ಟ್ರೀಯ ವಕ್ತಾರ ಯುಧಿಷ್ಠಿರ್ ಗೋವಿಂದ್ ದಾಸ್ ಮಾತನಾಡಿ, ಗೋವುಗಳು ಹಾಗೂ ಗೂಳಿಗಳ ಸಂರಕ್ಷಣೆಗಾಗಿ ಭಾರತ ಮಾತ್ರವಲ್ಲದೆ ವಿಶ್ವಾದ್ಯಂತ ಕೆಲಸ ಮಾಡುತ್ತಿದೆ. ಹಸುಗಳು ಮತ್ತು ಗೂಳಿಗಳು ಇಸ್ಕಾನ್ನ ಗೋಶಾಲೆಯಲ್ಲಿ ಬದುಕಿರುವವರೆಗೂ ಇರುತ್ತವೆ ಒಂದೇ ಒಂದು ಹಸು, ಎತ್ತು ಅಥವಾ ಕರುವನ್ನು ಕಟುಕರಿಗೆ ಮಾರುವುದಿಲ್ಲ.
ಅಪರಾಧ
VIRAL NEWS : ಹಾಸಿಗೆಯಲ್ಲಿ ಹಾವಿನ ಪೊರೆ: ಗ್ರಾಮವೇ ಬೆಚ್ಚಿಬಿತ್ತು
ಲಕ್ನೋ: ಉತ್ತರ ಪ್ರದೇಶದ ಗ್ರಾಮವೊಂದರಲ್ಲಿ ಯುವತಿ ನಾಪತ್ತೆಯಾದ ಬಳಿಕ ಆಕೆಯ ಹಾಸಿಗೆಯಲ್ಲಿ ಹಾವಿನ ಪೊರೆ ಪತ್ತೆಯಾಗಿದ್ದು, ಸ್ಥಳೀಯರಲ್ಲಿ ಭಾರಿ ಆತಂಕ ಮತ್ತು ಕುತೂಹಲಕ್ಕೆ ಕಾರಣವಾಗಿದೆ. ಯುವತಿ ನಾಗಿಣಿಯಾಗಿದ್ದಾಳೆ ಎಂಬ ವದಂತಿಗಳು ಹಬ್ಬಿ, ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಉತ್ತರ ಪ್ರದೇಶದ ಔರೈಯಾ ಜಿಲ್ಲೆಯಲ್ಲಿ ಈ ವಿಚಿತ್ರ ಘಟನೆ ನಡೆದಿದೆ. 25 ವರ್ಷದ ರೀನಾ ಎಂಬ ಯುವತಿಯ ಮದುವೆಯನ್ನು ಕುಟುಂಬಸ್ಥರು ಈಗಾಗಲೇ ನಿಶ್ಚಯಿಸಿದ್ದರು. ಆದರೆ ಮದುವೆಗೆ ಇಷ್ಟವಿಲ್ಲದ ಆಕೆ, ಮನೆಯಿಂದ ಓಡಿ ಹೋಗಲು ಫಿಲ್ಮಿ ಶೈಲಿಯ ನಾಟಕ ರೂಪಿಸಿದ್ದಾಳೆ ಎಂಬುದು ನಂತರ ಬೆಳಕಿಗೆ ಬಂದಿದೆ.
ರೀನಾ ತನ್ನ ಕೊಠಡಿಯಲ್ಲಿ ಸುಮಾರು ಐದು ಅಡಿ ಉದ್ದದ ಹಾವಿನ ಪೊರೆಯನ್ನು ಹಾಸಿಗೆಯ ಮೇಲೆ ಇಟ್ಟು, ಯಾರಿಗೂ ತಿಳಿಯದಂತೆ ಮನೆ ಬಿಟ್ಟು ಪರಾರಿಯಾಗಿದ್ದಾಳೆ. ಬೆಳಿಗ್ಗೆ ಆಕೆಯ ಕೊಠಡಿಗೆ ಹೋದ ಕುಟುಂಬಸ್ಥರು ಹಾವಿನ ಚರ್ಮ ಕಂಡು ಬೆಚ್ಚಿಬಿದ್ದಿದ್ದಾರೆ. ವಿಚಾರ ಕ್ಷಣಾರ್ಧದಲ್ಲಿ ಇಡೀ ಗ್ರಾಮಕ್ಕೆ ಹರಡಿದ್ದು, ಯುವತಿ ನಾಗಿಣಿಯಾಗಿದ್ದಾಳೆ ಎಂಬ ನಂಬಿಕೆ ಕೆಲವರಲ್ಲಿ ಗಟ್ಟಿಯಾಗಿತ್ತು.
ಕೆಲವರು ಇದನ್ನು ಪವಾಡವೆಂದು ಭಾವಿಸಿ, ಆಕೆಯ ಮನೆ ಬಳಿ ಗುಂಪುಗಟ್ಟಿದ್ದರು. ಈ ನಡುವೆ ಯುವತಿ ನಾಪತ್ತೆಯಾದ ಬಗ್ಗೆ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ತನಿಖೆ ಆರಂಭಿಸಿದಾಗ ಅಸಲಿ ಸತ್ಯ ಹೊರಬಂದಿದೆ.
ರೀನಾಗೆ ಈಗಾಗಲೇ ಬೇರೆ ಪ್ರೇಮ ಸಂಬಂಧ ಇದ್ದು, ಕುಟುಂಬ ಬೇರೊಂದು ಮದುವೆ ಮಾಡಲು ಮುಂದಾದ ಹಿನ್ನೆಲೆಯಲ್ಲಿ ಆಕೆ ಪ್ರಿಯಕರನೊಂದಿಗೆ ಓಡಿ ಹೋಗಿದ್ದಾಳೆ. ಹಾವಿನ ಪೊರೆ ನಾಟಕ ಕೇವಲ ಜನರನ್ನು ತಪ್ಪು ದಾರಿಗೆಳೆಯಲು ರೂಪಿಸಿದ ತಂತ್ರವಾಗಿತ್ತು. ಪ್ರಸ್ತುತ ಪೊಲೀಸರು ಯುವತಿಯನ್ನು ಹುಡುಕಾಟ ನಡೆಸುತ್ತಿದ್ದಾರೆ.
ದೇಶ
“ಸ್ವಲ್ಪ ಬೇಗ ಮನೆಗೆ ಹೋಗಿದ್ದರೆ ಅಮ್ಮ ಬದುಕುತ್ತಿದ್ದರು” – ತಾಯಿಯ ಅಗಲಿಕೆಯನ್ನು ನೆನೆದು ಭಾವುಕರಾದ ಸನ್ನಿ ಲಿಯೋನ್
ಮುಂಬೈ: ಒಂದು ಕಾಲದಲ್ಲಿ ಗ್ಲಾಮರ್ ಲೋಕದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದ ಸನ್ನಿ ಲಿಯೋನ್, ಇಂದು ಬಾಲಿವುಡ್‌ನಲ್ಲಿ ಶಿಸ್ತುಬದ್ಧ ಹಾಗೂ ಕುಟುಂಬಪರ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ತಮ್ಮ ಹಿಂದಿನ ಜೀವನದ ತಪ್ಪುಗಳಿಂದ ಪಾಠ ಕಲಿತಿರುವ ಸನ್ನಿ, ಪೋರ್ನ್ ಇಂಡಸ್ಟ್ರಿಯನ್ನು ಸಂಪೂರ್ಣವಾಗಿ ತೊರೆದು ಹಿಂದಿ ಚಿತ್ರರಂಗದಲ್ಲಿ ಹೊಸ ಬದುಕು ಆರಂಭಿಸಿ, ಇಂದು ಹಲವರಿಗೆ ಪ್ರೇರಣೆಯಾಗಿದ್ದಾರೆ.
ಸದ್ಯ ರಿಯಾಲಿಟಿ ಶೋಗಳು, ಸಿನಿಮಾಗಳು ಹಾಗೂ ವಿಶೇಷ ಹಾಡುಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಸನ್ನಿ ಲಿಯೋನ್, ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ ತಮ್ಮ ಜೀವನದ ಅತ್ಯಂತ ನೋವಿನ ಘಟನೆಯನ್ನು ನೆನೆದು ಕಣ್ಣೀರಿಟ್ಟಿದ್ದಾರೆ. ತಮ್ಮ ತಾಯಿ ಅಗಲಿಕೆಯ ಬಗ್ಗೆ ಮಾತನಾಡುವ ವೇಳೆ ಅವರು ತೀವ್ರ ಭಾವುಕರಾದರು.
“ಆ ದಿನ ನಾನು ಸ್ವಲ್ಪ ಬೇಗ ಶೂಟಿಂಗ್ ಮುಗಿಸಿ ಮನೆಗೆ ಹೋಗಿದ್ದರೆ, ಬಹುಶಃ ನನ್ನ ಅಮ್ಮನನ್ನು ಉಳಿಸಿಕೊಳ್ಳಬಹುದಿತ್ತು” ಎಂದು ಸನ್ನಿ ಕಣ್ಣೀರಾಕಿದರು. ಮನೆಗೆ ತಲುಪುವಷ್ಟರಲ್ಲಿ ತಾಯಿ ಕೊನೆಯುಸಿರೆಳೆದಿದ್ದರು ಎಂಬ ಸತ್ಯ ಇಂದಿಗೂ ತಮ್ಮನ್ನು ಕಾಡುತ್ತದೆ ಎಂದು ಹೇಳಿದರು.
ಭಾರತೀಯ ಪೋಷಕರ ಸ್ವಭಾವದ ಬಗ್ಗೆ ಮಾತನಾಡಿದ ಅವರು, “ಬಹುತೇಕ ತಂದೆ-ತಾಯಿಗಳು ತಮ್ಮ ಆರೋಗ್ಯ ಸಮಸ್ಯೆಗಳನ್ನು ಮಕ್ಕಳಿಗೆ ಹೇಳುವುದಿಲ್ಲ. ಮಕ್ಕಳು ಗಾಬರಿ ಪಡುವರು ಎಂಬ ಕಾರಣಕ್ಕೆ ಈ ರೀತಿ ಮುಚ್ಚಿಡುತ್ತಾರೆ. ನನ್ನ ತಾಯಿಯೂ ಹಾಗೆಯೇ ಮಾಡಿದರು” ಎಂದು ಭಾವುಕವಾಗಿ ಹೇಳಿದರು.
ನಮ್ಮ ತಂದೆಗೆ ಮಕ್ಕಳ ಸಂತೋಷವೇ ಮೊದಲ ಆದ್ಯತೆ. ಆದ್ದರಿಂದ ಯಾವುದೇ ಸಮಸ್ಯೆಯಾದರೂ ನಮ್ಮೊಂದಿಗೆ ಹಂಚಿಕೊಳ್ಳುತ್ತಿರಲಿಲ್ಲ. ಆದರೆ ಕೊನೆಯ ಕ್ಷಣಗಳಲ್ಲಿ ತಾಯಿಯ ಜೊತೆ ಇರಲಾಗಲಿಲ್ಲ ಎಂಬ ನೋವು ನನ್ನ ಜೀವನಪೂರ್ತಿ ಕಾಡುತ್ತಲೇ ಇರುತ್ತದೆ ಎಂದು ಸನ್ನಿ ಲಿಯೋನ್ ತಮ್ಮ ಮನದಾಳದ ನೋವನ್ನು ಹೊರಹಾಕಿದರು.
ಈ ಸಂದರ್ಶನದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ಸನ್ನಿಗೆ ಸಹಾನುಭೂತಿ ಸೂಚಿಸುತ್ತಿದ್ದಾರೆ. ತಮ್ಮ ಜೀವನದ ಕಹಿ ಕ್ಷಣಗಳನ್ನೂ ಹಂಚಿಕೊಳ್ಳುವ ಸನ್ನಿಯ ನೈಜತೆಯನ್ನು ಅನೇಕರು ಶ್ಲಾಘಿಸಿದ್ದಾರೆ.
ದೇಶ
ನೋ ವೇ ಚಾನ್ಸೆ ಇಲ್ಲ! ರೈಲಿನೊಳಗೆ ನಡೆದ ಈ ರೀತಿ ಜಗಳ ವೈರಲ್
ಸಾಮಾನ್ಯವಾಗಿ ಗಂಡಸರು ಜಗಳವಾಡ್ತಾರೆ ಅಂದ್ರೆ ಮಾತಿಗಿಂತ ಕೈಗಳೇ ಮುಂದೆ ಬರುತ್ತವೆ. ಆದರೆ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಒಂದು ವಿಡಿಯೋ ಎಲ್ಲರನ್ನೂ ದಿಗ್ಭ್ರಮೆಗೊಳಿಸಿದೆ. ಇದು ಜಗಳವೇ ಅಥವಾ ಚುಂಬನವೋ ಅನ್ನೋ ಗೊಂದಲವನ್ನು ನೆಟ್ಟಿಗರಲ್ಲಿ ಹುಟ್ಟುಹಾಕಿದೆ.
ಈ ಘಟನೆ ಸಿಂಗಾಪುರ್ ಎಂಆರ್‌ಟಿ ರೈಲಿನಲ್ಲಿ ನಡೆದಿದ್ದು, ಸಾರ್ವಜನಿಕ ಸಾರಿಗೆಯೊಳಗೆ ಇಬ್ಬರು ಪುರುಷರ ನಡುವೆ ಆರಂಭವಾದ ಸಣ್ಣ ವಾಗ್ವಾದ ಕ್ಷಣಗಳಲ್ಲಿ ಅಚ್ಚರಿಯ ತಿರುವು ಪಡೆದುಕೊಂಡಿದೆ. ಸಾಮಾನ್ಯ ಜಗಳದಂತೆ ಕೂಗು–ಚೀಳು, ಹೊಡೆದಾಟ ನಡೆಯಲಿದೆ ಎಂದು ಎಲ್ಲರೂ ಊಹಿಸಿದ್ದರೆ, ಇಲ್ಲಿ ನಡೆದದ್ದು ಮಾತ್ರ ಭಿನ್ನವಾಗಿತ್ತು.
ಜಗಳದ ಬದಲು ಎಂಜಿಲು ಯುದ್ಧ!
ಪರಸ್ಪರ ಹೊಡೆದಾಡಿಕೊಳ್ಳುವ ಬದಲು, ಇಬ್ಬರು ವ್ಯಕ್ತಿಗಳು ಒಬ್ಬರನ್ನೊಬ್ಬರು ಬೆದರಿಸಲು ಎಂಜಿಲು ಉಗುಳಲು ಆರಂಭಿಸಿದರು. ವಾದ ಹೆಚ್ಚಾದಂತೆ ಇಬ್ಬರೂ ಮತ್ತಷ್ಟು ಹತ್ತಿರ ಹತ್ತಿರ ಬಂದರು. ಹತ್ತಿರದಿಂದ ಉಗುಳಲು ಯತ್ನಿಸುವ ದೃಶ್ಯವು ನೋಡಿದವರಿಗೆ ಚುಂಬಿಸುತ್ತಿರುವಂತೆ ಕಾಣುವಷ್ಟು ಹಾಸ್ಯಾಸ್ಪದವಾಗಿ ಕಂಡಿದೆ.
ಈ ಅಸಹಜ ದೃಶ್ಯವೇ ವಿಡಿಯೋವನ್ನು ವೈರಲ್ ಮಾಡಿದ್ದು, ಸಾಮಾನ್ಯವಾಗಿ ಮನಸ್ಸಿಗೆ ಘಾಸಿ ಮಾಡುವ ಜಗಳದ ವಿಡಿಯೋಗಳ ಮಧ್ಯೆ ಇದು ಜನರನ್ನು ಹೊಟ್ಟೆ ಹುಣ್ಣಾಗಿಸುವಂತೆ ನಗಿಸಿದೆ.
ನೆಟ್ಟಿಗರ ಪ್ರತಿಕ್ರಿಯೆಗಳು
ವಿಡಿಯೋಗೆ ನೆಟ್ಟಿಗರು ವಿಭಿನ್ನ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ.
- “ಇದು ಪರಸ್ಪರ ಹೋರಾಡುವ ಹೊಸ ಮಾರ್ಗವೇ?” ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ.
- ಮತ್ತೊಬ್ಬರು, “ನನಗೆ ಗೊತ್ತಿದ್ದ ಏಕೈಕ ಹೋರಾಟ ಕರಾಟೆ, ಆದರೆ ಇದೇನಿದು ಹೊಸ ಸ್ಟೈಲ್?” ಎಂದು ಹಾಸ್ಯ ಮಾಡಿದ್ದಾರೆ.
ಜಗಳದ ಗಂಭೀರತೆಯ ಮಧ್ಯೆ ಹಾಸ್ಯ ಹುಟ್ಟಿಸಿದ ಈ ವಿಡಿಯೋ, ಸಾಮಾಜಿಕ ಜಾಲತಾಣಗಳಲ್ಲಿ ಲಕ್ಷಾಂತರ ವೀಕ್ಷಣೆ ಪಡೆದುಕೊಂಡು ವೈರಲ್ ಆಗಿದೆ.
-
ಬೆಂಗಳೂರು17 hours agoBENGALURU : ವಸಂತಪುರ ಶ್ರೀವಸಂತವಲ್ಲಭರಾಯ ಸ್ವಾಮಿಯ ಶಯನೋತ್ಸವ ವೈಭವ
-
ದೇಶ14 hours ago2026 ಪ್ರೇಮಿಗಳ ದಿನ ಶನಿವಾರ: ರೋಮ್ಯಾಂಟಿಕ್ ವಾರಾಂತ್ಯಕ್ಕೆ ಟಾಪ್ 5 ಪ್ರವಾಸ ತಾಣಗಳು
-
ದೇಶ16 hours agoGBA ELECTION : 5 ಪಾಲಿಕೆಗಳಿಗೆ ವಾರ್ಡ್ ಗಡಿ ಪಾಲನೆ ಕಡ್ಡಾಯ – ಮುಖ್ಯ ಆಯುಕ್ತ ಸೂಚನೆ
-
ಕ್ರೀಡೆ11 hours agoIND vs PAK ಹೈವೋಲ್ಟೇಜ್ ಪಂದ್ಯಕ್ಕೆ ಮುನ್ನ ಉಸ್ಮಾನ್ ತಾರಿಕ್ ಎಚ್ಚರಿಕೆ: “ಭಾರತೀಯರು ನನ್ನ ಬೌಲಿಂಗ್ಗೆ ಹೆದರುತ್ತಿದ್ದಾರೆ!”
-
ದೇಶ14 hours agoLATEST : “ದೆಹಲಿಗೆ ಬಂದಿರೋದೇ ರಾಜಕಾರಣಕ್ಕೆ”: ಡಿಕೆಶಿ ಹೇಳಿಕೆ ಕುತೂಹಲ
-
ಅಪರಾಧ16 hours agoCRIME : ಬೆಂಗಳೂರಿನಲ್ಲಿ ಮತ್ತೆ ರೋಡ್ ರೇಜ್: ಬಾನೆಟ್ ಮೇಲೆ ವ್ಯಕ್ತಿ ಇದ್ದರೂ 1 ಕಿ.ಮೀ ಕಾರು ಚಲಾಯಿಸಿದ ಚಾಲಕ
-
ದೇಶ12 hours agoHAL ಠಾಣೆ ಇನ್ಸ್ಪೆಕ್ಟರ್ ವಿರುದ್ಧ ಗಂಭೀರ ಆರೋಪ: ಅರವಿಂದ್ ರೆಡ್ಡಿ ಕಾಲಿಗೆ ಬೀಳಲು ಬೆದರಿಕೆ?
-
ದೇಶ15 hours agoBHARATH BANDH : ದೇಶವ್ಯಾಪಿ ಮುಷ್ಕರ: 30 ಕೋಟಿ ಕಾರ್ಮಿಕರ ಹೋರಾಟ, ಹಲವು ರಾಜ್ಯಗಳಲ್ಲಿ ಬಂದ್ ಪರಿಣಾಮ
