Connect with us

Blog

ನೊಬೆಲ್‌ ಪ್ರಸಸ್ತಿ 2023: ಭೌತ ವಿಜ್ಞಾನ ಕ್ಷೇತ್ರದಲ್ಲಿ ಮೂವರು ವಿಜ್ಞಾನಿಗಳಿಗೆ ನೊಬೆಲ್‌ ಪುರಸ್ಕಾರ

ನೊಬೆಲ್‌ ಪ್ರಸಸ್ತಿ 2023: ಭೌತ ವಿಜ್ಞಾನ ಕ್ಷೇತ್ರದಲ್ಲಿ ಮೂವರು ವಿಜ್ಞಾನಿಗಳಿಗೆ ನೊಬೆಲ್‌ ಪುರಸ್ಕಾರ

ಭೌತಶಾಸ್ತ್ರದಲ್ಲಿ 2023 ರ ನೊಬೆಲ್ ಪ್ರಶಸ್ತಿಯನ್ನು ಪಿಯರೆ ಅಗೋಸ್ಟಿನಿ, ಫೆರೆಂಕ್ ಕ್ರೌಸ್ಜ್ ಮತ್ತು ಆನ್ನೆ ಎಲ್’ಹುಲ್ಲಿಯರ್ (Pierre Agostini, Ferenc Krausz and Anne L’Huillier) ಅವರಿಗೆ ನೀಡಲಾಗಿದೆ.ಎಲೆಕ್ಟ್ರಾನ್ ಗಳ ಚಲನೆ ಮತ್ತು ವರ್ತನೆ ಕುರಿತು ಹೊಸ ಒಳನೋಟ ಒದಗಿಸುವ ಸಂಶೋಧನೆಗಾಗಿ ಮೂವರು ವಿಜ್ಞಾನಿಗಳನ್ನು ಈ ಬಾರಿಯ ಭೌತವಿಜ್ಞಾನ ಕ್ಷೇತ್ರದ ನೊಬೆಲ್ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ ಎಂದು ವರದಿ ಆಗಿದೆ.
“ವಸ್ತುದಲ್ಲಿನ ಎಲೆಕ್ಟ್ರೋ ಡೈನಾಮಿಕ್ಸ್ ಅಧ್ಯಯನಕ್ಕಾಗಿ ಬೆಳಕಿನ ಅಟೊಸೆಕೆಂಡ್ ನಾಡಿಗಳನ್ನು ಉತ್ಪಾದಿಸುವ ಪ್ರಾಯೋಗಿಕ ವಿಧಾನಗಳಿಗಾಗಿ ನೊಬೆಲ್ ಪಾರಿತೋಷಕಕ್ಕೆ ಆಯ್ಕೆ ಆಗಿದೆ” ಎಂದು ರಾಯಲ್ ಸ್ವೀಡಿಷ್ ಅಕಾಡೆಮಿ ಆಫ್ ಸೈನ್ಸ್ ಇದೇ ಅಕ್ಟೋಬರ್‌ 3 ರಂದು ಘೋಷಣೆ ಮಾಡಿದೆ.
ರಾಯಲ್ ಸ್ವೀಡಿಷ್ ಅಕಾಡೆಮಿ ಆಫ್ ಸೈನ್ಸಸ್ ಈ ಬಹುಮಾನವನ್ನು ನೀಡಲಿದೆ. ಇದು ಈ ವಾರದಲ್ಲಿ ಘೋಷಣೆಯಾದ ಎರಡನೇ ನೋಬೆಲ್‌ ಬಹುಮಾನವಾಗಿದೆ.
ಇತ್ತಿಚಿಗಷ್ಟೇ ಕೋವಿಡ್ -19 ವಿರುದ್ಧ ಹೋರಾಡಲು ಮೊದಲು ಲಸಿಕೆ ಅಭಿವೃದ್ಧಿಪಡಿಸಿದ ವಿಜ್ಞಾನಿಗಳಾದ ಕ್ಯಾಟಲಿನ್ ಕಾರಿಕೊ ಹಾಗೂ ಡ್ರ್ಯೂ ವೈಸ್‌ಮನ್ ಅವರಿಗೆ 2023ನೇ ಸಾಲಿನ ವೈದ್ಯಕೀಯ ವಿಭಾಗದ ನೋಬೆಲ್ ಪುರಸ್ಕಾರ ದೊರೆತಿದೆ.
ವಿಜ್ಞಾನ ಲೋಕದಲ್ಲಿ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿ ಎಂದೇ ಕರೆಯಲಾಗುವ ಈ ಪ್ರಶಸ್ತಿಯ ಆಯ್ಕೆಯನ್ನು ಸ್ವೀಡನ್‌ನಲ್ಲಿರುವ ಕ್ಯಾರೊಲಿನ್ ವೈದ್ಯಕೀಯ ವಿಶ್ವವಿದ್ಯಾಲಯದ ನೊಬೆಲ್ ಅಸೆಂಬ್ಲಿ ಆಯ್ಕೆ ಮಾಡಿದೆ. ಬಹುಮಾನ ವಿಜೇತರಿಗೆ 18.31 ಕೋಟಿ ನಗದು ಬಹುಮಾನ ರೂಪದಲ್ಲಿ ಸಿಗಲಿದೆ.

Continue Reading

Blog

ಬೆಂಗಳೂರಿನಲ್ಲಿ ಕಸ ಎಸೆದ ಯುವತಿಯರಿಗೆ ಜಿಬಿಎ ದಂಡದ ಬಿಸಿ – ಸಿಸಿಟಿವಿಯಲ್ಲಿ ಸಿಕ್ಕಿಬಿದ್ದ ಕೃತ್ಯ!

ಬೆಂಗಳೂರು: ನಗರದಲ್ಲಿ ಎಲ್ಲೆಲ್ಲಿ ನೋಡಿದರೂ ಕಸ ಬೀಸಾಡುವವರ ವಿರುದ್ಧ ಜಿಬಿಎ (BBMP) ಸಮರ ಸಾರಿದ್ದು, ಇದೀಗ ಮೈಕೋ ಲೇಔಟ್ ಪ್ರದೇಶದಲ್ಲಿ ಕಸ ಎಸೆದ ಇಬ್ಬರು ಯುವತಿಯರಿಗೆ ದಂಡದ ಬಿಸಿ ಮುಟ್ಟಿಸಿದೆ.

ಮೈಕೋ ಲೇಔಟ್‌ನಲ್ಲಿ ಸ್ಥಳೀಯರು ರಸ್ತೆ ಬದಿಯಲ್ಲಿ ಕಸ ಎಸೆಯುವುದನ್ನು ತಪ್ಪಿಸಲು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿದ್ದರು. ಆದರೂ, ಯುವತಿಯೊಬ್ಬಳು ಕಸ ಎಸೆದಿದ್ದು, ಮತ್ತೊಬ್ಬಳು ಕ್ಯಾಮೆರಾ ಮುಂದೆ ನಿಂತು ಡ್ಯಾನ್ಸ್ ಮಾಡುವ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿವೆ.

ಈ ದೃಶ್ಯಗಳನ್ನು ಗಮನಿಸಿದ ಮನೆಯ ಮಾಲೀಕರು ತಕ್ಷಣ ಜಿಬಿಎ ಮಾರ್ಷಲ್‌ಗಳಿಗೆ ಮಾಹಿತಿ ನೀಡಿದ್ದು, ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಕಸ ಎಸೆದ ಯುವತಿಯರಿಗೆ ₹1,000 ದಂಡ ವಿಧಿಸಿದ್ದಾರೆ. ಮುಂದಿನ ಬಾರಿ ಇದೇ ತಪ್ಪು ಮಾಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.

ಸ್ಥಳೀಯರು ಹೇಳುವಂತೆ, ಕಳೆದ ಕೆಲವು ದಿನಗಳಿಂದ ರಾತ್ರಿ ವೇಳೆ ಕೆಲವರು ಕಸ ಎಸೆದು ರಸ್ತೆ ಬದಿಯನ್ನು ಡಂಪಿಂಗ್ ಯಾರ್ಡ್‌ ಆಗಿ ಪರಿವರ್ತಿಸಿದ್ದರು. ಹಲವು ಬಾರಿ ಬುದ್ದಿಮಾತು ಹೇಳಿದರೂ ಯಾರೂ ಕೇಳದ ಹಿನ್ನೆಲೆಯಲ್ಲಿ ಸ್ಥಳೀಯರು ಸಿಸಿಟಿವಿ ಅಳವಡಿಸಲು ಮುಂದಾಗಿದ್ದರು. ಈಗ ಈ ಕ್ರಮದಿಂದ ತಪ್ಪಿತಸ್ಥರನ್ನು ಪತ್ತೆಹಚ್ಚಿ ದಂಡ ವಿಧಿಸಲಾಗಿದೆ.

ನಗರದ ಸ್ವಚ್ಛತೆಗೆ ಜಿಬಿಎ ನೀಡುತ್ತಿರುವ ಒತ್ತಾಯಕ್ಕೆ ಇದು ಮತ್ತೊಂದು ಉದಾಹರಣೆ ಆಗಿದ್ದು, ನಾಗರಿಕರ ಸಹಕಾರದಿಂದಲೇ ‘ಸ್ವಚ್ಛ ಬೆಂಗಳೂರು’ ಕನಸು ನಿಜವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Continue Reading

Blog

ಬೆಂಗಳೂರು ರಸ್ತೆಯಲ್ಲಿ ಭೀತಿ – ಪೆಟ್ರೋಲ್ ಬಂಕ್‌ಗೆ ನುಗ್ಗಿದ ಮಿನಿ ಟ್ರಕ್

ಬೆಂಗಳೂರು (ಅ.08): ಚಾಮರಾಜಪೇಟೆ ಮುಖ್ಯರಸ್ತೆಯ ನಯಾರಾ ಪೆಟ್ರೋಲ್ ಬಂಕ್‌ನಲ್ಲಿ ಇಂದು ಬೆಳಿಗ್ಗೆ ಒಂದು ಮಿನಿ ಟ್ರಕ್ ನಿಯಂತ್ರಣ ತಪ್ಪಿ ನುಗ್ಗಿದ ಭೀತಿದಾಯಕ ಘಟನೆ ನಡೆದಿದೆ.
ಸನ್‌ಪ್ಯೂರ್ ಎಣ್ಣೆ ಸಾಗಿಸುತ್ತಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ, ಪೆಟ್ರೋಲ್ ಬಂಕ್‌ನ ಶೌಚಾಲಯ ಕಟ್ಟಡಕ್ಕೆ ಡಿಕ್ಕಿ ಹೊಡೆದಿದೆ. ಇದರ ಪರಿಣಾಮವಾಗಿ ಒಂದು ಬೈಕ್ ಸಂಪೂರ್ಣ ಜಖಂಗೊಂಡಿದೆ.

ಘಟನೆ ಚಾಮರಾಜಪೇಟೆ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದ್ದು, ಸ್ಥಳಕ್ಕೆ ಪೊಲೀಸರು ತಕ್ಷಣ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ಮೂಲಗಳು ತಿಳಿಸಿವೆ. ಆದರೆ ಬಂಕ್ ಆವರಣದ ಕೆಲವು ಭಾಗಗಳು ಹಾನಿಗೊಳಗಾಗಿವೆ.

Continue Reading

Blog

“ಅಕ್ಟೋಬರ್ ಅಂತ್ಯದೊಳಗೆ ಗುಂಡಿಗಳೇ ಇಲ್ಲದ ಬೆಂಗಳೂರು ಬೇಕು!” – ಸಿಎಂ ಸಿದ್ದರಾಮಯ್ಯನಿಂದ ಕಠಿಣ ಎಚ್ಚರಿಕೆ

CM Siddaramaiah and DCM D K Shivkumar

ಬೆಂಗಳೂರು: ರಾಜಧಾನಿ ಬೆಂಗಳೂರು ನಗರದ ರಸ್ತೆ ಗುಂಡಿಗಳ ಸಮಸ್ಯೆ ಇತ್ತೀಚೆಗೆ ಭಾರೀ ಚರ್ಚೆಗೆ ಗ್ರಾಸವಾಗಿದೆ. ನಿತ್ಯ ವಾಹನ ಸವಾರರು ಸಂಕಷ್ಟ ಅನುಭವಿಸುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಕಚೇರಿ ಕೃಷ್ಣಾದಲ್ಲಿ ಸಭೆ ನಡೆಸಿ ತುರ್ತು ನಿರ್ಧಾರಗಳನ್ನು ಪ್ರಕಟಿಸಿದ್ದಾರೆ.

ಬೆಂಗಳೂರು ಮಹಾನಗರ ಪಾಲಿಕೆ (BBMP) ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದು, ಒಬ್ಬ ತಿಂಗಳ ಗಡುವಿನಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚುವ ಕಟ್ಟುನಿಟ್ಟಿನ ಆದೇಶ ನೀಡಲಾಗಿದೆ. ಶಿಥಿಲ ತಂತ್ರಜ್ಞಾನ ಅಥವಾ ಜವಾಬ್ದಾರಿ ತೋರದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಎಚ್ಚರಿಸಿದ್ದಾರೆ.


🔍 ಸಭೆಯಲ್ಲಿ ಮುಖ್ಯ ಸೂಚನೆಗಳು:

  • BBMP ವ್ಯಾಪ್ತಿಯಲ್ಲಿ 14,795 ಗುಂಡಿಗಳ ಪಟ್ಟಿ: ಈಗಾಗಲೇ 6,749 ಗುಂಡಿಗಳು ಮುಚ್ಚಲ್ಪಟ್ಟಿದ್ದು, 8,046 ಇನ್ನೂ ಬಾಕಿ
  • JETPATCHER ತಂತ್ರಜ್ಞಾನ ಬಳಸುವ ಯೋಜನೆ: ತೇವಾಂಶದಲ್ಲೂ ಗುಂಡಿ ಮುಚ್ಚುವ ಸಾಧ್ಯತೆ
  • ವೈಟ್‌ಟಾಪಿಂಗ್ ಕಾಮಗಾರಿ: 108.20 ಕಿ.ಮೀ ಪೂರ್ಣ, 143.68 ಕಿ.ಮೀ ಪ್ರಗತಿಯಲ್ಲಿ
  • 2025-26 ನೇ ಬಜೆಟ್‌ನಲ್ಲಿ 18 ಕೋಟಿ ರೂ ಅನುದಾನ: ಗುಂಡಿ ಮುಚ್ಚುವ ಕಾರ್ಯಕ್ಕೆ
  • BBMP, BDA, BMRCL, BWSSB ಸಮನ್ವಯ ಅಗತ್ಯ: ಪ್ರತಿ ವಾರ 5 ವಲಯಗಳ ಪರಿಶೀಲನೆ
  • 25 ಕೋಟಿ ರೂ ತುರ್ತು ಅನುದಾನ ಬಿಡುಗಡೆ: ಎಲ್ಲಾ ನಗರ ಪಾಲಿಕೆಗಳಿಗೆ
  • ಅಕ್ಟೋಬರ್ ಅಂತ್ಯ ಗಡುವು: ಎಲ್ಲ ಗುಂಡಿಗಳನ್ನು ಮುಚ್ಚುವ ಅಂತಿಮ ಡೆಡ್‌ಲೈನ್
Continue Reading

Trending