Connect with us

ಕ್ರೀಡೆ

15 ವರ್ಷಗಳ ನಂತರ ದೇಶೀಯ ಕ್ರಿಕೆಟ್‌ಗೆ ವಿರಾಟ್ ಕೊಹ್ಲಿ ರೆಡಿ!

Published

on

ಬೆಂಗಳೂರು: ಭಾರತದ ದೇಶೀಯ ಟೂರ್ನಿಯಲ್ಲಿ ಈಗಾಗಲೇ ಸೈಯದ್ ಮುಷ್ತಾಕ್ ಅಲಿ ಟಿ20 ಪಂದ್ಯಾವಳಿಗಳು ಜೋರಾಗಿ ಸಾಗುತ್ತಿವೆ. ಇದರ ನಂತರ ಡಿಸೆಂಬರ್ 24ರಿಂದ ಆರಂಭವಾಗಲಿರುವ ವಿಜಯ್ ಹಜಾರೆ ಟ್ರೋಫಿಗೆ ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಮರಳಲು ಒಪ್ಪಿಕೊಂಡಿದ್ದಾರೆ ಎಂಬ ವರದಿಗಳು ಅಭಿಮಾನಿಗಳಲ್ಲಿ ಹೊಸ ಹುಮ್ಮಸ್ಸು ಮೂಡಿಸಿದೆ. ಕೊಹ್ಲಿ ಕೊನೆಯ ಬಾರಿ 2009-10ರಲ್ಲಿ ಈ ಟೂರ್ನಿಯಲ್ಲಿ ಆಡಿದ್ದು, 15 ವರ್ಷಗಳ ನಂತರ ದೇಶೀಯ ವಲಯಕ್ಕೆ ಪುನಃ ಪ್ರವೇಶಿಸುತ್ತಿದ್ದಾರೆ.

ಡೆಹಲಿ ಕ್ರಿಕೆಟ್ ತಂಡದ ಪರ ಆಡುವ ವಿರಾಟ್ ಕೊಹ್ಲಿಗೆ, ಲಿಸ್ಟ್-A ಅನುಭವದ ಆಧಾರದ ಮೇಲೆ ಸಂಭಾವನೆ ನಿಗದಿಯಾಗುತ್ತದೆ. 41ಕ್ಕೂ ಹೆಚ್ಚು ಲಿಸ್ಟ್-A ಪಂದ್ಯಗಳ ಅನುಭವ ಇರುವ ಆಟಗಾರರಿಗೆ ಪ್ರತಿ ಪಂದ್ಯಕ್ಕೆ ₹60,000 ಸಿಗುತ್ತದೆ. 300ಕ್ಕೂ ಹೆಚ್ಚು ಲಿಸ್ಟ್-A ಪಂದ್ಯಗಳನ್ನ already ಆಡಿರುವ ಕೊಹ್ಲಿ ಪ್ರತಿಪಂದ್ಯಕ್ಕೆ ₹60,000 ವೇತನ ಪಡೆಯಲಿದ್ದಾರೆ.

ದೆಹಲಿಯು ಲೀಗ್ ಹಂತದಲ್ಲಿ ಒಟ್ಟು 7 ಪಂದ್ಯಗಳನ್ನು ಆಡಲಿದ್ದು, ಕೊಹ್ಲಿ ಎಲ್ಲ ಪಂದ್ಯಗಳಿಗೂ ಲಭ್ಯರಿರುತ್ತಾರೆಯೇ ಎಂಬುದು ಸ್ಪಷ್ಟವಾಗಿಲ್ಲ. ಪ್ರಾಥಮಿಕ ವರದಿಗಳ ಪ್ರಕಾರ, ಅವರು ಮೂರು ಪಂದ್ಯಗಳಲ್ಲಿ ಮಾತ್ರ ಆಡಬಹುದು ಎಂದು ತಿಳಿದುಬಂದಿದೆ —
🔹 ಡಿಸೆಂಬರ್ 24: ಆಂಧ್ರ ವಿರುದ್ಧ
🔹 ಡಿಸೆಂಬರ್ 26: ಗುಜರಾತ್ ವಿರುದ್ಧ
🔹 ಜನವರಿ 6: ರೈಲ್ವೇಸ್ ವಿರುದ್ಧ

2025-26ರ ಹಜಾರೆ ಟ್ರೋಫಿಯಲ್ಲಿ ದೆಹಲಿ ಡಿ ಗುಂಪಿನಲ್ಲಿ ಇರಲಿದ್ದು, ಹರಿಯಾಣ, ಸೌರಾಷ್ಟ್ರ, ಗುಜರಾತ್, ಸರ್ವೀಸಸ್, ಒಡಿಶಾ ಮತ್ತು ರೈಲ್ವೇಸ್ ತಂಡಗಳು ಈ ಗುಂಪಿನಲ್ಲಿವೆ. ಜನವರಿ 12ರಿಂದ ನಾಕೌಟ್ ಹಂತ ಪ್ರಾರಂಭವಾಗಲಿದೆ.

ಲಿಸ್ಟ್-Aನಲ್ಲಿ ಕೊಹ್ಲಿಯ ದಾಖಲೆ ಅಸಾಧಾರಣವಾಗಿದ್ದು, 341 ಪಂದ್ಯಗಳಲ್ಲಿ 15934 ರನ್‌ಗಳೊಂದಿಗೆ 57 ಶತಕ ಮತ್ತು 83 ಅರ್ಧಶತಕಗಳನ್ನು ಬಾರಿಸಿದ್ದಾರೆ.

ಕ್ರೀಡೆ

ಹರ್ಮನ್‌ಪ್ರೀತ್ ಕೌರ್ ವಿಶ್ವದಾಖಲೆ: ಮಹಿಳಾ ಕ್ರಿಕೆಟ್‌ನಲ್ಲಿ ಹೊಸ ಇತಿಹಾಸ

Published

on

ಲಂಡನ್‌: ಭಾರತದ ಮಹಿಳಾ ಕ್ರಿಕೆಟ್ ತಂಡದ ನಾಯಕಿ Harmanpreet Kaur ಅವರು ಮಹಿಳಾ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹೊಸ ವಿಶ್ವದಾಖಲೆ ನಿರ್ಮಿಸಿದ್ದಾರೆ. ಇಂಗ್ಲೆಂಡ್ ವಿರುದ್ಧ ನಡೆದ ಮೂರು ಪಂದ್ಯಗಳ ಟಿ20 ಸರಣಿಯ ಮೂರನೇ ಹಾಗೂ ನಿರ್ಣಾಯಕ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಹರ್ಮನ್‌ಪ್ರೀತ್ ತಮ್ಮ 368ನೇ ಅಂತಾರಾಷ್ಟ್ರೀಯ ಪಂದ್ಯವನ್ನು ಆಡಿದರು.

ಈ ಮೂಲಕ ಮಹಿಳಾ ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ ಆಟಗಾರ್ತಿಯಾಗಿ ಅವರು ಹೊರಹೊಮ್ಮಿದ್ದಾರೆ. ಇದುವರೆಗೆ ಈ ದಾಖಲೆ ನ್ಯೂಜಿಲೆಂಡ್‌ನ Suzie Bates ಅವರ ಹೆಸರಿನಲ್ಲಿದ್ದು, ಅವರು 367 ಪಂದ್ಯಗಳನ್ನು ಆಡಿದ್ದರು. ಇದೀಗ 368 ಪಂದ್ಯಗಳೊಂದಿಗೆ ಹರ್ಮನ್‌ಪ್ರೀತ್ ಅಗ್ರಸ್ಥಾನಕ್ಕೇರಿದ್ದಾರೆ.

2009ರಲ್ಲಿ ಪಾಕಿಸ್ತಾನ ವಿರುದ್ಧ ನಡೆದ ಮಹಿಳಾ ವಿಶ್ವಕಪ್ ಪಂದ್ಯದಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಹರ್ಮನ್‌ಪ್ರೀತ್, ಕಳೆದ 17 ವರ್ಷಗಳಿಂದ ಭಾರತೀಯ ಮಹಿಳಾ ಕ್ರಿಕೆಟ್‌ಗೆ ಅಮೂಲ್ಯ ಕೊಡುಗೆ ನೀಡಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ಅವರು 143 ಪಂದ್ಯಗಳಿಂದ 4,541 ರನ್‌ಗಳನ್ನು ಗಳಿಸಿದ್ದು, ಏಳು ಶತಕ ಹಾಗೂ 24 ಅರ್ಧಶತಕಗಳನ್ನು ತಮ್ಮ ಖಾತೆಯಲ್ಲಿ ಹೊಂದಿದ್ದಾರೆ.

ಆದಾಗ್ಯೂ ಈ ದಾಖಲೆಗಾಗಿ ಸ್ಪರ್ಧೆ ಇನ್ನೂ ಮುಂದುವರಿದಿದೆ. ಸುಜಿ ಬೇಟ್ಸ್ ಇನ್ನೂ ವೈಟ್‌ಬಾಲ್ ಕ್ರಿಕೆಟ್‌ನಲ್ಲಿ ಸಕ್ರಿಯರಾಗಿದ್ದು, ಮುಂದಿನ ಪಂದ್ಯಗಳಲ್ಲಿ ಹರ್ಮನ್‌ಪ್ರೀತ್ ದಾಖಲೆಯನ್ನು ಸರಿಗಟ್ಟುವ ಅವಕಾಶ ಹೊಂದಿದ್ದಾರೆ. ಆದರೆ ಬೇಟ್ಸ್ ಮುಂಬರುವ ಟಿ20 ವಿಶ್ವಕಪ್ ಬಳಿಕ ನಿವೃತ್ತಿಯಾಗಲಿದ್ದು, ಹರ್ಮನ್‌ಪ್ರೀತ್ ಇನ್ನಷ್ಟು ಪಂದ್ಯಗಳನ್ನು ಆಡುವ ಮೂಲಕ ದಾಖಲೆಯನ್ನು ಮತ್ತಷ್ಟು ಭದ್ರಪಡಿಸುವ ಸಾಧ್ಯತೆ ಇದೆ.

ಮಹಿಳಾ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಪಂದ್ಯ ಆಡಿದ ಆಟಗಾರ್ತಿಯರ ಪಟ್ಟಿಯಲ್ಲಿ Ellyse Perry (357), Mithali Raj (333) ಹಾಗೂ Sophie Devine (313) ಕ್ರಮವಾಗಿ ಮುಂದಿನ ಸ್ಥಾನಗಳಲ್ಲಿ ಇದ್ದಾರೆ.

ಪುರುಷ ಮತ್ತು ಮಹಿಳಾ ಕ್ರಿಕೆಟ್ ಸೇರಿ ಒಟ್ಟಾರೆ ಅತಿ ಹೆಚ್ಚು ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ ದಾಖಲೆಯನ್ನು Sachin Tendulkar 664 ಪಂದ್ಯಗಳೊಂದಿಗೆ ಹೊಂದಿದ್ದಾರೆ.

Continue Reading

ಕ್ರೀಡೆ

ಸರಳ ಉಡುಪಿನಲ್ಲಿ ಆಶ್ರಮಕ್ಕೆ ಆಗಮಿಸಿದ ವಿರಾಟ್-ಅನುಷ್ಕಾ; ಫೋಟೋಗಳಿಗೆ ಭಾರಿ ಮೆಚ್ಚುಗೆ

Published

on

ಲಕ್ನೋ: ಐಪಿಎಲ್ 2026ರಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಹಾಗೂ ಅವರ ಪತ್ನಿ, ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಆಧ್ಯಾತ್ಮಿಕ ಪಯಣ ಕೈಗೊಂಡಿದ್ದಾರೆ. ಈ ದಂಪತಿ ಸೋಮವಾರ ವೃಂದಾವನದಲ್ಲಿರುವ ಪ್ರಸಿದ್ಧ ಆಧ್ಯಾತ್ಮಿಕ ಗುರು ಪ್ರೇಮಾನಂದ್ ಮಹಾರಾಜರ ‘ರಾಧಾ ಕೇಳಿ ಕುಂಜ್’ ಆಶ್ರಮಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದಿದ್ದಾರೆ.

ಆಶ್ರಮಕ್ಕೆ ಆಗಮಿಸಿದ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಮಹಾರಾಜರ ದರ್ಶನ ಪಡೆದು ಕೆಲ ಸಮಯ ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ಭಾಗವಹಿಸಿದರು. ಭೇಟಿ ಬಳಿಕ ಆಶ್ರಮದಿಂದ ಹೊರಬರುತ್ತಿರುವ ಅವರ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳಿಂದ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗಿದೆ.

ವಿರಾಟ್ ಮತ್ತು ಅನುಷ್ಕಾ ವೃಂದಾವನಕ್ಕೆ ಭೇಟಿ ನೀಡುತ್ತಿರುವುದು ಇದೇ ಮೊದಲಲ್ಲ. ಕಳೆದ ಕೆಲವು ವರ್ಷಗಳಲ್ಲಿ ಅವರು ಹಲವು ಬಾರಿ ಪ್ರೇಮಾನಂದ್ ಮಹಾರಾಜರನ್ನು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದಾರೆ. ಜೀವನದ ಪ್ರಮುಖ ಘಟ್ಟಗಳು ಹಾಗೂ ವೃತ್ತಿಜೀವನದ ಮಹತ್ವದ ಸಂದರ್ಭಗಳಲ್ಲಿ ಈ ದಂಪತಿ ಆಧ್ಯಾತ್ಮಿಕ ಮಾರ್ಗದರ್ಶನ ಪಡೆಯುವುದು ವಿಶೇಷವಾಗಿದೆ.

ಈ ಬಾರಿ ಕೂಡ ಎಂದಿನಂತೆ ಯಾವುದೇ ವಿಶೇಷ ಭದ್ರತಾ ಪ್ರದರ್ಶನವಿಲ್ಲದೆ ಸರಳ ಉಡುಪಿನಲ್ಲಿ ಆಶ್ರಮಕ್ಕೆ ಆಗಮಿಸಿದ ವಿರಾಟ್ ಮತ್ತು ಅನುಷ್ಕಾ, ತಮ್ಮ ಸರಳತೆ ಮೂಲಕ ಗಮನ ಸೆಳೆದಿದ್ದಾರೆ. ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಅವರ ಭಕ್ತಿ ಹಾಗೂ ವಿನಯಶೀಲತೆಯನ್ನು ಮೆಚ್ಚಿ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ.

ಐಪಿಎಲ್ 2026ರ ನಿರ್ಣಾಯಕ ಹಂತದಲ್ಲಿ ಆರ್‌ಸಿಬಿ ತಂಡ ಉತ್ತಮ ಪ್ರದರ್ಶನ ನೀಡುತ್ತಿರುವ ವೇಳೆಯಲ್ಲೇ ಕೊಹ್ಲಿ ಆಧ್ಯಾತ್ಮಿಕ ಆಶೀರ್ವಾದ ಪಡೆಯಲು ತೆರಳಿರುವುದು ಅಭಿಮಾನಿಗಳಲ್ಲಿ ಮತ್ತಷ್ಟು ಆಸಕ್ತಿ ಮೂಡಿಸಿದೆ. ಸದ್ಯ ಅವರ ವೃಂದಾವನ ಭೇಟಿ ಕುರಿತ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿವೆ.

Continue Reading

ಕ್ರೀಡೆ

‘We Did It Twice’ ಟೀ-ಶರ್ಟ್ ವೈರಲ್! ಆರ್‌ಸಿಬಿ ಗೆಲುವಿನ ಅಪರೂಪದ ಫೋಟೋ ಹಂಚಿಕೊಂಡ ಅನುಷ್ಕಾ ಶರ್ಮಾ

Published

on

ಬೆಂಗಳೂರು: ಐಪಿಎಲ್ 2026ರ ಚಾಂಪಿಯನ್ ಆಗಿ ಹೊರಹೊಮ್ಮಿದ Royal Challengers Bengaluru ತಂಡದ ಸಂಭ್ರಮ ಇನ್ನೂ ಮುಂದುವರಿದಿದೆ. ಸತತ ಎರಡನೇ ಬಾರಿ ಟ್ರೋಫಿ ಗೆದ್ದಿರುವ ಆರ್‌ಸಿಬಿ ಆಟಗಾರರು ಹಾಗೂ ಅಭಿಮಾನಿಗಳು ಐತಿಹಾಸಿಕ ಗೆಲುವನ್ನು ವಿಶೇಷವಾಗಿ ಆಚರಿಸುತ್ತಿದ್ದು, ಇದೀಗ ನಟಿ Anushka Sharma ಹಂಚಿಕೊಂಡಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಅನುಷ್ಕಾ ಶರ್ಮಾ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಆರ್‌ಸಿಬಿ ತಂಡದ ಗೆಲುವಿನ ಸಂಭ್ರಮದ ಕೆಲವು ಅಪರೂಪದ ಕ್ಷಣಗಳನ್ನು ಹಂಚಿಕೊಂಡಿದ್ದಾರೆ. ಈ ಚಿತ್ರಗಳಲ್ಲಿ ಆರ್‌ಸಿಬಿಯ ಸ್ಟಾರ್ ಬ್ಯಾಟರ್ Virat Kohli ಹಾಗೂ ತಂಡದ ಬ್ಯಾಟಿಂಗ್ ಕೋಚ್ Dinesh Karthik ಕಾಣಿಸಿಕೊಂಡಿದ್ದಾರೆ.

ಆದರೆ ಎಲ್ಲರ ಗಮನ ಸೆಳೆದಿರುವುದು ವಿರಾಟ್ ಕೊಹ್ಲಿ ಧರಿಸಿದ್ದ ವಿಶೇಷ ಟೀ-ಶರ್ಟ್. ಟೀ-ಶರ್ಟ್‌ನ ಹಿಂಭಾಗದಲ್ಲಿ “One Felt Nice… We Did It Twice” ಎಂಬ ಸಾಲು ಮುದ್ರಿತವಾಗಿದ್ದು, ಆರ್‌ಸಿಬಿಯ ಎರಡನೇ ಐಪಿಎಲ್ ಪ್ರಶಸ್ತಿಯ ಸಂಭ್ರಮವನ್ನು ಪ್ರತಿಬಿಂಬಿಸಿದೆ. ಈ ಸಂದೇಶ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ.

ಕಳೆದ ಸೀಸನ್‌ನಲ್ಲಿ ಪ್ರಶಸ್ತಿ ಗೆದ್ದು ದೀರ್ಘಕಾಲದ ಕನಸನ್ನು ನನಸು ಮಾಡಿಕೊಂಡಿದ್ದ ಆರ್‌ಸಿಬಿ, ಇದೀಗ 2026ರ ಫೈನಲ್‌ನಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಮಣಿಸಿ ಮತ್ತೊಮ್ಮೆ ಕಪ್ ಎತ್ತಿಹಿಡಿದಿದೆ. ಹೀಗಾಗಿ ಈ ಬಾರಿ ಗೆಲುವಿನ ಸಂಭ್ರಮವೂ ವಿಶೇಷವಾಗಿದ್ದು, ಆಟಗಾರರು ತಮ್ಮ ಯಶಸ್ಸನ್ನು ವಿಭಿನ್ನ ರೀತಿಯಲ್ಲಿ ಆಚರಿಸುತ್ತಿದ್ದಾರೆ.

ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಅವರ ಫೋಟೋಗಳಿಗೆ ಅಭಿಮಾನಿಗಳಿಂದ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿದ್ದು, “ಈ ಸಲ ಮಾತ್ರವಲ್ಲ, ಎರಡು ಸಲ ಕಪ್ ನಮ್ದೇ” ಎಂಬ ಕಾಮೆಂಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

Continue Reading

Trending