Connect with us

ದೇಶ

IPL, Gemini ರಿಂದ Kantara ತನಕ—ಈ ವರ್ಷ ಗೂಗಲ್‌ನಲ್ಲಿ ಏನು ಹೆಚ್ಚು ಟ್ರೆಂಡ್?

ಗೂಗಲ್‌ ಸರ್ಚ್​ 2025

ನವದೆಹಲಿ: 2025ನೇ ವರ್ಷ ಜನರಿಗೆ ವಿಭಿನ್ನ ಅನುಭವಗಳನ್ನು ನೀಡಿದ ವರ್ಷ. ಕೆಲವರಿಗೆ ಸಾಧನೆ, ಕೆಲವರಿಗೆ ಸಂಕಷ್ಟಗಳಿದ್ದರೂ ಗೂಗಲ್‌ನಲ್ಲಿ ಸರ್ಚ್ ಮಾಡಲು ಜನರು ಹಿಂದೆ ಮುಂದೇ ನೋಡಲಿಲ್ಲ. ಈ ವರ್ಷ ಭಾರತದಲ್ಲಿ ಯಾವ ವಿಷಯಗಳು ಹೆಚ್ಚು ಟ್ರೆಂಡ್ ಆಗಿದ್ದವು ಎಂಬುದನ್ನು ಗೂಗಲ್ ತನ್ನ ‘A to Z in Search 2025’ ಪಟ್ಟಿಯ ಮೂಲಕ ಬಹಿರಂಗಪಡಿಸಿದೆ.

2025ರಲ್ಲಿ ಹೆಚ್ಚು ಕೇಳಲಾದ ಪ್ರಶ್ನೆಗಳು

ಪೇಜ್ ಟ್ರಾಫಿಕ್ ಪ್ರಕಾರ, ‘What to watch?’ ಎಂಬ ಪ್ರಶ್ನೆ 2025ರಲ್ಲಿ ಗೂಗಲ್‌ನ ಅಗ್ರ ಹುಡುಕಾಟವಾಗಿದ್ದು, ತಿಂಗಳಿಗೆ 75 ಲಕ್ಷ ಸರ್ಚ್‌ಗಳು ದಾಖಲಾಗಿದೆ.
ಇದಾದ ಬಳಿಕ “What is my IP address?”
ಮಾಸಿಕ ಸರಾಸರಿ 3.6 ಮಿಲಿಯನ್ ಸರ್ಚ್‌.
ಇದೇ ರೀತಿ “Where’s my refund?”, “How to lose weight fast?”, “Where am I?” ಮುಂತಾದ ಪ್ರಶ್ನೆಗಳು ಟಾಪ್ 10ರಲ್ಲಿ ಸ್ಥಾನ ಪಡೆದಿವೆ.


Google A–Z Search 2025: ಭಾರತದಲ್ಲಿ ಏನು ಹೆಚ್ಚು ಟ್ರೆಂಡ್ ಆಯಿತು?

A – Aneet Padda & Ahaan Panday

‘ಸೈಯಾರಾ’ ಚಿತ್ರದ ನಟರು ಅಗ್ರ ಹುಡುಕಾಟಗಳಲ್ಲಿ.

B – Bryan Johnson Podcast

ಎರ್ ಕ್ವಾಲಿಟಿ ಕುರಿತ ನಿಖಿಲ್ ಕಾಮತ್ ಪಾಡ್‌ಕಾಸ್ಟ್ ಟಾಪ್ ಟ್ರೆಂಡಿಂಗ್.

C – Ceasefire

“What is ceasefire?” ಅರ್ಥ ಪ್ರಶ್ನೆಗಳಲ್ಲಿ No.1.

D – Dharmendra

ಬಾಲಿವುಡ್ ನಟ ಅಗ್ರ 10 ಒಟ್ಟು ಸರ್ಚ್‌ಗಳಲ್ಲಿ.

E – Earthquake near me

ನಿಯರ್ ಮೀ ವಿಭಾಗದಲ್ಲಿ ಭೂಕಂಪ ಮತ್ತು ದಾಂಡಿಯಾ, ಡರ್ಗಾ ಪೂಜಾ ಸರ್ಚ್‌ಗಳು ಟ್ರೆಂಡ್.

F – Final Destination & Floodlighting

ಹಾರರ್ ಸಿನಿಮಾ ಮತ್ತು ಡೇಟಿಂಗ್ ಟ್ರೆಂಡ್‌ಗಳಲ್ಲಿ ಭಾರತದಲ್ಲಿ ಅಗ್ರ ಸ್ಥಾನ.

G – Google Gemini

AI ವಿಭಾಗದಲ್ಲಿ ಗೂಗಲ್ ಜೆಮಿನಿಗೆ ಭರ್ಜರಿ ವೀಕ್ಷಣೆ; Deepseek, Perplexity, ChatGPT ಕೂಡ ಟ್ರೆಂಡ್.

H – Haldi Trend

ಸೋಶಿಯಲ್ ಮೀಡಿಯಾದ ವೈರಲ್ ಹಳದಿ ಸೆರೆಮೋನಿ ಟ್ರೆಂಡ್‌ಗಳು.

I – IPL 2025

ಈ ವರ್ಷದ ಅತಿ ಹೆಚ್ಚು ಹುಡುಕಲ್ಪಟ್ಟ ಕ್ರೀಡಾ ಕಾರ್ಯಕ್ರಮ—ಐಪಿಎಲ್.

J – Jemimah Rodrigues

ಮಹಿಳಾ ಕ್ರಿಕೆಟ್‌ನಲ್ಲಿ ಶತಕ ಬಾರಿಸಿದ ಜೆಮಿಮಾ ಅಗ್ರ ಹುಡುಕಾಟ.

K – Kantara

‘ಕಾಂತಾರ’ ಭಾರತದ ಟಾಪ್ ಸಿನಿಮಾ ಸರ್ಚ್‌ಗಳಲ್ಲಿ ಎರಡನೇ ಸ್ಥಾನ.

L – Labubu

ಟಾಪ್ ಕಲೆಕ್ಟಿಬಲ್ ಕ್ಯಾಟಗರಿಯಲ್ಲಿ ಜನಪ್ರಿಯ ಗೊಂಬೆ.

M – Maha Kumbh

ಸುದ್ದಿ ಮತ್ತು ಪ್ರವಾಸ ವಿಭಾಗದಲ್ಲಿ ನಂ.1 ಹುಡುಕಾಟ.

N – Nano Banana Trend

AI ಇಮೇಜ್ ಜನರೇಷನ್‌ಗಾಗಿ ಟ್ರೆಂಡ್ ಪ್ರಾಂಪ್ಟ್.

O – Operation Sindoor

ಟಾಪ್ ನ್ಯೂಸ್ ಹುಡುಕಾಟ ಪದ.

P–Q – Phu Quoc

ಡೇಟಿಂಗ್ ಮತ್ತು ಟ್ರಾವೆಲ್ ತಾಣಗಳಲ್ಲಿ ಮೊದಲ ಸ್ಥಾನ.

R – Ranveer Allahabadia

ಟಾಪ್ ಟ್ರೆಂಡಿಂಗ್ ಪರ್ಸನಾಲಿಟಿ.

S – Squid Game & Sunita Williams

ವೆಬ್ ಸೀರಿಸ್ ಮತ್ತು ಸ್ಪೇಸ್ ನ್ಯೂಸ್ ಎರಡೂ ಭಾರತದಲ್ಲಿ ಅಗ್ರ.

T–U – Thekua, Ukadiche Modak

ಪಾಕವಿಧಾನಗಳಲ್ಲಿ ಇಡ್ಲಿ No.1; ಸಾಂಪ್ರದಾಯಿಕ ಆಹಾರಗಳು ಟ್ರೆಂಡ್.

V – Vaibhav Suryavanshi

ಐಪಿಎಲ್ ಸ್ಟಾರ್—ಭಾರತದ ಟ್ರೆಂಡಿಂಗ್ ಸ್ಪೋರ್ಟ್ ಪರ್ಸನಾಲಿಟಿ.

W – Women’s World Cup & Waqf Bill

ಕ್ರಿಕೆಟ್ ಮತ್ತು “What is Waqf Bill” ಎರಡೂ ಟಾಪ್ ಸರ್ಚ್.

X – Grok

ಎಕ್ಸ್‌(ಟ್ವಿಟ್ಟರ್)ನ AI ಟೂಲ್ ಟ್ರೆಂಡಿಂಗ್.

Y – Yorkshire Pudding

ಪಾಕವಿಧಾನ ಪ್ರಿಯರಿಗೆ ಹೊಸ ಕುತೂಹಲ.

Z – Zubeen Garg

ಭಾರತದಲ್ಲಿ ಹೆಚ್ಚು ಹುಡುಕಲ್ಪಟ್ಟ ಕಲಾವಿದ.


AI ವಿಭಾಗದಲ್ಲಿ Gemini ಮತ್ತೆ ನಂ.1

ಟಾಪ್ 10 AI ಟರ್ಮ್‌ಗಳಲ್ಲಿ —

  1. Gemini
  2. Gemini AI Photo
  3. Grok
  4. Deepseek
  5. Perplexity
  6. Google AI Studio
  7. ChatGPT
  8. ChatGPT Ghibli Art
  9. Flow
  10. Ghibli Style Image Generator

ದೇಶ

ಎಪ್ಸ್ಟೀನ್ ಫೈಲ್ಸ್‌ನಲ್ಲಿ ಹರ್ದೀಪ್ ಪುರಿ ಹೆಸರು? ಸಂಸತ್ತಿನಲ್ಲಿ ಗದ್ದಲ, ಸಚಿವರ ಸ್ಪಷ್ಟನೆ

ಹೊಸದಿಲ್ಲಿ: ಜಗತ್ತಿನಾದ್ಯಂತ ಸಂಚಲನ ಮೂಡಿಸಿರುವ ಜೆಫ್ರಿ ಎಪ್ಸ್ಟೀನ್‌ (Jeffrey Epstein) ಲೈಂಗಿಕ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮೆರಿಕದ ನ್ಯಾಯಾಂಗ ಇಲಾಖೆ ಬಿಡುಗಡೆಗೊಳಿಸಿರುವ ಮಿಲಿಯನ್‌ಗಟ್ಟಲೆ ಇಮೇಲ್‌ಗಳು ಮತ್ತು ದಾಖಲೆಗಳು ಹೊಸ ರಾಜಕೀಯ ಚರ್ಚೆಗೆ ಕಾರಣವಾಗಿವೆ. ಈ ದಾಖಲೆಗಳಲ್ಲಿ ಕೆಲವು ಭಾರತೀಯರ ಹೆಸರುಗಳು ಕಾಣಿಸಿಕೊಂಡಿರುವುದು ಸಂಸತ್ತಿನಲ್ಲೂ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಈ ಪಟ್ಟಿಯಲ್ಲಿ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ (Hardeep Singh Puri) ಅವರ ಹೆಸರು ಉಲ್ಲೇಖವಾಗಿರುವುದಾಗಿ ವರದಿಯಾಗುತ್ತಿದ್ದಂತೆಯೇ, ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಸಂಸತ್ತಿನೊಳಗೂ ಹೊರಗೂ ಮಾತನಾಡಿದ ಅವರು, ಎಪ್ಸ್ಟೀನ್ ಪ್ರಕರಣದ ಉಲ್ಲೇಖದೊಂದಿಗೆ ಕೇಂದ್ರ ಸರ್ಕಾರವನ್ನು ಟೀಕಿಸಿದರು.

ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿದ ಹರ್ದೀಪ್ ಪುರಿ, “ನಾನು ಜೆಫ್ರಿ ಎಪ್ಸ್ಟೀನ್ ಅವರನ್ನು ಕೆಲವೇ ಬಾರಿ, ಅದೂ ಔಪಚಾರಿಕ ಸಂದರ್ಭಗಳಲ್ಲಿ ಮಾತ್ರ ಭೇಟಿ ಮಾಡಿದ್ದೇನೆ. ಅವರ ಅಕ್ರಮ ಚಟುವಟಿಕೆಗಳಿಗೆ ನನ್ನೊಂದಿಗೆ ಯಾವುದೇ ಸಂಬಂಧವಿಲ್ಲ” ಎಂದು ಸ್ಪಷ್ಟಪಡಿಸಿದರು.

ಮೂರು ಮಿಲಿಯನ್‌ ಇಮೇಲ್‌ಗಳಲ್ಲಿ ತಮ್ಮ ಹೆಸರು ಕೇವಲ 3-4 ಬಾರಿ ಮಾತ್ರ ಉಲ್ಲೇಖವಾಗಿದೆ. ನಿಯೋಗದ ಭಾಗವಾಗಿ ಕೆಲ ಸಂದರ್ಭಗಳಲ್ಲಿ ಭೇಟಿಯಾಗಿದ್ದು, ಕೇವಲ ಒಂದು ಇಮೇಲ್ ವಿನಿಮಯ ಮಾಡಿಕೊಂಡಿದ್ದೇನೆ ಅಷ್ಟೇ ಹೊರತು, ಯಾವುದೇ ಅಕ್ರಮ ಸಂಬಂಧ ಇಲ್ಲ ಎಂದು ಹೇಳಿದರು.

ಇದೇ ವೇಳೆ, 2017ರಲ್ಲಿ ಪ್ರಧಾನಿ ನರೇಂದ್ರ ಮೋದಿ ಇಸ್ರೇಲ್ ಭೇಟಿ ಕುರಿತ ಉಲ್ಲೇಖಗಳನ್ನೂ ವಿದೇಶಾಂಗ ಸಚಿವಾಲಯ ತಳ್ಳಿಹಾಕಿದೆ. “ಇದು ಅಧಿಕೃತ ಭೇಟಿಯೇ ಹೊರತು, ಉಳಿದ ಉಲ್ಲೇಖಗಳು ಶಿಕ್ಷೆಗೊಳಗಾದ ಅಪರಾಧಿಯ ವ್ಯರ್ಥ ಕಲ್ಪನೆಗಳಾಗಿವೆ” ಎಂದು ವಕ್ತಾರ ರಣಧೀರ್ ಜೈಸ್ವಾಲ್ ತಿಳಿಸಿದ್ದಾರೆ.

ಎಪ್ಸ್ಟೀನ್ ಫೈಲ್ಸ್ ಪ್ರಕರಣ ಇದೀಗ ಭಾರತೀಯ ರಾಜಕೀಯದಲ್ಲೂ ಚರ್ಚೆಯ ಕೇಂದ್ರಬಿಂದುವಾಗಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ರಾಜಕೀಯ ಪ್ರತಿಕ್ರಿಯೆಗಳು ಎದುರಾಗುವ ಸಾಧ್ಯತೆ ಇದೆ.

Continue Reading

ಕ್ರೀಡೆ

JAIN UNIVERSITY : ಜೈನ್ ಯುನಿವರ್ಸಿಟಿಯಲ್ಲಿ ಮಹಿಳಾ ಬಾಸ್ಕೆಟ್‌ಬಾಲ್ ಹಬ್ಬ

ಬೆಂಗಳೂರು, ಫೆ.11: ಕನಕಪುರ ರಸ್ತೆಯ ಜೈನ್ ಯುನಿವರ್ಸಿಟಿ ಗ್ಲೋಬಲ್ ಕ್ಯಾಂಪಸ್‌ನಲ್ಲಿ ನಡೆಯುತ್ತಿರುವ ಆಲ್ ಇಂಡಿಯಾ ಅಂತರ್ ವಿಶ್ವವಿದ್ಯಾಲಯ ಮಹಿಳಾ ಬಾಸ್ಕೆಟ್‌ಬಾಲ್ ಚಾಂಪಿಯನ್‌ಶಿಪ್‌ನಲ್ಲಿ (All India Inter University Women’s Basketball Championship) ಎರಡನೇ ದಿನದ ಲೀಗ್ ಪಂದ್ಯಗಳು ರೋಚಕತೆಯಿಂದ ಸಾಗಿದವು.

ಮೊದಲ ಪಂದ್ಯದಲ್ಲಿ ಚಂಡೀಗಢ ವಿಶ್ವವಿದ್ಯಾಲಯ 70-59 ಅಂತರದಲ್ಲಿ ಡಿಎವಿ ಇಂಡೋರ್ ತಂಡವನ್ನು ಮಣಿಸಿತು. ಕುಸುಭು (25) ಮತ್ತು ದೀಪ್ಷಿಖಾ (19) ಚಂಡೀಗಢ ತಂಡದ ಪರ ಮಿಂಚಿದರು.

ಎರಡನೇ ಪಂದ್ಯದಲ್ಲಿ ಆತಿಥೇಯ ಜೈನ್ ವಿಶ್ವವಿದ್ಯಾಲಯ 65-25 ಅಂತರದಲ್ಲಿ ಯುನಿವರ್ಸಿಟಿ ಆಫ್ ಕಲ್ಕತ್ತಾ ವಿರುದ್ಧ ಭರ್ಜರಿ ಗೆಲುವು ದಾಖಲಿಸಿತು. ಹರ್ಷಿತಾ (13) ಮತ್ತು ಆದ್ಯಾ ಗೌಡ (10) ಗಮನಾರ್ಹ ಆಟವಾಡಿದರು.

ಮೂರನೇ ಪಂದ್ಯದಲ್ಲಿ ಎಸ್‌ಆರ್‌ಎಂ ವಿಶ್ವವಿದ್ಯಾಲಯ 58-15 ಅಂತರದಲ್ಲಿ ಎಂಭಿಎಸ್‌ಪಿಎಸ್‌ಯು ಪಟಿಯಾಲಾ ವಿರುದ್ಧ ಜಯ ಸಾಧಿಸಿತು.

ನಾಲ್ಕನೇ ಪಂದ್ಯದಲ್ಲಿ ಲವ್ಲಿ ಪ್ರೊಫೆಷನಲ್ ಯುನಿವರ್ಸಿಟಿ 63-58 ಅಂತರದಲ್ಲಿ ಕ್ರೈಸ್ಟ್ ವಿಶ್ವವಿದ್ಯಾಲಯವನ್ನು ರೋಚಕವಾಗಿ ಸೋಲಿಸಿತು.

ಐದನೇ ಪಂದ್ಯದಲ್ಲಿ ಐಟಿಎಂ ವಿಶ್ವವಿದ್ಯಾಲಯ 65-30 ಅಂತರದಲ್ಲಿ ಎಸ್‌ಜಿಜಿವಿಎ ಯುನಿವರ್ಸಿಟಿಯನ್ನು ಮಣಿಸಿತು.

ಆರನೇ ಪಂದ್ಯದಲ್ಲಿ ಎಲ್‌ಎನ್‌ಐಪಿಇ ವಿಶ್ವವಿದ್ಯಾಲಯ 68-28 ಅಂತರದಲ್ಲಿ ಪಂಡಿತ್ ರವಿ ಶಂಕರ್ ವಿಶ್ವವಿದ್ಯಾಲಯವನ್ನು ಸೋಲಿಸಿತು.

ಇದಕ್ಕೂ ಮೊದಲು ಫೆ.10ರ ಸಂಜೆ ನಡೆದ ಲೀಗ್ ಪಂದ್ಯಗಳಲ್ಲಿ ಚಂಡೀಗಢ ವಿಶ್ವವಿದ್ಯಾಲಯ, ಲವ್ಲಿ ಪ್ರೊಫೆಷನಲ್ ಯುನಿವರ್ಸಿಟಿ ಹಾಗೂ ಎಂಜಿ ಯುನಿವರ್ಸಿಟಿ ಕೊಟ್ಟಾಯಂ ಜಯಗಳಿಸಿದ್ದವು.

ಟೂರ್ನಿಯ ಮುಂದಿನ ಲೀಗ್ ಪಂದ್ಯಗಳು ಹಾಗೂ ನಾಕೌಟ್ ಹಂತದ ಪಂದ್ಯಗಳಿಗೆ ಕ್ರೀಡಾಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

Continue Reading

ದೇಶ

LATEST : ರಾಹುಲ್ ಗಾಂಧಿ ವಿರುದ್ಧ ಹಕ್ಕುಚ್ಯುತಿ ಪ್ರಸ್ತಾವನೆ? ರಿಜುಜು ಕಿಡಿ

ನವದೆಹಲಿ: ಸದನಕ್ಕೆ ತಪ್ಪು ಮಾಹಿತಿ ನೀಡಿದ್ದು ಹಾಗೂ ಆಧಾರರಹಿತ ಆರೋಪಗಳನ್ನು ಮಾಡಿರುವ ಹಿನ್ನೆಲೆಯಲ್ಲಿ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi) ವಿರುದ್ಧ ಹಕ್ಕುಚ್ಯುತಿ (Breach of Privilege) ಪ್ರಸ್ತಾವನೆ ಮಂಡಿಸಲಾಗುವುದು ಎಂದು ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜುಜು (Kiren Rijiju) ತಿಳಿಸಿದ್ದಾರೆ.

ಬಜೆಟ್ ಮೇಲಿನ ಚರ್ಚೆ ವೇಳೆ ರಾಹುಲ್ ಗಾಂಧಿ ಕೇಂದ್ರ ಸರ್ಕಾರವು ‘ಭಾರತ ಮಾತೆಯನ್ನು ಮಾರಿಬಿಟ್ಟಿದೆ’ ಎಂದು ಆರೋಪಿಸಿದ್ದರು. ಭಾರತ–ಅಮೆರಿಕ ವಾಣಿಜ್ಯ ಒಪ್ಪಂದವನ್ನು ‘ಸಂಪೂರ್ಣ ಶರಣಾಗತಿ’ ಎಂದು ಟೀಕಿಸಿದ ಅವರು, ದೇಶದ ಶಕ್ತಿ ಸುರಕ್ಷತೆ ಅಮೆರಿಕಕ್ಕೆ ಒಪ್ಪಿಸಲಾಗಿದೆ ಹಾಗೂ ರೈತರ ಹಿತಾಸಕ್ತಿಗಳನ್ನು ರಾಜಿ ಮಾಡಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.

ಈ ಹೇಳಿಕೆಗಳಿಗೆ ತೀವ್ರ ಪ್ರತಿಕ್ರಿಯೆ ನೀಡಿದ ಕಿರಣ್ ರಿಜುಜು, ರಾಹುಲ್ ಗಾಂಧಿ ಸರ್ಕಾರ ಮತ್ತು ಪ್ರಧಾನಮಂತ್ರಿ ವಿರುದ್ಧ ಸುಳ್ಳು ಹಾಗೂ ಆಧಾರರಹಿತ ಆರೋಪ ಮಾಡಿದ್ದಾರೆ ಎಂದು ಆರೋಪಿಸಿದರು. “ಭಾರತವನ್ನು ಯಾರೂ ಮಾರಲಾರರು, ಖರೀದಿಸಲಾರರು. ಗಂಭೀರ ಆರೋಪ ಮಾಡಲು ನಿಯಮಾನುಸಾರ ಮುಂಚಿತ ನೋಟಿಸ್ ನೀಡಬೇಕು ಮತ್ತು ಪುರಾವೆ ಸಲ್ಲಿಸಬೇಕು. ಆದರೆ ರಾಹುಲ್ ಗಾಂಧಿ ಯಾವುದೇ ಪುರಾವೆ ಇಲ್ಲದೆ ಆರೋಪ ಮಾಡಿದ್ದಾರೆ,” ಎಂದು ರಿಜುಜು ಹೇಳಿದರು.

ಇದಲ್ಲದೆ, ರಾಹುಲ್ ಗಾಂಧಿ ಅವರ ಭಾಷಣದಲ್ಲಿ ದಾಖಲಾಗಿರುವ ತಪ್ಪು ಹೇಳಿಕೆಗಳು ಮತ್ತು ಅಸಭ್ಯ ಪದಗಳನ್ನು ಸದನದ ದಾಖಲೆಗಳಿಂದ ತೆಗೆದುಹಾಕಬೇಕು ಎಂದು ಅವರು ಒತ್ತಾಯಿಸಿದರು. ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ವಿರುದ್ಧವೂ ನೋಟಿಸ್ ಇಲ್ಲದೆ ಗಂಭೀರ ಆರೋಪ ಮಾಡಲಾಗಿದೆ ಎಂದು ರಿಜುಜು ತಿಳಿಸಿದರು.

ಈ ಬೆಳವಣಿಗೆಗಳ ನಡುವೆ ಸಂಸತ್ ಕಲಾಪದಲ್ಲಿ ಮತ್ತಷ್ಟು ರಾಜಕೀಯ ಉದ್ವಿಗ್ನತೆ ಉಂಟಾಗುವ ಸಾಧ್ಯತೆ ಇದೆ.

Continue Reading

Trending