Connect with us

ಕ್ರೀಡೆ

ICC Men’s T20 World Cup: ಭಾರತ-ಪಾಕ್ ಹೈವೋಲ್ಟೇಜ್ ಕಾದಾಟಕ್ಕೆ ಕ್ಷಣಗಣನೆ!

ಕೊಲಂಬೊ: ಕ್ರಿಕೆಟ್ ಲೋಕದ ಅತ್ಯಂತ ನಿರೀಕ್ಷಿತ ಪಂದ್ಯ — ಭಾರತ vs ಪಾಕಿಸ್ತಾನ ಮುಖಾಮುಖಿಗೆ ಕ್ರೀಡಾಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಭಾನುವಾರ ಸಂಜೆ 7 ಗಂಟೆಗೆ ಕೊಲಂಬೊದ R. Premadasa Stadium ಮೈದಾನದಲ್ಲಿ ಈ ರಣರೋಚಕ ಹೋರಾಟ ನಡೆಯಲಿದೆ.

IND vs PAK ಅಂಕಿಅಂಶಗಳು ಏನು ಹೇಳುತ್ತವೆ?

ಟಿ20 ಕ್ರಿಕೆಟ್ ಇತಿಹಾಸದಲ್ಲಿ ಭಾರತ ಮತ್ತು ಪಾಕಿಸ್ತಾನ 16 ಬಾರಿ ಎದುರಾಳಿಗಳಾಗಿದ್ದು, ಭಾರತ 13 ಪಂದ್ಯಗಳಲ್ಲಿ ಜಯ ಸಾಧಿಸಿದೆ. ಟಿ20 ವಿಶ್ವಕಪ್ ಟೂರ್ನಿಯಲ್ಲಿ 8 ಮುಖಾಮುಖಿಗಳಲ್ಲಿ ಭಾರತ 7 ಬಾರಿ ಮೇಲುಗೈ ಸಾಧಿಸಿದೆ. 2021ರಲ್ಲಿ ಪಾಕಿಸ್ತಾನ ಕೊನೆಯದಾಗಿ 10 ವಿಕೆಟ್‌ಗಳ ಅಂತರದಲ್ಲಿ ಜಯ ದಾಖಲಿಸಿತ್ತು.

ಈ ಬಾರಿ ಉಭಯ ತಂಡಗಳು ತಲಾ 2 ಪಂದ್ಯಗಳನ್ನು ಗೆದ್ದಿದ್ದು, ಹ್ಯಾಟ್ರಿಕ್ ಗೆಲುವಿನತ್ತ ಕಣ್ಣು ನೆಟ್ಟಿವೆ. ಈ ಪಂದ್ಯದಲ್ಲಿ ಗೆಲ್ಲುವ ತಂಡದ ಸೂಪರ್-8 ಪ್ರವೇಶ ಬಹುತೇಕ ಖಚಿತವಾಗಲಿದೆ.


ಸ್ಪಿನ್‌ ಟೆಸ್ಟ್ ಎದುರು ಭಾರತ

ಭಾರತ ಎರಡು ಪಂದ್ಯಗಳಲ್ಲಿ ಜಯ ಸಾಧಿಸಿದ್ದರೂ ಬ್ಯಾಟಿಂಗ್ ಪ್ರದರ್ಶನ ನಿರೀಕ್ಷಿತ ಮಟ್ಟದಲ್ಲಿಲ್ಲ. ಸ್ಪಿನ್ ದಾಳಿ ವಿರುದ್ಧ ಭಾರತೀಯ ಬ್ಯಾಟರ್‌ಗಳು ಹೋರಾಟ ನಡೆಸಿರುವುದು ಚಿಂತೆಗೀಡಾಗಿದೆ.

ಇತ್ತ ಪಾಕಿಸ್ತಾನ ಐವರು ಸ್ಪಿನ್ನರ್‌ಗಳನ್ನು ಕಣಕ್ಕಿಳಿಸುವ ಸಾಧ್ಯತೆ ಇದೆ. ಉಸ್ಮಾನ್ ತಾರೀಖ್‌, ಸೈಮ್ ಅಯೂಬ್‌, ಅಬ್ರಾರ್ ಅಹ್ಮದ್‌, ಶದಾಬ್ ಖಾನ್‌, ಮೊಹಮ್ಮದ್ ನವಾಜ್ ಪಾಕ್‌ನ ಪ್ರಮುಖ ಸ್ಪಿನ್ ಅಸ್ತ್ರಗಳು.


ಉಸ್ಮಾನ್ ತಾರೀಖ್ ಅಸ್ತ್ರ!

ವಿಶಿಷ್ಟ ಬೌಲಿಂಗ್ ಶೈಲಿಯಿಂದ ಗಮನ ಸೆಳೆದಿರುವ ಉಸ್ಮಾನ್ ತಾರೀಖ್ ಭಾರತೀಯರಿಗೆ ದೊಡ್ಡ ಸವಾಲಾಗಬಹುದು. ಬ್ಯಾಟಿಂಗ್‌ನಲ್ಲಿ ಫರ್ಹಾನ್‌, ಸೈಮ್ ಅಯೂಬ್‌, ನಾಯಕ ಸಲ್ಮಾನ್ ಅಲಿ ಅಘಾ ಹಾಗೂ ಬಾಬರ್ ಆಜಂ ಪಾಕ್‌ನ ಭರವಸೆ.

ಕ್ರೀಡೆ

ಕೊಲಂಬೊದಲ್ಲಿ ಭಾರತ–ಪಾಕ್ ಮಹಾಸಂಗ್ರಾಮ: ಡಗೌಟ್‌ನಲ್ಲಿ ಹಾವು, ಶೇಕ್‌ಹ್ಯಾಂಡ್‌ಗೆ ಸಸ್ಪೆನ್ಸ್!

ಕೊಲಂಬೊ, ಫೆ.15: ಬದ್ಧ ಪ್ರತಿಸ್ಪರ್ಧಿಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳು ಇಂದು ಕೊಲಂಬೊದ R. Premadasa Stadium ನಲ್ಲಿ ನಡೆಯಲಿರುವ ICC Men’s T20 World Cup ಪಂದ್ಯಕ್ಕೆ ಸಜ್ಜಾಗಿವೆ. ಪಂದ್ಯಕ್ಕೂ ಮುನ್ನ ಪಾಕಿಸ್ತಾನದ ಡಗೌಟ್ ಒಳಗೆ ಹಾವು ಕಾಣಿಸಿಕೊಂಡ ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಭದ್ರತಾ ಸಿಬ್ಬಂದಿ ಹಾವನ್ನು ಸುರಕ್ಷಿತವಾಗಿ ಸ್ಥಳಾಂತರಿಸಿರುವ ವಿಡಿಯೊ ಕ್ರಿಕೆಟ್ ಅಭಿಮಾನಿಗಳಲ್ಲಿ ಚರ್ಚೆಗೆ ಕಾರಣವಾಗಿದೆ.

ಭಾರತ ತಂಡ ಈ ಮೈದಾನದಲ್ಲಿ ಉತ್ತಮ ಟಿ20 ದಾಖಲೆ ಹೊಂದಿದ್ದರೂ, ಮೇಲ್ಮೈ ನಿಧಾನಗತಿಯಿರುವ ಸಾಧ್ಯತೆ ಇರುವುದರಿಂದ ಸ್ಪಿನ್ ಬೌಲಿಂಗ್‌ಗೆ ಹೆಚ್ಚಿನ ಮಹತ್ವ ನೀಡಬಹುದು. ವರುಣ್ ಚಕ್ರವರ್ತಿ, ಕುಲದೀಪ್ ಯಾದವ್, ಅಕ್ಷರ್ ಪಟೇಲ್ ಹಾಗೂ ವಾಷಿಂಗ್ಟನ್ ಸುಂದರ್ ಅವರಿಗೆ ಅವಕಾಶ ಸಿಗುವ ಸಾಧ್ಯತೆ ಇದೆ. ಇದರಿಂದ ಅರ್ಷದೀಪ್ ಸಿಂಗ್ ಹಾಗೂ ರಿಂಕು ಸಿಂಗ್ ಅವರಿಗೆ ವಿಶ್ರಾಂತಿ ಸಿಗಬಹುದು.

ಪಾಕಿಸ್ತಾನ ತಂಡವು ಅಬ್ರಾರ್ ಅಹಮದ್, ಮೊಹಮ್ಮದ್ ನವಾಜ್, ಶಾದಾಬ್ ಖಾನ್ ಮತ್ತು ಉಸ್ಮಾನ್ ತಾರೀಕ್ ಅವರ ಸ್ಪಿನ್ ದಾಳಿಯ ಮೇಲೆ ಭರವಸೆ ಇಟ್ಟಿದೆ. ಟಿ20 ವಿಶ್ವಕಪ್ ಇತಿಹಾಸದಲ್ಲಿ ಉಭಯ ತಂಡಗಳು ಎಂಟು ಬಾರಿ ಮುಖಾಮುಖಿಯಾಗಿದ್ದು, ಭಾರತ ಏಳು ಬಾರಿ ಜಯ ಸಾಧಿಸಿದೆ. ಪಾಕಿಸ್ತಾನ ಕೇವಲ ಒಂದು ಗೆಲುವು ದಾಖಲಿಸಿದೆ.

ಪಂದ್ಯಪೂರ್ವ ಸುದ್ದಿಗೋಷ್ಠಿಯಲ್ಲಿ ಸಲ್ಮಾನ್ ಅಘಾ ಹಸ್ತಲಾಘವಕ್ಕೆ ತಂಡ ಸಿದ್ಧ ಎಂದು ಹೇಳಿದರೆ, ಭಾರತದ ನಾಯಕ ಸೂರ್ಯಕುಮಾರ್ “ನಾಳೆ ಏನಾಗುತ್ತದೆ ನೋಡಿ” ಎಂದು ಕುತೂಹಲ ಹೆಚ್ಚಿಸಿದ್ದಾರೆ. ಕಳೆದ ವರ್ಷ ದುಬೈನಲ್ಲಿ ನಡೆದ Asia Cup ಮುನ್ನ ನಡೆದ ಪಹಲ್ಗಾಮ್ ಘಟನೆ ಹಾಗೂ ಬಳಿಕ ನಡೆದ ‘ಆಪರೇಷನ್ ಸಿಂಧೂರ್’ ಹಿನ್ನೆಲೆ, ಆಟಗಾರರು ಹಸ್ತಲಾಘವ ನಿಲ್ಲಿಸಿದ್ದ ವಿಚಾರವೂ ಮತ್ತೆ ಚರ್ಚೆಗೆ ಬಂದಿದೆ.

Continue Reading

ಕ್ರೀಡೆ

ICC Men’s T20 World Cup: ಸಲ್ಮಾನ್ ಆಘಾ ನಿಗೂಢ ಉತ್ತರ: ಕೈಕುಲುಕುವರಾ ಆಟಗಾರರು?

ಕೊಲೊಂಬೋ: ಮಹಾಶಿವರಾತ್ರಿಯ ದಿನ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ ಟಿ20 ವಿಶ್ವಕಪ್ ಲೀಗ್ ಹಂತದ ಮಹತ್ವದ ಪಂದ್ಯ ನಡೆಯಲಿದೆ. R. Premadasa Stadium ನಲ್ಲಿ ನಡೆಯಲಿರುವ ಈ ಹೈವೊಲ್ಟೇಜ್ ಸಮರಕ್ಕೂ ಮುನ್ನ, ಎರಡು ತಂಡಗಳ ಆಟಗಾರರು ಹ್ಯಾಂಡ್‌ಶೇಕ್ ಮಾಡುತ್ತಾರೆಯೇ ಎಂಬ ಪ್ರಶ್ನೆ ಕುತೂಹಲ ಹುಟ್ಟಿಸಿದೆ.

ಪ್ರೀಮ್ಯಾಚ್ ಕಾನ್ಫರೆನ್ಸ್‌ನಲ್ಲಿ ಮಾತನಾಡಿದ ಪಾಕಿಸ್ತಾನ ತಂಡದ ನಾಯಕ Salman Ali Agha, ಹ್ಯಾಂಡ್‌ಶೇಕ್ ವಿಚಾರಕ್ಕೆ ಸ್ಪಷ್ಟ ಉತ್ತರ ನೀಡಲಿಲ್ಲ. “ನಾಳೆಯ ಪಂದ್ಯವನ್ನು ಕ್ರೀಡಾಸ್ಫೂರ್ತಿಯಿಂದ ಆಡುತ್ತೇವೆ. ವೈಯಕ್ತಿಕ ವಿಚಾರ ಮುಖ್ಯವಲ್ಲ” ಎಂದು ಹೇಳುವ ಮೂಲಕ ಅವರು ನಿಗೂಢ ಉತ್ತರ ನೀಡಿದ್ದಾರೆ.

ಭಾರತ–ಪಾಕಿಸ್ತಾನ ಪಂದ್ಯವೆಂದರೆ ಕೇವಲ ಕ್ರಿಕೆಟ್ ಮಾತ್ರವಲ್ಲ, ಭಾವನೆಗಳ ಹೋರಾಟವೂ ಹೌದು. ಹೀಗಾಗಿ ಹ್ಯಾಂಡ್‌ಶೇಕ್‌ನಂತಹ ಸಣ್ಣ ವಿಷಯವೂ ರಾಷ್ಟ್ರಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗುತ್ತದೆ.

ಇದಕ್ಕೂ ಮುನ್ನ ನಡೆದ Asia Cup ವೇಳೆ, ಭಾರತೀಯ ಆಟಗಾರರು ಪಾಕ್ ಆಟಗಾರರೊಂದಿಗೆ ಹ್ಯಾಂಡ್‌ಶೇಕ್ ಮಾಡಲು ನಿರಾಕರಿಸಿದ್ದರೆಂಬ ವಿಚಾರ ಚರ್ಚೆಗೆ ಗ್ರಾಸವಾಗಿತ್ತು. ಅಲ್ಲದೇ, ಪಿಸಿಬಿ ಅಧ್ಯಕ್ಷ Mohsin Naqvi ಅವರಿಂದ ಟ್ರೋಫಿ ಸ್ವೀಕರಿಸದ ಘಟನೆಗೂ ವಿವಾದ ಸೃಷ್ಟಿಯಾಗಿತ್ತು.

ಇದೀಗ ಕೊಲೊಂಬೋದಲ್ಲಿ ಎರಡು ತಂಡಗಳ ಅಭ್ಯಾಸ ವೇಳಾಪಟ್ಟಿಯೂ ಪ್ರಕಟವಾಗಿದೆ. ಮಧ್ಯಾಹ್ನ 2ರಿಂದ 5ರವರೆಗೆ ಪಾಕಿಸ್ತಾನ ತಂಡ ಅಭ್ಯಾಸ ನಡೆಸಲಿದ್ದು, ಸಂಜೆ 6ರಿಂದ 9ರವರೆಗೆ ಭಾರತ ತಂಡ ಅಭ್ಯಾಸ ನಡೆಸಲಿದೆ. ಭಾರತ ತಂಡಕ್ಕೆ ವಿಮಾನ ನಿಲ್ದಾಣದಲ್ಲಿ ಭರ್ಜರಿ ಸ್ವಾಗತ ಲಭಿಸಿದ್ದು, ಅಭಿಮಾನಿಗಳ ಉತ್ಸಾಹ ಗಮನ ಸೆಳೆದಿದೆ.

ಹ್ಯಾಂಡ್‌ಶೇಕ್ ಆಗುತ್ತದೆಯೇ ಎಂಬುದಕ್ಕಿಂತ ಮೈದಾನದಲ್ಲಿನ ಪ್ರದರ್ಶನವೇ ಅಂತಿಮ ಉತ್ತರ ನೀಡಲಿದೆ

Continue Reading

ಕ್ರೀಡೆ

ಅಖಿಲ ಭಾರತ ಅಂತರ್ ವಿಶ್ವವಿದ್ಯಾಲಯ ಮಹಿಳಾ ಬಾಸ್ಕೆಟ್‌ಬಾಲ್ ಚಾಂಪಿಯನ್‌ಶಿಪ್: ಜೈನ್ ವಿಶ್ವವಿದ್ಯಾಲಯ ಚಾಂಪಿಯನ್

ಬೆಂಗಳೂರು, ಫೆಬ್ರವರಿ 14, 2026: ಅಖಿಲ ಭಾರತ ಅಂತರ್ ವಿಶ್ವವಿದ್ಯಾಲಯ ಮಹಿಳಾ ಬಾಸ್ಕೆಟ್‌ಬಾಲ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದಲ್ಲಿ Jain University ತಂಡವು ಭರ್ಜರಿ ಪ್ರದರ್ಶನ ನೀಡಿ ಚಾಂಪಿಯನ್ ಪಟ್ಟ ಕೈಸೇರಿಸಿಕೊಂಡಿದೆ. ಕನಕಪುರ ರಸ್ತೆದಲ್ಲಿರುವ ಜೈನ್ ಗ್ಲೋಬಲ್ ಕ್ಯಾಂಪಸ್‌ನಲ್ಲಿ ನಡೆದ ಫೈನಲ್‌ನಲ್ಲಿ ಜೈನ್ ತಂಡವು Panjab University ವಿರುದ್ಧ 74-51 ಅಂಕಗಳ ಅಂತರದಿಂದ ಗೆಲುವು ಸಾಧಿಸಿತು.

ಫೈನಲ್ ಪಂದ್ಯ ಫಲಿತಾಂಶ

ಜೈನ್ ವಿಶ್ವವಿದ್ಯಾಲಯ 74 (ಸಿಯಾ 17, ನಯೋಮಿ 16)
ಪಂಜಾಬ್ ವಿಶ್ವವಿದ್ಯಾಲಯ 51 (ಪೂಜಾ 19, ನಾದರ್ ಕೌರ್ 13)
ಅರ್ಧಾವಧಿ: 40-28

ಆರಂಭದಿಂದಲೇ ಮುನ್ನಡೆ ಸಾಧಿಸಿದ ಜೈನ್ ತಂಡ ಅಂತಿಮ ಕ್ಷಣದವರೆಗೂ ಮೇಲುಗೈ ಕಾಯ್ದುಕೊಂಡಿತು.


3ನೇ ಮತ್ತು 4ನೇ ಸ್ಥಾನಕ್ಕಾಗಿ ನಡೆದ ಪಂದ್ಯ

SRM University 82 (ಜೀವಿಕಾ 18, ಹೇಮಲತಾ 12)
Lakshmibai National Institute of Physical Education 58 (ತಿತಿಕ್ಷಾ 14, ಸೋನಲ್ ನಹಾಲಾ 12)
ಅರ್ಧಾವಧಿ: 24-36

ಎರಡನೇಾರ್ಧದಲ್ಲಿ ದಿಟ್ಟ ಪ್ರದರ್ಶನ ನೀಡಿದ ಎಸ್‌ಆರ್‌ಎಂ ವಿಶ್ವವಿದ್ಯಾಲಯ ಮೂರನೇ ಸ್ಥಾನ ಪಡೆದಿತು.


ಅಂತಿಮ ಸ್ಥಾನಮಾನ

  1. ಜೈನ್ ವಿಶ್ವವಿದ್ಯಾಲಯ
  2. ಪಂಜಾಬ್ ವಿಶ್ವವಿದ್ಯಾಲಯ
  3. ಎಸ್‌ಆರ್‌ಎಂ ವಿಶ್ವವಿದ್ಯಾಲಯ
  4. ಲಕ್ಷ್ಮಿಬಾಯಿ ರಾಷ್ಟ್ರೀಯ ದೈಹಿಕ ಶಿಕ್ಷಣ ಸಂಸ್ಥೆ (ಎಲ್‌ಎನ್‌ಐಪಿಇ)

ಜೈನ್ ಮಹಿಳಾ ಬಾಸ್ಕೆಟ್‌ಬಾಲ್ ತಂಡದ ಆಟಗಾರ್ತಿಯರಾದ ಆದ್ಯ ಗೌಡಾ, ಅಂಜು, ಖುಷಿ, ಆಹಾನಾ, ನೇತ್ರಾ, ಸಿಯಾ ದಿಯೋಧ್ಯರ್ ಸೇರಿದಂತೆ ತಂಡದ ಸದಸ್ಯರು ಮತ್ತು ಕೋಚ್ ಪುನೀತ್ ಅವರ ಮಾರ್ಗದರ್ಶನದಲ್ಲಿ ಐತಿಹಾಸಿಕ ಗೆಲುವು ಸಾಧಿಸಿದರು. ಕ್ರೀಡಾ ನಿರ್ದೇಶಕ ಡಾ. ಯು.ವಿ. ಶಂಕರ್ ಮತ್ತು ಮ್ಯಾನೇಜರ್ ಲೋಕೇಶ್ ಉಪಸ್ಥಿತರಿದ್ದರು.

ಬೆಂಗಳೂರುನಲ್ಲಿ ನಡೆದ ಈ ಚಾಂಪಿಯನ್‌ಶಿಪ್ ಮಹಿಳಾ ವಿಶ್ವವಿದ್ಯಾಲಯ ಬಾಸ್ಕೆಟ್‌ಬಾಲ್ ಕ್ರೀಡೆಯಲ್ಲಿ ಹೊಸ ಅಧ್ಯಾಯವನ್ನು ಬರೆದಿದೆ.

Continue Reading

Trending