ಆರೋಗ್ಯ
ಸೇತುಬಂಧಾಸನ
ಸೇತುಬಂಧಾಸನ ಎಂಬ ಹೆಸರು ಸಂಸ್ಕೃತ ಭಾಷೆಯದ್ದಾಗಿದೆ. “ಸೇತು” ಎಂದರೆ ಸೇತುವೆ ಎಂದರ್ಥ. “ಬಂಧ” ಎಂದರೆ ಬೀಗ ಎಂದರ್ಥ ಹಾಗು “ಆಸನ” ಎಂದರೆ ಭಂಗಿ ಎಂದರ್ಥ. ಇದು ಬಹಳ ಸರಳವಾದ ಆಸನವಾಗಿದ್ದು, ಪ್ರಾರಂಭಿಕ ಹಂತದಲ್ಲಿರುವವರು ಕೂಡ ಸುಲಭವಾಗಿ ಹಾಕಬಹುದು. ಬನ್ನಿ, ಈ ಆಸನವನ್ನು ಹಾಕುವ ಬಗೆ ಹೇಗೆ ಎಂದು ತಿಳಿದುಕೊಳ್ಳೋಣ.ರಕ್ತದೊತ್ತಡದಲ್ಲಿ ಏರುಪೇರಾಗುವ ಸಮಸ್ಯೆ ಕೇವಲ ವೃದ್ಧರಲ್ಲಿ ಮಾತ್ರವಲ್ಲದೇ, ಇತ್ತೀಚಿನ ದಿನಗಳಲ್ಲಿ ವಯಸ್ಕರಲ್ಲಿಯೂ ಕಾಣಿಸಿಕೊಳ್ಳುತ್ತಿದೆ. ಅತಿಯಾದ ಕೆಲಸದೊತ್ತಡದಿಂದ ಒಳ್ಳೆಯ ಆಹಾರ ಪದ್ಧತಿಯನ್ನು ಹಾಗು ವ್ಯಾಯಾಮವನ್ನು ದಿನನಿತ್ಯದ ಚಟುವಟಿಕೆಗಳಲ್ಲಿ ಅಳವಡಿಸಿಕೊಳ್ಳುವುದಕ್ಕೆ ಸಾಧ್ಯವಾಗುತ್ತಿಲ್ಲ. ಇದು ರಕ್ತದೊತ್ತಡದಲ್ಲಿ ಏರುಪೇರಾಗಲು ಕಾರಣವಾಗುತ್ತದೆ.ನೀವು ನಿಜವಾಗಲು, ಸಹಜ ಸ್ಥಿತಿಯಲ್ಲಿ ರಕ್ತದೊತ್ತಡವನ್ನು ನಿರ್ವಹಿಸಲು ನೈಸರ್ಗಿಕವಾದ ಪರಿಹಾರವನ್ನು ಬಹಳ ಬೇಗ ಕಂಡುಕೊಳ್ಳಬೇಕಾದ್ದಲ್ಲಿ ಯೋಗಾಭ್ಯಾಸವನ್ನು ಅಳವಡಿಸಿಕೊಳ್ಳುವುದು ಒಳ್ಳೆಯದು. ಸೇತುಬಂಧಾಸನ ಅಥವಾ ಆಂಗ್ಲ ಭಾಷೆಯಲ್ಲಿ “ಬ್ರಿಡ್ಜ್ ಪೋಸ್” ಎಂತಲೂ ಕರೆಯಲ್ಪಡುವ ಈ ಆಸನವು ರಕ್ತದೊತ್ತಡವನ್ನು ನಿರ್ವಹಿಸಲು ಉತ್ತಮವಾಗಿದೆ.
ಸೇತುಬಂಧಾಸನಮಾಡುವ ವಿಧಾನ:
⦁ ನಿಮ್ಮ ಎರಡೂ ಕಾಲುಗಳು ಮುಂದಕ್ಕೆ ಚಾಚಿರುವಂತೆ ಕೆಳಗೆ ಕುಳಿತುಕೊಳ್ಳಬೇಕು.
⦁ ನಿಧಾನವಾಗಿ ಹಾಗೆ ಹಿಂದಕ್ಕೆ ಬಾಗಿ ಮಲಗಿಕೊಳ್ಳಿ.
⦁ ನಿಮ್ಮ ಪಾದಗಳಿಗೆ ಮತ್ತು ಸೊಂಟಕ್ಕೆ ಸ್ವಲ್ಪ ಅಂತರವಿರುವಂತೆ ಮಂಡಿಯನ್ನು ಮಡಿಸಿ.
⦁ ಎರಡೂ ತೋಳುಗಳು ದೇಹದ ಎರಡೂ ಬದಿಯಲ್ಲಿ ಅಂಗೈ ಕೆಳಕ್ಕೆ ಮುಖ ಮಾಡುವಂತೆ ಇರಿಸಬೇಕು.
⦁ ದೀರ್ಘವಾಗಿ ಉಸಿರಾಡಿಸಿ, ನಿಧಾನವಾಗಿ ಬೆನ್ನನ್ನು ಎತ್ತಬೇಕು.
⦁ ನಿಮ್ಮ ಗದ್ದವು ನಿಮ್ಮ ಎದೆಭಾಗಕ್ಕೆ ತಾಕುವ ತನಕ ಮೇಲೆತ್ತಬೇಕು.
⦁ ನಿಮ್ಮ ಎರಡೂ ತೊಡೆಗಳು ಸಮನಾಂತರವಾಗಿರಬೇಕು.
⦁ ಎರಡೂ ಅಂಗೈಗಳನ್ನು ನೆಲಕ್ಕೆ ಒತ್ತಿ, ನಿಮ್ಮ ಬೆನ್ನು ಹಾಗು ಹೆಡಕನ್ನು ಮೇಲೆತ್ತಿ.
⦁ ಇದೇ ಭಂಗಿಯಲ್ಲಿ ಕೆಲ ಕ್ಷಣಗಳ ಕಾಲ ಇರಬೇಕು.
ಸೇತುಬಂಧಾಸನದ ಅನಕೂಲಗಳು:
⦁ ಸ್ನಾಯುಗಳಿಗೆ ಶಕ್ತಿ ಕೊಡುತ್ತದೆ.
⦁ ಕಾಲುಗಳನ್ನು ಶಕ್ತಿಯುತವನ್ನಾಗಿ ಮಾಡುತ್ತದೆ.
⦁ ಬೆನ್ನು ಹಾಗು ಕುತ್ತಿಗೆಯನ್ನು ಸದೃಢಗೊಳಿಸುತ್ತದೆ.
⦁ ಪಚನ ಕಾರ್ಯವನ್ನು ವೃದ್ಧಿಸುತ್ತದೆ.
⦁ ಒತ್ತಡವನ್ನು ನಿವಾರಿಸುತ್ತದೆ.
⦁ ರಕ್ತ ಸಂಚಾರವನ್ನು ಸುಲಭಗೊಳಿಸುತ್ತದೆ.
⦁ ಥಾಯಿರಾಯಿಡ್ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ.
ಎಚ್ಚರಿಕೆ: ಕುತ್ತಿಗೆ ಅಥವಾ ಭುಜಗಳಲ್ಲಿ ಗಾಯಗಳಾದವರು, ಬೆನ್ನೆಲಬಿನ ಸಮಸ್ಯೆ ಇರುವವರು ಈ ಆಸನವನ್ನು ಮಾಡಬರದು. ಯೋಗಾ ತರಬೇತಿದಾರರ ಸಲಹೆ ಸೂಚನೆಗಳ ಆಧಾರದ ಮೇಲೆ ಅಭ್ಯಾಸ ಮಾಡುವುದು ಹೆಚ್ಚು ಸೂಕ್ತ.
ಆರೋಗ್ಯ
Bengaluru ಹೆಚ್‌ಸಿಜಿ ಆಸ್ಪತ್ರೆಗೆ ಕೇಂದ್ರದ ಕಠಿಣ ಶಾಕ್: 2 ವರ್ಷ ಹೊಸ ಕ್ಲಿನಿಕಲ್ ಟ್ರಯಲ್‌ಗೆ ಬ್ರೇಕ್!
ಬೆಂಗಳೂರು: ನಗರದ ಪ್ರತಿಷ್ಠಿತ ಹೆಚ್‌ಸಿಜಿ (HCG) ಕ್ಯಾನ್ಸರ್ ಆಸ್ಪತ್ರೆಯ ನೈತಿಕ ಸಮಿತಿಗೆ (Ethics Committee) ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ (CDSCO) ಭಾರೀ ಆಘಾತ ನೀಡಿದೆ. ಮಾನವ ಪ್ರಯೋಗಗಳ (Clinical Trials) ವೇಳೆ ಗಂಭೀರ ನಿಯಮ ಉಲ್ಲಂಘನೆಗಳು ಹಾಗೂ ಸುರಕ್ಷತಾ ಲೋಪಗಳು ಕಂಡುಬಂದ ಹಿನ್ನೆಲೆಯಲ್ಲಿ, ಮುಂದಿನ 24 ತಿಂಗಳುಗಳ ಕಾಲ ಯಾವುದೇ ಹೊಸ ಕ್ಲಿನಿಕಲ್ ಟ್ರಯಲ್‌ಗಳನ್ನು ನಡೆಸದಂತೆ ಕೇಂದ್ರ ಸರ್ಕಾರ ನಿಷೇಧ ಹೇರಿದೆ.
ಆಸ್ಪತ್ರೆಯ ನೈತಿಕ ಸಮಿತಿಯ ಮಾಜಿ ಅಧ್ಯಕ್ಷ ಹಾಗೂ ನಿವೃತ್ತ ನ್ಯಾಯಮೂರ್ತಿ ಪಿ. ಕೃಷ್ಣಭಟ್ ಸಲ್ಲಿಸಿದ್ದ ಲಿಖಿತ ದೂರಿನ ಆಧಾರದ ಮೇಲೆ ಕೇಂದ್ರ ಮತ್ತು ರಾಜ್ಯ ಔಷಧ ನಿಯಂತ್ರಣ ಸಂಸ್ಥೆಗಳು ಜಂಟಿ ತನಿಖೆ ನಡೆಸಿದ್ದವು. ತನಿಖೆಯಲ್ಲಿ ಹಲವು ಗಂಭೀರ ಅಕ್ರಮಗಳು ಬೆಳಕಿಗೆ ಬಂದಿದ್ದು, ನೈತಿಕ ಸಮಿತಿಯು ನಿಯಮಾವಳಿಗಳನ್ನು ಪಾಲಿಸದಿರುವುದು ದೃಢಪಟ್ಟಿದೆ.
ವರದಿಗಳ ಪ್ರಕಾರ, ಔಷಧ ಸಂಶೋಧನಾ ಪ್ರಯೋಗಗಳ ಸಂದರ್ಭದಲ್ಲಿ ಕೆಲವು ರೋಗಿಗಳು ಮೃತಪಟ್ಟಿದ್ದರೂ, ಆ ಮಾಹಿತಿಯನ್ನು ನಿಯಂತ್ರಣ ಸಂಸ್ಥೆಗೆ ನಿಗದಿತ ಅವಧಿಯಲ್ಲಿ ಸಲ್ಲಿಸಲಾಗಿಲ್ಲ. ಕೆಲವು ಪ್ರಕರಣಗಳಲ್ಲಿ ಸಾವಿನ ವರದಿಗಳನ್ನೇ ದಾಖಲಿಸದೇ ಮುಚ್ಚಿಡಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ. ಅಲ್ಲದೆ, ಪ್ರಯೋಗಗಳಿಂದ ಹಾನಿಗೊಳಗಾದ ಅಥವಾ ಮೃತಪಟ್ಟ ರೋಗಿಗಳ ಕುಟುಂಬಗಳಿಗೆ ನೀಡಬೇಕಾದ ಪರಿಹಾರ ಧನ ವಿತರಣೆ ಕುರಿತು ಅಗತ್ಯ ದಾಖಲೆಗಳ ಕೊರತೆಯೂ ಕಂಡುಬಂದಿದೆ.
ಹೊಸ ಔಷಧ ಪ್ರಯೋಗಗಳಿಗೆ ಒಳಗಾಗುವ ರೋಗಿಗಳ ಸುರಕ್ಷತೆ ಮತ್ತು ವೈದ್ಯಕೀಯ ಆರೈಕೆಯನ್ನು ಖಚಿತಪಡಿಸುವಲ್ಲಿ ಆಸ್ಪತ್ರೆ ವಿಫಲವಾಗಿದೆ ಎಂದು ತನಿಖಾ ವರದಿ ಉಲ್ಲೇಖಿಸಿದೆ. ಇದರ ಹಿನ್ನೆಲೆಯಲ್ಲಿ ಸಿಡಿಎಸ್‌ಸಿಒ ಕಠಿಣ ಕ್ರಮ ಕೈಗೊಂಡಿದೆ.
ಆದರೆ, ಈ ನಿಷೇಧವು ಕೇವಲ ಹೊಸ ಕ್ಲಿನಿಕಲ್ ಟ್ರಯಲ್‌ಗಳಿಗೆ ಮಾತ್ರ ಅನ್ವಯವಾಗುತ್ತದೆ. ಆಸ್ಪತ್ರೆಯ ಸಾಮಾನ್ಯ ಕ್ಯಾನ್ಸರ್ ಚಿಕಿತ್ಸೆ, ತಪಾಸಣೆ ಹಾಗೂ ಈಗಾಗಲೇ ನಡೆಯುತ್ತಿರುವ ಪ್ರಯೋಗಗಳು ಮುಂದುವರಿಯಲಿವೆ. ಆದರೆ ಚಾಲ್ತಿಯಲ್ಲಿರುವ ಎಲ್ಲಾ ಪ್ರಯೋಗಗಳ ಕುರಿತು ಪ್ರತಿ ತಿಂಗಳು ರೋಗಿಗಳ ಸುರಕ್ಷತಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸುವುದು ಕಡ್ಡಾಯವಾಗಿದೆ.
ಸಿಡಿಎಸ್‌ಸಿಒ ಆದೇಶವನ್ನು ಪರಿಶೀಲಿಸುತ್ತಿರುವ ಹೆಚ್‌ಸಿಜಿ ಆಡಳಿತ ಮಂಡಳಿ, ಮುಂದಿನ ಕಾನೂನು ಕ್ರಮಗಳ ಕುರಿತು ತಜ್ಞರೊಂದಿಗೆ ಸಮಾಲೋಚನೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ.
ಆರೋಗ್ಯ
ಫಾಸ್ಟ್ ಲೈಫ್‌ನಲ್ಲಿ ಯೋಗದ ಮಹತ್ವ ಹೆಚ್ಚಳ: ಆರೋಗ್ಯಕರ ಬದುಕಿಗೆ ಯೋಗವೇ ಮಂತ್ರ
ನಾಳೆ ಜಗತ್ತಿನಾದ್ಯಂತ International Day of Yogaವನ್ನು ಆಚರಿಸಲಾಗುತ್ತಿದೆ. ಆಧುನಿಕ ಜೀವನಶೈಲಿಯಲ್ಲಿ ಕೆಲಸದ ಒತ್ತಡ, ಸಮಯದ ಕೊರತೆ, ಮಾನಸಿಕ ಆತಂಕ ಹಾಗೂ ಅನಾರೋಗ್ಯಕರ ಆಹಾರ ಪದ್ಧತಿಗಳಿಂದ ಜನರು ವಿವಿಧ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಯೋಗವು ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡುವ ಪರಿಣಾಮಕಾರಿ ಮಾರ್ಗವಾಗಿ ಹೊರಹೊಮ್ಮಿದೆ.ತಜ್ಞರ ಪ್ರಕಾರ, ಪ್ರತಿದಿನ ಕೇವಲ 20 ರಿಂದ 30 ನಿಮಿಷಗಳ ಯೋಗಾಭ್ಯಾಸವು ದೇಹದ ಲವಚಿಕತೆಯನ್ನು ಹೆಚ್ಚಿಸುವುದರ ಜೊತೆಗೆ ಮನಸ್ಸಿಗೆ ಶಾಂತಿ ನೀಡುತ್ತದೆ. ಯೋಗದ ಮೂಲಕ ಒತ್ತಡವನ್ನು ಕಡಿಮೆ ಮಾಡಬಹುದು, ಏಕಾಗ್ರತೆಯನ್ನು ವೃದ್ಧಿಸಬಹುದು ಹಾಗೂ ಉತ್ತಮ ನಿದ್ರೆಯನ್ನು ಪಡೆಯಬಹುದು.ಇಂದಿನ ವೇಗದ ಬದುಕಿನಲ್ಲಿ ಮೊಬೈಲ್, ಕಂಪ್ಯೂಟರ್ ಮತ್ತು ಸಾಮಾಜಿಕ ಜಾಲತಾಣಗಳ ಅತಿಯಾದ ಬಳಕೆಯಿಂದ ಯುವಜನರಲ್ಲಿ ಮಾನಸಿಕ ಒತ್ತಡ ಹೆಚ್ಚಾಗುತ್ತಿದೆ. ಯೋಗ ಮತ್ತು ಪ್ರಾಣಾಯಾಮ ಅಭ್ಯಾಸಗಳು ಈ ಸಮಸ್ಯೆಗಳನ್ನು ನಿಯಂತ್ರಿಸಲು ನೆರವಾಗುತ್ತವೆ ಎಂದು ಆರೋಗ್ಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.ನಾಳೆಯ ಯೋಗ ದಿನಾಚರಣೆಯ ಅಂಗವಾಗಿ ದೇಶದ ವಿವಿಧ ನಗರಗಳಲ್ಲಿ ಸಾಮೂಹಿಕ ಯೋಗ ಪ್ರದರ್ಶನ, ಆರೋಗ್ಯ ಜಾಗೃತಿ ಕಾರ್ಯಕ್ರಮಗಳು ಹಾಗೂ ವಿಶೇಷ ಕಾರ್ಯಾಗಾರಗಳು ನಡೆಯಲಿವೆ. ಶಾಲೆಗಳು, ಕಾಲೇಜುಗಳು ಮತ್ತು ವಿವಿಧ ಸಂಸ್ಥೆಗಳು ಯೋಗದ ಮಹತ್ವದ ಬಗ್ಗೆ ಅರಿವು ಮೂಡಿಸಲು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿವೆ.
ವರದಿ: ಯೋಗವು ಕೇವಲ ವ್ಯಾಯಾಮವಲ್ಲ; ಅದು ಆರೋಗ್ಯಕರ ಮತ್ತು ಸಂತೋಷದಾಯಕ ಜೀವನದತ್ತ ಕೊಂಡೊಯ್ಯುವ ಜೀವನಶೈಲಿಯಾಗಿದೆ.
“ಆರೋಗ್ಯಕರ ದೇಹ, ಶಾಂತ ಮನಸ್ಸು ಮತ್ತು ಸಮತೋಲನಯುತ ಜೀವನಕ್ಕಾಗಿ ಯೋಗವನ್ನು ಜೀವನದ ಅವಿಭಾಜ್ಯ ಅಂಗವನ್ನಾಗಿ ಮಾಡಿಕೊಳ್ಳಬೇಕು” ಎಂಬ ಸಂದೇಶದೊಂದಿಗೆ ಈ ಬಾರಿಯ ಯೋಗ ದಿನವನ್ನು ಆಚರಿಸಲಾಗುತ್ತಿದೆ.
ಆರೋಗ್ಯ
ಮಧುಮೇಹಿಗಳು ಎಚ್ಚರ! ಉಳಿದವರಿಗೆ ಲಾಭ: ಹಲಸಿನ ಹಣ್ಣಿನ ಆರೋಗ್ಯಕರ ವಿಶೇಷತೆಗಳು
ಹಲಸಿನ ಹಣ್ಣು ಹಲಸಿನ ಹಣ್ಣು ಪೌಷ್ಟಿಕಾಂಶಗಳಿಂದ ಸಮೃದ್ಧವಾಗಿದ್ದು, ಆರೋಗ್ಯಕ್ಕೆ ಹಲವು ರೀತಿಯಲ್ಲಿ ಪ್ರಯೋಜನಕಾರಿಯಾಗಿದೆ. ಅದರ ಪ್ರಮುಖ ಲಾಭಗಳು ಹೀಗಿವೆ:
ರೋಗನಿರೋಧಕ ಶಕ್ತಿ ಹೆಚ್ಚಳ – ವಿಟಮಿನ್ C ಸಮೃದ್ಧವಾಗಿದ್ದು ದೇಹದ ರಕ್ಷಣಾ ಶಕ್ತಿಯನ್ನು ಬಲಪಡಿಸುತ್ತದೆ.
ಜೀರ್ಣಕ್ರಿಯೆ ಸುಧಾರಣೆ – ಹೆಚ್ಚಿನ ನಾರಿನಾಂಶ (ಫೈಬರ್) ಜೀರ್ಣಕ್ರಿಯೆಗೆ ಸಹಾಯ ಮಾಡಿ ಮಲಬದ್ಧತೆ ತಡೆಯುತ್ತದೆ.
ಹೃದಯದ ಆರೋಗ್ಯಕ್ಕೆ ಒಳ್ಳೆಯದು – ಪೊಟ್ಯಾಸಿಯಂ ರಕ್ತದೊತ್ತಡ ನಿಯಂತ್ರಣಕ್ಕೆ ನೆರವಾಗಬಹುದು.
ತ್ವರಿತ ಶಕ್ತಿ ನೀಡುತ್ತದೆ – ನೈಸರ್ಗಿಕ ಕಾರ್ಬೊಹೈಡ್ರೇಟ್‌ಗಳ ಉತ್ತಮ ಮೂಲ.
ಚರ್ಮದ ಆರೈಕೆ – ವಿಟಮಿನ್ A ಮತ್ತು ಆಂಟಿಆಕ್ಸಿಡೆಂಟ್‌ಗಳು ಚರ್ಮದ ಆರೋಗ್ಯ ಕಾಪಾಡುತ್ತವೆ.
ಎಲುಬುಗಳನ್ನು ಬಲಪಡಿಸುತ್ತದೆ – ಕ್ಯಾಲ್ಸಿಯಂ ಮತ್ತು ಮ್ಯಾಗ್ನೀಷಿಯಂ ಎಲುಬಿನ ಆರೋಗ್ಯಕ್ಕೆ ಸಹಕಾರಿ.
ಕಣ್ಣಿನ ಆರೋಗ್ಯಕ್ಕೆ ಲಾಭಕಾರಿ – ವಿಟಮಿನ್ A ದೃಷ್ಟಿ ಶಕ್ತಿಯನ್ನು ಬೆಂಬಲಿಸುತ್ತದೆ.
ಪೌಷ್ಟಿಕಾಂಶಗಳ ಭಂಡಾರ – ದೇಹಕ್ಕೆ ಅಗತ್ಯವಾದ ಹಲವು ವಿಟಮಿನ್‌ಗಳು ಮತ್ತು ಖನಿಜಾಂಶಗಳನ್ನು ಒದಗಿಸುತ್ತದೆ.
ಗಮನಿಸಬೇಕಾದ ಅಂಶ:ಹಲಸಿನ ಹಣ್ಣನ್ನು ಮಿತ ಪ್ರಮಾಣದಲ್ಲಿ ಸೇವಿಸುವುದು ಉತ್ತಮ.ಮಧುಮೇಹ ಇರುವವರು ವೈದ್ಯರ ಸಲಹೆಯಂತೆ ಸೇವಿಸಬೇಕು.
ಸಾರಾಂಶ: ಹಲಸಿನ ಹಣ್ಣು ರುಚಿ ಮತ್ತು ಆರೋಗ್ಯ ಎರಡರಲ್ಲೂ ಉತ್ತಮ ಆಯ್ಕೆಯಾಗಿದ್ದು, ಸಮತೋಲಿತ ಆಹಾರ ಪದ್ಧತಿಯಲ್ಲಿ ಸೇರಿಸಿಕೊಳ್ಳಲು ಯೋಗ್ಯವಾದ ಹಣ್ಣಾಗಿದೆ.
-
ದೇಶ10 hours agoಅಲಿ ಖಮೇನಿ ಅಂತಿಮಯಾತ್ರೆ ಆರಂಭ: ತೆಹ್ರಾನ್ ಬೀದಿಗಳಲ್ಲಿ ಲಕ್ಷಾಂತರ ಜನರ ಅಂತಿಮ ನಮನ
-
ದೇಶ16 hours agoSakkath Santhe 2026: ಗೃಹ ಉತ್ಪನ್ನಗಳಿಗೆ ವೇದಿಕೆ, ಇಂದಿರಾನಗರದಲ್ಲಿ ಜನಸಾಗರ
-
ದೇಶ13 hours agoಚಿನ್ನದ ಬೆಲೆಯಲ್ಲಿ ಮತ್ತೆ ಇಳಿಕೆ! ಜುಲೈ 6ರ ಬೆಂಗಳೂರು ಗೋಲ್ಡ್ ರೇಟ್ ಇಲ್ಲಿದೆ
-
ದೇಶ14 hours agoರಾಜಾಜಿನಗರ ಶಾಸಕರ ಕಚೇರಿ ಮುಂದೆ ಹೈಡ್ರಾಮಾ: ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರ ವಾಗ್ವಾದ
-
ದೇಶ12 hours ago“ಇನ್ನೆಷ್ಟು ಜನ ಸತ್ತರೆ ಕ್ರಮ?” ಸರ್ಕಾರವನ್ನು ನೇರವಾಗಿ ಪ್ರಶ್ನಿಸಿದ ಎಸ್.ಟಿ. ಸೋಮಶೇಖರ್
-
ದೇಶ11 hours ago‘ಮಸೀದಿ, ಚೌಲ್ಟ್ರಿಗಳಲ್ಲಿ ಸಾಮೂಹಿಕ SIR’ – ಚುನಾವಣಾ ಆಯೋಗದ ಮೆಟ್ಟಿಲೇರಿದ ಬಿಜೆಪಿ-ಜೆಡಿಎಸ್
-
ದೇಶ14 hours agoPoK ಪ್ರತಿಭಟನೆ ತೀವ್ರ: ‘ಗಡಿ ತೆರೆಯಿರಿ, ಮಾನವೀಯ ನೆರವು ನೀಡಿ’ ಎಂದು ಭಾರತದತ್ತ ಮೊರೆ
-
ದೇಶ11 hours agoಚೀನಾ-ಪಾಕ್ ಜಲಾಂತರ್ಗಾಮಿಗಳಿಗೆ ಭಾರತದ ಹೈಟೆಕ್ ಬ್ರಹ್ಮಾಸ್ತ್ರ! ಸಮುದ್ರದಾಳದಲ್ಲಿ ‘ಸೀಕ್ರೆಟ್ ಸೆನ್ಸಾರ್ ನೆಟ್ವರ್ಕ್’
