Connect with us

ದೇಶ

ಇರಾನ್‌ನಲ್ಲಿ ಮಹಿಳಾ ದಂಗೆಗೆ ನಾಂದಿ? ‘ಅಹೂ ದರ್ಯಾಯೀ’ ವಿಡಿಯೋ ಮತ್ತೆ ವೈರಲ್

Published

on

ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ನಡುವೆಯೇ ಇರಾನ್ನಲ್ಲಿ ಮಹಿಳೆಯರ ಪ್ರತಿಭಟನೆ ಮತ್ತೆ ಚರ್ಚೆಗೆ ಬಂದಿದೆ. ಒಂದು ಕಡೆ ಇಸ್ರೇಲ್ ಮತ್ತು ಅಮೆರಿಕ ನಡುವಿನ ಸೈನಿಕ ಉದ್ವಿಗ್ನತೆ ಹೆಚ್ಚುತ್ತಿರುವಾಗ, ಮತ್ತೊಂದು ಕಡೆ ದೇಶದೊಳಗೆ ಮಹಿಳೆಯರ ಹಕ್ಕುಗಳ ಪ್ರಶ್ನೆ ತೀವ್ರವಾಗಿದೆ.

ಸೋಶಿಯಲ್ ಮೀಡಿಯಾದಲ್ಲಿ “ಅಹೂ ದರ್ಯಾಯೀ” ಎಂಬ ಯುವತಿಯ ಹೆಸರು ಮತ್ತೆ ವೈರಲ್ ಆಗಿದ್ದು, 2024ರ ನವೆಂಬರ್ 3ರಂದು ನಡೆದ ಘಟನೆಗೆ ಸಂಬಂಧಿಸಿದ ವಿಡಿಯೋಗಳು ವ್ಯಾಪಕವಾಗಿ ಹಂಚಲಾಗುತ್ತಿದೆ.


2024 ನವೆಂಬರ್ 3ರಂದು ಏನಾಯಿತು?

2024ರ ನವೆಂಬರ್ 3ರಂದು ಟೆಹ್ರಾನ್ ನಗರದ ರಸ್ತೆಯ ಮಧ್ಯದಲ್ಲಿ ಅಹೂ ದರ್ಯಾಯೀ ಎಂಬ ಯುವತಿ ಇಸ್ಲಾಮಿಕ್ ಡ್ರೆಸ್ ಕೋಡ್ ವಿರುದ್ಧ ಪ್ರತಿಭಟನೆ ನಡೆಸಿದ್ದಾಳೆ ಎಂಬ ವರದಿಗಳು ಹೊರಬಂದಿವೆ.
Islamic Azad University ನಿಯಮಗಳನ್ನು ವಿರೋಧಿಸಿ ಸಾರ್ವಜನಿಕವಾಗಿ ಆಕೆ ಪ್ರತಿಭಟನೆ ನಡೆಸಿದ್ದಳು ಎನ್ನಲಾಗಿದೆ. ಈ ಘಟನೆ ಬಳಿಕ ಪೊಲೀಸರು ಆಕೆಯನ್ನು ಬಂಧಿಸಿದ್ದರು.


ಬಂಧನ, ವದಂತಿಗಳು ಮತ್ತು ಅಂತಾರಾಷ್ಟ್ರೀಯ ಪ್ರತಿಕ್ರಿಯೆ

ಘಟನೆಯ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಹಲವು ವದಂತಿಗಳು ಹರಿದಾಡಿದವು. ಆದರೆ ಸ್ಥಳೀಯ ಪೊಲೀಸರು ಕೆಲವು ಆರೋಪಗಳನ್ನು ತಳ್ಳಿಹಾಕಿದ್ದಾರೆ.
ಅಂತಾರಾಷ್ಟ್ರೀಯ ಮಾಧ್ಯಮಗಳಾದ BBC ಮತ್ತು ಮಾನವ ಹಕ್ಕು ಸಂಸ್ಥೆ Amnesty International ವರದಿಗಳ ಪ್ರಕಾರ, ಆಕೆಯನ್ನು ಮಾನಸಿಕ ಚಿಕಿತ್ಸಾ ಕೇಂದ್ರಕ್ಕೆ ದಾಖಲಿಸಲಾಗಿದೆ ಎಂದು ತಿಳಿಸಲಾಗಿದೆ.


ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಜೋರಾಗಿ

ಈ ಘಟನೆ ಬಳಿಕ ಇರಾನ್‌ನ ಮಹಿಳಾ ಹಕ್ಕುಗಳ ಹೋರಾಟ ಮತ್ತೆ ಜಾಗತಿಕ ಮಟ್ಟದಲ್ಲಿ ಚರ್ಚೆಗೆ ಬಂದಿದೆ. ಕೆಲವರು ಈ ಘಟನೆಯನ್ನು ಸರ್ಕಾರದ ಕಟ್ಟುನಿಟ್ಟಿನ ನೀತಿಗಳಿಗೆ ವಿರುದ್ಧದ ಪ್ರತೀಕವಾಗಿ ನೋಡುತ್ತಿದ್ದರೆ, ಇನ್ನು ಕೆಲವರು ಇದನ್ನು ಸಾಮಾಜಿಕ ಅಶಾಂತಿಯ ಸಂಕೇತವೆಂದು ವಿಶ್ಲೇಷಿಸುತ್ತಿದ್ದಾರೆ.

ಇದರಿಂದಲೇ ಇರಾನ್‌ನ ಇಂದಿನ ಸ್ಥಿತಿಗೆ ಕಾರಣವೇ ಎಂಬ ಪ್ರಶ್ನೆಗಳು ಉದ್ಭವಿಸಿದ್ದರೂ, ಇದಕ್ಕೆ ಅಧಿಕೃತ ದೃಢೀಕರಣಗಳಿಲ್ಲ.

ದೇಶ

ನೆತನ್ಯಾಹು ವಿರುದ್ಧ ಟ್ರಂಪ್ ಆಕ್ರೋಶ: ‘ನಿನಗೆ ಹುಚ್ಚು ಹಿಡಿದಿದ್ಯಾ?’ ಎಂದು ದೂರವಾಣಿಯಲ್ಲೇ ತರಾಟೆ

Published

on

ವಾಷಿಂಗ್ಟನ್‌: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ನಡುವಿನ ದೂರವಾಣಿ ಸಂಭಾಷಣೆ ಇದೀಗ ಜಾಗತಿಕ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಲೆಬನಾನ್ ರಾಜಧಾನಿ ಬೈರೂತ್ ಮೇಲೆ ಇಸ್ರೇಲ್ ನಡೆಸುತ್ತಿರುವ ಸರಣಿ ವೈಮಾನಿಕ ದಾಳಿಗಳ ಕುರಿತು ಟ್ರಂಪ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಹಲವು ಮಾಧ್ಯಮ ವರದಿಗಳು ತಿಳಿಸಿವೆ.

ವರದಿಗಳ ಪ್ರಕಾರ, ಸುಮಾರು 40 ರಿಂದ 60 ನಿಮಿಷಗಳ ಕಾಲ ನಡೆದ ದೂರವಾಣಿ ಸಂಭಾಷಣೆಯಲ್ಲಿ ಟ್ರಂಪ್ ಅತ್ಯಂತ ಆಕ್ರೋಶಭರಿತವಾಗಿ ಮಾತನಾಡಿದ್ದಾರೆ. ಬೈರೂತ್ ಮೇಲಿನ ನಿರಂತರ ಬಾಂಬ್ ದಾಳಿಗಳ ಬಗ್ಗೆ ಕಿಡಿಕಾರಿದ ಅವರು, “ನಿನಗೆ ಹುಚ್ಚು ಹಿಡಿದಿದ್ಯಾ? ನೀನು ಏನು ಮಾಡುತ್ತಿದ್ದೀಯಾ?” ಎಂದು ನೆತನ್ಯಾಹು ಅವರನ್ನು ನೇರವಾಗಿ ಪ್ರಶ್ನಿಸಿದ್ದಾರೆ ಎನ್ನಲಾಗಿದೆ.

ಈ ವೇಳೆ ನೆತನ್ಯಾಹು ಕೂಡ ಅಮೆರಿಕದ ಕೆಲವು ನಿಲುವುಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ವರದಿಗಳು ಹೇಳಿವೆ. ಮಾತುಕತೆಯ ವೇಳೆ ಟ್ರಂಪ್, ನೆತನ್ಯಾಹು ಅವರ ರಾಜಕೀಯ ಮತ್ತು ಕಾನೂನು ಸಂಕಷ್ಟಗಳ ಸಮಯದಲ್ಲಿ ತಾನು ನೀಡಿದ್ದ ಬೆಂಬಲವನ್ನು ನೆನಪಿಸಿಕೊಂಡಿದ್ದಾರೆ.

“ನಾನಿಲ್ಲದಿದ್ದರೆ ನೀನು ಈ ಹೊತ್ತಿಗೆ ಜೈಲಿನಲ್ಲಿರುತ್ತಿದ್ದೆ. ನಾನು ನಿನ್ನನ್ನು ಉಳಿಸುತ್ತಿದ್ದೇನೆ. ಆದರೆ ಇಸ್ರೇಲ್‌ನ ಈ ಕ್ರಮಗಳಿಂದಾಗಿ ಇಡೀ ಜಗತ್ತು ಈಗ ನಿಮ್ಮನ್ನು ಮತ್ತು ಇಸ್ರೇಲ್ ಅನ್ನು ದ್ವೇಷಿಸುತ್ತಿದೆ” ಎಂದು ಟ್ರಂಪ್ ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ಬೆಳವಣಿಗೆ ಅಮೆರಿಕ ಮತ್ತು ಇಸ್ರೇಲ್ ನಡುವಿನ ಸಂಬಂಧಗಳಲ್ಲಿ ಹೊಸ ಉದ್ವಿಗ್ನತೆಗೆ ಕಾರಣವಾಗುವ ಸಾಧ್ಯತೆಯಿದೆ. ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ಹೊತ್ತಿನಲ್ಲಿ, ಎರಡೂ ರಾಷ್ಟ್ರಗಳ ನಾಯಕರ ನಡುವಿನ ಈ ಮಾತುಕತೆ ಅಂತಾರಾಷ್ಟ್ರೀಯ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಯಾಗಿ ಪರಿಗಣಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಈ ವಿಚಾರದ ಕುರಿತು ಅಧಿಕೃತ ಪ್ರತಿಕ್ರಿಯೆಗಳು ಹೊರಬರುವ ಸಾಧ್ಯತೆ ಇದೆ.

Continue Reading

ದೇಶ

ಬಿಜೆಪಿ ಹೈಕಮಾಂಡ್‌ನ ದೊಡ್ಡ ಪ್ಲಾನ್! ಕರ್ನಾಟಕದಲ್ಲಿ ಹೊಸ ನಾಯಕತ್ವಕ್ಕೆ ವೇದಿಕೆ?

Published

on

ಬೆಂಗಳೂರು: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳು ಇದೀಗ ಕರ್ನಾಟಕ ಬಿಜೆಪಿಯಲ್ಲಿ ಹೊಸ ಚರ್ಚೆಗೆ ಕಾರಣವಾಗಿವೆ. ಪ್ರಧಾನಿ Narendra Modi ನೇತೃತ್ವದ ಕೇಂದ್ರ ಸಚಿವ ಸಂಪುಟದಲ್ಲಿ ಜೂನ್ ಮಧ್ಯಭಾಗದಲ್ಲಿ ಮಹತ್ವದ ಪುನಾರಚನೆ ನಡೆಯುವ ಸಾಧ್ಯತೆಗಳಿದ್ದು, ಇದರ ಪರಿಣಾಮ ರಾಜ್ಯ ಬಿಜೆಪಿ ಸಂಘಟನೆಯ ಮೇಲೂ ಬೀಳುವ ಲಕ್ಷಣಗಳು ಗೋಚರಿಸುತ್ತಿವೆ.

ಮುಂಬರುವ ವಿವಿಧ ರಾಜ್ಯಗಳ ವಿಧಾನಸಭೆ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸಚಿವ ಸಂಪುಟದಲ್ಲಿ ಕೆಲವು ಬದಲಾವಣೆಗಳನ್ನು ಮಾಡಲು ಬಿಜೆಪಿ ಹೈಕಮಾಂಡ್ ಚಿಂತನೆ ನಡೆಸಿದೆ ಎನ್ನಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕದ ಒಬ್ಬ ಪ್ರಮುಖ ಕೇಂದ್ರ ಸಚಿವರನ್ನು ಮಂತ್ರಿಮಂಡಲದಿಂದ ಬಿಡುಗಡೆಗೊಳಿಸಿ, ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷರಾಗಿ ನೇಮಿಸುವ ಸಾಧ್ಯತೆಗಳ ಕುರಿತು ಪಕ್ಷದ ವಲಯದಲ್ಲಿ ಚರ್ಚೆಗಳು ಜೋರಾಗಿವೆ.

ಬಹುಕಾಲದಿಂದ ಖಾಲಿ ಇರುವ ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆ ಭರ್ತಿಗೆ ಇದೀಗ ವೇದಿಕೆ ಸಿದ್ಧವಾಗುತ್ತಿರುವಂತೆ ಕಾಣುತ್ತಿದ್ದು, ಕೇಂದ್ರ ಸಚಿವರಾದ Pralhad Joshi ಹಾಗೂ V. Somanna ಅವರ ಹೆಸರುಗಳು ಪ್ರಮುಖವಾಗಿ ಕೇಳಿಬರುತ್ತಿವೆ. ಇಬ್ಬರೂ ನಾಯಕರು ರಾಜ್ಯ ರಾಜಕೀಯದಲ್ಲಿ ಪ್ರಭಾವಿ ಸ್ಥಾನ ಹೊಂದಿದ್ದು, ಸಂಘಟನೆ ಮತ್ತು ಆಡಳಿತ ಎರಡರಲ್ಲೂ ಅನುಭವ ಹೊಂದಿದ್ದಾರೆ.

ಇತ್ತೀಚೆಗೆ ಬಿಜೆಪಿ ರಾಷ್ಟ್ರೀಯ ನಾಯಕರು ಕರ್ನಾಟಕಕ್ಕೆ ಭೇಟಿ ನೀಡಿದ ಬಳಿಕ ರಾಜ್ಯ ಘಟಕದ ಪುನರ್‌ಸಂಘಟನೆ ಕುರಿತ ಚರ್ಚೆಗಳು ಮತ್ತಷ್ಟು ವೇಗ ಪಡೆದುಕೊಂಡಿವೆ. ಹೀಗಾಗಿ ಕೇಂದ್ರ ಸಂಪುಟ ಪುನಾರಚನೆ ಮತ್ತು ರಾಜ್ಯ ಬಿಜೆಪಿ ಅಧ್ಯಕ್ಷರ ನೇಮಕಾತಿ ಪ್ರಕ್ರಿಯೆ ಒಂದಕ್ಕೊಂದು ಸಂಬಂಧ ಹೊಂದಿದೆಯೇ ಎಂಬ ಕುತೂಹಲ ರಾಜಕೀಯ ವಲಯದಲ್ಲಿ ಹೆಚ್ಚಾಗಿದೆ.

ಆದರೆ ಈ ಕುರಿತು ಬಿಜೆಪಿ ಹೈಕಮಾಂಡ್ ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲ. ಕೇಂದ್ರ ಸಚಿವ ಸಂಪುಟದಲ್ಲಿ ಯಾರಿಗೆ ಸ್ಥಾನ ಉಳಿಯಲಿದೆ, ಯಾರಿಗೆ ಹೊಸ ಸಂಘಟನಾ ಜವಾಬ್ದಾರಿ ಸಿಗಲಿದೆ ಎಂಬುದು ಮುಂದಿನ ಕೆಲ ದಿನಗಳಲ್ಲಿ ಸ್ಪಷ್ಟವಾಗುವ ಸಾಧ್ಯತೆಯಿದೆ.

Continue Reading

ಕ್ರೀಡೆ

‘We Did It Twice’ ಟೀ-ಶರ್ಟ್ ವೈರಲ್! ಆರ್‌ಸಿಬಿ ಗೆಲುವಿನ ಅಪರೂಪದ ಫೋಟೋ ಹಂಚಿಕೊಂಡ ಅನುಷ್ಕಾ ಶರ್ಮಾ

Published

on

ಬೆಂಗಳೂರು: ಐಪಿಎಲ್ 2026ರ ಚಾಂಪಿಯನ್ ಆಗಿ ಹೊರಹೊಮ್ಮಿದ Royal Challengers Bengaluru ತಂಡದ ಸಂಭ್ರಮ ಇನ್ನೂ ಮುಂದುವರಿದಿದೆ. ಸತತ ಎರಡನೇ ಬಾರಿ ಟ್ರೋಫಿ ಗೆದ್ದಿರುವ ಆರ್‌ಸಿಬಿ ಆಟಗಾರರು ಹಾಗೂ ಅಭಿಮಾನಿಗಳು ಐತಿಹಾಸಿಕ ಗೆಲುವನ್ನು ವಿಶೇಷವಾಗಿ ಆಚರಿಸುತ್ತಿದ್ದು, ಇದೀಗ ನಟಿ Anushka Sharma ಹಂಚಿಕೊಂಡಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಅನುಷ್ಕಾ ಶರ್ಮಾ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಆರ್‌ಸಿಬಿ ತಂಡದ ಗೆಲುವಿನ ಸಂಭ್ರಮದ ಕೆಲವು ಅಪರೂಪದ ಕ್ಷಣಗಳನ್ನು ಹಂಚಿಕೊಂಡಿದ್ದಾರೆ. ಈ ಚಿತ್ರಗಳಲ್ಲಿ ಆರ್‌ಸಿಬಿಯ ಸ್ಟಾರ್ ಬ್ಯಾಟರ್ Virat Kohli ಹಾಗೂ ತಂಡದ ಬ್ಯಾಟಿಂಗ್ ಕೋಚ್ Dinesh Karthik ಕಾಣಿಸಿಕೊಂಡಿದ್ದಾರೆ.

ಆದರೆ ಎಲ್ಲರ ಗಮನ ಸೆಳೆದಿರುವುದು ವಿರಾಟ್ ಕೊಹ್ಲಿ ಧರಿಸಿದ್ದ ವಿಶೇಷ ಟೀ-ಶರ್ಟ್. ಟೀ-ಶರ್ಟ್‌ನ ಹಿಂಭಾಗದಲ್ಲಿ “One Felt Nice… We Did It Twice” ಎಂಬ ಸಾಲು ಮುದ್ರಿತವಾಗಿದ್ದು, ಆರ್‌ಸಿಬಿಯ ಎರಡನೇ ಐಪಿಎಲ್ ಪ್ರಶಸ್ತಿಯ ಸಂಭ್ರಮವನ್ನು ಪ್ರತಿಬಿಂಬಿಸಿದೆ. ಈ ಸಂದೇಶ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ.

ಕಳೆದ ಸೀಸನ್‌ನಲ್ಲಿ ಪ್ರಶಸ್ತಿ ಗೆದ್ದು ದೀರ್ಘಕಾಲದ ಕನಸನ್ನು ನನಸು ಮಾಡಿಕೊಂಡಿದ್ದ ಆರ್‌ಸಿಬಿ, ಇದೀಗ 2026ರ ಫೈನಲ್‌ನಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಮಣಿಸಿ ಮತ್ತೊಮ್ಮೆ ಕಪ್ ಎತ್ತಿಹಿಡಿದಿದೆ. ಹೀಗಾಗಿ ಈ ಬಾರಿ ಗೆಲುವಿನ ಸಂಭ್ರಮವೂ ವಿಶೇಷವಾಗಿದ್ದು, ಆಟಗಾರರು ತಮ್ಮ ಯಶಸ್ಸನ್ನು ವಿಭಿನ್ನ ರೀತಿಯಲ್ಲಿ ಆಚರಿಸುತ್ತಿದ್ದಾರೆ.

ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಅವರ ಫೋಟೋಗಳಿಗೆ ಅಭಿಮಾನಿಗಳಿಂದ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿದ್ದು, “ಈ ಸಲ ಮಾತ್ರವಲ್ಲ, ಎರಡು ಸಲ ಕಪ್ ನಮ್ದೇ” ಎಂಬ ಕಾಮೆಂಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

Continue Reading

Trending