Connect with us

Blog

ಆಯುಧ ಪೂಜೆ ಮಹತ್ವ​

ಆಯುಧ ಪೂಜೆ ಮಹತ್ವ​

ಆಯುಧ ಪೂಜೆಯ ಕಥೆ:
ರಾಕ್ಷಸ ಮಹಿಷಾಸುರನನ್ನು ಸಂಹಾರ ಮಾಡಲು ಎಲ್ಲಾ ದೇವತೆಗಳು ತಮ್ಮಲ್ಲಿದ್ದ ಆಯುಧಗಳನ್ನು ದುರ್ಗಾ ದೇವಿಗೆ ನೀಡುತ್ತಾರೆ. ದೇವರುಗಳು ತಮ್ಮಲ್ಲಿದ್ದ ಆಯುಧಗಳನ್ನು ಮಾತ್ರವಲ್ಲ. ತಮ್ಮ ಎಲ್ಲಾ ಶಕ್ತಿಗಳನ್ನು ಕೂಡ ಒಟ್ಟುಗೂಡಿಸಿದಾಗ ದುರ್ಗಾ ದೇವಿಯು 10 ಕೈಗಳಿಂದ ಪ್ರಕಟಗೊಂಡಳು. ಅವಳು ತನ್ನ ಪ್ರತಿಯೊಂದು ಕೈಗಳಲ್ಲಿಯೂ ಆಯುಧವನ್ನು ಹಿಡಿದುಕೊಂಡಿದ್ದಳು. ಮಹಿಷಾಸುರನ ಸಂಹಾರಕ್ಕಾಗಿ ದುರ್ಗಾ ದೇವಿ ಮತ್ತು ಮಹಿಷಾಸುರನ ನಡುವೆ 9 ದಿನಗಳ ಸುದೀರ್ಘ ಯುದ್ಧ ನಡೆಯಿತು. ನಂತರ 10ನೇ ದಿನದಂದು ದುರ್ಗಾ ದೇವಿಯು ಮಹಿಷಾಸುರನನ್ನು ಸಂಹಾರ ಮಾಡುತ್ತಾಳೆ. ಯುದ್ಧ ಮುಗಿದ ನಂತರ ತಾಯಿಯ ಬಳಿಯಿದ್ದ ಎಲ್ಲಾ ಆಯುಧಗಳನ್ನು ಆಯಾ ದೇವರಿಗೆ ಒಪ್ಪಿಸಬೇಕಾಗಿತ್ತು. ಇದಕ್ಕೂ ಮುನ್ನ ಆ ಎಲ್ಲಾ ಆಯುಧಗಳನ್ನು ಶುದ್ಧಗೊಳಿಸುವುದು ತುಂಬಾನೇ ಅವಶ್ಯಕವಾಗಿತ್ತು. ಈ ಕಾರಣಕ್ಕಾಗಿ ದುರ್ಗಾ ದೇವಿಯು ಬಳಸಿದ್ದ ಎಲ್ಲಾ ಆಯುಧಗಳನ್ನು ಸ್ವಚ್ಛಗೊಳಿಸಿ ನಂತರ ಅವುಗಳನ್ನು ಪೂಜಿಸಿ ಆಯುಧಗಳನ್ನು ಹಿಂಪಡೆದುಕೊಂಡರು. ಇದರ ನೆನಪಿಗಾಗಿ ಆಯುಧ ಪೂಜೆಯನ್ನು ಮಾಡಲಾಗುತ್ತದೆ.
ಆಯುಧ ಪೂಜೆಯು ದುರ್ಗಾ ದೇವಿಗೆ ಸಂಬಂಧಿಸಿದ ಪೂಜೆಯಾಗಿದೆ. ಇದನ್ನು ನವರಾತ್ರಿಯಲ್ಲಿ ಆಚರಿಸಲಾಗುತ್ತದೆ. ದಸರಾದ ಮೊದಲು ಆಯುಧ ಪೂಜೆಯಲ್ಲಿ ಆಯುಧಗಳು, ವಾದ್ಯಗಳು ಮತ್ತು ಉಪಕರಣಗಳನ್ನು ಪೂಜಿಸುವುದರಿಂದ ಪ್ರತಿ ಕೆಲಸದಲ್ಲೂ ಯಶಸ್ಸು ಸಿಗುತ್ತದೆ ಎನ್ನುವ ನಂಬಿಕೆಯಿದೆ. ಪ್ರಾಚೀನ ಕಾಲದಲ್ಲಿ, ಕ್ಷತ್ರಿಯರು ಯುದ್ಧಕ್ಕೆ ಹೋಗಲು ದಸರಾ ದಿನವನ್ನು ಆರಿಸಿಕೊಳ್ಳುತ್ತಿದ್ದರು, ಇದರಿಂದ ಅವರು ವಿಜಯದ ವರವನ್ನು ಪಡೆಯಬಹುದು ಎನ್ನುವ ನಂಬಿಕೆಯಿತ್ತು. ಇದಲ್ಲದೆ, ಪ್ರಾಚೀನ ಕಾಲದಲ್ಲಿ, ಬ್ರಾಹ್ಮಣರು ಸಹ ದಸರಾ ದಿನದಂದು ಜ್ಞಾನವನ್ನು ಪಡೆಯಲು ತಮ್ಮ ಮನೆಯಿಂದ ಹೊರಗೆ ಬರುತ್ತಿದ್ದರು ಮತ್ತು ವ್ಯಾಪಾರ ವರ್ಗದವರು ಸಹ ದಸರಾ ದಿನದಂದು ತಮ್ಮ ವ್ಯವಹಾರವನ್ನು ಪ್ರಾರಂಭಿಸುವುದು ಒಳ್ಳೆಯದು ಎಂದು ಪರಿಗಣಿಸಿದ್ದರು. ಇದೇ ಕಾರಣಕ್ಕೆ ದಸರಾಕ್ಕೂ ಮುನ್ನ ಆಯುಧ ಪೂಜೆಯನ್ನು ಮಾಡುವ ಸಂಪ್ರದಾಯ ಬೆಳೆದುಕೊಂಡು ಬಂದಿದೆ.
ಈ ದಿನ ನಾವು ಬಳಸುವ ಪ್ರತಿಯೊಂದು ಆಯುಧಗಳನ್ನು ಅಥವಾ ಕೆಲಸಕ್ಕೆ ಸಂಬಂಧಿಸಿದ ವಸ್ತುಗಳನ್ನು ಶುದ್ಧಗೊಳಿಸಿ ಪೂಜಿಸಲಾಗುತ್ತದೆ. ಕೆಲವು ಭಕ್ತರು ದೇವಿಯ ಆಶೀರ್ವಾದ ಪಡೆಯಲು ತಮ್ಮ ವಿಜಯದ ಸಾಧನೆಗಳನ್ನು ಅಂದರೆ ತಮ್ಮ ಸಾಧನಗಳನ್ನು ದೇವಿಯ ಮುಂದೆ ಇಡುತ್ತಾರೆ. ಶಾಸ್ತ್ರಪೂಜೆಯ ದಿನದಂದು ಪುಸ್ತಕಗಳನ್ನು, ಪೆನ್ನುಗಳು, ಚಾಕುಗಳು, ಕತ್ತರಿಗಳು, ಸಂಗೀತ ಉಪಕರಣಗಳು, ಕರಕುಶಲ ವಸ್ತುಗಳು ಮುಂತಾದ ಚಿಕ್ಕ ವಸ್ತುಗಳಿಂದ ಹಿಡಿದು ದೊಡ್ಡ ಯಂತ್ರಗಳು, ವಾಹನಗಳು, ಬಸ್ಸುಗಳು ಇತ್ಯಾದಿಗಳನ್ನು ಪೂಜಿಸುತ್ತಾರೆ. ಕೆಲವರು ಬ್ರಾಹ್ಮಾಣರ ಸಹಾಯದಿಂದ ಪೂಜೆಯನ್ನು ಮಾಡಿದರೆ, ಇನ್ನು ಕೆಲವರು ತಾವೇ ಸ್ವತಃ ಪೂಜೆಯನ್ನು ಮಾಡುತ್ತಾರೆ.

Continue Reading

Blog

ಪ್ರವಾಹ ಸಂತ್ರಸ್ತರಿಗೆ ನೀಡಲು ಹಣವಿಲ್ಲ, ನಾನು ಕ್ಯಾಬಿನೇಟ್‌ ಸಚಿವೆ ಅಲ್ಲ; ಮತ್ತೆ ವಿವಾದ ಸೃಷ್ಟಿಸಿದ ಕಂಗನಾ

ಶಿಮ್ಲಾ: ಹಿಮಾಚಲ ಪ್ರದೇಶದಾದ್ಯಂತ ಭಾರೀ ಮಳೆಯಿಂದಾಗಿ ಪ್ರವಾಹ (Kangana Ranaut) ಉಂಟಾಗಿದೆ. ಪ್ರವಾಹದಿಂದಾಗಿ ಈ ವರೆಗೆ 78 ಜನರು ಮೃತಪಟ್ಟಿದ್ದು, ಹಲವರಿಗೆ ಗಾಯಗಳಾಗಿವೆ. ಅಪಾರ ಪ್ರಮಾಣದ ಆಸ್ತಿ ಪಾಸ್ತಿಗಳು ಹಾನಿಯಾಗಿವೆ. ಭಾನುವಾರ ಹಿಮಾಚಲ ಪ್ರದೇಶದ ಮಂಡಿಯಲ್ಲಿ ಪ್ರವಾಹ (Mandi Flood) ಪೀಡಿತ ಪ್ರದೇಶಗಳನ್ನು ಪರಿಶೀಲಿಸಿದ್ದ ಬಿಜೆಪಿ ಸಂಸದೆ ಮತ್ತು ನಟಿ ಕಂಗನಾ ರನೌತ್, ತಮ್ಮ ಬಳಿ ಸಂಪುಟ ಹುದ್ದೆಯೂ ಇಲ್ಲ, ವಿಪತ್ತು ಪರಿಹಾರಕ್ಕಾಗಿ ಹಣವೂ ಇಲ್ಲ ಎಂದು ಹೇಳುವ ಮೂಲಕ ವಿವಾದವನ್ನು ಸೃಷ್ಟಿ ಮಾಡಿದ್ದಾರೆ. ಆದಾಗ್ಯೂ, ಕೇಂದ್ರದಿಂದ ಆರ್ಥಿಕ ನೆರವು ಪಡೆಯಲು ತಾವು ಪ್ರಯತ್ನಿಸುತ್ತಿರುವುದಾಗಿ ಅವರು ಒತ್ತಿ ಹೇಳಿದರು.

ನನ್ನ ಬಳಿ ವಿಪತ್ತು ಪರಿಹಾರಕ್ಕಾಗಿ ಯಾವುದೇ ಹಣವಿಲ್ಲ ಅಥವಾ ಯಾವುದೇ ಸಂಪುಟ ಹುದ್ದೆಯನ್ನು ಹೊಂದಿಲ್ಲ. ಸಂಸದರಿಗೆ ಸಂಸತ್ತಿಗೆ ಸೀಮಿತವಾದ ಕೆಲಸವಿದೆ. ನಾವು ಬಹಳ ಸಣ್ಣವರು. ಆದರೆ, ಕೇಂದ್ರದಿಂದ ವಿಪತ್ತು ನಿಧಿಯನ್ನು ಪಡೆಯಲು ನಾನು ಸಹಾಯ ಮಾಡಬಹುದು” ಎಂದು ಮಂಡಿಯ ಸಂಸದೆ ಹೇಳಿದ್ದಾರೆ. ಕಂಗನಾ ಅವರ ಈ ಹೇಳಿಕೆ ಭಾರೀ ಆಕ್ರೋಶ ವ್ಯಕ್ತವಾಗಿದೆ.

ಸ್ವಪಕ್ಷದವರೇ ಕಂಗನಾ ವಿರುದ್ಧ ಅಸಮಧಾನ ವ್ಯಕ್ತಪಡಿಸಿದ್ದರು. ಮಂಡಿಯಲ್ಲಿ ಪ್ರವಾಹ ಬಂದು ಜನರು ಸಂಕಷ್ಟದಲ್ಲಿದ್ದರೂ ಸಂಸದೆ ಅದರ ಕುರಿತು ಎಲ್ಲಿಯೂ ಮಾತನಾಡಿರಲಿಲ್ಲ.‌ ಈ ಕುರಿತು ಆಕ್ರೋಶ ವ್ಯಕ್ತ ಪಡಿಸಿದ ಹಿಮಾಚಲ ಪ್ರದೇಶದ ಮಾಜಿ ಮುಖ್ಯಮಂತ್ರಿ ಬಿಜೆಪಿ ನಾಯಕ ಜೈರಾಮ್ ಠಾಕೂರ್ ಕಂಗನಾ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. ಕಂಗನಾ ಮಂಡಿಯ ಪರಿಸ್ಥಿತಿಯ ಬಗ್ಗೆ ಏಕೆ ಪ್ರತಿಕ್ರಿಯಿಸಲಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಠಾಕೂರ್‌, “ನನಗೆ ಗೊತ್ತಿಲ್ಲ, ಮತ್ತು ನಾನು ಅದರ ಬಗ್ಗೆ ಪ್ರತಿಕ್ರಿಯಿಸಲು ಬಯಸುವುದಿಲ್ಲ. ಕಾಳಜಿ ವಹಿಸುವವರಿಗಾಗಿ ನೆರವು ನೀಡಲು ನಾವು ಇಲ್ಲಿಗೆ ಬಂದಿದ್ದೇವೆ. ಕಾಳಜಿ ವಹಿಸದವರ ಬಗ್ಗೆ ನಾನು ಕಾಮೆಂಟ್ ಮಾಡಲು ಬಯಸುವುದಿಲ್ಲ ಎಂದು ಅವರು ಹೇಳಿದ್ದಾರೆ.

ಠಾಕೂರ್ ಅವರ ಹೇಳಿಕೆಗಳ ವೀಡಿಯೊವನ್ನು ಹಂಚಿಕೊಂಡ ಕಾಂಗ್ರೆಸ್, “ಸಂಸದ ಕಂಗನಾ ರನೌತ್ ಅವರಿಗೆ ಮಂಡಿಯ ಜನರ ಬಗ್ಗೆ ಕಾಳಜಿ ಇಲ್ಲ. ಇವು ನಮ್ಮ ಮಾತುಗಳಲ್ಲ, ಬಿಜೆಪಿಯ ಮಾಜಿ ಮುಖ್ಯಮಂತ್ರಿಗಳೇ ಇದನ್ನು ಹೇಳಿದ್ದಾರೆ ಎಂದು ಹೇಳಿದೆ. ಮಂಡಿಯಲ್ಲಿ ಪ್ರಸ್ತುತ ಭಾರೀ ಮಳೆಯಾಗುತ್ತಿದ್ದು, ಇದು ನಿವಾಸಿಗಳ ಸಾಮಾನ್ಯ ಜೀವನವನ್ನು ಅಸ್ತವ್ಯಸ್ತಗೊಳಿಸಿದೆ.

Continue Reading

Blog

ಝೊಮ್ಯಾಟೊ-ಸ್ವಿಗ್ಗಿಗೆ ಬಿಗ್ ಶಾಕ್: ಬೈಕ್ ನಲ್ಲಿ ಆಹಾರ,ವಸ್ತು ಡೆಲಿವರಿ ಬ್ಯಾನ್?

ಬೆಂಗಳೂರು: ರಾಜ್ಯದಲ್ಲಿ ಸದ್ಯ ರಾಪಿಡೋ ಬೈಕ್ ಟ್ಯಾಕ್ಸಿಗೆ ಬ್ರೇಕ್ ಹಾಕಲಾಗಿದೆ, ಆದರೆ ಇನ್ಮುಂದೆ ಸ್ವಿಗ್ಗಿ, ಝೊಮ್ಯಾಟೊ, ಅಮೆಜಾನ್, ಫ್ಲಿಪ್ ಕಾರ್ಟ್‍ಗೂ ಶಾಕ್ ಕೊಡಲು ಕೇಂದ್ರ ಸರ್ಕಾರ ಮುಂದಾಗಿದೆ,
ಸಾಮಾನ್ಯವಾಗಿ ಸರಕು ಸಾಗಣೆ, ಪ್ರಯಾಣಕ್ಕೆ ಯೆಲ್ಲೊ ಬೋರ್ಡ್ ವಾಹನಗಳನ್ನು ಬಳಸಬೇಕು, ಅದರೆ ಇಷ್ಟು ದಿನ ಇದ್ದ ರಾಪಿಡೋ ಬೈಕ್ ಟ್ಯಾಕ್ಸಿ ಈಗ ಇರುವ ಸ್ವಿಗ್ಗಿ, ಝೊಮ್ಯಾಟೊ, ಅಮೆಜಾನ್, ಫ್ಲಿಪ್ ಕಾರ್ಟ್ ನಂತಹ ಇ-ಕಾಮರ್ಸ್, ಕ್ವಿಕ್ ಕಾಮರ್ಸ್‍ನ ಡೆಲಿವರಿ ಬಾಯ್ ಗಳು ಬಳಸುವ ಬೈಕ್‍ಗಳು ಸಾಮಾನ್ಯವಾಗಿ ವೈಟ್ ಬೋರ್ಡ್‍ಗಳಿರುತ್ತವೆ, ಅದೇ ಈಗ ಸಂಕಷ್ಟ ತಂದೊಡ್ಡುತ್ತಿದೆ,
ಕೇಂದ್ರ ಸಾರಿಗೆ ಇಲಾಖೆ ಈ ಒಂದು ಆದೇಶ ಹೊರಡಿಸಿದ್ದು, ಆ ನಿರ್ಧಾರದಿಂದ ಇ-ಕಾಮರ್ಸ್ ಹಾಗೂ ಕ್ವಿಕ್ ಕಾಮರ್ಸ್, ಗಿಗಿ ಉದ್ಯೋಗಿಗಳಿಗೆ ಸಂದಷ್ಟ ಎದುರಾಗಿದೆ,
ಎಲ್ಲಾ ವಾಹನಗಳನ್ನು ಯೆಲ್ಲೋ ಬೋರ್ಡ್ ಮಾಡಬೇಕಾ?
ಖಾಸಗಿ ನೋಂದಾಯಿತ ಬೈಕ್‍ಗಳು ಅಂದರೆ ವೈಟ್ ಬೋರ್ಡ್ ಇರುವ ಬೈಕ್‍ಗಳನ್ನು ಕೇವಲ ಪ್ರಯಾಣಕ್ಕಾಗಿ ಮಾತ್ರ ಬಳಸಬೇಕು, ಆದರೆ ಗಿಗ್ ಉದ್ಯೋಗಿಗಳು ವಾಣಿಜ್ಯ ವಿತರಣಾ ಉದ್ದೇಶಗಳಿಗೆ ಬಳಸುತ್ತಿದ್ದಾರೆ, ಇದು ಸಾರಿಗೆ ಇಲಾಖೆಯ ನಿಯಮಗಳಿಗೆ ವಿರುದ್ಧವಾದುದು, ಇದೇ ಕಾರಣಕ್ಕೆ ಈಗಾಗಲೇ ರಾಪಿಡೋ ಸೇವೆಗೆ ಬ್ರೇಕ್ ಹಾಕಲಾಗಿದೆ, ಮುಂದಿನ ದಿನಗಳಲ್ಲಿ ಆಹಾರ ಹಾಗೂ ಇ-ಕಾಮರ್ಸ್ ಡೆಲಿವರಿಗಳಿಗೂ ಈ ನಿಯಮ ಅನ್ವಯವಾಗಲಿದೆ,
ಸಾರಿಗೆ ಇಲಾಖೆ ಅಧಿಸೂಚನೆಯಲ್ಲಿ ಏನೇನಿದೆ?
ಸಾಮಾನ್ಯವಾಗಿ ಡೆಲಿವರಿ ಬಾಯ್ ಗಳಿಗೆ ಇಂತಿಷ್ಟೇ ಸಮಯದಲ್ಲಿ ವಸ್ತುಗಳನ್ನು ತಲುಪಿಸಲಬೇಕು ಎಂಬ ನಿಯಮ ಇರುತ್ತದೆ, ಅದಕ್ಕಾಗಿ ಅತಿಯಾದ ವೇಗದಲ್ಲಿ ವಾಹನ ಚಲಾಯಿಸುತ್ತಾರೆ, ಸಿಗ್ನಲ್ ಬ್ರೇಕ್ ಮಾಡುತ್ತಾಎರ, ಡೆಲಿವರಿ ಬಾಯ್ ಗಳು ಪಾದಚಾರಿಗಳ ಹಕ್ಕು ಉಲ್ಲಂಘನೆ ಮಾಡುತ್ತಾರೆ ಎಂದು ಕೇಂದ್ರದ ಸಾರಿಗೆ ಇಲಾಖೆ ಹೇಳಿದೆ, ಕೆಲವೊಮ್ಮೆ ಪಾದಚಾರಿ ಮಾರ್ಗಗಳ ಮೇಲೆಯೇ ಬೈಕ್ ಓಡಿಸುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ,
ಪೀಕ್ ಅವರ್ ನಲ್ಲಿ ಡೆಲಿವರಿ ವಾಹನಗಳ ಸಂಖ್ಯೆ ಹೆಚ್ಚಾಗಿರುತ್ತದೆ, ಇದರಿಂದ ಟ್ರಾಫಿಕ್ ಜಾಮ್ ಆಗುತ್ತದೆ, ಸ್ವಿಗ್ಗಿ, ಝೊಮ್ಯಾಟೊ, ಅಮೆಜಾನ್, ಫ್ಲಿಪ್ ಕಾರ್ಟ್ ನಂತಾ ಕಂಪನಿಗಳನ್ನು ನಂಬಿ ಖಾಸಗಿ ಬೈಕ್ ಗಳ ಮೂಲಕ ವಿತರಣಾ ಕೆಲಸ ನಿರ್ವಹಿಸುತ್ತಿದ್ದ ಲಕ್ಷಾಂತರ ಗಿಗ್ ಉದ್ಯೋಗಿಗಳಿಗೆ ಸಂಕಷ್ಟ ಎದುರಾಗಿದೆ, ಈಗಾಗಲೇ ಕೇಂದ್ರ ಸಾರಿಗೆ ಇಲಾಖೆ ರಾಜ್ಯ ಸಾರಿಗೆ ಇಲಾಖೆಗೆ ಸೂಕ್ತ ಕ್ರಮಕೈಗೊಳ್ಳುವಂತೆ ಸೂಚನೆ ನೀಡಿದ್ದು, ರಾಜ್ಯ ಸರ್ಕಾರಗಳು ಕ್ರಮ ಕೈಗೊಂಡರೆ ಗಿಗ್ ಕ್ರಮ ಕೈಗೊಂಡರೆ ಗಿಗ್ ನೌಕರರು ಬೀದಿಗೆ ಬೀಳುತ್ತಾರೆ.

Continue Reading

Blog

ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‍ಶಿಪ್ ಗೆ ಕಂಗನಾ ರನೌತ್ ರಾಯಭಾರಿ!

ನವದೆಹಲಿ: ಖ್ಯಾತ ಬಾಲಿವುಡ್ ನಟಿ ಮತ್ತು ಸಂಸದೆ ಕಂಗನಾ ರನೌತ್ ಅವರನ್ನು ನವದೆಹಲಿ 2025 ರ ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‍ಶಿಪ್ ನ ಅಧಿಕೃತ ಬ್ರಾಂಡ್ ರಾಯಭಾರಿಯಾಗಿ ನೇಮಿಸಲಾಗಿದೆ ಎಂದು ಭಾರತೀಯ ಪ್ಯಾರಾಲಿಂಪಿಕ್ ಸಮಿತಿ ಘೋಷಿಸಿದೆ,
ಈ ಹೊಸ ಪಾತ್ರದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡ ಕಂಗನಾ, ಭಾರತದ ಪ್ಯಾರಾ ಅಥ್ಲೀಟ್‍ಗಳು ಪ್ರತಿದಿನ ಅದ್ಭುತ ಸಾಧನೆಗಳ ಇತಿಹಾಸವನ್ನು ಪುನಃ ಬರೆಯುತ್ತಿದ್ದಾರೆ, ಅವರನ್ನು ಬೆಂಬಲಿಸಲು ಮತ್ತು ಅವರ ಅದ್ಬುತ ಸಾಧನೆಗಳ ಬಗ್ಗೆ ಪ್ರಚಾರ ಮಾಡಲು ನನಗೆ ತುಂಬಾ ಹೆಮ್ಮೆಯೆನಿಸುತ್ತಿದೆ, ಪ್ಯಾರಾ ಕ್ರೀಡೆ ಕೇವಲ ಸ್ಪರ್ಧೆಯ ಬಗ್ಗೆ ಅಲ್ಲ, ಇದು ಧೈರ್ಯವನ್ನು ತೋರಿಸುತ್ತದೆ, ಮತ್ತು ನಮ್ಮ ಚಾಂಪಿಯನ್ ಗಳ ಹಿಂದೆ ನಿಲ್ಲಲು ನನಗೆ ತುಂಬಾ ಹೆಮ್ಮೆ ಇದೆ ಎಂದು ಅವರು ಹೇಳಿದ್ದಾರೆ,
ಕಂಗನಾ ರನೌತ್ ಅವರ ಧ್ವನಿಯ ಪ್ಯಾರಾ ಕ್ರೀಡೆಗಳೊಂದಿಗೆ ಸಾರ್ವಜನಿಕವಾಗಿ ತೊಡಗಿಸಿಕೊಳ್ಳುವಿಕೆಯನ್ನು ಗಮನಾರ್ಹವಾಗಿ ವರ್ಧಿಸುತ್ತದೆ ಮತ್ತು ದೇಶಾದ್ಯಂತ ಮುಂದಿನ ಪೀಳಿಗೆಯ ಕ್ರೀಡಾಪಟುಗಳು ಮತ್ತು ಅಭಿಮಾನಿಗಳಿಗೆ ಸ್ಫೋರ್ತಿ ನೀಡುತ್ತದೆ ಎಂದು ಭಾರತದ ಪ್ಯಾರಾಲಿಂಪಿಕ್ ಸಮಿತಿ ಹೇಳಿದೆ,

Continue Reading

Trending