Connect with us

ಕ್ರೀಡೆ

ಪ್ರತಿದಿನ 8 ಕೆಜಿ ಮಟನ್ ತಿಂತಾರೆ:   ಅಪ್ಘಾನ್ ವಿರುದ್ಧ ಸೋತ ನಂತರ ಪಾಕ್ ಆಟಗಾರರ ವಿರುದ್ಧ ಅಕ್ರಮ್ ಕೆಂಡ!

Published

on

ಪ್ರತಿದಿನ 8 ಕೆಜಿ ಮಟನ್ ತಿಂತಾರೆ: ಅಪ್ಘಾನ್ ವಿರುದ್ಧ ಸೋತ ನಂತರ ಪಾಕ್ ಆಟಗಾರರ ವಿರುದ್ಧ ಅಕ್ರಮ್ ಕೆಂಡ!
ಪ್ರತಿದಿನ 8 ಕೆಜಿ ಮಟನ್ ತಿಂತಾರೆ: ಅಪ್ಘಾನ್ ವಿರುದ್ಧ ಸೋತ ನಂತರ ಪಾಕ್ ಆಟಗಾರರ ವಿರುದ್ಧ ಅಕ್ರಮ್ ಕೆಂಡ!

ನವದೆಹಲಿ: ಸೋಮವಾರ ಚೆನ್ನೈನಲ್ಲಿ ನಡೆದ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಅಪ್ಘಾನಿಸ್ತಾನ ವಿರುದ್ಧ ಸೋತ ನಂತರ ಪಾಕಿಸ್ತಾನದ ಕಳಪೆ ಫೀಲ್ಡಿಂಗ್ ನ್ನು ಟೀಕಿಸಿರುವ ಮಾಜಿ ನಾಯಕ ವಾಸಿಂ ಅಕ್ರಮ್ , ಪಾಕ್ ಆಟಗಾರರ ಫಿಟ್ ನೆಸ್ ಬಗ್ಗೆ ಕೆಂಡಕಾರಿದ್ದಾರೆ. ಕೆಳ ಶ್ರೇಯಾಂಕದ ಅಫ್ಘಾನಿಸ್ತಾನ ವಿರುದ್ಧ ಸೋತ ನಂತರ ಪಾಕಿಸ್ತಾನದ ಮಾಜಿ ನಾಯಕ ವಾಸಿಂ ಅಕ್ರಂ ಅವರು ಬಾಬರ್ ಅಜಮ್ ಅವರ ತಂಡದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 

ಆಟಗಾರರ ಫಿಟ್ ನೆಸ್ ಬಗ್ಗೆ ಪ್ರಶ್ನೆ ಎತ್ತಿರುವ ಅವರು, ದಿನಕ್ಕೆ 8 ಕೆಜಿ ಮಟನ್ ತಿಂತಾರೆ, ಫಿಟ್ ನೆಸ್ ಎಲ್ಲಿ? ಎಂದು ಪ್ರಶ್ನೆ ಮಾಡಿದ್ದಾರೆ. ಅಪ್ಘಾನಿಸ್ತಾನ ಎದುರಿನ ಸೋಲಿನಿಂದ ಮುಜುಗರ ಉಂಟಾಗಿದೆ. ಅಪ್ಘನ್ ತಂಡ ಎರಡು ವಿಕೆಟ್ ಕಳೆದುಕೊಂಡು 280 ಕ್ಕೂ ಅಧಿಕ ರನ್ ಬೆನ್ನಟ್ಟಿರುವುದು ದೊಡ್ಡ ಸಾಧನೆಯೇ ಸರಿ ಎಂದಿದ್ದಾರೆ. 

ಈ ಪಂದ್ಯದಲ್ಲಿ ಪಾಕ್ ತಂಡದ ಫೀಲ್ಡಿಂಗ್ , ಅವರ ಫಿಟ್ ನೆಸ್ ಮಟ್ಟ ಹೇಗಿತ್ತು ಎಂಬುದನ್ನು ನೋಡಿ. ಇವರು ಎರಡು ವರ್ಷಗಳಿಂದ ಫಿಟ್ ನೆಸ್ ಪರೀಕ್ಷೆ ಎದುರಿಸಿಲ್ಲ ಎಂದು ಕಳೆದ ಮೂರು ವಾರಗಳಿಂದ ಹೇಳುತ್ತಾ ಬಂದಿದ್ದೇನೆ. ಆಟಗಾರರ ವೈಯಕ್ತಿಕ ಹೆಸರುಗಳನ್ನು ತೆಗೆದುಕೊಂಡರೆ, ಅವರು ಅದನ್ನು ಇಷ್ಟಪಡುವುದಿಲ್ಲ. ಈ ಆಟಗಾರರು ಪ್ರತಿದಿನ 8 ಕೆಜಿ ಮಟನ್ ತಿನ್ನುವಂತೆ ಕಾಣಿಸುತ್ತದೆ. ಫಿಟ್ ನೆಸ್ ಪರೀಕ್ಷೆ ಬೇಡವೇ ಎಂದು ಸ್ಪೋರ್ಟ್ ಚಾನೆಲ್ ವೊಂದಕ್ಕೆ ತಿಳಿಸಿದ್ದಾರೆ. 

ಪರೀಕ್ಷೆಗಳು ಇರಬೇಕು. ವೃತ್ತಿಪರರಾಗಿ ನೀವು ನಿಮ್ಮ ದೇಶಕ್ಕಾಗಿ ಆಡುತ್ತಿದ್ದೀರಿ, ನಿಮಗೆ ಸಂಬಳ ನೀಡಲಾಗುತ್ತಿದೆ. ನಾನು ಮಿಸ್ಬಾ ಜೊತೆಗಿದ್ದೇನೆ. ಅವರು ಕೋಚ್ ಆಗಿದ್ದಾಗ, ಅವರು ಆ ಮಾನದಂಡವನ್ನು ಹೊಂದಿದ್ದರು, ಆಟಗಾರರು ಅವರನ್ನು ದ್ವೇಷಿಸುತ್ತಿದ್ದರು ಎಂದು ತಿಳಿಸಿದರು. ಪಾಕಿಸ್ತಾನ ತಂಡ ಶುಕ್ರವಾರ ಚೆನ್ನೈನಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದೆ. ಅಲ್ಲಿಯೂ ಸೋತರು ಸೆಮಿಫೈನಲ್ ಪ್ರವೇಶ  ಕಷ್ಟವಾಗಲಿದೆ. 

ಕ್ರೀಡೆ

ಚಿನ್ನಸ್ವಾಮಿಯಲ್ಲಿ ರನ್ ಮಳೆ: ಆರ್ಸಿಬಿ 250 ರನ್ ಸಿಡಿತ!

Published

on

By

ಬೆಂಗಳೂರುದ ಎಂ. ಚಿನ್ನಸ್ವಾಮಿ ಕ್ರೀಡಾಂಗಣನಲ್ಲಿ ನಡೆಯುತ್ತಿರುವ Indian Premier League ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದೆ.

ಟಾಸ್ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ರುತುರಾಜ್ ಗಾಯಕ್ವಾಡ್ ಮೊದಲು ಆರ್ಸಿಬಿಗೆ ಬ್ಯಾಟಿಂಗ್ ಆಹ್ವಾನಿಸಿದರು. ಆರಂಭದಲ್ಲಿ ವಿರಾಟ್ ಕೊಹ್ಲಿ (28) ಬೇಗ ಔಟ್ ಆದರೂ, ಫಿಲ್ ಸಾಲ್ಟ್ (46) ತಂಡಕ್ಕೆ ವೇಗ ನೀಡಿದರು.

ಆದರೆ, ನಂತರದ ಹಂತದಲ್ಲಿ ಆರ್ಸಿಬಿ ಬ್ಯಾಟಿಂಗ್ ಭರ್ಜರಿಯಾಗಿ ಸಿಡಿಯಿತು. ದೇವದತ್ತ ಪಡಿಕಲ್ (50) ಅರ್ಧಶತಕ ಸಿಡಿಸಿ ತಂಡಕ್ಕೆ ಬಲ ನೀಡಿದರೆ, ನಾಯಕ ರಜತ್ ಪಾಟೀದಾರ್ (48*) ವೇಗದ ಇನ್ನಿಂಗ್ಸ್ ಆಡಿದರು. ಅಂತಿಮವಾಗಿ ಟಿಮ್ ಡೇವಿಡ್ (70*) ಬ್ಯಾಕ್ ಟು ಬ್ಯಾಕ್ ಸಿಕ್ಸರ್‌ಗಳಿಂದ ಚೆನ್ನೈ ಬೌಲರ್ಗಳನ್ನು ಕಂಗೆಡಿಸಿದರು.

ಪವರ್ಪ್ಲೇಯಲ್ಲೇ ವಿಕೆಟ್ ಪಡೆಯಲು ವಿಫಲವಾದ ಸಿಎಸ್ಕೆ ಬೌಲರ್ಗಳು ಮತ್ತೆ ಅದೇ ತಪ್ಪನ್ನು ಮುಂದುವರೆಸಿದರು. ಪರಿಣಾಮವಾಗಿ, ಆರ್ಸಿಬಿ 20 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ ಭಾರೀ 250 ರನ್ ಗಳಿಸಿತು.

ಈ ಬೃಹತ್ ಗುರಿಯನ್ನು ಬೆನ್ನತ್ತುತ್ತಿರುವ ಸಿಎಸ್ಕೆ, ತನ್ನ ಮೊದಲ ಗೆಲುವು ದಾಖಲಿಸಬಹುದೇ ಎಂಬುದು ಈಗ ಕುತೂಹಲ ಮೂಡಿಸಿದೆ.

ಆರ್ಸಿಬಿ ಬ್ಯಾಟಿಂಗ್ ವಿವರ:

  • ವಿರಾಟ್ ಕೊಹ್ಲಿ – 28 (18)
  • ಫಿಲ್ ಸಾಲ್ಟ್ – 46 (30)
  • ದೇವದತ್ತ ಪಡಿಕಲ್ – 50 (29)
  • ರಜತ್ ಪಾಟೀದಾರ್ – 48* (19)
  • ಟಿಮ್ ಡೇವಿಡ್ – 70* (25)
Continue Reading

ಕ್ರೀಡೆ

ಐಪಿಎಲ್ ಟಿಕೆಟ್ ದುರ್ಬಳಕೆ: ಶಾಸಕರ ಪಾಸ್ ಸ್ನೇಹಿತರ ಕೈಗೆ!

Published

on

By

ಬೆಂಗಳೂರುದಲ್ಲಿ ಐಪಿಎಲ್ ಕ್ರೇಜ್ ಗರಿಷ್ಠ ಮಟ್ಟಕ್ಕೆ ಏರಿರುವ ನಡುವೆಯೇ, ಶಾಸಕರಿಗೆ ನೀಡಲಾದ ಉಚಿತ ಟಿಕೆಟ್ ಪಾಸ್‌ಗಳ ದುರ್ಬಳಕೆಯ ಆರೋಪ ದೊಡ್ಡ ವಿವಾದಕ್ಕೆ ಕಾರಣವಾಗಿದೆ. Indian Premier League ಪಂದ್ಯಗಳಿಗೆ ಸಂಬಂಧಿಸಿದ ಈ ಘಟನೆ ರಾಜಕೀಯ ವಲಯದಲ್ಲೂ ಚರ್ಚೆಗೆ ಗ್ರಾಸವಾಗಿದೆ.

ಈ ಬಾರಿಯ ಐಪಿಎಲ್ ಆರಂಭಕ್ಕೂ ಮುನ್ನ ಕೆಲವು ಶಾಸಕರು ತಮ್ಮ ಹಾಗೂ ಕುಟುಂಬ ಸದಸ್ಯರಿಗೆ ಉಚಿತ ಟಿಕೆಟ್ ನೀಡುವಂತೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ Karnataka State Cricket Association ವಿಶೇಷ ಅಕ್ರೆಡೆಷನ್ ಕಾರ್ಡ್ ಮಾದರಿಯ ಪಾಸ್‌ಗಳನ್ನು ವಿತರಿಸಿತ್ತು.

ಆದರೆ, ಈ ಪಾಸ್‌ಗಳು ಈಗ ಶಾಸಕರ ಕುಟುಂಬದವರಿಗಷ್ಟೇ ಸೀಮಿತವಾಗದೆ, ಅವರ ಮಕ್ಕಳ ಸ್ನೇಹಿತರ ಕೈಗೆ ಸೇರಿರುವುದು ಬೆಳಕಿಗೆ ಬಂದಿದೆ. ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣ ಬಳಿ ಪೊಲೀಸರು ತಪಾಸಣೆ ನಡೆಸಿದ ವೇಳೆ, ಶಾಸಕರ ಕುಟುಂಬದ ಹೆಸರಿನ ಪಾಸ್ ಹಿಡಿದು ಬಂದಿದ್ದ ಕೆಲ ಯುವಕರ ಮೇಲೆ ಅನುಮಾನ ಮೂಡಿದೆ.

ಪರಿಶೀಲನೆ ವೇಳೆ ಯುವಕರು ತಡಬಡಾಯಿಸಿದ್ದು, ಕೊನೆಯಲ್ಲಿ ತಾವು ಶಾಸಕರ ಮಗನ ಸ್ನೇಹಿತರು ಎಂದು ಒಪ್ಪಿಕೊಂಡಿದ್ದಾರೆ. ಈ ಹಿನ್ನೆಲೆ ಪೊಲೀಸರು ಅವರನ್ನು ಎಚ್ಚರಿಕೆ ನೀಡಿ ಕಳಿಸಿದ್ದಾರೆ.

ಈ ಘಟನೆ ಹಲವಾರು ಪ್ರಶ್ನೆಗಳನ್ನು ಎಬ್ಬಿಸಿದೆ. ಜನಪ್ರತಿನಿಧಿಗಳಿಗಾಗಿ ನೀಡಲಾದ ಸೌಲಭ್ಯವನ್ನು ಅನರ್ಹರು ಬಳಸುವುದು ಸರಿಯೇ? ಎಂಬ ಪ್ರಶ್ನೆ ಕೇಳಿಬರುತ್ತಿದೆ.

ಸಾಮಾನ್ಯ ಜನರು ಟಿಕೆಟ್‌ಗಾಗಿ ಪರದಾಡುತ್ತಿರುವಾಗ, ಉಚಿತ ಪಾಸ್‌ಗಳು ದುರ್ಬಳಕೆಯಾಗುತ್ತಿರುವುದು ಜನರಲ್ಲಿ ಆಕ್ರೋಶಕ್ಕೂ ಕಾರಣವಾಗಿದೆ. ಇದೀಗ KSCA ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂಬ ಒತ್ತಡ ಹೆಚ್ಚಾಗಿದೆ.

Continue Reading

ಕ್ರೀಡೆ

ಗ್ಯಾಸ್‌ಗಾಗಿ ಜನ ಸಾಲು, ಟಿಕೆಟ್‌ಗಾಗಿ ಪಿಎ ಸಾಲು: ಶಾಸಕರಿಗೆ ಟೀಕೆ!

Published

on

ಬೆಂಗಳೂರು: ರಾಜ್ಯದಲ್ಲಿ ಅಡುಗೆ ಅನಿಲ ಕೊರತೆಯಿಂದ ಜನರು ಸಂಕಷ್ಟ ಅನುಭವಿಸುತ್ತಿರುವ ನಡುವೆ, ಜನಪ್ರತಿನಿಧಿಗಳ ವರ್ತನೆ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದೆ. ಒಂದು ಕಡೆ ಆಟೋ ಚಾಲಕರು ಗ್ಯಾಸ್‌ಗಾಗಿ ರಾತ್ರಿಯಿಡೀ ಸಾಲಿನಲ್ಲಿ ನಿಲ್ಲುತ್ತಿರುವಾಗ, ಇನ್ನೊಂದು ಕಡೆ ಶಾಸಕರು IPL 2026 ಟಿಕೆಟ್ ಪಡೆಯಲು ತಮ್ಮ ಪಿಎಗಳನ್ನು ಕ್ಯೂನಲ್ಲಿ ನಿಲ್ಲಿಸಿರುವುದು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಮಾಹಿತಿಯ ಪ್ರಕಾರ, ಸರ್ಕಾರ ಮತ್ತು Karnataka State Cricket Association (KSCA) ನಡುವೆ ಪ್ರತಿ ಐಪಿಎಲ್ ಪಂದ್ಯಕ್ಕೆ ಶಾಸಕರಿಗೆ ಉಚಿತವಾಗಿ 3 ಟಿಕೆಟ್ ನೀಡುವ ಕುರಿತು ಒಪ್ಪಂದವಾಗಿದೆ. ಇದರ ಹಿನ್ನೆಲೆಯಲ್ಲಿ, Royal Challengers Bengaluru ಮತ್ತು Chennai Super Kings ನಡುವಿನ ಪಂದ್ಯಕ್ಕೆ ಟಿಕೆಟ್ ಪಡೆಯಲು ಶಾಸಕರ ಪಿಎಗಳು ಸ್ಪೀಕರ್ ಕಚೇರಿ ಮುಂದೆ ಸಾಲಿನಲ್ಲಿ ನಿಂತಿರುವ ದೃಶ್ಯಗಳು ಗಮನ ಸೆಳೆದಿವೆ.

ಸ್ಪೀಕರ್ ಕಚೇರಿಯಲ್ಲೇ ಟಿಕೆಟ್ ವಿತರಣೆ ನಡೆಯುತ್ತಿರುವುದರಿಂದ, ಶಾಸಕರ ಸೂಚನೆ ಮೇರೆಗೆ ಪಿಎಗಳು ಟಿಕೆಟ್ ಪಡೆಯಲು ಕ್ಯೂನಲ್ಲಿ ನಿಂತಿದ್ದಾರೆ ಎಂದು ತಿಳಿದುಬಂದಿದೆ.

ಇದರಿಂದ ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸಬೇಕಾದ ಜನಪ್ರತಿನಿಧಿಗಳು ತಮ್ಮ ವೈಯಕ್ತಿಕ ಆಸಕ್ತಿಗಳಿಗೆ ಹೆಚ್ಚು ಆದ್ಯತೆ ನೀಡುತ್ತಿದ್ದಾರೆ ಎಂಬ ಟೀಕೆಗಳು ಕೇಳಿಬರುತ್ತಿವೆ. ಗ್ಯಾಸ್ ಕೊರತೆ, ದೈನಂದಿನ ಸಮಸ್ಯೆಗಳ ನಡುವೆ ಈ ರೀತಿಯ ಘಟನೆಗಳು ಸಾರ್ವಜನಿಕರ ಅಸಮಾಧಾನವನ್ನು ಮತ್ತಷ್ಟು ಹೆಚ್ಚಿಸಿವೆ.

ರಾಜಕೀಯ ವಲಯದಲ್ಲಿಯೂ ಈ ಘಟನೆ ಚರ್ಚೆಗೆ ಕಾರಣವಾಗಿದ್ದು, ಜನಪ್ರತಿನಿಧಿಗಳು ತಮ್ಮ ಜವಾಬ್ದಾರಿಗಳನ್ನು ಮರೆಯಬಾರದು ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.

Continue Reading

Trending