Connect with us

ಸುತ್ತ ಮುತ್ತ

ಹುಲಿ ಉಗುರು ತಂದ ಅಪತ್ತು! ಹುಲಿ ಉಗುರು ಲಾಕೆಟ್‌ಗಳ ಮೇಲೆ ಯಾಕಿಷ್ಟು ಒಲವು!

Published

on

ಹುಲಿ ಉಗುರು ಲಾಕೆಟ್‌ಗಳ ಮೇಲೆ ಯಾಕಿಷ್ಟು ಒಲವು!

ಹುಲಿ ಉಗುರುಗಳ ಆಭರಣ ಸದ್ಯ ಹಾಟ್ ಟಾಪಿಕ್. ಎಲ್ಲೇ ಹೋದರೂ ಇದರದ್ದೇ ಚರ್ಚೆ.ಸಾಮಾನ್ಯವಾಗಿ ಜುವೆಲ್ಲರಿ ಶಾಪ್‌ಗಳಲ್ಲಿ ಅಸಲಿ ಹುಲಿ ಉಗುರುಗಳ ಚಿನ್ನಾಭರಣ ಮಾಡುವುದಿಲ್ಲ,ನಕಲಿ ಹುಲಿ ಉಗುರಾದ ಫೌಕ್ಸ್‌ ಟೈಗರ್ ನೇಲ್‌ ಮಾಡುತ್ತಾರೆ. ಹುಲಿ ಉಗುರುಗಳ ಆಭರಣ ಧರಿಸಿ ಫೋಟೋ ತೆಗೆಸಿಕೊಂಡು ಸೋಷಿಯಲ್ ಮೀಡಿಯಾದಲ್ಲಿ ಶೇರ್‌ ಮಾಡಿದ್ದವರೆಲ್ಲ ಆ ಫೋಟೋಗಳನ್ನು ಡಿಲೀಟ್ ಮಾಡಲಾರಂಭಿಸಿದ್ದಾರೆ. ಅನೇಕರು ಆಭರಣ ತೆಗೆದು ಅಡಗಿಸಿಟ್ಟುಕೊಂಡಿದ್ದಾರೆ. ಬಿಗ್ ಬಾಸ್ 10 ಸ್ಪರ್ಧಿ ಸಂತೋಷ್ ಹುಲಿ ಉಗುರುಗಳ ಪೆಂಡೆಂಟ್ ಧರಿಸಿದ್ದಕ್ಕೆ ಜೈಲು ಸೇರಿರುವುದು ಮತ್ತು ಇದರ ಬೆನ್ನಿಗೆ ಈ ರೀತಿ ಹುಲಿ ಉಗುರುಗಳ ಆಭರಣ ಧರಿಸಿದವರ ಮೇಲೆ ಎಲ್ಲರ ಗಮನ ಕೇಂದ್ರೀಕೃತವಾಗಿರುವುದು ಇದಕ್ಕೆ ಕಾರಣ.ಅಷ್ಟೇ ಅಲ್ಲ, ಮಂಗಳವಾರ (ಅ.24) ಹುಲಿ ಉಗುರುಗಳ ಆಭರಣ ಧರಿಸಿದವರನ್ನು ಹುಡುಕಿ ಅವರ ವಿರುದ್ಧ ಅರಣ್ಯ ಇಲಾಖೆ ಪ್ರಕರಣ ದಾಖಲಿಸುವ ಕೆಲಸ ಶುರುಮಾಡಿದೆ. ಈ ನಡುವೆ, ಹುಲಿ ಉಗುರುಗಳ ಆಭರಣದ ಧರಿಸಿದ್ದಾಗಿ ದೂರು ಬಂದರೆ ಕ್ರಮ ಜರುಗಿಸುವುದಾಗಿ ಕರ್ನಾಟಕದ ಅರಣ್ಯ ಸಚಿವ ಈಶ್ವರ ಖಂಡ್ರೆ ಬುಧವಾರ ಎಚ್ಚರಿಸಿದ್ದಾರೆ.ಜನರಿಗೆ ಹುಲಿ ಉಗುರು ಆಭರಣಗಳ ಮೇಲೆ ಯಾಕಿಷ್ಟು ಒಲವು ಎಂಬ ಕುತೂಹಲ ಸಹಜ.

⦁ ಹುಲಿಯನ್ನು ಪೌರುಷ ಸಂಕೇತವಾಗಿ ಜನ ಕಾಣುತ್ತಾರೆ.
⦁ ಭಾರತದ ಅನೇಕ ಭಾಗಗಳಲ್ಲಿ, ಹುಲಿ ಉಗುರುಗಳನ್ನು ದುಷ್ಟ ಶಕ್ತಿಗಳ ಹೊಡೆದೋಡಿಸುವ ಮಾಂತ್ರಿಕ ಶಕ್ತಿಯುಳ್ಳವು.
⦁ ಅದೃಷ್ಟದಾಯಿ ಎಂದು ನಂಬಲಾಗಿದೆ.
⦁ ಹುಲಿ ಉಗುರುಗಳನ್ನು ಧರಿಸಿದವರಲ್ಲಿ ಧೈರ್ಯ ಹೆಚ್ಚು ಎಂಬ ನಂಬಿಕೆಯೂ ಇದೆ.
⦁ ಹುಲಿ ಉಗುರುಗಳ ಆಭರಣ ಅಥವಾ ಹುಲಿ ಉಗುರು ಲಾಕೆಟ್‌ಗಳನ್ನು ಹೆಚ್ಚಾಗಿ ಪುರುಷರು ಧರಿಸುತ್ತಾರೆ.

ಭಾರತದಲ್ಲಿ ವನ್ಯಜೀವಿ ಸಂರಕ್ಷಣಾ ಕಾಯಿದೆ ಪ್ರಕಾರ ಅಸಲಿ ಹುಲಿ ಉಗುರುಗಳ ಆಭರಣ ಮಾಡುವುದು, ಮಾರಾಟ ಮಾಡುವುದು, ಧರಿಸುವುದು ಎಲ್ಲವೂ ಅಪರಾಧ. ಹೀಗಾಗಿಯೇ ಅಸಲಿ ಹುಲಿ ಉಗುರುಗಳ ಆಭರಣ ಧರಿಸಿದವರ ವಿರುದ್ಧ ಪ್ರಕರಣ ದಾಖಲಾಗುತ್ತಿರುವುದು ಮತ್ತು ಅವರನ್ನು ಬಂಧಿಸುತ್ತಿರುವುದು.
ಭಾರತದ ವನ್ಯಜೀವಿ ಸಂರಕ್ಷಣಾ ಕಾಯಿದೆ 1972ರ ಪ್ರಕಾರ, ಹುಲಿ ಉಗುರುಗಳ ಮಾರಾಟ, ಖರೀದಿ ಮತ್ತು ಅಕ್ರಮ ಬಳಕೆ ಅಪರಾಧ. ಇಂತಹ ಪ್ರಕರಣಗಳಲ್ಲಿ ಆರೋಪಿಗಳ ವಿರುದ್ಧದ ಆರೋಪ ಸಾಬೀತಾದರೆ ದಂಡ ಮತ್ತು ಸಜೆ ಎರಡೂ ಸಿಗಬಹುದು. ಜೈಲು ಶಿಕ್ಷೆ ಕನಿಷ್ಠ 3 ವರ್ಷದಿಂದ 7 ವರ್ಷ ತನಕ ಸಿಗಬಹುದು.

Continue Reading

ದೇಶ

X ನಲ್ಲಿ ವೈರಲ್ ಆದ CA ಕಥೆ: ನಂಬಲೇಬೇಕಾ ಅಥವಾ ಕೇವಲ ಕಥೆಯಾ?

Published

on

By

ನವದೆಹಲಿ: ದೆಹಲಿಯ ಚಾರ್ಟರ್ಡ್ ಅಕೌಂಟೆಂಟ್ Nitin Kaushik ಅವರು ಹಂಚಿಕೊಂಡ ಒಂದು ವಿಚಿತ್ರ ಅನುಭವ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸುಮಾರು ₹11 ಕೋಟಿಗೂ ಹೆಚ್ಚು ಆಸ್ತಿ ಹೊಂದಿರುವ ಗ್ರಾಹಕ ₹15,000 ರಿಯಾಯಿತಿ ಕೇಳಿದ ಘಟನೆ ನೆಟ್ಟಿಗರನ್ನು ಆಶ್ಚರ್ಯಕ್ಕೆ ಗುರಿಮಾಡಿದೆ.

ಸೋಶಿಯಲ್ ಮೀಡಿಯಾ ವೇದಿಕೆ X ನಲ್ಲಿ ಈ ಕಥೆಯನ್ನು ಹಂಚಿಕೊಂಡ ಕೌಶಿಕ್, ತನ್ನ ಬಳಿ ನೆಟ್‌ವರ್ತ್ ಪ್ರಮಾಣಪತ್ರಕ್ಕಾಗಿ ಬಂದ ‘ಹೈ ನೆಟ್ ವರ್ತ್ ಇಂಡಿವಿಜುವಲ್’ (HNI) ಬಗ್ಗೆ ವಿವರಿಸಿದ್ದಾರೆ. ಈ ವ್ಯಕ್ತಿಯ ಒಟ್ಟು ಆಸ್ತಿ ಮೌಲ್ಯ ₹11.4 ಕೋಟಿ ಎಂದು ಅಂದಾಜಿಸಲಾಗಿದ್ದು, ದೇಶದ ವಿವಿಧ ಭಾಗಗಳಲ್ಲಿ ಭೂಮಿ, ಸ್ಟಾರ್ಟ್‌ಅಪ್ ಹೂಡಿಕೆಗಳು ಹಾಗೂ ಹಲವು ಕಂಪನಿಗಳ ಪಾಲುದಾರಿಕೆಗಳಿಂದ ಸಂಪಾದನೆ ಮಾಡಿದ್ದಾನೆ ಎಂದು ಹೇಳಿದ್ದಾರೆ.

ಈ ಸೇವೆಗೆ ₹1 ಲಕ್ಷ ಶುಲ್ಕ ಕೇಳಿದಾಗ, ಗ್ರಾಹಕ ಡಿಸ್ಕೌಂಟ್ ಕೇಳಿ ಕೊನೆಗೆ ₹85,000 ಪಾವತಿಸಿದ್ದಾನೆ. “ಹೌದು, ಇಂತಹ ಕ್ಲೈಂಟ್‌ಗಳೂ ಇರುತ್ತಾರೆ” ಎಂದು ಕೌಶಿಕ್ ವ್ಯಂಗ್ಯವಾಗಿ ಹೇಳಿದ್ದಾರೆ.

ಈ ಪೋಸ್ಟ್ ವೈರಲ್ ಆದ ಬಳಿಕ, ಕೆಲವರು ಇದನ್ನು ಹಾಸ್ಯವಾಗಿ ತೆಗೆದುಕೊಂಡರೆ, ಇನ್ನೂ ಕೆಲವರು ಇದರ ನಿಜಾಸ್ತಿ ಬಗ್ಗೆ ಪ್ರಶ್ನೆ ಎತ್ತಿದ್ದಾರೆ. ಕೆಲವು ಬಳಕೆದಾರರು ಈ ಕಥೆ ಕೇವಲ ಅತಿರಂಜಿತವಾಗಿದೆ ಎಂದು ಟೀಕಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಕೌಶಿಕ್, ತಮ್ಮ ಕ್ಲೈಂಟ್ ಹಿಂದಿನ ವರ್ಷ ಕಡಿಮೆ ಆಸ್ತಿ ಹೊಂದಿದ್ದರಿಂದ ಕಡಿಮೆ ಶುಲ್ಕ ಪಾವತಿಸಿದ್ದ ಎಂದು ಸ್ಪಷ್ಟಪಡಿಸಿದ್ದಾರೆ. ಇತ್ತೀಚೆಗೆ ಆಸ್ತಿ ಹೆಚ್ಚಿಸಿಕೊಂಡ ಹಿನ್ನೆಲೆಯಲ್ಲಿ ಈ ಬಾರಿ ಪ್ರಮಾಣಪತ್ರ ಅಗತ್ಯವಾಯಿತು ಎಂದು ಹೇಳಿದ್ದಾರೆ.

(ಸೂಚನೆ: ಈ ವರದಿ ಸಾಮಾಜಿಕ ಜಾಲತಾಣದ ಮಾಹಿತಿಯನ್ನು ಆಧರಿಸಿದೆ. ಮಾಹಿತಿಯ ಸ್ವತಂತ್ರ ದೃಢೀಕರಣ ನಡೆದಿಲ್ಲ.)

Continue Reading

ದೇಶ

ಪೊಲೀಸ್ ವಾಹನವೇ ಪ್ರವೇಶಿಸದ ಗ್ರಾಮ: ಶಾಂತಿಯುತ ಬದುಕಿನ ಅದ್ಭುತ ಕಥೆ

Published

on

By

ಇತ್ತೀಚಿನ ದಿನಗಳಲ್ಲಿ ಸಣ್ಣ ವಿಷಯಕ್ಕೂ ಜಗಳ-ಕೇಸು ಸಾಮಾನ್ಯವಾಗಿರುವ ಸಂದರ್ಭದಲ್ಲೇ, ಬಿಹಾರದ ಒಂದು ಹಳ್ಳಿ ದೇಶಕ್ಕೆ ಮಾದರಿಯಾಗಿ ಹೊರಹೊಮ್ಮಿದೆ. ಕಲಿಯಾಚಕ್ ಗ್ರಾಮ ಕಳೆದ 118 ವರ್ಷಗಳಿಂದ ಯಾವುದೇ ಅಪರಾಧ ದಾಖಲಾಗದೇ ಶಾಂತಿಯುತ ಜೀವನ ನಡೆಸುತ್ತಿರುವುದು ವಿಶೇಷ.

ನಳಂದ ಜಿಲ್ಲೆಯ ಈ ಗ್ರಾಮದಲ್ಲಿ ಸ್ಥಾಪನೆಯಾದ ದಿನದಿಂದಲೂ ಗಂಭೀರ ಅಪರಾಧಗಳೇ ನಡೆದಿಲ್ಲ. ಅಷ್ಟೇ ಅಲ್ಲ, ಇಷ್ಟು ವರ್ಷಗಳಲ್ಲಿ ಪೊಲೀಸ್ ಸೈರನ್ ಕೂಡ ಕೇಳಿಸಿಲ್ಲ ಎಂಬುದು ಆಶ್ಚರ್ಯಕರ ಸಂಗತಿ. ಗ್ರಾಮದಲ್ಲಿ ಯಾವುದೇ ಸಣ್ಣಪುಟ್ಟ ವಿವಾದಗಳು ಉಂಟಾದರೂ, ಹಿರಿಯರು ಕೂತು ಸಮಸ್ಯೆಯನ್ನು ಪರಿಹರಿಸುತ್ತಾರೆ.

ಈ ಗ್ರಾಮ ಹಿಲ್ಸಾ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುತ್ತದೆ. ಆದರೆ ಪೊಲೀಸ್ ದಾಖಲೆಗಳಲ್ಲಿ ಈ ಗ್ರಾಮದಿಂದ ಒಂದೇ ಒಂದು ದೂರು ಕೂಡ ಇಲ್ಲದಿರುವುದು ಅಧಿಕಾರಿಗಳನ್ನೇ ಅಚ್ಚರಿಗೊಳಿಸಿದೆ.

ಗ್ರಾಮದಲ್ಲಿ ಸುಮಾರು 60 ಕುಟುಂಬಗಳು, 500 ಜನರು ವಾಸಿಸುತ್ತಿದ್ದು, ವಿವಿಧ ಜಾತಿ-ವರ್ಗಗಳ ಜನರು ಸಹೋದರತ್ವದಿಂದ ಬದುಕುತ್ತಿದ್ದಾರೆ. “ಗ್ರಾಮದ ಸಮಸ್ಯೆಗಳನ್ನು ಗ್ರಾಮದಲ್ಲೇ ಬಗೆಹರಿಸಬೇಕು” ಎಂಬುದು ಇವರ ಮೂಲ ತತ್ವವಾಗಿದೆ.

ಈ ಶಾಂತಿಯುತ ವಾತಾವರಣಕ್ಕೆ ಪ್ರಮುಖ ಕಾರಣ ಮಾಜಿ ಪಂಚಾಯಿತಿ ಅಧ್ಯಕ್ಷ ಸಾಧು ಶರಣ್ ಸಿಂಗ್ ಅವರ ಮಾರ್ಗದರ್ಶನ. ಅವರ ಪ್ರಯತ್ನದಿಂದ ಈ ಗ್ರಾಮ ಮಾದರಿಯಾಗಿ ರೂಪುಗೊಂಡಿದೆ.

ಇಲ್ಲಿನ ಯುವಕರು ಕೆಟ್ಟ ಅಭ್ಯಾಸಗಳಿಂದ ದೂರವಿದ್ದು ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗಗಳತ್ತ ಗಮನ ಹರಿಸುತ್ತಿದ್ದಾರೆ.

ಗಮನಿಸಿ: ಮೇಲಿನ ವಿವರಗಳು ಬಿಹಾರದ ಕಲಿಯಾಚಕ್ ಗ್ರಾಮದ ಕುರಿತು ಸ್ಥಳೀಯರು ಮತ್ತು ಪೊಲೀಸ್ ಅಧಿಕಾರಿಗಳು ಒದಗಿಸಿದ ಮಾಹಿತಿಯನ್ನು ಆಧರಿಸಿವೆ. ಇದು ಅಪರಾಧ ಮುಕ್ತ ಗ್ರಾಮವಾಗಿ ದೇಶದಲ್ಲಿ ವಿಶೇಷ ಮನ್ನಣೆಯನ್ನು ಗಳಿಸಿದೆ.

ಒಟ್ಟಿನಲ್ಲಿ, ಕಲಿಯಾಚಕ್ ಗ್ರಾಮವು ಒಗ್ಗಟ್ಟು, ಸಹೋದರತ್ವ ಮತ್ತು ಶಾಂತಿಯುತ ಬದುಕಿನ ನಿಜವಾದ ಮಾದರಿಯಾಗಿ ಇಡೀ ದೇಶಕ್ಕೆ ಪ್ರೇರಣೆಯಾಗಿದೆ.

Continue Reading

ದೇಶ

ಎನ್‌ಎಂಎಸಿಸಿ ವೇದಿಕೆಯಲ್ಲಿ ನೀತಾ ಅಂಬಾನಿ ಸೀರೆ ಸದ್ದು: ಐವರಿ-ಗೋಲ್ಡ್ ಲುಕ್ ವೈರಲ್

Published

on

By

ಮುಂಬೈನಲ್ಲಿ ನಡೆದ NMACC third anniversary ಕಾರ್ಯಕ್ರಮದಲ್ಲಿ ನೀತಾ ಅಂಬಾನಿ ಅವರು ತಮ್ಮ ವೈಭವಶಾಲಿ ಸೀರೆ ಲುಕ್ ಮೂಲಕ ಮತ್ತೆ ಗಮನ ಸೆಳೆದಿದ್ದಾರೆ. ಭಾರತೀಯ ಸಂಸ್ಕೃತಿ ಮತ್ತು ಸಾಂಪ್ರದಾಯಿಕತೆಗೆ ಪ್ರತೀಕವಾಗಿರುವ ಅವರ ಶೈಲಿ ಫ್ಯಾಷನ್ ಪ್ರಿಯರ ಮೆಚ್ಚುಗೆಗೆ ಪಾತ್ರವಾಗಿದೆ.

ಈ ವಿಶೇಷ ಕಾರ್ಯಕ್ರಮಕ್ಕೆ ಪತಿ ಮುಕೇಶ್ ಅಂಬಾನಿ ಅವರೊಂದಿಗೆ ಆಗಮಿಸಿದ ನೀತಾ, ಐವರಿ-ಗೋಲ್ಡ್ ಕಾಂಜೀವರಂ ರೇಷ್ಮೆ ಸೀರೆಯನ್ನು ಧರಿಸಿದ್ದರು. ಹೊನ್ನಿನ ನೂಲುಗಳಿಂದ ನೇಯ್ದ ಈ ಸೀರೆಗೆ ಮರೂನ್ ಕೆಂಪು ಅಂಚು ಹೆಚ್ಚುವರಿ ಶೋಭೆ ನೀಡಿತು.

ಈ ಸೀರೆ ಕೈಮಗ್ಗದಲ್ಲಿ ಪರಿಣಿತ ಕಲಾವಿದ ಆರ್. ವರಧನ್ ಅವರ ಕೈಚಳಕದಿಂದ ಮೂಡಿಬಂದಿದ್ದು, ಇದನ್ನು ತಯಾರಿಸಲು ಸುಮಾರು ನಾಲ್ಕು ತಿಂಗಳು ಸಮಯ ತೆಗೆದುಕೊಂಡಿದೆ. ಜರಿ ಕಸೂತಿ ಮತ್ತು ನಯವಾದ ಮೇಲ್ಮೈ ಈ ಸೀರೆಗೆ ವಿಶೇಷ ಮೌಲ್ಯ ನೀಡಿದೆ.

ಆಭರಣಗಳ ವಿಷಯದಲ್ಲಿ ನೀತಾ ಅಂಬಾನಿ ಬರ್ಮಾ ರೂಬಿ ಅಲಂಕೃತ ಚಿನ್ನದ ಮಾವಿನ ಸರ ಹಾಗೂ ಬಸ್ರಾ ಮುತ್ತಿನ ಕರ್ಣಾಭರಣ ಧರಿಸಿ ಸಾಂಪ್ರದಾಯಿಕತೆಗೆ ಆಧುನಿಕ ಸ್ಪರ್ಶ ನೀಡಿದ್ದಾರೆ.

ಕಾರ್ಯಕ್ರಮದ ವೇಳೆ ಅವರು ಭಾರತೀಯ ಕಲೆ ಮತ್ತು ಸಂಸ್ಕೃತಿಯ ಮಹತ್ವವನ್ನು ಒತ್ತಿ ಹೇಳಿ, “ಸಂಖ್ಯೆ 3”ರ ಸಾಂಸ್ಕೃತಿಕ ಅರ್ಥವನ್ನು ತ್ರಿಮೂರ್ತಿ, ತ್ರಿದೇವಿ ಮತ್ತು ತ್ರಿವೇಣಿ ಸಂಗಮದ ಉದಾಹರಣೆಗಳ ಮೂಲಕ ವಿವರಿಸಿದರು.

ಈ ಲುಕ್ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು, ಭಾರತೀಯ ಹಸ್ತಕುಶಲತೆ ಮತ್ತು ಕಾಂಜೀವರಂ ಸೀರೆಗಳಿಗೆ ಜಾಗತಿಕ ಮಟ್ಟದಲ್ಲಿ ಮತ್ತೊಮ್ಮೆ ಮೆಚ್ಚುಗೆ ವ್ಯಕ್ತವಾಗಿದೆ.

Continue Reading

Trending