ಸಿನಿಮಾ
33 ವರ್ಷಗಳ ಬಳಿಕ ಒಂದಾದ ಬಿಗ್‌ಬಿ, ರಜನಿಕಾಂತ್
ತಲೈವರ್ 170 ಸಿನಿಮಾದ ಕುರಿತು ರಜನಿಕಾಂತ್ ಹೊಸ ಅಪ್‌ಡೇಟ್ ನೀಡಿದ್ದಾರೆ. ಈ ಚಿತ್ರದಲ್ಲಿ ರಜನಿಕಾಂತ್ ಜತೆ ನಟಿಸುವ ಕುರಿತು ಅಧಿಕೃತವಾಗಿ ಎಕ್ಸ್‌ನಲ್ಲಿ ರಜನಿಕಾಂತ್ ಪೋಸ್ಟ್ ಮಾಡಿದ್ದಾರೆ. “ಸುಮಾರು 33 ವರ್ಷಗಳ ಬಳಿಕ ನನ್ನ ಗುರು, ನನ್ನ ಮಾರ್ಗದರ್ಶಕರು, ಶ್ರೀ ಅಮಿತಾಬ್ ಬಚ್ಚನ್ ಜತೆ ಲೈಕಾದ ತಲೈವರ್ 170 ಚಿತ್ರದಲ್ಲಿ ಮತ್ತೆ ಕೆಲಸ ಮಾಡುತ್ತಿದ್ದೇನೆ. ಇದು ಟಿಜೆ ಗುಣವೇಲು ನಿರ್ದೇಶನದ ಚಿತ್ರ. ನನ್ನ ಹೃದಯ ಖುಷಿಯಿಂದ ಮಿಡಿಯುತ್ತಿದೆ” ಎಂದು ರಜನಿಕಾಂತ್ ಟ್ವೀಟ್ ಮಾಡಿದ್ದಾರೆ.ರಜನಿಕಾಂತ್ ಮತ್ತು ಅಬಿತಾಬ್ ಬಚ್ಚನ್ ಜತೆಯಾಗಿ ಸಿನಿಮಾ ಮಾಡಿ ಬರೋಬ್ಬರಿ 33 ವರ್ಷಗಳು ಕಳೆದಿವೆ. ಇವರು 1991ರಲ್ಲಿ ಕೊನೆಯ ಬಾರಿ ಫ್ಯಾಮಿಲಿ ಡ್ರಾಮಾ ಹಮ್‌ನಲ್ಲಿ ಜತೆಯಾಗಿ ನಟಿಸಿದ್ದರು. ತಲೈವರ್ ಚಿತ್ರದಲ್ಲಿ ಮತ್ತೆ ಇವರು ಒಂದಾಗಲಿದ್ದಾರೆ.
ತಲೈವರ್ 170 ಎನ್ನುವುದು ಸಿನಿಮಾದ ಹೆಸರಲ್ಲ. ಇದು ತಲೈವಾ ರಜನಿಕಾಂತ್‌ರ 170ನೇ ಚಿತ್ರ ಎಂದು ಅರ್ಥ. ಮುಂಬರುವ ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲ. ಸಿನಿಮಾದ ಕುರಿತು ಮಾರ್ಚ್ ತಿಂಗಳಲ್ಲಿ ಲೈಕಾ ಪ್ರೊಡಕ್ಷನ್ ಅಪ್‌ಡೇಟ್ ನೀಡಿತ್ತು. ಇದು ಜ್ಞಾನವೇಲು ಅವರ ನಿರ್ದೇಶನದ ಚಿತ್ರ. ತಲೈವಾರ 170ರ ಚಿತ್ರ. “ನನ್ನ 170ನೇ ಸಿನಿಮಾವನ್ನು ಜ್ಞಾನವೇಲು ನಿರ್ದೇಶಿಸಲಿದ್ದಾರೆ. ಸಾಮಾಜಿಕ ಸಂದೇಶದೊಂದಿಗೆ ಈ ಚಿತ್ರ ಪ್ರಮುಖ ಮನರಂಜನಾ ಚಿತ್ರವಾಗಿರಲಿದೆ” ಎಂದು ರಜನಿಕಾಂತ್ ಇತ್ತೀಚೆಗೆ ಮಾಹಿತಿ ನೀಡಿದ್ದರು.ಸೂಪರ್‌ಸ್ಟಾರ್ ರಜನಿಕಾಂತ್ ಮುಂದಿನ ಚಿತ್ರ ತಲೈವರ್ 170ನಲ್ಲಿ ಪ್ರಮುಖ ನಟ ನಟಿಯರ ದಂಡೇ ಇದೆ. ಈಗಾಗಲೇ ಚಿತ್ರತಂಡವು ಹಲವು ಪ್ರಮುಖ ನಟರ ಹೆಸರನ್ನು ಘೋಷಿಸಿದೆ. ಮಲಯಾಳದ ಪ್ರಮುಖ ನಟ ಫಹಾದ್ ಫಾಸಿಲ್ ತಲೈವಾರ್ ಚಿತ್ರದಲ್ಲಿ ನಟಿಸಲಿದ್ದಾರೆ ಎಂದು ಈಗಾಗಲೇ ಲೈಕಾ ಘೋಷಿಸಿದೆ. ಈ ಹಿಂದೆ ಬಾಹುಬಲಿ ನಟ ರಾಣಾ ದಗ್ಗುಬಟ್ಟಿ, ಮಂಜು ವಾರಿಯರ್, ರಿತಿಕಾ ಸಿಂಗ್ ಮತ್ತು ದುಶಾರಾ ವಿಜಯನ್ ಈ ಸಿನಿಮಾ ತಂಡಕ್ಕೆ ಸೇರ್ಪಡೆಯಾಗಿದ್ದರು. ಒಟ್ಟಾರೆ, ಇದು ಪ್ಯಾನ್ ಇಂಡಿಯಾದ ಪ್ರಮುಖ ಚಿತ್ರವಾಗುವ ನಿರೀಕ್ಷೆಯಿದೆ.
ದೇಶ
‘ಕಿಂಗ್100’ನಲ್ಲಿ ಟಬು ವಿಲನ್! ನಾಗಾರ್ಜುನ ವಿರುದ್ಧ ಹೊಸ ಅವತಾರ
ಹೈದರಾಬಾದ್: ಟಾಲಿವುಡ್‌ನ ಸ್ಟಾರ್ ನಟ ನಾಗಾರ್ಜುನ ಅಕ್ಕಿನೇನಿ ಮತ್ತು ಬಹುಭಾಷಾ ನಟಿ ಟಬು ಸುಮಾರು 28 ವರ್ಷಗಳ ಬಳಿಕ ಮತ್ತೆ ಒಂದೇ ಸಿನಿಮಾದಲ್ಲಿ ನಟಿಸಲು ಸಜ್ಜಾಗಿದ್ದಾರೆ. ನಾಗಾರ್ಜುನ ಅವರ ವೃತ್ತಿಜೀವನದ 100ನೇ ಸಿನಿಮಾ ಎನ್ನಲಾಗುತ್ತಿರುವ ಈ ಬಹುನಿರೀಕ್ಷಿತ ಚಿತ್ರಕ್ಕೆ ಸದ್ಯ ‘ಕಿಂಗ್100’ ಎಂಬ ತಾತ್ಕಾಲಿಕ ಶೀರ್ಷಿಕೆ ಇಡಲಾಗಿದೆ.
ಈ ಸುದ್ದಿಯ ವಿಶೇಷವೆಂದರೆ, ಈ ಬಾರಿ ಟಬು ಅವರು ನಾಗಾರ್ಜುನ ಅವರ ಪ್ರೇಯಸಿಯಾಗಿ ಅಲ್ಲ, ಪ್ರಮುಖ ಖಳನಾಯಕಿ (ವಿಲನ್) ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಈ ಬೆಳವಣಿಗೆ ಸಿನಿಮಾ ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿದೆ.
ನಾಗಾರ್ಜುನ ಮತ್ತು ಟಬು ಮೊದಲ ಬಾರಿಗೆ ‘ನಿನ್ನೇ ಪೆಳ್ಳಾಡತಾ’ ಚಿತ್ರದ ಮೂಲಕ ಜೋಡಿಯಾಗಿ ಪ್ರೇಕ್ಷಕರ ಮನಗೆದ್ದಿದ್ದರು. ಬಳಿಕ ‘ಆವಿಡಾ ಮಾ ಆವಿಡೇ’ ಹಾಗೂ ‘ಸಿಸಿಂದ್ರಿ’ ಸಿನಿಮಾಗಳಲ್ಲೂ ಒಟ್ಟಿಗೆ ನಟಿಸಿದ್ದರು. ಆದರೆ ಹಲವು ವರ್ಷಗಳಿಂದ ಈ ಜೋಡಿ ಮತ್ತೆ ಒಂದಾಗಿ ಕಾಣಿಸಿಕೊಳ್ಳದೇ ಇದ್ದ ಕಾರಣ, ಈಗಿನ ಘೋಷಣೆ ಅಭಿಮಾನಿಗಳಿಗೆ ವಿಶೇಷ ಸಂತಸ ತಂದಿದೆ.
ಇದೀಗ ನಿರ್ಮಾಣ ಹಂತದಲ್ಲಿರುವ ‘ಕಿಂಗ್100’ ಚಿತ್ರದ ಮೊದಲ ಹಂತದ ಚಿತ್ರೀಕರಣ ಈಗಾಗಲೇ ಪೂರ್ಣಗೊಂಡಿದೆ. ಈ ಆ್ಯಕ್ಷನ್ ಚಿತ್ರವನ್ನು ರಾ. ಕಾರ್ತಿಕ್ ನಿರ್ದೇಶಿಸುತ್ತಿದ್ದು, ಅನ್ನಪೂರ್ಣ ಸ್ಟುಡಿಯೋಸ್ ನಿರ್ಮಿಸುತ್ತಿದೆ. ನಾಗಾರ್ಜುನ ಅವರ 100ನೇ ಸಿನಿಮಾ ಎಂಬ ಕಾರಣಕ್ಕೆ ಚಿತ್ರಕ್ಕೆ ಈಗಾಗಲೇ ಭಾರೀ ನಿರೀಕ್ಷೆ ವ್ಯಕ್ತವಾಗಿದೆ.
ಟಬು ಅವರು ತಮ್ಮ ವೃತ್ತಿಜೀವನದಲ್ಲಿ ಹಲವು ವಿಭಿನ್ನ ಹಾಗೂ ಸವಾಲಿನ ಪಾತ್ರಗಳನ್ನು ನಿರ್ವಹಿಸಿ ರಾಷ್ಟ್ರ ಮಟ್ಟದಲ್ಲಿ ಮೆಚ್ಚುಗೆ ಗಳಿಸಿದ್ದಾರೆ. ‘ಮಕ್ಬೂಲ್’, ‘ಹೈದರ್’, ‘ಅಂಧಾಧುನ್’, ‘ಫಿತೂರ್’ ಸೇರಿದಂತೆ ಹಲವು ಚಿತ್ರಗಳಲ್ಲಿ ಅವರ ಅಭಿನಯ ಪ್ರಶಂಸೆಗೆ ಪಾತ್ರವಾಗಿತ್ತು. ಇತ್ತೀಚೆಗೆ ಅವರು ‘ಭೂತ್ ಬಂಗ್ಲಾ’ ಹಾಗೂ ಅಂತರರಾಷ್ಟ್ರೀಯ ವೆಬ್ ಸರಣಿ **’ಡ್ಯೂನ್: ಪ್ರೊಫೆಸಿ’**ಯಲ್ಲೂ ಕಾಣಿಸಿಕೊಂಡಿದ್ದಾರೆ.
ಇತ್ತ ನಾಗಾರ್ಜುನ ಕೂಡ ಇತ್ತೀಚೆಗೆ ಬಿಡುಗಡೆಯಾದ ‘ಕುಬೇರ’ ಚಿತ್ರದ ಮೂಲಕ ಗಮನ ಸೆಳೆದಿದ್ದಾರೆ. ಇದೀಗ ‘ಕಿಂಗ್100’ನಲ್ಲಿ ಹೀರೋ ಮತ್ತು ವಿಲನ್ ಆಗಿ ನಾಗಾರ್ಜುನ ಹಾಗೂ ಟಬು ನಡುವಿನ ಮುಖಾಮುಖಿ ಹೇಗಿರಲಿದೆ ಎಂಬ ಕುತೂಹಲ ಸಿನಿಪ್ರಿಯರಲ್ಲಿ ಹೆಚ್ಚಾಗಿದೆ.
ದೇಶ
ಸೋನಾಕ್ಷಿ ಸಿನ್ಹಾ ಲೂಸಸ್ ಕೂಲ್: ವೈರಲ್ ಆದ ವಿಡಿಯೋ ಒಳಗೇನಿದೆ?
Sonakshi Sinha Loses Cool With Paps: ಇತ್ತೀಚೆಗೆ ಬಾಲಿವುಡ್ ಮತ್ತು ಕನ್ನಡ ಚಿತ್ರರಂಗದ ನಟಿಯರು ಪಾಪರಾಜಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿವೆ. ಈ ಮೊದಲು ಹಿರಿಯ ನಟಿ ಜಯಾ ಬಚ್ಚನ್ ಮಗಳೊಂದಿಗಿನ ಫೋಟೋ ಕ್ಲಿಕ್ಕಿಸುವ ವೇಳೆ ಅನುಚಿತ ಮಾತುಗಳ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದ್ದರು. ಇದೀಗ ಈ ಸಾಲಿಗೆ ಸೇರಿರುವುದು ನಟಿ ಸೋನಾಕ್ಷಿ ಸಿನ್ಹಾ.
ಸೋಮವಾರ ಸೋನಾಕ್ಷಿ ಸಿನ್ಹಾ ಕುಟುಂಬ ಮುಂಬೈನ ರೆಸ್ಟೋರೆಂಟ್ ಒಂದರಲ್ಲಿ ಭೋಜನಕೂಟ ಆಯೋಜಿಸಿತ್ತು. ಭೋಜನದ ನಂತರ ತಂದೆ ಶತ್ರುಘ್ನ ಸಿನ್ಹಾ ಮತ್ತು ಪತಿ ಜಹೀರ್ ಇಕ್ಬಾಲ್ರನ್ನು ಬೀಳ್ಕೊಡುಗೆ ನೀಡುತ್ತಿದ್ದ ವೇಳೆ, ಪಾಪರಾಜಿಗಳು ಕಾರಿನೊಳಗಿನ ದೃಶ್ಯಗಳನ್ನು ಚಿತ್ರೀಕರಿಸಲು ಮುಂದಾದರು. ಇದರಿಂದ ಬೇಸತ್ತ ಸೋನಾಕ್ಷಿ, ಚಿತ್ರೀಕರಣ ನಿಲ್ಲಿಸುವಂತೆ ಕೈ ಮುಗಿದು ಮನವಿ ಮಾಡಿದ ದೃಶ್ಯಗಳಿರುವ ವಿಡಿಯೋ ಇದೀಗ ವೈರಲ್ ಆಗಿದೆ. ಈ ವಿಡಿಯೋಗೆ ನೆಟ್ಟಿಗರು ಮಿಶ್ರ ಪ್ರತಿಕ್ರಿಯೆ ನೀಡಿದ್ದು, ಕೆಲವರು ಪಾಪರಾಜಿಗಳ ವರ್ತನೆಯ ಬಗ್ಗೆ ಪ್ರಶ್ನೆ ಎತ್ತಿದ್ದಾರೆ.
ಇದಕ್ಕೂ ಮುನ್ನ ಕಾಕ್ಟೇಲ್ 2 ಸಿನಿಮಾ ಪ್ರಚಾರದ ವೇಳೆ ರಶ್ಮಿಕಾ ಮಂದಣ್ಣಗೆ ಜನಸಂದಣಿಯ ನಡುವೆ ಕೃತಿ ಸನೂನ್ ಸುರಕ್ಷಿತವಾಗಿ ಮಾರ್ಗದರ್ಶನ ನೀಡಿದ್ದರು. ಇದೇ ವಿಷಯವಾಗಿ ನಟಿ ಸಪ್ತಮಿ ಗೌಡ ಸಹ, ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಮಹಿಳಾ ಕಲಾವಿದರನ್ನು ಅಸಭ್ಯ ಕೋನಗಳಿಂದ ಚಿತ್ರೀಕರಿಸುವ ಪ್ರವೃತ್ತಿ ವಿರುದ್ಧ ಬಲವಾಗಿ ಧ್ವನಿ ಎತ್ತಿದ್ದು, ಇದಕ್ಕೆ ಕನ್ನಡ ಚಿತ್ರರಂಗದ ಇತರ ನಟಿಯರೂ ಸಹಮತ ವ್ಯಕ್ತಪಡಿಸಿದ್ದಾರೆ.
ದೇಶ
ರಾಜಮೌಳಿ ತಂಡ ತೆಗೆದುಕೊಂಡ ರಿಸ್ಕ್ ನೆನೆದು ಭಾವುಕರಾದ ಪ್ರಭಾಸ್
ಬೆಂಗಳೂರು: ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಹೊಸ ಅಧ್ಯಾಯ ಬರೆದ ‘ಬಾಹುಬಲಿ’ ಚಿತ್ರದ ಯಶಸ್ಸಿನ ಹಿಂದಿನ ಕಠಿಣ ಹೋರಾಟವನ್ನು ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಭಾವುಕರಾಗಿ ನೆನಪಿಸಿಕೊಂಡಿದ್ದಾರೆ. #BaahubaliTheTorchbearer ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಚಿತ್ರದ ನಿರ್ಮಾಣದಿಂದ ಬಿಡುಗಡೆಯವರೆಗಿನ ಪ್ರಯಾಣವೇ ಒಂದು ಭೀಕರ ಯುದ್ಧದಂತಿತ್ತು ಎಂದು ಹೇಳಿದ್ದಾರೆ.
ಬಾಹುಬಲಿ ಸಿನಿಮಾ ದೇಶ-ವಿದೇಶಗಳಲ್ಲಿ ಬಾಕ್ಸ್ ಆಫೀಸ್ ದಾಖಲೆಗಳನ್ನು ನಿರ್ಮಿಸಿದರೂ, ಅದರ ಹಿಂದೆ ಚಿತ್ರತಂಡ ಮತ್ತು ನಿರ್ಮಾಪಕರು ಅಪಾರ ಅಪಾಯವನ್ನು ಎದುರಿಸಿದ್ದರು ಎಂದು ಪ್ರಭಾಸ್ ತಿಳಿಸಿದ್ದಾರೆ. ಚಿತ್ರದ ಮೊದಲ ದಿನ ಕೆಲವು ನಕಾರಾತ್ಮಕ ಪ್ರತಿಕ್ರಿಯೆಗಳು ಬಂದಾಗ ನಿರ್ಮಾಪಕರ ಪರಿಸ್ಥಿತಿ ಏನಾಗಬಹುದು ಎಂಬ ಆತಂಕ ಎಲ್ಲರಲ್ಲೂ ಇತ್ತು ಎಂದು ಅವರು ನೆನಪಿಸಿಕೊಂಡರು.
“ಆ ದಿನಗಳಲ್ಲಿ ಸಿನಿಮಾ ಸೋತಿದ್ದರೆ ನಿರ್ಮಾಪಕರಾದ ಶೋಬು ಯರ್ಲಗಡ್ಡ, ಪ್ರಸಾದ್ ದೇವಿನೇನಿ ಹಾಗೂ ನಿರ್ದೇಶಕ ಎಸ್.ಎಸ್. ರಾಜಮೌಳಿ ಅವರ ಜೀವನವೇ ಸಂಪೂರ್ಣ ತಲೆಕೆಳಗಾಗುತ್ತಿತ್ತು. ಅವರು ತಮ್ಮೆಲ್ಲವನ್ನೂ ಈ ಸಿನಿಮಾಕ್ಕಾಗಿ ಪಣಕ್ಕಿಟ್ಟಿದ್ದರು,” ಎಂದು ಪ್ರಭಾಸ್ ಭಾವುಕರಾಗಿ ಹೇಳಿದರು.
ಇದೇ ವೇಳೆ ಜಪಾನ್ ಪ್ರೇಕ್ಷಕರ ಬಗ್ಗೆ ವಿಶೇಷವಾಗಿ ಮಾತನಾಡಿದ ಅವರು, ಅಲ್ಲಿನ ಅಭಿಮಾನಿಗಳು ತಮಗೆ ನೀಡಿದ ಪ್ರೀತಿ ಮತ್ತು ಗೌರವ ಎಂದಿಗೂ ಮರೆಯಲಾಗದು ಎಂದರು. ಜಪಾನ್‌ನ ಜನರು ಅತ್ಯಂತ ಹೃದಯವಂತರು ಹಾಗೂ ಆತ್ಮೀಯರು. ಅವರ ಪ್ರೀತಿಯಿಂದ ಜಪಾನ್ ಈಗ ತಮ್ಮ ಎರಡನೇ ಮನೆಯಂತಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಬಾಹುಬಲಿ ಚಿತ್ರದ ಐತಿಹಾಸಿಕ ಯಶಸ್ಸಿನ ಬಳಿಕ ಎದುರಾದ ಮಾನಸಿಕ ಒತ್ತಡದ ಬಗ್ಗೆಯೂ ಪ್ರಭಾಸ್ ಮನಬಿಚ್ಚಿ ಮಾತನಾಡಿದರು. ಇಷ್ಟೊಂದು ದೊಡ್ಡ ಯಶಸ್ಸಿನ ನಂತರ ಯಾವ ರೀತಿಯ ಕಥೆಗಳನ್ನು ಆಯ್ಕೆ ಮಾಡಬೇಕು, ಮುಂದಿನ ಹೆಜ್ಜೆ ಹೇಗಿರಬೇಕು ಎಂಬ ಗೊಂದಲ ಕಾಡಿತ್ತು. ಬಾಹುಬಲಿ ಬಳಿಕದ ದಿನಗಳು ತಮ್ಮ ಜೀವನದಲ್ಲಿ ಅತ್ಯಂತ ಒತ್ತಡ ಮತ್ತು ಅನಿಶ್ಚಿತತೆಯಿಂದ ಕೂಡಿದ್ದವು ಎಂದು ಅವರು ಹಂಚಿಕೊಂಡರು.
ಇನ್ನಷ್ಟು ಸಿನಿಮಾ, ಮನರಂಜನೆ ಹಾಗೂ ವೈರಲ್ ಸುದ್ದಿಗಳಿಗಾಗಿ ನಿರಂತರವಾಗಿ ಭೇಟಿ ನೀಡಿ Hosasuddi.in.
ವೇಗದ, ವಿಶ್ವಾಸಾರ್ಹ ಹಾಗೂ ವಿಶೇಷ ಸುದ್ದಿಗಳಿಗೆ Hosasuddi.in ನಿಮ್ಮ ನೆಚ್ಚಿನ ತಾಣ.
-
ದೇಶ23 hours agoಅಂಜನಾದ್ರಿ ಹುಂಡಿ ಎಣಿಕೆ ಬಳಿಕ 4 ದಿನ ಮೌನ! ಈಗ ಪ್ರಕಟಣೆ ಹೊರಬಿದ್ದಿದ್ದು ಏಕೆ?
-
ದೇಶ4 hours agoರಸ್ತೆ ಮಧ್ಯೆ ಹೆಡೆ ಎತ್ತಿ ನಿಂತ ನಾಗರಹಾವು: ಪ್ಯಾಲೇಸ್ ರಸ್ತೆಯಲ್ಲಿ ಅರ್ಧ ಗಂಟೆ ಸಂಚಾರ ಅಸ್ತವ್ಯಸ್ತ
-
ದೇಶ9 hours agoಬ್ಯಾಂಕ್ ಅಕೌಂಟ್ ಕ್ಲೋಸ್ ಮಾಡಿದರೆ ಕ್ರೆಡಿಟ್ ಕಾರ್ಡ್ ಬಂದ್ ಆಗುತ್ತಾ? ಇಲ್ಲಿದೆ ಸಂಪೂರ್ಣ ಮಾಹಿತಿ
-
ದೇಶ23 hours ago‘ಕಿಂಗ್100’ನಲ್ಲಿ ಟಬು ವಿಲನ್! ನಾಗಾರ್ಜುನ ವಿರುದ್ಧ ಹೊಸ ಅವತಾರ
-
ಅಪರಾಧ4 hours agoಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇನಲ್ಲಿ ಮತ್ತೆ ರೌಡಿಗಳ ದಾಳಿ: ಫ್ಲೈ ಬಸ್ ಚಾಲಕ, ನಿರ್ವಾಹಕನ ಮೇಲೆ ಹಲ್ಲೆ
-
ದೇಶ4 hours ago‘ಮೋದಿ ಒಂದೂವರೆ ಗಂಟೆ ನನಗೆ ಬುದ್ಧಿ ಹೇಳಿದರು’ : ಎಚ್.ಡಿ.ಕುಮಾರಸ್ವಾಮಿ
-
ಅಪರಾಧ3 hours agoಆಸ್ಪತ್ರೆ ದೌರ್ಜನ್ಯ ಪ್ರಕರಣ: ವೈರಲ್ ದೃಶ್ಯಗಳ ನಡುವೆ ಕಾರ್ಪೊರೇಟರ್ ಸ್ಪಷ್ಟನೆ ಏನು?
-
ಅಪರಾಧ2 hours agoವೈರಲ್ ವಿಡಿಯೋ: ಲಾರಿ ಡಿಕ್ಕಿ ಹೊಡೆದರೂ ಪ್ರಾಣಾಪಾಯದಿಂದ ಪಾರಾದ ವಿದ್ಯಾರ್ಥಿನಿ
