ಕ್ರೀಡೆ
ಪಾಕಿಸ್ತಾನ ತಂಡದಲ್ಲಿ ಮತಾಂತರಕ್ಕೆ ಒತ್ತಾಯ; ಮಾಜಿ ಕ್ರಿಕೆಟಿಗನ ಸ್ಫೋಟಕ ಹೇಳಿಕೆ

ನವದೆಹಲಿ: ಮಾಜಿ ನಾಯಕ ಮತ್ತು ಲೆಜೆಂಡರಿ ಆಲ್ರೌಂಡರ್ ಶಾಹಿದ್ ಅಫ್ರಿದಿ ತಮ್ಮನ್ನು ಇಸ್ಲಾಂಗೆ ಮತಾಂತರಗೊಳ್ಳುವಂತೆ ನಿರಂತರವಾಗಿ ಒತ್ತಡ ಹೇರುತ್ತಿದ್ದರು ಎಂಬುದಾಗಿ ಪಾಕಿಸ್ತಾನದ ಮಾಜಿ ಸ್ಪಿನ್ನರ್ ದಾನಿಶ್ ಕನೇರಿಯಾ ಅವರು ಆರೋಪಿಸಿದ್ದಾರೆ. ಪಾಕಿಸ್ತಾನ ಕ್ರಿಕೆಟ್ ತಂಡದೊಂದಿಗೆ ಆಡುವ ದಿನಗಳಲ್ಲಿ ತಾವು ಎದುರಿಸಿದ ತಾರತಮ್ಯದ ಬಗ್ಗೆಯೂ ಕನೇರಿಯಾ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಅಫ್ರಿದಿ ಮತ್ತು ಶೋಯೆಬ್ ಅಖ್ತರ್ ಸೇರಿದಂತೆ ಹೆಚ್ಚಿನ ಆಟಗಾರರು ತಮ್ಮನ್ನು ಸಾಕಷ್ಟು ತೊಂದರೆಗೊಳಿಸಿದರೆ, ಇಂಜಮಾಮ್-ಉಲ್-ಹಕ್ ಮಾತ್ರ ತಮ್ಮನ್ನು ಬೆಂಬಲಿಸಿದರು ಎಂದು ಕನೇರಿಯಾ ಬಹಿರಂಗಪಡಿಸಿದ್ದಾರೆ. ಅಫ್ರಿದಿ ಮತ್ತು ಅಖ್ತರ್ ತಮ್ಮೊಂದಿಗೆ ಊಟವನ್ನೂ ಮಾಡುತ್ತಿರಲಿಲ್ಲ ಎಂದು ಅವರು ಹೇಳಿದ್ದಾರೆ.
ಇಸ್ಲಾಂಗೆ ಮತಾಂತರಗೊಳ್ಳುವಂತೆ ನನ್ನ ಮನವೊಲಿಸಲು ಅಫ್ರಿದಿ ಸಾಕಷ್ಟು ಪ್ರಯತ್ನಿಸಿದ್ದರು. ಹಿಂದೂ ರ‍್ಮಕ್ಕೆ ಸೇರಿದ್ದ ಕಾರಣ ಪಾಕಿಸ್ತಾನ ತಂಡದಲ್ಲಿ ಸಾಕಷ್ಟು ತಾರತಮ್ಯವನ್ನು ಎದುರಿಸಬೇಕಾಯಿತು ಎಂಬುದಾಗಿಯೂ ಅವರು ಹೇಳಿಕೊಂಡಿದ್ದಾರೆ.
ನಾನು ನನ್ನ ವೃತ್ತಿಜೀವನದಲ್ಲಿ ಉತ್ತಮವಾಗಿ ಕರ‍್ಯನರ‍್ವಹಿಸುತ್ತಿದ್ದೆ. ಕೌಂಟಿ ಕ್ರಿಕೆಟ್ ಕೂಡ ಆಡುತ್ತಿದ್ದೆ. ಇಂಜಮಾಮ್-ಉಲ್-ಹಕ್ ನನಗೆ ಸಾಕಷ್ಟು ಬೆಂಬಲ ನೀಡಿದ್ದರು. ಹಾಗೆ ಮಾಡಿದ ಏಕೈಕ ನಾಯಕ . ಶೋಯೆಬ್ ಅಖ್ತರ್. ಶಾಹಿದ್ ಅಫ್ರಿದಿ ಮತ್ತು ಇತರ ಅನೇಕ ಪಾಕಿಸ್ತಾನಿ ಆಟಗಾರರು ನನಗೆ ಸಾಕಷ್ಟು ತೊಂದರೆ ನೀಡಿದರು. ನಿರಂತರ ಕಿರುಕುಳ ನೀಡುತ್ತಿದ್ದರು ಎಂಬುದಾಗಿ ಅವರು ಹೇಳಿದ್ದಾರೆ.
ಅವರೆಲ್ಲರೂ ನನ್ನೊಂದಿಗೆ ಊಟ ಮಾಡಲಿಲ್ಲ. ಪ್ರತಿ ಬಾರಿಯೂ ಮತಾಂತರದ ಬಗ್ಗೆ ಮಾತನಾಡುತ್ತಿದ್ದರು. ಆದರೆ ನನ್ನ ರ‍್ಮವೇ ನನಗೆ ಎಲ್ಲವೂ ಆಗಿತ್ತು. ಶಾಹಿದ್ ಅಫ್ರಿದಿ ನನಗೆ ಮತಾಂತರಗೊಳ್ಳಲು ಹೇಳಿದ ಪ್ರಮುಖ ವ್ಯಕ್ತಿ. ಅದನ್ನು ಸಾಕಷ್ಟು ಬಾರಿ ತೊಂದರೆ ಮಾಡಿದರು. ಇಂಜಮಾಮ್-ಉಲ್-ಹಕ್ ಎಂದಿಗೂ ಆ ರೀತಿ ಮಾತನಾಡುತ್ತಿರಲಿಲ್ಲ ಎಂಬುದಾಗಿ ಹೇಳಿದ್ದಾರೆ.
ರ‍್ಮವನ್ನು ಲೆಕ್ಕಿಸದೆ ಎಲ್ಲಾ ಕ್ರಿಕೆಟಿಗರಿಗೆ ಸಮಾನ ಅವಕಾಶಗಳನ್ನು ನೀಡುತ್ತಿರುವ ಭಾರತವನ್ನು ಕನೇರಿಯಾ ಹೊಗಳಿದ್ದಾರೆ.
ನಾನು ಹಿಂದೂ ಮತ್ತು ನಾನು ಎಲ್ಲಾ ದಾಖಲೆಗಳನ್ನು ಮುರಿಯುತ್ತೇನೆ ಎಂಬ ಕಾರಣಕ್ಕೆ ಪಿಸಿಬಿ ನನ್ನನ್ನು ಬೆಂಬಲಿಸಲಿಲ್ಲ. ಆದರೆ, ನನ್ನ ಉತ್ತಮ ಪ್ರರ‍್ಶನದ ಕಾರಣ ನನ್ನನ್ನು ತಂಡದಿಂದ ಕೈಬಿಡಲು ಸಾಧ್ಯವಾಗಲಿಲ್ಲ. ನಾನು ಎಲ್ಲಾ ದಾಖಲೆಗಳನ್ನು ಮುರಿಯಬಲ್ಲೆ ಎಂದು ಅವರಿಗೆ ತಿಳಿದಿತ್ತು. ಪಾಕಿಸ್ತಾನದಲ್ಲಿ ಎಂದಿಗೂ ಒಬ್ಬ ಹಿಂದೂ ಉತ್ತಮ ಗೌರವ ಪಡೆಯಲಿಲ್ಲ. . ಭಾರತ ಎಲ್ಲರಿಗೂ ಅವಕಾಶ ನೀಡುತ್ತಿದೆ. ಆ ಸಮಯದಲ್ಲಿ ನನ್ನ ತಂದೆ ಕೂಡ ನಿಧನರಾದರು, ಆದ್ದರಿಂದ ನಾನು ತುಂಬಾ ಅಸಮಾಧಾನಗೊಂಡಿದ್ದೆ. ಎಂಬುದಾಗಿ ಡ್ಯಾನಿಶ್ ಕನೇರಿಯಾ ಹೇಳಿದ್ದಾರೆ.
ಕ್ರೀಡೆ
ಕುಮಾರಸ್ವಾಮಿ ಸಿಡಿಸಿದ ಬಾಂಬ್‌ಗೆ ಗೋವಿಂದರಾಜ್ ತಲೆದಂಡ!

ಬೆಂಗಳೂರು: ಮಾಜಿ ಸಿಎಂ ಕುಮಾರಸ್ವಾಮಿ (HD Kumaraswamy) ಬೆಳಗ್ಗೆ ಸುದ್ದಿಗೋಷ್ಠಿಯಲ್ಲಿ ಸಿಡಿಸಿದ ಬಾಂಬ್‌ಗೆ ಗೋವಿಂದರಾಜ್ (Govindraj) ತಲೆದಂಡವಾಗಿದೆ. ಚಿನ್ನಸ್ವಾಮಿ ಕಾಲ್ತುಳಿತ ಪ್ರಕರಣಕ್ಕೆ (Chinnaswamy Stadium Stampede Case) ಸಂಬಂಧಿಸಿದಂತೆ ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ಗೋವಿಂದರಾಜ್ ಅವರನ್ನು ಬಿಡುಗಡೆ ಮಾಡಲಾಗಿದೆ.

ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ತಕ್ಷಣದಿಂದ ಬಿಡುಗಡೆ ಮಾಡಲಾಗಿದೆ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಅಧೀನ ಕಾರ್ಯದರ್ಶಿ ಬಾಣದರಂಗಯ್ಯ ಆದೇಶ ಹೊರಡಿಸಿದ್ದಾರೆ.
ಗೋವಿಂದರಾಜ್ ಅವರು ಜೂನ್ 1, 2023 ರಿಂದ ಸಿದ್ದರಾಮಯ್ಯನವರ ರಾಜಕೀಯ ಕಾರ್ಯದರ್ಶಿಯನ್ನಾಗಿ ನೇಮಿಸಲಾಗಿತ್ತು. ಆರ್‌ಸಿಬಿ ಆಟಗಾರರಿಗೆ ವಿಧಾನಸೌಧದಲ್ಲಿ ಸನ್ಮಾನ ಮಾಡುವಂತೆ ಸಿದ್ದರಾಮಯ್ಯನವರಿಗೆ ಒತ್ತಡ ಹೇರಿದ್ದೇ ಗೋವಿಂದರಾಜ್ ಎಂಬ ಆರೋಪ ಈಗ ಕೇಳಿ ಬಂದಿದೆ.
ಕುಮಾರಸ್ವಾಮಿ ಹೇಳಿದ್ದೇನು?
ಜೂನ್ 4ರ ಬೆಳಗ್ಗೆ ಸಿಎಂ (CM Siddaramaiah) ಅವರ ರಾಜಕೀಯ ಕಾರ್ಯದರ್ಶಿ ಗೋವಿಂದರಾಜ್ ಅವರು ಪೊಲೀಸ್ ಆಯುಕ್ತರಿಗೆ ಕರೆ ಮಾಡಿ ವಿಧಾನಸೌಧದ ಕಾರ್ಯಕ್ರಮಕ್ಕೆ ಭದ್ರತೆ ನೀಡಬೇಕು ಎಂದು ಒತ್ತಡ ಹಾಕುತ್ತಾರೆ. ಇದಕ್ಕೆ ಆಯುಕ್ತರು, ಬೆಳಗ್ಗೆಯವರೆಗೆ ಪೊಲೀಸರು ನಿದ್ದೆಗೆಟ್ಟು ಕೆಲಸ ಮಾಡಿದ್ದಾರೆ. ಎರಡು ಮೂರು ಕಡೆ ಕಾರ್ಯಕ್ರಮ ಮಾಡಿದರೆ ಭದ್ರತೆ ನೀಡಲು ಕಷ್ಟವಾಗುತ್ತದೆ. ಒಂದು ಕಡೆ ಕಾರ್ಯಕ್ರಮ ಮಾಡಿದರೆ ಬಂದೋಬಸ್ತ್ ಕಲ್ಪಿಸಲು ಸಾಧ್ಯವಾಗುತ್ತದೆ. ವಿಧಾನಸೌಧದ ಕಾರ್ಯಕ್ರಮಕ್ಕೆ ಭದ್ರತೆ ನೀಡಲು ಸಾಧ್ಯವಿಲ್ಲ ಎಂದು ಹೇಳುತ್ತಾರೆ.
ಆಯುಕ್ತರ ಪ್ರತಿಕ್ರಿಯೆ ಬಳಿಕ ಗೋವಿಂದರಾಜ್ ಅವರು ಸಿಎಂ ಬಳಿಗೆ ಹೋಗುತ್ತಾರೆ. ಸಿಎಂ ಅವರು ಆಯುಕ್ತರನ್ನು ಕರೆಸಿ, ನಾನು ಈ ರಾಜ್ಯದ ಸಿಎಂ. ಆದೇಶ ಮಾಡುತ್ತಿದ್ದೇನೆ ವಿಧಾನಸೌಧದ ಕಾರ್ಯಕ್ರಮಕ್ಕೆ ಭದ್ರತೆ ಕೊಡಿ ಎಂದು ಸೂಚಿಸುತ್ತಾರೆ. ಅನಿವಾರ್ಯವಾಗಿ ಪೊಲೀಸ್ ಕಮಿಷನರ್ ವಿಧಾನಸೌಧಕ್ಕೆ ಬಿಗಿ ಭದ್ರತೆ ಹಾಕುತ್ತಾರೆ. ಆದರೆ ಯಾರಿಗೂ ವಿಡಿಯೋ ಕಾನ್ಫರೆನ್ಸ್ ಮೂಲಕ ಸೂಚನೆ ಕೊಟ್ಟಿರುವುದಿಲ್ಲ. ಕಾಟಾಚಾರಕ್ಕೆ ಮೂರ್ನಾಲ್ಕು ತುಕಡಿ ಭದ್ರತೆ ಹಾಕಿರುತ್ತಾರೆ. ವಿಧಾನಸೌಧದಲ್ಲೇ ಕಾರ್ಯಕ್ರಮ ಮಾಡಬೇಕು, ನಾನು ಚಿನ್ನಸ್ವಾಮಿಗೆ ಹೋಗುವುದಿಲ್ಲ ಎಂದು ಸಿಎಂ ಹೇಳಿದ್ದರಿಂದ ಹೆಚ್ಚಿನ ಸಂಖ್ಯೆ ಪೊಲೀಸರನ್ನು ನಿಯೋಜಿಸಲಾಗುತ್ತದೆ ಎಂದು ಗಂಭೀರವಾದ ಆರೋಪ ಮಾಡಿದ್ದರು.
ಕ್ರೀಡೆ
2026 ರ ಫುಟ್ ಬಾಲ್ ವಿಶ್ವಕಪ್ ಗೆ ಅರ್ಹತೆ ಪಡೆದ 48 ತಂಡಗಳು, ಭಾರತದ ಕಥೆ ಏನು?

2026ರಲ್ಲಿ ನಡೆಯಲಿರುವ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಗೆ ಅಮೆರಿಕ, ಮೆಕ್ಸಿಕೊ ಮತ್ತು ಕೆನಡಾ ಜಂಟಿಯಾಗಿ ಆತಿಥ್ಯವಹಿಸಲಿವೆ, ಈ ಬಾರಿಯ ವಿಶ್ವಕಪ್ ನಲ್ಲಿ ಬರೋಬ್ಬರಿ 48 ತಂಡಗಳು ಭಾಗವಹಿಸಲಿವೆ,
2026 ಫುಟ್ಬಾಲ್ ವಿಶ್ವಕಪ್ ಅರ್ಹತಾ ಪಂದ್ಯಗಳು ಮುಗಿದ್ದು, ಉಜ್ಬಿಕಿಸ್ತಾನ್, ಜೋರ್ಡಾನ್, ಮತ್ತು ದಕ್ಷಿಣ ಕೊರಿಯಾ ಅರ್ಹತೆ ಪಡೆದಿದೆ, ಭಾರತ ಅರ್ಹತೆ ಪಡೆಯುವಲ್ಲಿ ವಿಫಲವಾಗಿದೆ,
43 ದೇಶದ ತಂಡಗಳು ಅರ್ಹತಾ ಪ್ರಕ್ರಿಯೆಯ ತಮ್ಮ ಸ್ಧಾನಗಳನ್ನು ಪಡೆಯುತ್ತವೆ, ಆರು ತಂಡಗಳನ್ನು ಅಂತಾರಾಷ್ಟ್ರೀಯ ಫ್ಲೇಆಫ್ ಗಳಲ್ಲಿ ಇನ್ನೆರಡು ತಮ್ಮ ಸ್ಧಾನವನ್ನು ಭದ್ರಪಡಿಸಿಕೊಳ್ಳುತ್ತವೆ, ಅಮೆರಿಕ, ಮೆಕ್ಸಿಕೋ, ಕೆನಡಾ ದೇಶಗಳು ಆತಿಥೇಯ ತಂಡವಾರುವುದರಿಂದ ನೇರವಾಗಿ ಅರ್ಹತೆ ಪಡೆದಿವೆ,
ಏಷ್ಯಾದ ಎಂಟು, ಆಫ್ರಿಕಾ ಖಂಡದಿಂದ ಒಂಬತ್ತು ತಂಡಗಳು ನೇರವಾಗಿ ಸ್ಧಾನ ಪಡೆದಿವೆ, ಉತ್ತರ ಮತ್ತು ಮಧ್ಯ ಅಮೆರಿಕ ಮತ್ತು ಕೆರಿಬಿಯನ್ ಮೂರು ದೇಶಗಳು ಸ್ಧಾನ ಪಡೆದಿವೆ,
ದಕ್ಷಿಣ ಅಮೆರಿಕಾ ಆರು ತಂಡಗಳು ನೇರವಾಗಿ ಆರ್ಹತೆ ಪಡೆದಿದ್ದರೆ, ಇನ್ನೊಂದು ತಂಡವನ್ನು ಇಂಟರ್ ಕಾಂಟಿನೆಂಟಲ್ ಫ್ಲೇಆಫ್ ಗೆ ಕಳುಹಿಸುತ್ತದೆ, ನ್ಯೂಜಿಲ್ಯಾಂಡ್ ಜೊತೆಗೆ ಯುರೋಪ್ ನ 16 ತಂಡಗಳು ವಿಶ್ವಕಪ್ ಆಡಲಿವೆ
ಕ್ರೀಡೆ
ಬೆಂಗಳೂರು ಕಾಲ್ತುಳಿತ ದುರಂತ; RCB ಮಾರ್ಕೆಟಿಂಗ್ ಹೆಡ್ ಸೇರಿ ನಾಲ್ವರ ಬಂಧನ

ಬೆಂಗಳೂರು: ಆರ್‌ಸಿಬಿ ಸಂಭ್ರಮಾಚರಣೆಯ (Bengaluru Stampede) ವೇಳೆ ಉಂಟಾದ ಕಾಲ್ತುಳಿದಲ್ಲಿ 11 ಜನರು ಮೃತಪಟ್ಟಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್ ಸಿಬಿ,ಡಿಎನ್ ಎ,ಕೆಎಸ್ ಸಿಎ ಪ್ರತಿನಿಧಿಸುವವರನ್ನ ಅರೆಸ್ಟ್ ಮಾಡಲು ಸಿಎಂ ಸಿದ್ದರಾಮಯ್ಯ ಆದೇಶ ಹೊರಡಿಸಿದ್ದರು. ಸಿಎಂ ಆದೇಶದ ಬೆನ್ನಲ್ಲೇ ಇದೀಗ ಪೊಲೀಸರು ಇದೀಗ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ಆರ್ ಸಿ ಬಿ ಮಾನ್ಯೇಜ್ ಮೆಂಟ್ ನ ಇಬ್ಬರು ಆಯೋಜಕರನ್ನು ಬಂಧಿಸಿದ್ದಾರೆ.
ಆರ್ ಸಿಬಿ ಮ್ಯಾನೇಜ್ಮೆಂಟ್ ಸಿಬ್ಬಂದಿ ನಿಖಲ್ ಸೋಸಲೆ, DNA ಮ್ಯಾನೇಜ್ಮೆಂಟ್ ಸಿಬ್ಬಂದಿ ಸುನೀಲ್ ಮ್ಯಾಥ್ಯೂ ಲಾಕ್ ಸೇರಿದಂತೆ ಇನ್ನಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ KSCA ಕಾಯರ್ದರ್ಶಿ, ಖಜಾಂಚಿ ಮನೆಗಳ ಮೇಲೆ ದಾಳಿ ನಡೆಸಲಾಗಿದೆ. ನಿನ್ನೆ ರಾತ್ರಿ KSCA ಕಾಯರ್ದರ್ಶಿ ಶಂಕರ್ ಮನೆ ಮೇಲೆ ಪೊಲೀಸರು ದಾಳಿ ನಡೆಸಿದ್ದು, ಪರಿಶೀಲನೆ ನಡೆಸಿದ್ದಾರೆ. KSCA ಖಜಾಂಚಿ ಜಯರಾಮ್ ಮನೆ ಮೇಲೂ ಪೊಲೀಸರು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ದಾಳಿ ವೇಳೆ ಇಬ್ಬರೂ ನಾಪತ್ತೆಯಾಗಿದ್ದಾರೆ ಎಂದು ತಿಳಿದು ಬಂದಿದೆ.
-
ಬಿಬಿಎಂಪಿ4 weeks ago
ತಾವರೆಕೆರೆ, ಕುಂಬಳಗೋಡು, ಕಗ್ಗಲಿಪುರ, ಹಾರೋಹಳ್ಳಿಯನ್ನು ಗ್ರೇಟರ್ ಬೆಂಗಳೂರು ಪ್ರದೇಶಕ್ಕೆ
-
ಬೆಂಗಳೂರು1 year ago
ವಿದ್ಯಾರ್ಥಿಗಳಿಗೆ ಆತ್ಮಸ್ಥೈರ್ಯ ಮುಖ್ಯ – ಡಾ. ಕೆ.ಸಿ ರೋಹಿತ್
-
ದೇಶ2 years ago
ಫೀನಿಕ್ಸ್ ನಲ್ಲಿ ವೈಭವದ ರಥೋತ್ಸವದೊಂದಿಗೆ ಹತ್ತು ದಿನಗಳ ಉತ್ಸವಕ್ಕೆ ತೆರೆ
-
ಚುನಾವಣೆ2 years ago
ಬಿಬಿಎಂಪಿ ಚುನಾವಣೆ ಡಿಸೆಂಬರ್ನಲ್ಲಿ ನಡೆಯುವ ಸಾಧ್ಯತೆ: ಸಚಿವರಾಮಲಿಂಗಾರೆಡ್ಡಿ
-
ರಾಜಕೀಯ2 years ago
Gruhalaxmi ಗೃಹಲಕ್ಷಿö್ಮ ಫಲಾನುಭವಿ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ? ಹೀಗೆ ಚೆಕ್ ಮಾಡಿ
-
ಬೆಂಗಳೂರು1 year ago
ನೀರಿಲ್ಲ ನೀರಿಲ್ಲ ನಾಳೆ ನಲ್ಲಿಯಲ್ಲಿ ನೀರು ಬರೋದಿಲ್ಲ
-
ಬೆಂಗಳೂರು7 months ago
ಯಶವಂತಪುರ ಕ್ಷೇತ್ರದ ಅಭಿವೃದ್ಧಿಯೇ ನನ್ನ ಮುಖ್ಯ ಉದ್ದೇಶ -ಎಸ್ ಟಿ ಸೋಮಶೇಖರ್
-
ರಾಜ್ಯ2 years ago
ದೇಶದ ಎಲ್ಲಾ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ನೀಡಲು ಮುಂದಾದ ಸರ್ಕಾರ! ಇಂದೇ ಅರ್ಜಿ ಸಲ್ಲಿಸಿ