Connect with us

ಸಿನಿಮಾ

ರಿಲೀಸ್​ಗೂ ಮೊದಲೇ ‘ಜವಾನ್’ ಸಿನಿಮಾ ದಾಖಲೆ ಮುರಿದ ‘ಅನಿಮಲ್’ ಸಿನಿಮಾ

Published

on

ರಿಲೀಸ್​ಗೂ ಮೊದಲೇ ‘ಜವಾನ್’ ಸಿನಿಮಾ ದಾಖಲೆ ಮುರಿದ ‘ಅನಿಮಲ್’ ಸಿನಿಮಾ

ಬಾಲಿವುಡ್​ಗೆ ಹಾರಿದ ನಟಿ ರಶ್ಮಿಕಾ ಮಂದಣ್ಣ, ರಣಬೀರ್ ಕಪೂರ್ ಜೊತೆ ಅನಿಮಲ್ ಸಿನಿಮಾದಲ್ಲಿ ಬ್ಯುಸಿ ಆಗಿದ್ದಾರೆ. ಇದೀಗ ಅನಿಮಲ್ ಸಿನಿಮಾ ರಿಲೀಸ್ ಡೇಟ್ ಫಿಕ್ಸ್ ಆಗಿದ್ದು, ನಿರ್ದೇಶಕರೇ ಬಿಡುಗಡೆ ದಿನಾಂಕ ಘೋಷಿಸಿದ್ದಾರೆ.ಬಾಕ್ಸ್ ಆಫೀಸ್​ನಲ್ಲಿ ‘ಜವಾನ್’ ಹಾಗೂ ‘ಬ್ರಹ್ಮಾಸ್ತ್ರ’ ಸಿನಿಮಾ ಒಳ್ಳೆಯ ಗಳಿಕೆ ಮಾಡಿದ್ದವು. ಕೇವಲ ಭಾರತ ಮಾತ್ರವಲ್ಲದೆ ವಿದೇಶಿ ಮಾರುಕಟ್ಟೆಯಲ್ಲೂ ಚಿತ್ರಕ್ಕೆ ಒಳ್ಳೆಯ ಗಳಿಕೆ ಆಗಿತ್ತು. ಈಗ ‘ಅನಿಮಲ್’ ಚಿತ್ರಕ್ಕೆ ವಿದೇಶದಲ್ಲಿ ಹೆಚ್ಚು ಸ್ಕ್ರೀನ್ ಸಿಗುತ್ತಿರುವುದರಿಂದ ಸಹಜವಾಗಿಯೇ ಗಳಿಕೆ ಹೆಚ್ಚಲಿದೆ.ಡಿಸೆಂಬರ್ ತಿಂಗಳು ಬಂತೆಂದರೆ ಸಿನಿಪ್ರಿಯರಿಗೆ ಖುಷಿಯೋ ಖುಷಿ. ಕ್ರಿಸ್​ಮಸ್ ಸಮಯ ಎಂಬ ಕಾರಣಕ್ಕೆ ಸಾಕಷ್ಟು ಸಿನಿಮಾಗಳು ಈ ಸಂದರ್ಭದಲ್ಲಿ ರಿಲೀಸ್ ಆಗುತ್ತವೆ. ಬಿಗ್ ಬಜೆಟ್ ಚಿತ್ರಗಳು ಈ ಸಂದರ್ಭದಲ್ಲಿ ರಿಲೀಸ್ ಆಗಿ ಅಬ್ಬರಿಸುತ್ತವೆ. ಈ ವರ್ಷ ಡಿಸೆಂಬರ್​ನಲ್ಲೂ ಹಲವು ಚಿತ್ರಗಳು ಬಿಡುಗಡೆ ಆಗುತ್ತಿವೆ. ಆ ಪೈಕಿ ರಣಬೀರ್ ಕಪೂರ್ ಹಾಗೂ ರಶ್ಮಿಕಾ ಮಂದಣ್ಣ ನಟನೆಯ ‘ಅನಿಮಲ್’ ಚಿತ್ರ ಸಾಕಷ್ಟು ಕುತೂಹಲ ಮೂಡಿಸಿದೆ. ರಿಲೀಸ್​ಗೂ ಮೊದಲೇ ಈ ಚಿತ್ರ ‘ಜವಾನ್’ ಚಿತ್ರದ ದಾಖಲೆಯನ್ನು ಉಡೀಸ್ ಮಾಡಿದೆ.
ಈ ಚಿತ್ರದಲ್ಲಿ ರಣಬೀರ್ ಕಪೂರ್ ಮುಖ್ಯಭೂಮಿಕೆ ನಿರ್ವಹಿಸಿದ್ದಾರೆ. ರಶ್ಮಿಕಾ ಮಂದಣ್ಣ ಅವರು ರಣಬೀರ್ ಕಪೂರ್​ಗೆ ಜೊತೆಯಾಗಿದ್ದಾರೆ. ಈ ಚಿತ್ರದಲ್ಲಿ ರಣಬೀರ್ ಕಪೂರ್ ಅವರು ಎರಡು ಶೇಡ್​ನ ಪಾತ್ರ ಮಾಡುತ್ತಿದ್ದಾರೆ. ಈ ಚಿತ್ರ ಅಮೆರಿಕದಲ್ಲಿ ದೊಡ್ಡ ಮಟ್ಟದಲ್ಲಿ ರಿಲೀಸ್ ಆಗುತ್ತಿದೆ.‘ಅನಿಮಲ್’ ಸಿನಿಮಾ ಉತ್ತರ ಅಮೆರಿಕದಲ್ಲಿ 888 ಪರದೆಗಳಲ್ಲಿ ರಿಲೀಸ್ ಆಗುತ್ತಿದೆ. ಈ ಮೊದಲು ರಿಲೀಸ್ ಆದ ‘ಜವಾನ್’ ಚಿತ್ರಕ್ಕೆ ಈ ಭಾಗದಲ್ಲಿ 850 ಪರದೆಗಳು ಸಿಕ್ಕಿದ್ದವು. ‘ಬ್ರಹ್ಮಾಸ್ತ್ರ’ ಚಿತ್ರಕ್ಕೆ 810 ಪರದೆಗಳು ದೊರೆತಿದ್ದವು. ಈ ದಾಖಲೆಯನ್ನು ‘ಅನಿಮಲ್’ ಸಿನಿಮಾ ಮುರಿದು ಹಾಕಿದೆ. ಅಮೆರಿಕದಲ್ಲಿ ಇಷ್ಟು ದೊಡ್ಡ ಮಟ್ಟದಲ್ಲಿ ರಿಲೀಸ್ ಆಗುತ್ತಿರುವ ಮೊದಲ ಹಿಂದಿ ಸಿನಿಮಾ ಎನ್ನುವ ಜನಪ್ರಿಯತೆ ಈ ಚಿತ್ರಕ್ಕೆ ಸಿಕ್ಕಿದೆ.ಬಾಕ್ಸ್ ಆಫೀಸ್​ನಲ್ಲಿ ‘ಜವಾನ್’ ಹಾಗೂ ‘ಬ್ರಹ್ಮಾಸ್ತ್ರ’ ಸಿನಿಮಾ ಒಳ್ಳೆಯ ಗಳಿಕೆ ಮಾಡಿದ್ದವು. ಕೇವಲ ಭಾರತ ಮಾತ್ರವಲ್ಲದೆ ವಿದೇಶಿ ಮಾರುಕಟ್ಟೆಯಲ್ಲೂ ಚಿತ್ರಕ್ಕೆ ಒಳ್ಳೆಯ ಗಳಿಕೆ ಆಗಿತ್ತು. ಈಗ ‘ಅನಿಮಲ್’ ಚಿತ್ರಕ್ಕೆ ವಿದೇಶದಲ್ಲಿ ಹೆಚ್ಚು ಸ್ಕ್ರೀನ್ ಸಿಗುತ್ತಿರುವುದರಿಂದ ಸಹಜವಾಗಿಯೇ ಗಳಿಕೆ ಹೆಚ್ಚಲಿದೆ. ಇದರಿಂದ ನಿರ್ಮಾಪಕರ ಮೊಗದಲ್ಲಿ ನಗು ಮೂಡಿದೆ.

ಕಥಾ ನಾಯಕನಿಗೆ ಅಲ್ಲಿ ಎರಡು ಶೇಡ್ ಇತ್ತು. ‘ಅನಿಮಲ್’ ಚಿತ್ರಕ್ಕೂ ಇದೇ ಥೀಮ್ ಇದೆ. ಸಿನಿಮಾ ರಾ ಆಗಿದೆ ಹಾಗೂ ಕಥಾ ನಾಯಕನಿಗೆ ಎರಡು ಶೇಡ್ ಇದೆ ಅನ್ನೋದು ಟೀಸರ್ ಮೂಲಕ ಗೊತ್ತಾಗಿದೆ. ಈ ಕಾರಣದಿಂದಲೇ ‘ಅನಿಮಲ್’ ನೋಡಲು ಫ್ಯಾನ್ಸ್ ಕಾದಿದ್ದಾರೆ. ಟಿ-ಸೀರಿಸ್ ಮೂಲಕ ಭೂಷಣ್​ ಕುಮಾರ್, ಮೊದಲಾದವರು ಸಿನಿಮಾ ನಿರ್ಮಾಣ ಮಾಡಿದ್ದಾರೆ. ರಣಬೀರ್, ರಶ್ಮಿಕಾ ಜೊತೆ ಬಾಬಿ ಡಿಯೋಲ್, ಅನಿಲ್ ಕಪೂರ್ ಮೊದಲಾದವರು ಸಿನಿಮಾದಲ್ಲಿ ನಟಿಸಿದ್ದಾರೆ. ಡಿಸೆಂಬರ್ 1ರಂದು ವಿಶ್ವಾದ್ಯಂತ ಚಿತ್ರ ಬಿಡುಗಡೆ ಆಗುತ್ತಿದೆ. ಈ ಚಿತ್ರದ ಟ್ರೇಲರ್​ಗಾಗಿ ಫ್ಯಾನ್ಸ್ ಕಾದಿದ್ದಾರೆ.

ದೇಶ

ಮೆಲೊಡಿ ಟ್ರೆಂಡ್‌ಗೆ ಎಂಟ್ರಿ ಕೊಟ್ಟ ಬಾಲಿವುಡ್ ಜೋಡಿ: ಸೋನಾಕ್ಷಿ ವಿಡಿಯೋ ಸದ್ದು

Published

on

ಬಾಲಿವುಡ್ ನಟಿ Sonakshi Sinha ಮತ್ತು ಅವರ ಪತಿ Zaheer Iqbal ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಮೋಜಿನ ಪೋಸ್ಟ್‌ಗಳ ಮೂಲಕ ಸದಾ ಸುದ್ದಿಯಲ್ಲಿರುತ್ತಾರೆ. ಇದೀಗ ಇಂಟರ್ನೆಟ್‌ನಲ್ಲಿ ಟ್ರೆಂಡಿಂಗ್ ಆಗಿರುವ ‘ಮೆಲೊಡಿ’ ಮೀಮ್‌ಗೆ ಈ ಜೋಡಿ ಹೊಸ ಟ್ವಿಸ್ಟ್ ನೀಡಿದ್ದು, ಅವರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.

ಬುಧವಾರ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ಈ ರೀಲ್ಸ್‌ನಲ್ಲಿ, ಸೋನಾಕ್ಷಿ ತಮ್ಮ ಪತಿ ಜಹೀರ್ ಅವರನ್ನು “ನೀನು ಏನು ಕೇಳಲು ಬಯಸುತ್ತೀಯ?” ಎಂದು ಪ್ರಶ್ನಿಸುತ್ತಾರೆ. ಅದಕ್ಕೆ ಜಹೀರ್, “ನಾನು ನಿನ್ನನ್ನು ಎಷ್ಟು ಪ್ರೀತಿಸುತ್ತೇನೆ ಅನ್ನೋದು ನಿನಗೆ ಗೊತ್ತಿದೆ” ಎಂದು ಉತ್ತರಿಸುತ್ತಾರೆ. ಆದರೆ ಸೋನಾಕ್ಷಿ ತಮಾಷೆಯಾಗಿ “ಇಲ್ಲ” ಎಂದು ಪ್ರತಿಕ್ರಿಯಿಸುತ್ತಾರೆ. ಕೆಲವೇ ಕ್ಷಣಗಳಲ್ಲಿ ಜಹೀರ್ ತಮ್ಮ ಜೇಬಿನಿಂದ ‘ಮೆಲೊಡಿ’ ಚಾಕೊಲೇಟ್ ತೆಗೆದು “ಮೆಲೊಡಿ ತಿನ್ನು, ನೀನೇ ತಿಳಿದುಕೋ” ಎಂದು ಹೇಳುವ ದೃಶ್ಯ ಅಭಿಮಾನಿಗಳನ್ನು ನಗಿಸುವಂತಾಗಿದೆ.

ಈ ವಿಡಿಯೋ ಬಿಡುಗಡೆಯಾದ ತಕ್ಷಣವೇ ಸಾಮಾಜಿಕ ಜಾಲತಾಣಗಳಲ್ಲಿ ಲಕ್ಷಾಂತರ ವೀಕ್ಷಣೆ ಪಡೆದುಕೊಂಡಿದೆ. ಹಲವರು ಈ ಜೋಡಿಯ ಕೆಮಿಸ್ಟ್ರಿಯನ್ನು ಮೆಚ್ಚಿಕೊಂಡಿದ್ದು, ವೈರಲ್ ಟ್ರೆಂಡ್‌ಗೆ ತಮ್ಮದೇ ಶೈಲಿಯಲ್ಲಿ ಸ್ಪಂದಿಸಿರುವುದನ್ನು ಪ್ರಶಂಸಿಸಿದ್ದಾರೆ. ವಿಶೇಷವೆಂದರೆ, ಇವರ ಬಹುನಿರೀಕ್ಷಿತ ‘ಸಿಸ್ಟಮ್’ ಚಿತ್ರದ ಬಿಡುಗಡೆಗೂ ಮುನ್ನ ಈ ವಿಡಿಯೋ ಹೊರಬಂದಿರುವುದು ಅಭಿಮಾನಿಗಳ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.

‘ಮೆಲೊಡಿ’ ಟ್ರೆಂಡ್ ಮೊದಲು ಪ್ರಧಾನಿ Narendra Modi ಮತ್ತು ಇಟಲಿ ಪ್ರಧಾನಿ Giorgia Meloni ಅವರ ವೈರಲ್ ಫೋಟೋಗಳಿಂದ ಹುಟ್ಟಿಕೊಂಡಿತ್ತು. ಬಳಿಕ #Melodi ಹ್ಯಾಶ್‌ಟ್ಯಾಗ್ ಜಾಗತಿಕ ಮಟ್ಟದಲ್ಲಿ ಟ್ರೆಂಡ್ ಆಗಿ, ಇದೀಗ ಸಿನಿಮಾ ಮತ್ತು ಮನರಂಜನಾ ವಲಯಕ್ಕೂ ವ್ಯಾಪಿಸಿದೆ.

Continue Reading

ದೇಶ

‘ಜೋರಾಗಿ ಸಾರಿ ಹೇಳಿ!’ ಪಾಪರಾಜಿಗಳನ್ನು ಕಿಚಾಯಿಸಿದ ಸಲ್ಮಾನ್

Published

on

ಮುಂಬೈ: ಬಾಲಿವುಡ್‌ನ ಜನಪ್ರಿಯ ನಟ Salman Khan ಮತ್ತು ಪಾಪರಾಜಿಗಳ ನಡುವಿನ ಸಂಬಂಧ ಮತ್ತೆ ಸುದ್ದಿಯಾಗಿದೆ. ಮುಂಬೈನ ಆಸ್ಪತ್ರೆಯೊಂದರ ಹೊರಗೆ ನಡೆದ ಘಟನೆ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆ ಹುಟ್ಟಿಕೊಂಡಿತ್ತು. ಆದರೆ, ಇದೀಗ ಅದೇ ವಿಚಾರ ಸ್ನೇಹಪೂರ್ಣ ತಿರುವು ಪಡೆದುಕೊಂಡಿದೆ.

ಮರಾಠಿ ಸಿನಿಮಾ Raja Shivaji ಯಶಸ್ಸಿನ ಸಮಾರಂಭದಲ್ಲಿ ಸಲ್ಮಾನ್ ಖಾನ್ ವಿಶೇಷ ಅತಿಥಿಯಾಗಿ ಭಾಗವಹಿಸಿದ್ದರು. ಈ ವೇಳೆ ಅಲ್ಲಿದ್ದ ಫೋಟೋಗ್ರಾಫರ್‌ಗಳು ಒಂದೇ ಸ್ವರದಲ್ಲಿ “ಸಾರಿ ಸರ್” ಎಂದು ಕೂಗಿ ಕ್ಷಮೆಯಾಚಿಸಿದರು. ಇದನ್ನು ಕೇಳಿದ ಸಲ್ಮಾನ್ ಕೂಡ ಹಾಸ್ಯಮಯವಾಗಿ ಪ್ರತಿಕ್ರಿಯಿಸಿ, “ಜೋರಾಗಿ ಸಾರಿ ಹೇಳಿ” ಎಂದು ಕಿಚಾಯಿಸಿದರು. ನಟ Riteish Deshmukh ಕೂಡ ಈ ಕ್ಷಣವನ್ನು ನೋಡಿ ನಗುವುದರಲ್ಲಿ ತೊಡಗಿಕೊಂಡರು.

ಇದಕ್ಕೂ ಮುನ್ನ ಸಲ್ಮಾನ್ ಖಾನ್ ತಮ್ಮ ಆತ್ಮೀಯರನ್ನು ಭೇಟಿ ಮಾಡಲು ಮುಂಬೈನ ಆಸ್ಪತ್ರೆಗೆ ತೆರಳಿದ್ದರು. ಈ ವೇಳೆ ಕೆಲ ಪಾಪರಾಜಿಗಳು ಅವರ ಹೆಸರನ್ನು ಕೂಗಿ ಪ್ರಶ್ನೆಗಳನ್ನು ಕೇಳಲು ಆರಂಭಿಸಿದ್ದರು. ಇದರಿಂದ ಅಸಮಾಧಾನಗೊಂಡ ನಟ, ಆಸ್ಪತ್ರೆಗಳಂತಹ ಖಾಸಗಿ ಸ್ಥಳಗಳಲ್ಲಿ ಗೌಪ್ಯತೆಯನ್ನು ಕಾಪಾಡಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದರು.

ಇದೇ ವೇಳೆ ಸಲ್ಮಾನ್ ಖಾನ್ ತಮ್ಮ ಇನ್‌ಸ್ಟಾಗ್ರಾಂನಲ್ಲಿ “Alone” ಮತ್ತು “Lonely” ಕುರಿತ ಚಿಂತನಾತ್ಮಕ ಪೋಸ್ಟ್ ಹಂಚಿಕೊಂಡಿದ್ದು ಅಭಿಮಾನಿಗಳ ಗಮನ ಸೆಳೆದಿದೆ. “ಒಂಟಿತನ ನಮ್ಮ ಆಯ್ಕೆ ಆಗಿರಬಹುದು. ಆದರೆ ಯಾರೂ ನಮ್ಮ ಜೊತೆ ಇರಲು ಬಯಸದಾಗ ಅದು ನಿಜವಾದ ನೋವು” ಎಂದು ಅವರು ಬರೆದುಕೊಂಡಿದ್ದರು. ಈ ಪೋಸ್ಟ್‌ಗೆ ನಟಿ Sneha Ullal ಸಹ ಹಾಸ್ಯಮಯ ಕಾಮೆಂಟ್ ಮಾಡಿದ್ದು ವೈರಲ್ ಆಗಿದೆ.

ಸದ್ಯ ಸಲ್ಮಾನ್ ಖಾನ್ ಅವರ ಮುಂಬರುವ Kick 2, Tiger vs Pathaan ಹಾಗೂ Sikandar ಸಿನಿಮಾಗಳ ಬಗ್ಗೆ ಅಭಿಮಾನಿಗಳಲ್ಲಿ ಭಾರೀ ನಿರೀಕ್ಷೆ ಮೂಡಿದೆ.

Continue Reading

ದೇಶ

‘ಪೆದ್ದಿ’ ಟ್ರೇಲರ್‌ಗೆ ರಿಷಬ್ ಶೆಟ್ಟಿ ಫಿದಾ: “ರಾಮ್ ಚರಣ್ ಆ್ಯಬ್ಸಲ್ಯೂಟ್ ಫೈರ್”

Published

on

ಬೆಂಗಳೂರು: Rishab Shetty ಅಭಿನಯದ ‘ಕಾಂತಾರ’ ಬಳಿಕ ದೇಶವ್ಯಾಪಿ ಖ್ಯಾತಿ ಪಡೆದಿರುವ ರಿಷಬ್ ಶೆಟ್ಟಿ, ಇದೀಗ Peddi ಚಿತ್ರದ ಟ್ರೇಲರ್‌ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Ram Charan ಹಾಗೂ Shiva Rajkumar ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಆ್ಯಕ್ಷನ್–ಸ್ಪೋರ್ಟ್ಸ್ ಡ್ರಾಮಾ ಜೂನ್ 4, 2026ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಚಿತ್ರದ ಟ್ರೇಲರ್ ಮೇ 18ರಂದು ಸಂಜೆ ಮುಂಬೈನ Jio World Driveನಲ್ಲಿ ನಡೆದ ಭವ್ಯ ಕಾರ್ಯಕ್ರಮದಲ್ಲಿ ಬಿಡುಗಡೆಗೊಂಡಿತು.

“ಪ್ರತಿ ಫ್ರೇಮ್‌ನಲ್ಲೂ ರಾಮ್ ಚರಣ್ ಫೈರ್”

ಟ್ರೇಲರ್ ನೋಡಿ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿದ ರಿಷಬ್ ಶೆಟ್ಟಿ, “ಪೆದ್ದಿ ಟ್ರೇಲರ್ ಅದ್ಭುತವಾಗಿದೆ. ರಾಮ್ ಚರಣ್ ಪ್ರತಿಯೊಂದು ಫ್ರೇಮ್‌ನಲ್ಲೂ ಸ್ಟನ್ನಿಂಗ್ ಆಗಿ ಕಾಣಿಸುತ್ತಿದ್ದಾರೆ. ಅವರು ಆ್ಯಬ್ಸಲ್ಯೂಟ್ ಫೈರ್” ಎಂದು ಬರೆದುಕೊಂಡಿದ್ದಾರೆ.

ಇದರ ಜೊತೆಗೆ ಶಿವರಾಜ್‌ಕುಮಾರ್ ಅವರ ಸ್ಕ್ರೀನ್ ಪ್ರೆಸೆನ್ಸ್ ಚಿತ್ರಕ್ಕೆ ಭವ್ಯತೆ ತಂದಿದೆ ಎಂದು ಶ್ಲಾಘಿಸಿದ ಅವರು, Janhvi Kapoor ಅಭಿನಯವನ್ನೂ ಮೆಚ್ಚಿಕೊಂಡಿದ್ದಾರೆ.

ಶಿವಣ್ಣ ಪಾತ್ರಕ್ಕೂ ಭಾರೀ ಮೆಚ್ಚುಗೆ

ಟ್ರೇಲರ್ ಬಿಡುಗಡೆಗೂ ಮುನ್ನ ಶಿವರಾಜ್‌ಕುಮಾರ್ ನಿರ್ವಹಿಸಿರುವ “ಗೌರ್ನಾಯ್ಡು” ಪಾತ್ರದ ಪರಿಚಯ ವಿಡಿಯೋ ಕೂಡ ಬಿಡುಗಡೆಯಾಗಿತ್ತು. ಟ್ರೇಲರ್‌ನಲ್ಲಿ ಶಿವಣ್ಣನ ಸ್ಟೈಲಿಶ್ ಲುಕ್ ಅಭಿಮಾನಿಗಳ ಗಮನ ಸೆಳೆದಿದೆ.

ಟ್ರೇಲರ್‌ನಲ್ಲಿ ಏನಿದೆ?

3 ನಿಮಿಷ 7 ಸೆಕೆಂಡ್ ಅವಧಿಯ ಟ್ರೇಲರ್‌ನಲ್ಲಿ ರಾಮ್ ಚರಣ್ ಹಲವು ಕ್ರೀಡಾಂಗಣಗಳಲ್ಲಿ ಮಿಂಚುತ್ತಿರುವ ದೃಶ್ಯಗಳಿವೆ. ಕುಸ್ತಿ, ಕ್ರಿಕೆಟ್ ಹಾಗೂ ಓಟ ಸೇರಿದಂತೆ ವಿವಿಧ ಕ್ರೀಡೆಗಳಲ್ಲಿ ಅವರ ಪಾತ್ರವನ್ನು ತೋರಿಸಲಾಗಿದೆ.

ಒಂದು ದೃಶ್ಯದಲ್ಲಿ Boman Irani, ರಾಮ್ ಚರಣ್ ಅವರನ್ನು “ಭಾರತದ ಕ್ರಾಸ್ ಅಥ್ಲೀಟ್” ಎಂದು ಹೊಗಳುತ್ತಾರೆ.

ಗ್ರಾಮೀಣ ಹಿನ್ನೆಲೆಯ ಕಥೆಯಲ್ಲಿ Divyendu Sharma ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.

ಬುಚಿ ಬಾಬು ಸನಾ ನಿರ್ದೇಶನ

ಚಿತ್ರವನ್ನು Buchi Babu Sana ನಿರ್ದೇಶಿಸಿದ್ದು, A. R. Rahman ಸಂಗೀತ ಸಂಯೋಜನೆ ಮಾಡಿದ್ದಾರೆ.

ಈ ಚಿತ್ರವನ್ನು ವೆಂಕಟ್ ಸತೀಶ್ ಕಿಲಾರು ನಿರ್ಮಿಸಿದ್ದು, Mythri Movie Makers ಮತ್ತು Sukumar Writings ಪ್ರಸ್ತುತಪಡಿಸುತ್ತಿವೆ.

Continue Reading

Trending