ಸಿನಿಮಾ
ತ್ರಿಶಾ ಬಗ್ಗೆ ಆಕ್ಷೇಪಾರ್ಹ ಹೇಳಿಕೆ: ಮನ್ಸೂರ್ ಅಲಿ ಖಾನ್ ರನ್ನು ಬಂಧಿಸುವಂತೆ ತಮಿಳುನಾಡು ಪೊಲೀಸರಿಗೆ NCW ನಿರ್ದೇಶನ
ನವದೆಹಲಿ: ನಟಿ ತ್ರಿಶಾ ಕೃಷ್ಣನ್ ಬಗ್ಗೆ ಕೀಳು ಮಟ್ಟದ ಹೇಳಿಕೆ ಕೊಟ್ಟಿರುವ ನಟ ಮನ್ಸೂರ್ ಅಲಿ ಖಾನ್ ವಿರುದ್ಧ ಪ್ರಕರಣ ದಾಖಲಿಸುವಂತೆ ರಾಷ್ಟ್ರೀಯ ಮಹಿಳಾ ಆಯೋಗ (NCW) ತಮಿಳುನಾಡು ಪೊಲೀಸರಿಗೆ ನಿರ್ದೇಶನ ನೀಡಿದೆ.
NCW ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದು, ನಟ ಮನ್ಸೂರ್ ಅಲಿ ಖಾನ್ ನಟಿ ತ್ರಿಷಾ ಕೃಷ್ಣ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆಗಳ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದೆ. ಈ ವಿಷಯದಲ್ಲಿ ನಾವು ಸ್ವಯಂ ಪ್ರೇರಿತರಾಗಿ IPC ಸೆಕ್ಷನ್ 509 B ಮತ್ತು ಇತರ ಸೆಕ್ಷನ್ ಗಳನ್ನು ಜಾರಿಗೊಳಿಸುವಂತೆ DGPಗೆ ನಿರ್ದೇಶಿಸುತ್ತೇವೆ ಎಂದು ಬರೆದುಕೊಂಡಿದೆ.
ಈ ಹೇಳಿಕೆ ಬಗ್ಗೆ ಲಿಯೋ ನಿರ್ದೇಶಕ ಲೋಕೇಶ್ ಕನಕರಾಜ್ ಮಾತನಾಡಿ, ತಾವೆಲ್ಲರೂ ಒಂದೇ ತಂಡದಲ್ಲಿ ಕೆಲಸ ಮಾಡಿದ್ದೇವೆ. ಮನ್ಸೂರ್ ಅಲಿ ಖಾನ್ ಕೊಟ್ಟಿರುವ ಸ್ತ್ರೀದ್ವೇಷದ ಕಾಮೆಂಟ್‌ಗಳನ್ನು ಕೇಳಿ ನಾನು ಅಸಮಾಧಾನಗೊಂಡಿದ್ದು ಕೋಪಗೊಂಡಿದ್ದೇನೆ ಎಂದಿದ್ದರು.
ದಕ್ಷಿಣ ಭಾರತದ ನಟ ಮನ್ಸೂರ್ ಅಲಿ ಖಾನ್ ಇತ್ತೀಚೆಗೆ ನಟಿ ತ್ರಿಶಾ ಕೃಷ್ಣನ್ ಅವರ ಬಗ್ಗೆ ಹೇಳಿಕೆ ನೀಡಿದ್ದು, ಅದರ ವಿಡಿಯೋ ಸಾಕಷ್ಟು ವೈರಲ್ ಆಗಿದೆ. ಇಂತಹ ಪರಿಸ್ಥಿತಿಯಲ್ಲಿ ಈಗ ತ್ರಿಶಾ ಕೃಷ್ಣನ್ ‘ಲಿಯೋ’ ಸ್ಟಾರ್ ಮನ್ಸೂರ್ ಅಲಿ ಖಾನ್ ಹೇಳಿಕೆಗೆ ಪ್ರತಿಕ್ರಿಯಿಸಿದ್ದರು.
ಷಾ ಅವರು, ಮನ್ಸೂರ್ ಅಲಿ ಖಾನ್ ನನ್ನ ಬಗ್ಗೆ ಅಸಹ್ಯವಾಗಿ ಮಾತನಾಡಿರುವ ವೀಡಿಯೊ ಇತ್ತೀಚೆಗೆ ನನ್ನ ಗಮನಕ್ಕೆ ಬಂದಿದೆ. ಆ ನಟನ ಮಾತುಗಳನ್ನು ನಾನು ಬಲವಾಗಿ ಖಂಡಿಸುತ್ತೇನೆ. ಅಗೌರವ, ಸ್ತ್ರೀದ್ವೇಷ, ಕೆಟ್ಟ ಅಭಿರುಚಿ ಹಾಗೂ ಲೈಂಗಿಕ ಲೋಭವನ್ನು ಹೊಂದಿದೆ. ನನ್ನೊಂದಿಗೆ ನಟಿಸಲು ಅವರು ಬಯಸಬಹುದು ಆದರೆ ನಾನು ಅವರಂತಹ ಕೆಟ್ಟ ವ್ಯಕ್ತಿಯೊಂದಿಗೆ ಎಂದಿಗೂ ಪರದೆಯನ್ನು ಹಂಚಿಕೊಳ್ಳುವುದಿಲ್ಲ. ಈ ಹಿಂದೆ ಪರದೆ ಹಂಚಿಕೊಂಡಿದ್ದಕ್ಕೆ ನಾನು ಕೃತಜ್ಞಳಾಗಿದ್ದೇನೆ. ಮತ್ತು ನನ್ನ ಉಳಿದ ಚಲನಚಿತ್ರ ವೃತ್ತಿಜೀವನದಲ್ಲಿ ನಾನು ಅವರೊಟ್ಟಿಗೆ ಎಂದಿಗೂ ಪರದೆ ಹಂಚಿಕೊಳ್ಳದಂತೆ ಎಚ್ಚರವಹಿಸುತ್ತೇನೆ. ಅವರಂತಹವರು ಮನುಕುಲಕ್ಕೆ ಕೆಟ್ಟ ಹೆಸರು ತರುತ್ತಾರೆ ಎಂದು ಬರೆದುಕೊಂಡಿದ್ದಾರೆ.
ತ್ರಿಶಾಗೆ ಮನ್ಸೂರ್ ಅಲಿ ಖಾನ್ ಹೇಳಿದ್ದೇನು?
ಮನ್ಸೂರ್ ಅಲಿ ಖಾನ್ ಸಂದರ್ಶನವೊಂದರಲ್ಲಿ ಹೇಳಿದ್ದು, ‘ನಾನು ತ್ರಿಷಾ ಜೊತೆ ನಟಿಸುತ್ತಿದ್ದೇನೆ ಎಂದು ಕೇಳಿದಾಗ, ಚಿತ್ರದಲ್ಲಿ ರೇಪ್ ಸೀನ್ ಇರುತ್ತದೆ ಎಂದು ನಾನು ಭಾವಿಸಿದೆ. ನನ್ನ ಹಿಂದಿನ ಚಿತ್ರಗಳಲ್ಲಿ ಇತರ ನಟಿಯರೊಂದಿಗೆ ಮಾಡಿದಂತೆ ನಾನು ತ್ರಿಷಾಳನ್ನು ಬೆಡ್ ರೂಂಗೆ ಕರೆದುಕೊಂಡು ಹೋಗಿ ರೇಪ್ ಮಾಡುವ ಸೀನ್ ಇರುತ್ತದೆ ಎಂದು ನಾನು ಭಾವಿಸಿದೆ. ನಾನು ಅನೇಕ ಚಿತ್ರಗಳಲ್ಲಿ ಅತ್ಯಾಚಾರದ ದೃಶ್ಯಗಳನ್ನು ಮಾಡಿದ್ದೇನೆ. ಇದು ನನಗೆ ಹೊಸದಲ್ಲ. ಆದರೆ ಲಿಯೋ ಸಿನಿಮಾನವರು ತ್ರಿಷಾರ ಮುಖವನ್ನು ಸಹ ನನಗೆ ತೋರಿಸಲಿಲ್ಲ ಎಂದು ಹೇಳಿದ್ದಾರೆ.
600 ಕೋಟಿ ಕ್ಲಬ್‌ನಲ್ಲಿ ಲಿಯೋ
ಸಾಮಾಜಿಕ ಜಾಲತಾಣಗಳಲ್ಲಿ ತ್ರಿಷಾ ಪರವಾಗಿ ಹಲವು ಹ್ಯಾಶ್‌ಟ್ಯಾಗ್‌ಗಳು ಹರಿದಾಡುತ್ತಿದ್ದು, ಮನ್ಸೂರ್ ಅವರನ್ನು ಬಂಧಿಸಿ ಎಲ್ಲರ ಮುಂದೆ ಕ್ಷಮೆಯಾಚಿಸಬೇಕು ಎಂಬ ಬೇಡಿಕೆಗಳು ಕೇಳಿಬರುತ್ತಿವೆ. ಲಿಯೋವನ್ನು ಲೋಕೇಶ್ ಕನಕರಾಜ್ ನಿರ್ದೇಶಿಸಿದ್ದಾರೆ. ದಳಪತಿ ವಿಜಯ್, ತ್ರಿಶಾ, ಮನ್ಸೂರ್ ಅಲಿ ಖಾನ್, ಸಂಜಯ್ ದತ್ ಮತ್ತು ಅರ್ಜುನ್ ಸರ್ಜಾ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಕಲೆಕ್ಷನ್ ಬಗ್ಗೆ ಹೇಳುವುದಾದರೆ, ಚಿತ್ರವು ವಿಶ್ವಾದ್ಯಂತ 600 ಕೋಟಿ ರೂ.ಗೂ ಹೆಚ್ಚು ಗಳಿಸಿದೆ. ಸದ್ಯದಲ್ಲೇ ಚಿತ್ರ ಒಟಿಟಿಗೆ ಬರಲಿದೆ.
ದೇಶ
ಸೋನಾಕ್ಷಿ ಸಿನ್ಹಾ ಲೂಸಸ್ ಕೂಲ್: ವೈರಲ್ ಆದ ವಿಡಿಯೋ ಒಳಗೇನಿದೆ?
Sonakshi Sinha Loses Cool With Paps: ಇತ್ತೀಚೆಗೆ ಬಾಲಿವುಡ್ ಮತ್ತು ಕನ್ನಡ ಚಿತ್ರರಂಗದ ನಟಿಯರು ಪಾಪರಾಜಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿವೆ. ಈ ಮೊದಲು ಹಿರಿಯ ನಟಿ ಜಯಾ ಬಚ್ಚನ್ ಮಗಳೊಂದಿಗಿನ ಫೋಟೋ ಕ್ಲಿಕ್ಕಿಸುವ ವೇಳೆ ಅನುಚಿತ ಮಾತುಗಳ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದ್ದರು. ಇದೀಗ ಈ ಸಾಲಿಗೆ ಸೇರಿರುವುದು ನಟಿ ಸೋನಾಕ್ಷಿ ಸಿನ್ಹಾ.
ಸೋಮವಾರ ಸೋನಾಕ್ಷಿ ಸಿನ್ಹಾ ಕುಟುಂಬ ಮುಂಬೈನ ರೆಸ್ಟೋರೆಂಟ್ ಒಂದರಲ್ಲಿ ಭೋಜನಕೂಟ ಆಯೋಜಿಸಿತ್ತು. ಭೋಜನದ ನಂತರ ತಂದೆ ಶತ್ರುಘ್ನ ಸಿನ್ಹಾ ಮತ್ತು ಪತಿ ಜಹೀರ್ ಇಕ್ಬಾಲ್ರನ್ನು ಬೀಳ್ಕೊಡುಗೆ ನೀಡುತ್ತಿದ್ದ ವೇಳೆ, ಪಾಪರಾಜಿಗಳು ಕಾರಿನೊಳಗಿನ ದೃಶ್ಯಗಳನ್ನು ಚಿತ್ರೀಕರಿಸಲು ಮುಂದಾದರು. ಇದರಿಂದ ಬೇಸತ್ತ ಸೋನಾಕ್ಷಿ, ಚಿತ್ರೀಕರಣ ನಿಲ್ಲಿಸುವಂತೆ ಕೈ ಮುಗಿದು ಮನವಿ ಮಾಡಿದ ದೃಶ್ಯಗಳಿರುವ ವಿಡಿಯೋ ಇದೀಗ ವೈರಲ್ ಆಗಿದೆ. ಈ ವಿಡಿಯೋಗೆ ನೆಟ್ಟಿಗರು ಮಿಶ್ರ ಪ್ರತಿಕ್ರಿಯೆ ನೀಡಿದ್ದು, ಕೆಲವರು ಪಾಪರಾಜಿಗಳ ವರ್ತನೆಯ ಬಗ್ಗೆ ಪ್ರಶ್ನೆ ಎತ್ತಿದ್ದಾರೆ.
ಇದಕ್ಕೂ ಮುನ್ನ ಕಾಕ್ಟೇಲ್ 2 ಸಿನಿಮಾ ಪ್ರಚಾರದ ವೇಳೆ ರಶ್ಮಿಕಾ ಮಂದಣ್ಣಗೆ ಜನಸಂದಣಿಯ ನಡುವೆ ಕೃತಿ ಸನೂನ್ ಸುರಕ್ಷಿತವಾಗಿ ಮಾರ್ಗದರ್ಶನ ನೀಡಿದ್ದರು. ಇದೇ ವಿಷಯವಾಗಿ ನಟಿ ಸಪ್ತಮಿ ಗೌಡ ಸಹ, ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಮಹಿಳಾ ಕಲಾವಿದರನ್ನು ಅಸಭ್ಯ ಕೋನಗಳಿಂದ ಚಿತ್ರೀಕರಿಸುವ ಪ್ರವೃತ್ತಿ ವಿರುದ್ಧ ಬಲವಾಗಿ ಧ್ವನಿ ಎತ್ತಿದ್ದು, ಇದಕ್ಕೆ ಕನ್ನಡ ಚಿತ್ರರಂಗದ ಇತರ ನಟಿಯರೂ ಸಹಮತ ವ್ಯಕ್ತಪಡಿಸಿದ್ದಾರೆ.
ದೇಶ
ರಾಜಮೌಳಿ ತಂಡ ತೆಗೆದುಕೊಂಡ ರಿಸ್ಕ್ ನೆನೆದು ಭಾವುಕರಾದ ಪ್ರಭಾಸ್
ಬೆಂಗಳೂರು: ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಹೊಸ ಅಧ್ಯಾಯ ಬರೆದ ‘ಬಾಹುಬಲಿ’ ಚಿತ್ರದ ಯಶಸ್ಸಿನ ಹಿಂದಿನ ಕಠಿಣ ಹೋರಾಟವನ್ನು ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಭಾವುಕರಾಗಿ ನೆನಪಿಸಿಕೊಂಡಿದ್ದಾರೆ. #BaahubaliTheTorchbearer ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಚಿತ್ರದ ನಿರ್ಮಾಣದಿಂದ ಬಿಡುಗಡೆಯವರೆಗಿನ ಪ್ರಯಾಣವೇ ಒಂದು ಭೀಕರ ಯುದ್ಧದಂತಿತ್ತು ಎಂದು ಹೇಳಿದ್ದಾರೆ.
ಬಾಹುಬಲಿ ಸಿನಿಮಾ ದೇಶ-ವಿದೇಶಗಳಲ್ಲಿ ಬಾಕ್ಸ್ ಆಫೀಸ್ ದಾಖಲೆಗಳನ್ನು ನಿರ್ಮಿಸಿದರೂ, ಅದರ ಹಿಂದೆ ಚಿತ್ರತಂಡ ಮತ್ತು ನಿರ್ಮಾಪಕರು ಅಪಾರ ಅಪಾಯವನ್ನು ಎದುರಿಸಿದ್ದರು ಎಂದು ಪ್ರಭಾಸ್ ತಿಳಿಸಿದ್ದಾರೆ. ಚಿತ್ರದ ಮೊದಲ ದಿನ ಕೆಲವು ನಕಾರಾತ್ಮಕ ಪ್ರತಿಕ್ರಿಯೆಗಳು ಬಂದಾಗ ನಿರ್ಮಾಪಕರ ಪರಿಸ್ಥಿತಿ ಏನಾಗಬಹುದು ಎಂಬ ಆತಂಕ ಎಲ್ಲರಲ್ಲೂ ಇತ್ತು ಎಂದು ಅವರು ನೆನಪಿಸಿಕೊಂಡರು.
“ಆ ದಿನಗಳಲ್ಲಿ ಸಿನಿಮಾ ಸೋತಿದ್ದರೆ ನಿರ್ಮಾಪಕರಾದ ಶೋಬು ಯರ್ಲಗಡ್ಡ, ಪ್ರಸಾದ್ ದೇವಿನೇನಿ ಹಾಗೂ ನಿರ್ದೇಶಕ ಎಸ್.ಎಸ್. ರಾಜಮೌಳಿ ಅವರ ಜೀವನವೇ ಸಂಪೂರ್ಣ ತಲೆಕೆಳಗಾಗುತ್ತಿತ್ತು. ಅವರು ತಮ್ಮೆಲ್ಲವನ್ನೂ ಈ ಸಿನಿಮಾಕ್ಕಾಗಿ ಪಣಕ್ಕಿಟ್ಟಿದ್ದರು,” ಎಂದು ಪ್ರಭಾಸ್ ಭಾವುಕರಾಗಿ ಹೇಳಿದರು.
ಇದೇ ವೇಳೆ ಜಪಾನ್ ಪ್ರೇಕ್ಷಕರ ಬಗ್ಗೆ ವಿಶೇಷವಾಗಿ ಮಾತನಾಡಿದ ಅವರು, ಅಲ್ಲಿನ ಅಭಿಮಾನಿಗಳು ತಮಗೆ ನೀಡಿದ ಪ್ರೀತಿ ಮತ್ತು ಗೌರವ ಎಂದಿಗೂ ಮರೆಯಲಾಗದು ಎಂದರು. ಜಪಾನ್‌ನ ಜನರು ಅತ್ಯಂತ ಹೃದಯವಂತರು ಹಾಗೂ ಆತ್ಮೀಯರು. ಅವರ ಪ್ರೀತಿಯಿಂದ ಜಪಾನ್ ಈಗ ತಮ್ಮ ಎರಡನೇ ಮನೆಯಂತಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಬಾಹುಬಲಿ ಚಿತ್ರದ ಐತಿಹಾಸಿಕ ಯಶಸ್ಸಿನ ಬಳಿಕ ಎದುರಾದ ಮಾನಸಿಕ ಒತ್ತಡದ ಬಗ್ಗೆಯೂ ಪ್ರಭಾಸ್ ಮನಬಿಚ್ಚಿ ಮಾತನಾಡಿದರು. ಇಷ್ಟೊಂದು ದೊಡ್ಡ ಯಶಸ್ಸಿನ ನಂತರ ಯಾವ ರೀತಿಯ ಕಥೆಗಳನ್ನು ಆಯ್ಕೆ ಮಾಡಬೇಕು, ಮುಂದಿನ ಹೆಜ್ಜೆ ಹೇಗಿರಬೇಕು ಎಂಬ ಗೊಂದಲ ಕಾಡಿತ್ತು. ಬಾಹುಬಲಿ ಬಳಿಕದ ದಿನಗಳು ತಮ್ಮ ಜೀವನದಲ್ಲಿ ಅತ್ಯಂತ ಒತ್ತಡ ಮತ್ತು ಅನಿಶ್ಚಿತತೆಯಿಂದ ಕೂಡಿದ್ದವು ಎಂದು ಅವರು ಹಂಚಿಕೊಂಡರು.
ಇನ್ನಷ್ಟು ಸಿನಿಮಾ, ಮನರಂಜನೆ ಹಾಗೂ ವೈರಲ್ ಸುದ್ದಿಗಳಿಗಾಗಿ ನಿರಂತರವಾಗಿ ಭೇಟಿ ನೀಡಿ Hosasuddi.in.
ವೇಗದ, ವಿಶ್ವಾಸಾರ್ಹ ಹಾಗೂ ವಿಶೇಷ ಸುದ್ದಿಗಳಿಗೆ Hosasuddi.in ನಿಮ್ಮ ನೆಚ್ಚಿನ ತಾಣ.
ದೇಶ
ದಕ್ಷಿಣ ಚಿತ್ರರಂಗದಲ್ಲಿ ‘ಪಿತೃಪ್ರಧಾನ ಮನೋಭಾವ’ ಇದೆ: ತಮನ್ನಾ ಭಾಟಿಯಾ ಹೇಳಿಕೆ
ನವದೆಹಲಿ: ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಮಹಿಳೆಯರ ಬಗ್ಗೆ ಇನ್ನೂ ಒಂದು ರೀತಿಯ ಪಿತೃಪ್ರಧಾನ ಮನೋಭಾವ ಕಂಡುಬರುತ್ತದೆ ಎಂದು ನಟಿ Tamannaah Bhatia ಅಭಿಪ್ರಾಯಪಟ್ಟಿದ್ದಾರೆ. ಫೋರ್ಬ್ಸ್ ಇಂಡಿಯಾಗೆ ನೀಡಿದ ಸಂದರ್ಶನದಲ್ಲಿ ಅವರು ತಮ್ಮ ವೈಯಕ್ತಿಕ ಅನುಭವಗಳ ಆಧಾರದ ಮೇಲೆ ದಕ್ಷಿಣ ಹಾಗೂ ಹಿಂದಿ ಚಿತ್ರರಂಗಗಳ ನಡುವಿನ ವ್ಯತ್ಯಾಸಗಳನ್ನು ವಿವರಿಸಿದ್ದಾರೆ.
ಸಂದರ್ಶನದಲ್ಲಿ ಮಾತನಾಡಿದ ತಮನ್ನಾ, ದಕ್ಷಿಣ ಸಿನಿಮಾಗಳಲ್ಲಿ ಒಂದು ನಿರ್ದಿಷ್ಟ ರೀತಿಯ ದೃಷ್ಟಿಕೋನ ಪ್ರಬಲವಾಗಿದ್ದು, ಅದು ಕೆಲವೊಮ್ಮೆ ಮಹಿಳಾ ಕಲಾವಿದೆಯರ ಅವಕಾಶಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಿದ್ದಾರೆ. ಕಮರ್ಷಿಯಲ್ ಯಶಸ್ಸು ಪಡೆಯಲು ಬಲವಾದ ಸ್ಟಾರ್ ಇಮೇಜ್ ಅಗತ್ಯವಾಗಿರುವ ಕಾರಣ ಕೆಲವು ಕಲಾವಿದರಿಗೆ ನಿರ್ಬಂಧಿತ ಅವಕಾಶಗಳು ಮಾತ್ರ ಸಿಗುವ ಪರಿಸ್ಥಿತಿ ಉಂಟಾಗುತ್ತದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ, ಬಾಲಿವುಡ್‌ನಲ್ಲಿ ಕಲಾವಿದರಿಗೆ ಹೆಚ್ಚಿನ ವೈವಿಧ್ಯಮಯ ಅವಕಾಶಗಳು ದೊರೆಯುತ್ತವೆ ಎಂದು ತಮನ್ನಾ ತಿಳಿಸಿದ್ದಾರೆ. ಕೆಲವರು ಕಲಾತ್ಮಕ ಪಾತ್ರಗಳ ಮೂಲಕ ಗುರುತಿಸಿಕೊಳ್ಳಬಹುದು, ಇನ್ನು ಕೆಲವರು ಗ್ಲಾಮರ್ ಹಾಗೂ ವಾಣಿಜ್ಯ ಸಿನಿಮಾಗಳಲ್ಲಿ ಮಿಂಚಬಹುದು. ಈ ಎರಡೂ ಕ್ಷೇತ್ರಗಳಲ್ಲಿ ಯಶಸ್ಸು ಸಾಧಿಸುವ ಕಲಾವಿದರು ಸೂಪರ್‌ಸ್ಟಾರ್ ಸ್ಥಾನಕ್ಕೇರುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ಅವರು ಹೇಳಿದ್ದಾರೆ.
ಮಹಿಳಾ ನಟಿಯರ ದೀರ್ಘಕಾಲದ ಯಶಸ್ಸಿನ ಬಗ್ಗೆ ಮಾತನಾಡಿದ ತಮನ್ನಾ, ಉತ್ತಮ ಕಥಾ ಆಧಾರಿತ ಪಾತ್ರಗಳು ಮತ್ತು ಗ್ಲಾಮರ್ ನಡುವಿನ ಸಮತೋಲನ ಕಾಪಾಡಿಕೊಳ್ಳುವ ನಟಿಯರು ಚಿತ್ರರಂಗದಲ್ಲಿ ಹೆಚ್ಚು ಕಾಲ ಉಳಿಯುತ್ತಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ. ತಮ್ಮ ಹೇಳಿಕೆಗಳು ವೈಯಕ್ತಿಕ ಅನುಭವಗಳ ಆಧಾರಿತವಾಗಿವೆ ಎಂಬುದನ್ನೂ ಅವರು ಸ್ಪಷ್ಟಪಡಿಸಿದ್ದಾರೆ.
ತೆಲುಗು, ತಮಿಳು ಹಾಗೂ ಹಿಂದಿ ಚಿತ್ರರಂಗಗಳಲ್ಲಿ ಸಕ್ರಿಯರಾಗಿರುವ ತಮನ್ನಾ ಭಾಟಿಯಾ ಇದುವರೆಗೆ 90ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. Baahubali: The Beginning, Oopiri ಹಾಗೂ Aranmanai 4 ಚಿತ್ರಗಳ ಮೂಲಕ ಅವರು ಅಪಾರ ಜನಪ್ರಿಯತೆ ಗಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಅವರು Sidharth Malhotra ಜೊತೆ ಹೊಸ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
-
ದೇಶ14 hours agoಅಲಿ ಖಮೇನಿ ಅಂತಿಮಯಾತ್ರೆ ಆರಂಭ: ತೆಹ್ರಾನ್ ಬೀದಿಗಳಲ್ಲಿ ಲಕ್ಷಾಂತರ ಜನರ ಅಂತಿಮ ನಮನ
-
ದೇಶ20 hours agoSakkath Santhe 2026: ಗೃಹ ಉತ್ಪನ್ನಗಳಿಗೆ ವೇದಿಕೆ, ಇಂದಿರಾನಗರದಲ್ಲಿ ಜನಸಾಗರ
-
ದೇಶ17 hours agoಚಿನ್ನದ ಬೆಲೆಯಲ್ಲಿ ಮತ್ತೆ ಇಳಿಕೆ! ಜುಲೈ 6ರ ಬೆಂಗಳೂರು ಗೋಲ್ಡ್ ರೇಟ್ ಇಲ್ಲಿದೆ
-
ದೇಶ18 hours agoರಾಜಾಜಿನಗರ ಶಾಸಕರ ಕಚೇರಿ ಮುಂದೆ ಹೈಡ್ರಾಮಾ: ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರ ವಾಗ್ವಾದ
-
ದೇಶ16 hours ago“ಇನ್ನೆಷ್ಟು ಜನ ಸತ್ತರೆ ಕ್ರಮ?” ಸರ್ಕಾರವನ್ನು ನೇರವಾಗಿ ಪ್ರಶ್ನಿಸಿದ ಎಸ್.ಟಿ. ಸೋಮಶೇಖರ್
-
ದೇಶ15 hours ago‘ಮಸೀದಿ, ಚೌಲ್ಟ್ರಿಗಳಲ್ಲಿ ಸಾಮೂಹಿಕ SIR’ – ಚುನಾವಣಾ ಆಯೋಗದ ಮೆಟ್ಟಿಲೇರಿದ ಬಿಜೆಪಿ-ಜೆಡಿಎಸ್
-
ದೇಶ18 hours agoPoK ಪ್ರತಿಭಟನೆ ತೀವ್ರ: ‘ಗಡಿ ತೆರೆಯಿರಿ, ಮಾನವೀಯ ನೆರವು ನೀಡಿ’ ಎಂದು ಭಾರತದತ್ತ ಮೊರೆ
-
ದೇಶ15 hours agoಚೀನಾ-ಪಾಕ್ ಜಲಾಂತರ್ಗಾಮಿಗಳಿಗೆ ಭಾರತದ ಹೈಟೆಕ್ ಬ್ರಹ್ಮಾಸ್ತ್ರ! ಸಮುದ್ರದಾಳದಲ್ಲಿ ‘ಸೀಕ್ರೆಟ್ ಸೆನ್ಸಾರ್ ನೆಟ್ವರ್ಕ್’
