Connect with us

ಆರೋಗ್ಯ

COVID 19: ಕರ್ನಾಟಕದಲ್ಲಿ 92 ಸಕ್ರಿಯ ಕೋವಿಡ್‌ ಕೇಸ್‌, ಬೆಂಗಳೂರಲ್ಲೇ 80 ಪ್ರಕರಣ; ಸರ್ಕಾರದಿಂದ 10 ನಿರ್ಣಯ

COVID 19: ಕರ್ನಾಟಕದಲ್ಲಿ 92 ಸಕ್ರಿಯ ಕೋವಿಡ್‌ ಕೇಸ್‌, ಬೆಂಗಳೂರಲ್ಲೇ 80 ಪ್ರಕರಣ; ಸರ್ಕಾರದಿಂದ 10 ನಿರ್ಣಯ

ಬೆಂಗಳೂರು: ಕರ್ನಾಟಕದಲ್ಲಿ ಪ್ರಸ್ತುತ 92 ಸಕ್ರಿಯ ಕೋವಿಡ್‌ ಕೇಸ್‌ಗಳು ವರದಿಯಾಗಿವೆ. ಈ ಪೈಕಿ ಬೆಂಗಳೂರಲ್ಲೇ ಅಧಿಕ 80 ಪ್ರಕರಣಗಳಿವೆ. ಇನ್ನುಳಿದಂತೆ, ಮೈಸೂರಿನಲ್ಲಿ 5, ಬಳ್ಳಾರಿಯಲ್ಲಿ 3, ರಾಮನಗರ ಹಾಗೂ ಮಂಡ್ಯದಲ್ಲಿ ತಲಾ 1 ಪ್ರಕರಣ ವರದಿಯಾಗಿದೆ ಎಂದು ಮುಖ್ಯಮಂತ್ರಿ ಕಚೇರಿ ತಿಳಿಸಿದೆ.ಕರ್ನಾಟಕದಲ್ಲಿ ಕೋವಿಡ್ 19 ಪ್ರಕರಣ ಹೆಚ್ಚುತ್ತಿರುವ ಕಾರಣ ಮತ್ತು ಕಳೆದ ಮೂರು ದಿನಗಳ ಅವಧಿಯಲ್ಲಿ ಬೆಂಗಳೂರಿನಲ್ಲಿ ಮೂವರು ಕೋವಿಡ್ ಸೋಂಕಿತರು ಮೃತಪಟ್ಟ ಪ್ರಕರಣಗಳು ಬೆಳಕಿಗೆ ಬಂದಿವೆ. ಈ ಹಿನ್ನೆಲೆಯಲ್ಲಿ, ರಾಜ್ಯದಲ್ಲಿನ ಕೋವಿಡ್ ಪರಿಸ್ಥಿತಿ ಅವಲೋಕನಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಇಂದು (ಡಿ.21) ಉನ್ನತ ಮಟ್ಟದ ಸಭೆ ನಡೆಯಿತು.ದೇಶದಲ್ಲಿ ಜೆಎನ್‌-1 ಎಂಬ ಹೊಸ ತಳಿಯ ವೈರಸ್‌ ಪತ್ತೆಯಾಗಿದ್ದು, ಕರ್ನಾಟಕದಲ್ಲಿ ಕೋವಿಡ್‌ 19 ಪ್ರಕರಣಗಳ ಸಂಖ್ಯೆ ಮತ್ತೆ ಏರಿಕೆಯಾಗುತ್ತಿದೆ. ಕರ್ನಾಟಕದ 92 ಸಕ್ರಿಯ ಕೋವಿಡ್‌ ಕೇಸ್‌ಗಳಲ್ಲಿ 72 ಸೋಂಕಿತರು ಮನೆಯಲ್ಲಿಯೇ ಪ್ರತ್ಯೇಕ ವಾಗಿದ್ದಾರೆ. 20 ಸೋಂಕಿತರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಏಳು ಕೋವಿಡ್ ಸೋಂಕಿತರು ಐಸಿಯುನಲ್ಲಿದ್ದು, ಇವರೆಲ್ಲರೂ ಇತರ ಸಮಸ್ಯೆಗಳಿಂದಲೂ ಬಳಲುತ್ತಿದ್ದಾರೆ ಎಂಬ ಅಂಶ ಸಭೆಯಲ್ಲಿ ಉಲ್ಲೇಖವಾಯಿತು.ರಾಜ್ಯದಲ್ಲಿ ಕೋವಿಡ್‌ ಪರೀಕ್ಷಾ ಪ್ರಮಾಣವನ್ನು ದಿನಕ್ಕೆ 5000 ಕ್ಕೆ ಹೆಚ್ಚಿಸಲಾಗಿದೆ. ಇದರಲ್ಲಿ 1500 ರಾಪಿಡ್ ಆಂಟಿಜೆನ್‌ ಟೆಸ್ಟ್‌, 3500 ಆರ್‌ಟಿಪಿಸಿಆರ್ ಪರೀಕ್ಷೆಗಳಾಗಿರಲಿವೆ. ಬೆಂಗಳೂರು ನಗರದಲ್ಲಿ 1000 ಪರೀಕ್ಷೆಗಳನ್ನು ನಡೆಸಲಾಗುವುದು. ಗಡಿ ಭಾಗಗಳಲ್ಲಿ ಹೆಚ್ಚು ಪರೀಕ್ಷೆಗಳನ್ನು ನಡೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.ಕರ್ನಾಟಕದಲ್ಲಿ ಡಿಸೆಂಬರ್‌ 15 ರಂದು ಒಂದು ಹಾಗೂ ಡಿಸೆಂಬರ್‌ 20 ರಂದು ಎರಡು ಸಾವುಗಳು ಸಂಭವಿಸಿವೆ. ಈ ಮೂರು ಪ್ರಕರಣಗಳಲ್ಲಿ ಎಲ್ಲರೂ ಇತರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು. ಕೋವಿಡ್‌ 19 ಈಗ ಪೆಂಡಮಿಕ್‌ ಆಗಿ ಉಳಿದಿಲ್ಲ. ಎಂಡೆಮಿಕ್‌ ಆಗಿದ್ದು, ಜನರು ಆತಂಕ ಪಡುವ ಅಗತ್ಯವಿಲ್ಲ. ಆದರೆ ಮುನ್ನೆಚ್ಚರಿಕೆ ಕ್ರಮಗಳನ್ನು ಅಗತ್ಯವಾಗಿ ಕೈಗೊಳ್ಳಬೇಕಾಗಿದೆ. ಈ ಬಗ್ಗೆ ಜಾಗೃತಿ ಅಗತ್ಯ ಎಂದು ಅಧಿಕಾರಿಗಳು ವಿವರಿಸಿದರು.ಕಳೆದ ಒಂದು ವಾರದ ಅವಧಿಯಲ್ಲಿ ಜಾಗತಿಕವಾಗಿ 51,214 ಪ್ರಕರಣಗಳು ಪತ್ತೆಯಾಗಿವೆ. ಭಾರತದಲ್ಲಿ ಪ್ರತಿದಿನ ಸರಾಸರಿ 310 ಪ್ರಕರಣಗಳು ವರದಿಯಾಗಿವೆ. ಕೇರಳದಲ್ಲಿ 2041, ತಮಿಳುನಾಡಿನಲ್ಲಿ 77, ಮಹಾರಾಷ್ಟ್ರದಲ್ಲಿ 35, ಗೋವಾದಲ್ಲಿ 23 ಹಾಗೂ ಗುಜರಾತಿನಲ್ಲಿ 12 ಸಕ್ರಿಯ ಕೋವಿಡ್ ಕೇಸ್‌ಗಳಿವೆ.ಕರ್ನಾಟಕದಲ್ಲಿ ಸರ್ಕಾರ ರಚಿಸಿದ ಉನ್ನತ ಮಟ್ಟದ ತಾಂತ್ರಿಕ ಸಲಹಾ ಸಮಿತಿಯು ನೀಡಿರುವ ಸಲಹೆಗಳ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯ ಸಭೆಯಲ್ಲಿ ಚರ್ಚಿಸಲಾಗಿದ್ದು, 10 ತೀರ್ಮಾನಗಳನ್ನು ತೆಗೆದುಕೊಳ್ಳಲಾಗಿದೆ.

⦁ ಹಿಂದಿನ ಕೋವಿಡ್‌ ಸಂಕಷ್ಟದ ಸಂದರ್ಭದಲ್ಲಿ ನಡೆದ ತಪ್ಪುಗಳು ಈ ಬಾರಿ ಆಗಬಾರದು. ಆಕ್ಸಿಜನ್‌, ವೆಂಟಿಲೇಟರ್‌, ಬೆಡ್‌ಗಳು ಯಾವುದಕ್ಕೂ ತೊಂದರೆ ಆಗಬಾರದು. ಕಳೆದ ಬಾರಿ ತೊಂದರೆ ಆಗಿ ಹಲವರು ಮೃತಪಟ್ಟರು. ಆಕ್ಸಿಜನ್‌ ಲಭ್ಯತೆಯನ್ನು ಖಾತರಿ ಪಡಿಸಬೇಕು.
⦁ ಕೋವಿಡ್ ಸೋಂಕಿತರ ಚಿಕಿತ್ಸೆಗೆ ಆರೋಗ್ಯ ಇಲಾಖೆ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಗಳು ಸನ್ನದ್ಧವಾಗಿ ಇವು ಯಾವುದೂ ಕೊರತೆಯಾಗದಂತೆ ನೋಡಿಕೊಳ್ಳಬೇಕು.
⦁ ತಾಂತ್ರಿಕ ಸಲಹಾ ಸಮಿತಿಯ ಸಲಹೆಗಳನ್ನು ಪಾಲಿಸಬೇಕು. ಎಲ್ಲರೂ ಜವಾಬ್ದಾರಿ ಅರಿತು ಕೆಲಸ ಮಾಡಬೇಕು.
⦁ ಕೋವಿಡ್‌ ನ ಸಮರ್ಪಕ ನಿರ್ವಹಣೆ ಹಾಗೂ ಪಾರದರ್ಶಕತೆಗಾಗಿ ಸಚಿವ ಸಂಪುಟ ಉಪ ಸಮಿತಿಯನ್ನು ರಚಿಸಲು ತೀರ್ಮಾನಿಸಲಾಯಿತು.
⦁ ಎಲ್ಲ ಆಸ್ಪತ್ರೆಗಳಲ್ಲಿ ಮಾಕ್‌ ಡ್ರಿಲ್‌ ಮಾಡಲಾಗಿದೆ. ಎಲ್ಲ ಆಸ್ಪತ್ರೆಗಳೂ ಕೋವಿಡ್‌ ಪ್ರಕರಣಗಳನ್ನು ನಿರ್ವಹಿಸಲು ಸಿದ್ಧತೆ ನಡೆಸಿಕೊಳ್ಳಲು ಸೂಚಿಸಲಾಗಿದೆ.
ತಾಂತ್ರಿಕ ಸಲಹಾ ಸಮಿತಿಯ ಶಿಫಾರಸುಗಳು ಹಾಗೂ ರಾಜ್ಯದಲ್ಲಿ ಹೊರಡಿಸಿರುವ ಮಾರ್ಗಸೂಚಿಗಳು
⦁ ಕರ್ನಾಟಕದಲ್ಲಿ 60 ವರ್ಷ ಮತ್ತು ಮೇಲ್ಪಟ್ಟ ಎಲ್ಲರೂ, ಕಿಡ್ನಿ, ಹೃದಯ, ಲಿವರ್‌ ಸಮಸ್ಯೆಗಳಿಂದ ಬಳಲುತ್ತಿರುವವರು, ಗರ್ಭಿಣಿ ಹಾಗೂ ಬಾಣಂತಿಯರು ಮಾಸ್ಕ್‌ ಧರಿಸುವುದು ಹಾಗೂ ಮುಚ್ಚಿದ, ಹೆಚ್ಚು ಗಾಳಿಯಾಡದ ಸ್ಥಳಗಳಿಗೆ ಹಾಗೂ ಜನಸಂದಣಿ ಇರುವ ಸ್ಥಳಗಳಿಗೆ ಭೇಟಿ ನೀಡಬಾರದು.
⦁ ಉಸಿರಾಟದ ಸಮಸ್ಯೆಯ ಲಕ್ಷಣಗಳಾದ ಜ್ವರ, ಕೆಮ್ಮು, ಶೀತ, ನೆಗಡಿ ಇತ್ಯಾದಿಗಳಿಂದ ಬಳಲುತ್ತಿರುವವರು ಕೂಡಲೇ ವೈದ್ಯಕೀಯ ಸಮಾಲೋಚನೆ ನಡೆಸುವುದು ಹಾಗೂ ಮಾಸ್ಕ್‌ ಧರಿಸುವುದು.
⦁ ವೈಯಕ್ತಿಕ ಸ್ವಚ್ಛತೆಯನ್ನು ಕಾಪಾಡುವುದು. ಅನಾರೋಗ್ಯ ಪೀಡಿತರಾದರೆ ಮನೆಯಲ್ಲೇ ಇರಿ ಹಾಗೂ ಇತರರೊಂದಿಗೆ ಸಂಪರ್ಕವನ್ನು ಕಡಿಮೆ ಮಾಡಿ. ಜನಸಂದಣಿಯ ಪ್ರದೇಶದಲ್ಲಿ ಮಾಸ್ಕ್‌ ಧರಿಸುವುದು ಉತ್ತಮ.
⦁ ವಿದೇಶ ಪ್ರವಾಸದ ಸಂದರ್ಭದಲ್ಲಿ ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳುವುದು. ಭಾರತ ಸರ್ಕಾರವೂ ಮಾರ್ಗಸೂಚಿಗಳನ್ನು ಹೊರಡಿಸಿದೆ. ಅದನ್ನು ಪಾಲಿಸಬೇಕು.
⦁ ರಾಜ್ಯವೂ ಕೇರಳ ಮತ್ತು ತಮಿಳುನಾಡು ಗಡಿಭಾಗದಲ್ಲಿ ಜ್ವರದ ಪ್ರಕರಣಗಳ ಮೇಲೆ ನಿಗಾವಹಿಸಿ, ಪರೀಕ್ಷೆ ಮತ್ತು ವರದಿ ಮಾಡುವ ವ್ಯವಸ್ಥೆ ಮಾಡಲಾಗುತ್ತಿದೆ. ಎಲ್ಲ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ಉಸಿರಾಟದ ತೊಂದರೆ ಮತ್ತು 20 ರಲ್ಲಿ ಒಂದು ಜ್ವರದ ಪ್ರಕರಣಗಳಲ್ಲಿ ಪರೀಕ್ಷೆ ಕಡ್ಡಾಯವಾಗಿ ಮಾಡಲು ಸೂಚಿಸಲಾಗಿದೆ.

Continue Reading

ಆರೋಗ್ಯ

ಭಾರತದ ಮಲೇರಿಯಾ ಲಸಿಕೆ ‘ಆಡ್‍ಫಾಲ್ಸಿವ್ಯಾಕ್ಸ್’: Plasmodium Falciparum ವಿರುದ್ಧ ನೂತನ ಹೋರಾಟ

ನವದೆಹಲಿ: ಭಾರತವು ಔಷಧೋತ್ಪಾದನೆಯಲ್ಲಿ ತನ್ನನ್ನು ‘ವಿಶ್ವ ಔಷಧ ರಾಜಧಾನಿ’ ಎಂಬ ಹಿರಿಮೆಗೆ ತಂದುಕೊಂಡಿದೆ. ಇದೀಗ, ದೇಶದ ವೈದ್ಯಕೀಯ ಸಂಶೋಧನೆ ಮತ್ತೊಂದು ಮಹತ್ತರ ಸಾಧನೆ ದಾಖಲಿಸಿದೆ – ಭಾರತದ ಮೊದಲ ಮಲೇರಿಯಾ ಲಸಿಕೆ “ಆಡ್‍ಫಾಲ್ಸಿವ್ಯಾಕ್ಸ್” ಅನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ಘೋಷಿಸಿದೆ.

ಈ ಲಸಿಕೆಯನ್ನು ICMR ನ ಭುವನೇಶ್ವರದ ಪ್ರಾದೇಶಿಕ ವೈದ್ಯಕೀಯ ಸಂಶೋಧನಾ ಕೇಂದ್ರ ಹಾಗೂ ರಾಷ್ಟ್ರೀಯ ಮಲೇರಿಯಾ ಸಂಶೋಧನಾ ಸಂಸ್ಥೆ, ಜೊತೆಗೆ ಜೈವಿಕ ತಂತ್ರಜ್ಞಾನ ಇಲಾಖೆಯ ರಾಷ್ಟ್ರೀಯ ರೋಗನಿರೋಧಕ ಸಂಸ್ಥೆಯ ಸಹಭಾಗಿತ್ವದಲ್ಲಿ ರೂಪಿಸಲಾಗಿದೆ.

ಪ್ಲಾಸ್ಮೋಡಿಯಂ ಫಾಲ್ಸಿಪ್ಯಾರಮ್ ವಿರುದ್ಧ ಲಸಿಕೆ:
ಆಡ್‍ಫಾಲ್ಸಿವ್ಯಾಕ್ಸ್ ಲಸಿಕೆ, ಮಲೇರಿಯಾದ ಪ್ರಮುಖ ಕಾರಣಕರವಾಗಿರುವ Plasmodium falciparum ವಿರುದ್ಧ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಈ ಲಸಿಕೆ ಎರಡು ಹಂತಗಳಲ್ಲಿ ಪರಾವಲಂಬಿಯನ್ನು ಗುರಿಯಾಗಿಸುತ್ತಿದ್ದು, ದೀರ್ಘಕಾಲ ದೇಹದಲ್ಲಿ ಇರುವುದು ಹಾಗೂ ಸಾಮಾನ್ಯ ಉಷ್ಣಾಂಶದಲ್ಲಿಯೇ 9 ತಿಂಗಳವರೆಗೆ ಸಂಗ್ರಹಿಸಬಹುದಾಗಿದೆ.

ಅನುಮೋದನೆಗೂ ಮುನ್ನ 7 ವರ್ಷಗಳು ಬೇಕಾಗಬಹುದು:
ಲಸಿಕೆ ಪ್ರಸ್ತುತ ಆರಂಭಿಕ ಪರೀಕ್ಷಾ ಹಂತದಲ್ಲಿದೆ. ಇದರ ಮೊದಲ ಫಲಿತಾಂಶಗಳು ಅತ್ಯಂತ ಹೃದಯಂಗಮವಾಗಿವೆ. ಆದರೆ ಮಾನವ ಬಳಕೆಗೆ ಮುನ್ನ ಎಲ್ಲಾ ಹಂತದ ಪರೀಕ್ಷೆ ಹಾಗೂ ಅನುಮೋದನೆಗಳಿಗಾಗಿ ಇನ್ನೂ ಸುಮಾರು 7 ವರ್ಷಗಳು ಬೇಕಾಗಬಹುದು.

ವಿದೇಶಿ ಲಸಿಕೆಗಳಿಗಿಂತ ಅಗ್ಗ ಮತ್ತು ಪರಿಣಾಮಕಾರಿ:
ಭಾರತದ ಈ ಲಸಿಕೆ ಅಸ್ತಿತ್ವದಲ್ಲಿರುವ ವಿದೇಶಿ ಲಸಿಕೆಗಳಿಗಿಂತ ಅಗ್ಗವಾಗಿದ್ದು, ಹೆಚ್ಚು ಪರಿಣಾಮಕಾರಿಯೂ ಆಗಬಹುದು. ಇದು ಮೇಕ್ ಇನ್ ಇಂಡಿಯಾ ಯ ಉದ್ದೇಶಗಳನ್ನು ನೆರವೇರಿಸುತ್ತದೆ ಮತ್ತು ಮಾಸ್ ಲೆವೆಲ್‌ನಲ್ಲಿ ಮಲೇರಿಯಾ ತಡೆಯುವಲ್ಲಿ ಪ್ರಮುಖ ಸಾಧನವಾಗಬಲ್ಲದು.

Continue Reading

ಆರೋಗ್ಯ

ಅಲರ್ಜಿ ನಿಯಂತ್ರಣ ಹೇಗೆ?

ನವದೆಹಲಿ: ಮಳೆಗೆ ಬಿಡುವಿಲ್ಲದ ಕಾಲವಿದು. ರಾತ್ರಿಯೆಲ್ಲ ಮಳೆ ಸುರಿದಾಗ, ಬೆಳಗಿನ ಸ್ವಚ್ಛ ಹವೆಯನ್ನು ನೋಡಿದರೆ ಎದೆ ಹಗುರಾಗುವಷ್ಟು ತಾಜಾ ಗಾಳಿಯನ್ನು ಉಸಿರಾಡಬಹುದು ಎನ್ನುವ ಭಾವ ಬರುತ್ತದೆ. ಆದರೆ ಅಸ್ತಮಾ, ಅಲರ್ಜಿ (Allergies) ಇರು ವವರಿಗೆ ಮಳೆಗಾಲವೂ ಕಷ್ಟವೇ. ಎಲ್ಲೆಡೆ ಒದ್ದೆ, ತೇವ ಆವರಿಸಿಕೊಂಡಿರುವಾಗ ಬ್ಯಾಕ್ಟೀರಿಯಗಳು, ಫಂಗಸ್‌ಗಳ ಕಾಟ ಹೆಚ್ಚು. ಇದ ರಿಂದಲೇ ಇನ್ನಷ್ಟು ಅಲರ್ಜಿ ಸಮಸ್ಯೆ ಬಿಗಡಾಯಿಸುತ್ತದೆ. ಅದರಲ್ಲೂ ಮೋಡ ಬಿಗಿದಿದ್ದ ರಂತೂ ಶ್ವಾಸನಾಳಗಳೂ ಬಿಗಿದು, ಆಷಾಢದ ಗಾಳಿಯಂತೆಯೇ ಶ್ವಾಸಕೋಶವೂ ಶಬ್ದ ಮಾಡಲಾರಂಭಿ ಸುತ್ತದೆ. ಇವಿಷ್ಟು ಸಾಲದೆಂಬಂತೆ ನಾನಾ ರೀತಿಯ ವೈರಸ್‌ ಸೋಂಕುಗಳು ಅಮರಿಕೊಂಡು, ಸೋಂಕು ಗುಣವಾದ ಮೇಲೂ ಅಲರ್ಜಿ ಸಮಸ್ಯೆ ಉಲ್ಭಣಿಸುವಂತೆ ಮಾಡುತ್ತವೆ. ಮಳೆಗಾಲದಲ್ಲಿ ಅಸ್ತಮಾ, ಅಲರ್ಜಿಗಳ ನಿಯಂತ್ರಣ ಹೇಗೆ?

ಏಕೆ ಹೆಚ್ಚುತ್ತದೆ?: ಈ ಮಳೆಗೆ, ಒಂದು ಹಿಡಿ ಮಣ್ಣು ಇದ್ದಲ್ಲೂ ಹುಲ್ಲು ಹಸಿರಾಗುತ್ತದೆ. ಈ ಹುಲ್ಲಿ ನಿಂದ ವಾತಾವರಣ ಸೇರುವ ಅಲರ್ಜಿಕಾರಕಗಳು ಹಲವು ರೀತಿಯವು. ಜೋರು ಗಾಳಿಯಲ್ಲಿ ಇದರ ಹೂವಿನ ಪರಾಗಗಳೆಲ್ಲ ಎಲ್ಲೆಡೆ ಪಸರಿಸುತ್ತವೆ. ಅಲರ್ಜಿಗೆ ಕಾರಣ ವಾಗುತ್ತವೆ. ತೇವ ಹೆಚ್ಚಿದ್ದಲ್ಲಿ ಫಂಗಸ್‌ ಪ್ರಮಾಣವೂ ಹೆಚ್ಚು. ಜೋರು ಮಳೆಯ ಪರಿಸರದಲ್ಲಿ ಗೋಡೆ, ಬಾಗಿಲುಗಳ ಮೇಲೂ ಫಂಗಸ್‌ ಬೆಳೆದಿರುತ್ತದೆ. ಇವುಗಳನ್ನು ಕಾಲಕಾಲಕ್ಕೆ ಸ್ವಚ್ಛ ಗೊಳಿಸದಿದ್ದರೆ ಅಸ್ತಮಾ ಸಮಸ್ಯೆ ಬಿಗ ಡಾಯಿಸಬಹುದು. ಯಾವುದೇ ರೀತಿಯ ಪರಾಗಗಳ ಅಲರ್ಜಿಯೂ ಈಗ ತೊಂದರೆ ಕೊಟ್ಟೀತು. ಜೋರು ಗಾಳಿ ಮತ್ತು ಮೋಡ ಮುಸುಕಿದ ವಾತಾ ವರಣಗಳೇ ಇದಕ್ಕೆ ಕಾರಣ.

ಲಕ್ಷಣಗಳು: ಅಲರ್ಜಿ ಹೆಚ್ಚುತ್ತಿದೆ ಎನ್ನುವುದಕ್ಕೆ ಈ ಲಕ್ಷಣಗಳು ಕಾಣಿಸಿಕೊಳ್ಳಬಹುದು- ಸೀನು ಗಳ ಸರಮಾಲೆ, ಮೂಗು ಸೋರುವುದು, ಒಣ ಕೆಮ್ಮು, ಉಸಿರಾಡಲು ಕಷ್ಟವಾಗುವುದು, ಉಸಿರಾಡುವಾಗ ಸಿಳ್ಳೆ ಹಾಕಿದಂತೆ ಪುಪ್ಪುಸಗಳಿಂದ ಶಬ್ದ ಬರುವುದು, ಸುಸ್ತು-ಆಯಾಸ, ಕಣ್ಣು ಕೆಂಪಾಗುವುದು, ಕಣ್ಣಿನಲ್ಲಿ ತುರಿಕೆ, ಕಣ್ಣು ಊದಿಕೊಂಡು ನೀರು ಬರುವುದು, ತಲೆನೋವು, ಮೈ ಮೇಲೆ ಗುಳ್ಳೆಗಳು ಬಂದು ಕೆಂಪಾಗುವುದು… ಇತ್ಯಾದಿ.

ಏನು ಮಾಡಬೇಕು?: ಅಸ್ತಮಾ, ಅಲರ್ಜಿ ತೊಂದರೆಯಿದೆ ಎಂದಾದರೆ ವೈದ್ಯರು ಹೇಳಿದ ಔಷಧಿ ಗಳನ್ನು ನಿಯಮಿತವಾಗಿ ತೆಗೆದುಕೊಳ್ಳಿ. ಅಲರ್ಜಿ ನಿಯಂತ್ರಣಕ್ಕೆ ಸರಿಯಾದ ಚಿಕಿತ್ಸಾ ವಿಧಾನ ವನ್ನು ಪಾಲಿಸುವುದು ಅತ್ಯಗತ್ಯ. ಪಫ್‌ಗಳನ್ನು ತೆಗೆದುಕೊಳ್ಳಬೇಕು ಎಂದಾದರೆ, ದಿನದ ಲೆಕ್ಕವನ್ನು ಪಕ್ಕಾ ಇರಿಸಿಕೊಳ್ಳಿ. ಸೋಂಕುಗಳಿಂದ ತಪ್ಪಿಸಿಕೊಳ್ಳುವುದು ಮುಖ್ಯ ಎಂದಾದಲ್ಲಿ ಫ್ಲೂ ಲಸಿಕೆ ಪಡೆಯಿರಿ. ಯಾವೆಲ್ಲ ಆಹಾರಗಳು ಅಲರ್ಜಿ ತರುತ್ತವೆ ನಿಮಗೆ ಎಂಬುದನ್ನು ತಿಳಿದು ಕೊಳ್ಳುವುದು ಹೆಚ್ಚಿನ ನೆರವನ್ನು ನೀಡಬಹುದು.

ಮನೆಯೊಳಗೆ ಹೆಚ್ಚಿನ ತೇವ ನಿಲ್ಲದಂತೆ ಜಾಗ್ರತೆ ಮಾಡಿ. ಸಾಕಷ್ಟು ಗಾಳಿ-ಬೆಳಕು ಆಡುವಂತಿರಲಿ. ಮಳೆ ಇಲ್ಲದ ಸಮಯದಲ್ಲಿ, ಬಿಸಿಲಿದ್ದಾಗ ಕಿಟಕಿಗಳನ್ನು ತೆರೆದಿಡುವುದು ಸಹಕಾರಿ. ಹಾಗಿಲ್ಲದಿದ್ದರೆ ಎಕ್ಸಾಸ್ಟ್‌ ಫ್ಯಾನ್‌ಗಳನ್ನು ಅಳವಡಿಸಿಕೊಳ್ಳಿ. ಮನೆಯೊಳಗೆ ದೂಳು, ಕಸ ಉಳಿಯದಿರಲಿ. ಮನೆ ಯಲ್ಲಿ ಸಾಕು ಪ್ರಾಣಿಗಳಿದ್ದರೆ, ಅವುಗಳ ಕೂದಲಿನಿಂದ ಅಲರ್ಜಿ ಉಂಟಾಗುವ ಸಾಧ್ಯತೆ ಹೆಚ್ಚು. ಹಾಸಿಗೆ-ಹೊದಿಕೆಯ ವಸ್ತ್ರಗಳನ್ನು ಕಪಾಟಿನಿಂದ ನೇರವಾಗಿ ತೆಗೆದು ಉಪಯೋಗಿಸಬೇಡಿ. ಅವು ಗಳನ್ನು ಬಿಸಿಲಿಗೆ ಆರಲು ಬಿಡಿ ಅಥವಾ ಡ್ರೈಯರ್‌ಗೆ ಹಾಕಿ. ಅದಿಲ್ಲದಿದ್ದರೆ ಇಸ್ತ್ರಿ ಮಾಡಿ ಉಪ ಯೋಗಿಸಿ. ಇದರಿಂದ ಮೈಟ್‌ಗಳ ಉಪಟಳವನ್ನು ತಪ್ಪಿಸಬಹುದು.

ಮನೆಯಿಂದ ಹೊರಗೆ ಹೋಗುವಾಗ ಬೆಚ್ಚಗಿನ ವಸ್ತ್ರಗಳು ಅಗತ್ಯ. ಗಾಳಿ ಹೆಚ್ಚಿದ್ದರೆ ಮುಖಕ್ಕೆ ಮಾಸ್ಕ್‌ ಹಾಕಿ. ಕಟುವಾದ ಪರಿಮಳಗಳು ನಿಮಗೆ ಹೇಳಿಸಿದ್ದಲ್ಲ. ನಿಮ್ಮ ವೈಯಕ್ತಿಕ ಶುಚಿತ್ವದ ವಸ್ತುಗಳಾದ ಸೋಪು, ಶಾಂಪು, ಕ್ರೀಮ್‌ಗಳಿಗೆ ಕಟುವಾದ ಘಮವಿದ್ದರೆ, ಅದನ್ನು ಬದಲಾಯಿಸಿ. ಪರ್ಫ್ಯೂಮ್‌ಗಳು ಸಹ ತೊಂದರೆ ತಂದಾವು, ಜೋಕೆ. ಮಳೆ-ಚಳಿ ಏನೇ ಆದರೂ ದಿನವೂ ಸ್ನಾನ ಮಾಡಿ. ಹೊರಗಿ ನಿಂದ ಬಂದಾಕ್ಷಣ ಆ ಬಟ್ಟೆಗಳನ್ನು ಬದಲಿಸಿ, ಕೈ-ಕಾಲು ತೊಳೆದು ಕೊಳ್ಳಿ. ಇದರಿಂದ ಸೋಂಕು ಮತ್ತು ಅಲರ್ಜಿಕಾರಕಗಳನ್ನು ನಿಯಂತ್ರಿಸಬಹುದು. ಉಗುರು ಗಳನ್ನು ಕತ್ತರಿಸಿ, ಸ್ವಚ್ಛ ಮಾಡಿ ಕೊಳ್ಳಿ.

ಆಹಾರ: ಸಮತೋಲಿತ ಮತ್ತು ಸತ್ವಭರಿತ ಆಹಾರವನ್ನು ಸೇವಿಸುವುದು ಹೆಚ್ಚಿನ ತೊಂದರೆ ಯನ್ನು ಬುಡದಲ್ಲೇ ತಪ್ಪಿಸುತ್ತದೆ. ಒಮೇಗಾ ೩ ಕೊಬ್ಬಿನಾಮ್ಲ ಹೆಚ್ಚಿರುವ ಆಹಾರವನ್ನು ಸೇವಿಸಿ. ಇದೀಗ ಬೆಣ್ಣೆ ಹಣ್ಣು ಅಥವಾ ಅವಕಾಡೊಗಳ ಕಾಲ. ಒಮೇಗಾ ೩ ಕೊಬ್ಬಿನಾಮ್ಲ ಹೇರಳ ವಾಗಿರುವ ಅವುಗಳನ್ನು ಮನಸೋಇಚ್ಛೆ ತಿನ್ನಿ. ಜೊತೆಗೆ ವಿಟಮಿನ್‌ ಸಿ ಹೆಚ್ಚಿರುವ ಕಿತ್ತಳೆ, ಬೆರ್ರಿಗಳು, ಪಾಲಕ್‌ ಸೊಪ್ಪು, ಕ್ಯಾಪ್ಸಿಕಂನಂಥವು ನಿಮಗೆ ಬೇಕು. ಚೆನ್ನಾಗಿ ನೀರು ಕುಡಿಯಿರಿ, ಮಳೆಗಾಲದಲ್ಲಿ ಬಾಯಾರಿಕೆಯೇ ಆಗುವುದಿಲ್ಲ ಎಂಬ ನೆವ ಹೇಳಬೇಡಿ. ಹರ್ಬಲ್‌ ಚಹಾಗಳು, ಸೂಪ್‌ಗಳನ್ನು ಯಥೇಚ್ಛ ಕುಡಿಯಿರಿ.

Continue Reading

ಆರೋಗ್ಯ

ಹೃದಯಾಘಾತಕ್ಕೆ ಹೊಸ ಕಾರಣ ಬಿಚ್ಚಿಟ್ಟ ಹೃದ್ರೋಗ ತಜ್ಞರು: ಬೆಂಗಳೂರಿಗರೇ ಎಚ್ಚರ!

ರಾಜ್ಯದಲ್ಲಿ, ವಿಶೇಷವಾಗಿ ಬೆಂಗಳೂರಿನಲ್ಲಿ, ಹೃದಯಾಘಾತದ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಈ ಬಗ್ಗೆ ಹೃದ್ರೋಗ ತಜ್ಞರು ಆಘಾತಕಾರಿ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ: ವಾಯು ಮಾಲಿನ್ಯ, ಶಬ್ದ ಮಾಲಿನ್ಯ ಮತ್ತು ತಾಪಮಾನದ ಏರಿಳಿತಗಳು ಹೃದಯಾಘಾತಕ್ಕೆ ಪ್ರಮುಖ ಕಾರಣಗಳಾಗಿವೆ. ಬೆಂಗಳೂರಿನ ವಾಯು ಗುಣಮಟ್ಟವು ದಿನದಿಂದ ದಿನಕ್ಕೆ ಕುಸಿಯುತ್ತಿದ್ದು, ಇದು ನಗರವಾಸಿಗಳ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ.

ತಜ್ಞರ ಎಚ್ಚರಿಕೆ

“ವಾಯು ಮಾಲಿನ್ಯ, ಶಬ್ದ ಮಾಲಿನ್ಯ ಮತ್ತು ತಾಪಮಾನದ ಬದಲಾವಣೆಯು ಹೃದಯಾಘಾತಕ್ಕೆ ಕಾರಣವಾಗಬಹುದು ಎಂದು ಸಂಶೋಧನೆಗಳು ತೋರಿಸಿವೆ. ಬೆಂಗಳೂರಿನಂತಹ ದೊಡ್ಡ ನಗರಗಳಲ್ಲಿ ವಾಯು ಮಾಲಿನ್ಯವು ಗಣನೀಯವಾಗಿ ಹೆಚ್ಚಾಗುತ್ತಿದೆ. ಇದರಲ್ಲಿ ಪಾರ್ಟಿಕ್ಯುಲೇಟ್ ಮ್ಯಾಟರ್ (PM 2.5 ಮತ್ತು PM 10) ಮತ್ತು ಸೀಸದ (ಲೆಡ್) ಮಟ್ಟವು ಆತಂಕಕಾರಿಯಾಗಿದೆ. ಶಬ್ದ ಮಾಲಿನ್ಯವು 80 ಡೆಸಿಬಲ್‌ಗಿಂತ ಹೆಚ್ಚಾದಾಗ ರಕ್ತದೊತ್ತಡವನ್ನು ಏರಿಸುತ್ತದೆ, ಇದರಿಂದ ಹೃದಯಾಘಾತದ ಸಂಭವ ಹೆಚ್ಚಾಗುತ್ತದೆ,” ಎಂದು ಹೃದ್ರೋಗ ತಜ್ಞ ಡಾ. ನಟೇಶ್ ಬಿ.ಹೆಚ್ ವಿವರಿಸಿದ್ದಾರೆ.

ಕಾರ್ಡಿಯೋಲಾಜಿಕಲ್ ಸೊಸೈಟಿ ಆಫ್ ಇಂಡಿಯಾದ ‘ಹಾರ್ಟ್ ಅಟ್ಯಾಕ್ ಆಂಡ್ ಏರ್ ಪೊಲ್ಯೂಷನ್’ ಥೀಮ್ ಅಡಿಯಲ್ಲಿ ನಡೆದ ಸಂಶೋಧನೆಯು, ಬೆಂಗಳೂರಿನ ಕೆಂಗೇರಿ, HSR ಲೇಔಟ್‌ನಂತಹ ಪ್ರದೇಶಗಳಲ್ಲಿ ವಾಯು ಮಾಲಿನ್ಯದ ಮಟ್ಟ ಗಣನೀಯವಾಗಿ ಏರಿಕೆಯಾಗಿರುವುದನ್ನು ದೃಢಪಡಿಸಿದೆ. ಮೇ 2025ರಲ್ಲಿ ದಾಖಲಾದ AQI (ವಾಯು ಗುಣಮಟ್ಟ ಸೂಚ್ಯಂಕ) ಮಟ್ಟಗಳು ಆತಂಕಕಾರಿಯಾಗಿದ್ದವು: ಮೇ 6ರಂದು 144 AQI, ಮೇ 16ರಂದು 191 AQI, ಮತ್ತು ಮೇ 31ರಂದು 157 AQI.

ಬೆಂಗಳೂರಿನಲ್ಲಿ ಮಾಲಿನ್ಯ ಹೆಚ್ಚಲು ಹಲವು ಕಾರಣಗಳಿವೆ:

  • ಗುಂಡಿಮಯ ರಸ್ತೆಗಳು: ರಸ್ತೆಗಳ ದುರಸ್ಥಿತಿಯಿಂದ ವಾಹನಗಳು ನಿಧಾನವಾಗಿ ಚಲಿಸುತ್ತವೆ, ಇದರಿಂದ ಹೊಗೆ ಮತ್ತು ಧೂಳು ಹೆಚ್ಚಾಗುತ್ತದೆ.
  • ವಾಹನಗಳ ಸಂಖ್ಯೆ: ಒಂದೂವರೆ ಕೋಟಿಗೂ ಅಧಿಕ ವಾಹನಗಳು ರಸ್ತೆಯಲ್ಲಿರುವುದು ಮಾಲಿನ್ಯಕ್ಕೆ ಕಾರಣ
  • ಹಳೆಯ ವಾಹನಗಳು: ಹೊಗೆ ಉಗುಳುವ ಹಳೆಯ ವಾಹನಗಳು ವಾಯು ಮಾಲಿನ್ಯವನ್ನು ಉಲ್ಬಣಗೊಳಿಸುತ್ತವೆ.
  • ಶಬ್ದ ಮಾಲಿನ್ಯ: ಟ್ರಾಫಿಕ್ ಜಾಮ್‌ನಿಂದ ಶಬ್ದ ಮಾಲಿನ್ಯವು 80 ಡೆಸಿಬಲ್‌ಗಿಂತ ಮೀರಿದೆ, ಇದು ಒತ್ತಡ ಮತ್ತು ರಕ್ತದೊತ್ತಡವನ್ನು ಹೆಚ್ಚಿಸುತ್ತದೆ.
  • ಬೆಂಗಳೂರಿನ ಜನರಿಗೆ ಈ ಸುದ್ದಿಯು ಆತಂಕವನ್ನುಂಟುಮಾಡಿದೆ. ಟ್ರಾಫಿಕ್ ಜಾಮ್, ಗುಂಡಿಮಯ ರಸ್ತೆಗಳು, ಮತ್ತು ಕುಸಿಯುತ್ತಿರುವ ವಾಯು ಗುಣಮಟ್ಟವು ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿವೆ. ಶಾಲಾ ಮಕ್ಕಳ ಆರೋಗ್ಯದ ಮೇಲೂ ಇದರ ಪರಿಣಾಮವು ಕಾಣಿಸಿಕೊಂಡಿದ್ದು, ಜನರು ಸರ್ಕಾರದಿಂದ ರಸ್ತೆ ಸುಧಾರಣೆ, ವಾಹನ ನಿಯಂತ್ರಣ ಮತ್ತು ಮಾಲಿನ್ಯ ತಡೆಗಟ್ಟುವ ಕ್ರಮಗಳನ್ನು ಒತ್ತಾಯಿಸುತ್ತಿದ್ದಾರೆ.
  • ತಜ್ಞರು ಕೆಲವು ತಡೆಗಟ್ಟುವ ಕ್ರಮಗಳನ್ನು ಸೂಚಿಸಿದ್ದಾರೆ:
  • ಮಾಸ್ಕ್ ಧರಿಸಿ: PM 2.5 ಮತ್ತು PM 10 ಕಣಗಳಿಂದ ರಕ್ಷಣೆಗಾಗಿ N95 ಮಾಸ್ಕ್‌ಗಳನ್ನು ಬಳಸಿ.
  • ವಾಹನ ನಿಯಂತ್ರಣ: ಹಳೆಯ ವಾಹನಗಳಿಗೆ ಕಡ್ಡಾಯ ಎಮಿಷನ್ ಟೆಸ್ಟ್
  • ಶಬ್ದ ಕಡಿಮೆಗೊಳಿಸಿ: ಟ್ರಾಫಿಕ್ ಜಾಮ್ ಕಡಿಮೆ ಮಾಡಲು ರಸ್ತೆ ಸುಧಾರಣೆ.
  • ನಿಯಮಿತ ಆರೋಗ್ಯ ತಪಾಸಣೆ: ಹೃದಯದ ಆರೋಗ್ಯವನ್ನು ಮೇಲ್ವಿಚಾರಣೆ ಮಾಡಿ.
  • ಈ ದಿಶೆಯಲ್ಲಿ ಸರ್ಕಾರ ಮತ್ತು ಜನರ ಸಹಕಾರದಿಂದ ಮಾತ್ರ ಮಾಲಿನ್ಯದಿಂದ ಉಂಟಾಗುವ ಹೃದಯಾಘಾತದ ಸಂಖ್ಯೆಯನ್ನು ಕಡಿಮೆಗೊಳಿಸಬಹುದು
Continue Reading

Trending